ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಿಜವಾದ ಜ್ಞಾನದ ಪರಿವರ್ತನಾ ಶಕ್ತಿಯನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 26 MAY 2026 9:20AM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಿಜವಾದ ಜ್ಞಾನವು ರಾಷ್ಟ್ರ, ಸಮಾಜ ಮತ್ತು ಇಡೀ ಮಾನವಕುಲದ ಕಲ್ಯಾಣಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು. ನಮ್ಮ ಜ್ಞಾನ ಮತ್ತು ಕಾರ್ಯಗಳು ಸಮಸ್ತ ಮಾನವಕುಲಕ್ಕೆ ಪ್ರೇರಣೆಯ ಮೂಲವಾಗುವುದು ಮುಖ್ಯ ಎಂದು ಅವರು ಗಮನಿಸಿದರು.

ಸಂಸ್ಕೃತದ ಸುಭಾಷಿತವೊಂದನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ-

“आत्मा शुद्धः सदा नित्यः सुखरूपः स्वयम्प्रभः।

अज्ञानान्मलिनो भाति ज्ञानाच्छुद्धो भवत्ययम्‌।।”

ಈ ಸುಭಾಷಿತವು ತಿಳಿಸುವುದೇನೆಂದರೆ, ಆತ್ಮವು ಸ್ವಭಾವತಃ ಯಾವಾಗಲೂ ಶುದ್ಧ, ನಿತ್ಯ, ಆನಂದಮಯ ಮತ್ತು ಸ್ವಯಂ-ಪ್ರಕಾಶಮಾನವಾಗಿದೆ. ಆದರೆ, ಅಜ್ಞಾನದ ಕಾರಣದಿಂದಾಗಿ ಅದು ಅಶುದ್ಧವಾಗಿ ಕಂಡುಬರುತ್ತದೆ; ನಿಜವಾದ ಜ್ಞಾನದ ಮೂಲಕ ಅದು ಮತ್ತೊಮ್ಮೆ ತನ್ನ ಶುದ್ಧ ಸ್ವಭಾವವನ್ನು ಪ್ರಕಟಪಡಿಸುತ್ತದೆ.

ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಬರೆದಿದ್ದಾರೆ;

“सच्चा ज्ञान देश, समाज और समस्त मानवता के कल्याण का मार्ग प्रशस्त करता है। इसलिए यह जरूरी है कि हमारा ज्ञान और हमारे कर्म पूरी मानवता के लिए प्रेरणा बनें।

आत्मा शुद्धः सदा नित्यः सुखरूपः स्वयम्प्रभः।

अज्ञानान्मलिनो भाति ज्ञानाच्छुद्धो भवत्ययम्‌।।”

 

*****


(ಪ್ರಕಟಣೆ ಐ.ಡಿ.: 2265394) ವಿಸಿಟರ್ ಕೌಂಟರ್ : 5