ನೌಕಾ ಸಚಿವಾಲಯ
ಜಾಗತಿಕ ಪೂರೈಕೆ ಸರಪಳಿ ಸವಾಲುಗಳು ಹೆಚ್ಚುತ್ತಿರುವ ನಡುವೆ ಜೆ.ಎನ್.ಪಿ.ಎ.ಯಲ್ಲಿ ಕಂಟೇನರ್ ಚಲನೆಯನ್ನು ಸುಗಮವಾಗಿಸಿ ಸರಾಗಗೊಳಿಸಲು ಕೇಂದ್ರ ಸರ್ಕಾರದಿಂದ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ
ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್, ಸರ್ಬಾನಂದ ಸೋನೋವಾಲ್ ಅವರು ಎಕ್ಸಿಮ್ ಉದ್ಯಮದ ಪಾಲುದಾರರೊಂದಿಗೆ ಜಾಗತಿಕ ಪೂರೈಕೆ ಸರಪಳಿ ಸವಾಲುಗಳನ್ನು ಪರಿಶೀಲಿಸಿದರು
ಸುಲಭ ವ್ಯವಹಾರ (ಇಒಡಿಬಿ) ಅನ್ನು ಉಳಿಸಿಕೊಳ್ಳಲು ತೆಗೆದುಕೊಳ್ಳಲಾದ ಉಪಕ್ರಮಗಳಲ್ಲಿ ರೈಲು ಸ್ಥಳಾಂತರಿಸುವಿಕೆ, ನಿರ್ವಹಣಾ ಶುಲ್ಕಗಳ ಮನ್ನಾ, ಗ್ರೀನ್ ಚಾನೆಲ್ ಗಳು ಮತ್ತು ಟ್ರೇಲರ್ ಗಳನ್ನು ಒಟ್ಟುಗೂಡಿಸುವುದು ಸೇರಿವೆ
ಪ್ರಕಟಣಾ ದಿನಾಂಕ:
22 MAY 2026 8:21PM by PIB Bengaluru
ಸುಲಭ ವ್ಯವಹಾರ (ಇಒಡಿಬಿ) ಅನ್ನು ಉಳಿಸಿಕೊಳ್ಳಲು ಮತ್ತು ಉದಯೋನ್ಮುಖ ಜಾಗತಿಕ ಪೂರೈಕೆ ಸರಪಳಿ ಸವಾಲುಗಳ ನಡುವೆ ಅಡೆತಡೆಯಿಲ್ಲದ ವ್ಯಾಪಾರ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕ ಕ್ರಮದಲ್ಲಿ, ಎಕ್ಸಿಮ್ ಕ್ಷೇತ್ರದ ಪಾಲುದಾರರ ಸಮುದಾಯವು ಸೂಚಿಸಿದ ಕಳವಳಗಳನ್ನು ಪರಿಹರಿಸಲು ಭಾರತ ಸರ್ಕಾರವು ಸಂಘಟಿತ "ಇಡೀ ಸರ್ಕಾರ" ಏಕೀಕೃತ ರೀತಿಯಲ್ಲಿ ಎಂಬ ಪ್ರತಿಕ್ರಿಯೆಯನ್ನು ಪ್ರಾರಂಭಿಸಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಅವರು ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಸುಗಮ ಮತ್ತು ತ್ವರಿತ ಸರಕು ಸಾಗಣೆಗಾಗಿ ಕಾರ್ಯಾಚರಣೆಯ ಅಡಚಣೆಗಳನ್ನು ಸರಾಗಗೊಳಿಸುವ ತಕ್ಷಣದ ಮತ್ತು ದೀರ್ಘಕಾಲೀನ ಕ್ರಮಗಳನ್ನು ಚರ್ಚಿಸಲು ಅಖಿಲ ಭಾರತ ದ್ರವಗಳ ಬೃಹತ್ ಆಮದುದಾರರು ಮತ್ತು ರಫ್ತುದಾರರ ಸಂಘದ ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನು ನಡೆಸಿದರು.
ಗಲ್ಫ್ ಕಡೆಗೆ ಹೋಗುವ ಕಂಟೇನರ್ ಗಳನ್ನು ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ (ಜೆಎನ್‌ಪಿಎ) ಗೆ ಮರು - ನಿರ್ದೇಶಿಸಲಾಗಿರುವುದರಿಂದ, ಬಂದರು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯದ ಮೇಲೆ ಹೆಚ್ಚುವರಿ ಒತ್ತಡ ಹೇರಲಾಗಿರುವುದರಿಂದ, ಉತ್ತಮ ಕಂಟೇನರ್ ಚಲನೆಯ ಕುರಿತು ಸಭೆ ಗಮನಹರಿಸಿತು.
ಪರಿಸ್ಥಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಿದ ಜೆಎನ್‌ಪಿಎ, ಟರ್ಮಿನಲ್ ಗಳನ್ನು ನಿವಾರಿಸಲು ಮತ್ತು ಸರಕು ಸ್ಥಳಾಂತರಿಸುವಿಕೆಯನ್ನು ತ್ವರಿತಗೊಳಿಸಲು ಕಾರ್ಯಾಚರಣೆಯ ಮಧ್ಯಸ್ಥಿಕೆಗಳ ಸರಣಿಯನ್ನು ಜಾರಿಗೆ ತಂದಿತು. ರೈಲ್ವೆ ಸೈಡಿಂಗ್ ಗಳನ್ನು ಹೊಂದಿದ ಹತ್ತಿರದ ಕಂಟೇನರ್ ಸರಕು ನಿಲ್ದಾಣಗಳಿಗೆ (ಸಿಎಫ್‌ಎಸ್) ಸಹ ಕಂಟೇನರ್ ಗಳನ್ನು ರೈಲು ಚಲನೆಯ ಮೂಲಕ ಸ್ಥಳಾಂತರಿಸಲಾಯಿತು, ಹಾಗೂ ಸಂಸ್ಕರಣಾ ಸಮಯವನ್ನು ಕಡಿಮೆ ಮಾಡಲು ಡಬಲ್ ಕಂಟೇನರ್ ಗಳ ಏಕಕಾಲದಲ್ಲಿ ಸ್ಕ್ಯಾನಿಂಗ್ ಅನ್ನು ಪರಿಚಯಿಸಲಾಯಿತು.
“ಜಾಗತಿಕ ಪರಿಸ್ಥಿತಿಯಿಂದ ಹೊರಹೊಮ್ಮುತ್ತಿರುವ ಸವಾಲುಗಳನ್ನು ಪರಿಹರಿಸಲು ಮತ್ತು ವ್ಯಾಪಾರ ಸಮುದಾಯಕ್ಕೆ ತಡೆರಹಿತ ವ್ಯಾಪಾರ ಸೌಲಭ್ಯವನ್ನು ಖಚಿತಪಡಿಸಿಕೊಳ್ಳಲು ನನ್ನ ಹಿರಿಯ ಸಹೋದ್ಯೋಗಿ ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಜಿ ಅವರೊಂದಿಗೆ ಹೆಚ್ಚು ಉತ್ಪಾದಕ ಸಭೆಯನ್ನು ನಡೆಸಿದೆ. ‘ಇಡೀ ಸರ್ಕಾರದ’ ಪಾಲ್ಗೊಳ್ಳುವಿಕೆ ವಿಧಾನದಿಂದ ಮಾರ್ಗದರ್ಶನ ಪಡೆದ ನಾವು, ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಸುಲಭ ವ್ಯಾಪಾರ (ಇಒಡಿಬಿ) ಅನ್ನು ಉಳಿಸಿಕೊಳ್ಳಲು, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಕಡಲ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಬಂದರುಗಳು ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಗಳಲ್ಲಿ ಸಂಘಟಿತ ಮತ್ತು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ, ”ಎಂದು ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವ (ಎಂ.ಒ.ಪಿ.ಎಸ್.ಡಬ್ಲ್ಯೂ) ಶ್ರೀ ಸರ್ಬಾನಂದ ಸೋನೋವಾಲ್ ಅವರು ಹೇಳಿದರು.
ವ್ಯಾಪಾರ ಪಾಲುದಾರರಿಗೆ ಪರಿಹಾರ ಒದಗಿಸಲು, ಇಂಟರ್ನ್-ಟರ್ಮಿನಲ್ ರೈಲ್ವೆ ಹ್ಯಾಂಡ್ಲಿಂಗ್ ಆಪರೇಷನ್ (ಐ.ಪಿ.ಎಲ್ .ಹೆಚ್. ಒ) ಶುಲ್ಕಗಳು ಮತ್ತು ಸಾರಿಗೆ ವಿಧಾನ ಬದಲಾವಣೆ ಶುಲ್ಕಗಳನ್ನು ಮನ್ನಾ ಮಾಡಲಾಯಿತು. ಬಂದರು ಟರ್ಮಿನಲ್ ಗಳು ಪ್ರಕರಣದಿಂದ ಪ್ರಕರಣಕ್ಕೆ ಆಧಾರದ ಮೇಲೆ ನೆಲದ ಬಾಡಿಗೆ ಶುಲ್ಕಗಳ ಮೇಲಿನ ವಿನಾಯಿತಿ ಮತ್ತು ರಿಯಾಯಿತಿಗಳನ್ನು ವಿಸ್ತರಿಸಿದವು. ವೇಗವಾಗಿ ಚಲಿಸಲು ಅನುಕೂಲವಾಗುವಂತೆ ಟರ್ಮಿನಲ್ ಗಳಲ್ಲಿ ಖಾಲಿ ಟ್ರೇಲರ್ ಗಳಿಗಾಗಿ ಮೀಸಲಾದ ಹಸಿರು ಚಾನಲ್ ಗಳನ್ನು ಸ್ಥಾಪಿಸಲಾಯಿತು. ಮತ್ತೊಂದು ಪ್ರಮುಖ ಉಪಕ್ರಮದಲ್ಲಿ, ಪ್ರಮುಖ ಸಿ.ಎಫ್.ಎಸ್ ನಿರ್ವಾಹಕರು ಸಂಪೂರ್ಣ ಕಂಟೇನರ್ ಸ್ಟ್ಯಾಕ್ ಗಳನ್ನು ಎತ್ತಲು ಸುಮಾರು 100 ಟ್ರೇಲರ್‌ಗಳನ್ನು ಒಟ್ಟುಗೂಡಿಸಿದರು, ಇದು ದಟ್ಟಣೆಯ ಯಾರ್ಡ್‌ಗಳಿಂದ ದೀರ್ಘಕಾಲದಿಂದ ಬಾಕಿ ಇರುವ ಮತ್ತು ಹೂತುಹೋಗಿರುವ ಕಂಟೇನರ್‌ಗಳನ್ನು ಸ್ಥಳಾಂತರಿಸಲು ಅನುವು ಮಾಡಿಕೊಟ್ಟಿತು. ಈ ಸಂಘಟಿತ ಪ್ರಯತ್ನಗಳು ಯಾರ್ಡ್ ನಿರ್ವಹಣೆಯನ್ನು ಗಮನಾರ್ಹವಾಗಿ ಸುಧಾರಿಸಿವೆ, ಟರ್ಮಿನಲ್ ಗಳಲ್ಲಿ ಬಿದ್ದಿರುವ ತುಲನಾತ್ಮಕವಾಗಿ ಹಳೆಯ ಕಂಟೇನರ್ ಗಳ ಸಂಖ್ಯೆಯನ್ನು ಕೂಡ ಕಡಿಮೆ ಮಾಡಿವೆ.
"ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವಕ್ಕೆ ಅನುಗುಣವಾಗಿ, ಸರ್ಕಾರವು ಸ್ಥಿತಿಸ್ಥಾಪಕ, ಪರಿಣಾಮಕಾರಿ ಮತ್ತು ಭವಿಷ್ಯಕ್ಕೆ ಸಿದ್ಧವಾದ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಬದ್ಧವಾಗಿದೆ. ಎಕ್ಸಿಮ್ ಕ್ಷೇತ್ರದ ಪಾಲುದಾರರ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ತ್ವರಿತ, ಸಂಘಟಿತ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಪ್ರಧಾನಮಂತ್ರಿ ಶ್ರೀ ಮೋದಿ ಜಿ ಅವರು ಕಲ್ಪಿಸಿಕೊಂಡ 'ಇಡೀ ಸರ್ಕಾರ'ದ ಪಾಲ್ಗೊಳ್ಳುವಿಕೆ ವಿಧಾನದ ಮಾರ್ಗದರ್ಶನದಲ್ಲಿ, ನಾವು ಪೂರೈಕೆ ಸರಪಳಿಗಳನ್ನು ಬಲಪಡಿಸಲು, ನಮ್ಮ ವ್ಯಾಪಾರ ಹಿತಾಸಕ್ತಿಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಡಲು ಮತ್ತು ನಮ್ಮ ಆರ್ಥಿಕತೆಯ ಇಒಡಿಬಿ ಅನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತಿದ್ದೇವೆ" ಎಂದು ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಅವರು ಹೇಳಿದರು.
ದೀರ್ಘಕಾಲೀನ ಸ್ಥಿತಿಸ್ಥಾಪಕತ್ವ ತಂತ್ರದ ಭಾಗವಾಗಿ, ಜೆ.ಎನ್.ಪಿ.ಎ ಲಾಜಿಸ್ಟಿಕ್ಸ್ ಸಿದ್ಧತೆ ಮತ್ತು ಭವಿಷ್ಯದ ಸರಕು ನಿರ್ವಹಣಾ ಸಾಮರ್ಥ್ಯಗಳನ್ನು ಬಲಪಡಿಸಲು ಸಮಗ್ರ ಮಾರ್ಗಸೂಚಿಯನ್ನು ಸಹ ರೂಪಿಸಿದೆ. ಚಾಲಕ ಲಭ್ಯತೆಯನ್ನು ಹೆಚ್ಚಿಸಲು ಸಿ.ಎಫ್.ಸಿ ನಿರ್ವಾಹಕರು ಮತ್ತು ಸಾಗಣೆದಾರರು, ರೈಲ್ವೆಗಳ ಮೂಲಕ ವರ್ಧಿತ ಸರಕು ಸ್ಥಳಾಂತರಿಸುವಿಕೆ ಮತ್ತು ತರಬೇತಿ ಪಡೆದ ಟ್ರೇಲರ್ ಚಾಲಕರ ದೊಡ್ಡ ಗುಂಪನ್ನು ನಿರ್ಮಿಸಲು ಮೋಟಾರ್ ಚಾಲನಾ ತರಬೇತಿ ಶಾಲೆಗಳೊಂದಿಗೆ ತೊಡಗಿಸಿಕೊಳ್ಳುವುದು ಈ ಕ್ರಮಗಳಲ್ಲಿ ಸೇರಿವೆ. ಕಾರ್ಯಾಚರಣೆಯ ಸುಸ್ಥಿರತೆ ಮತ್ತು ಚಾಲಕ ಸೌಕರ್ಯವನ್ನು ಸುಧಾರಿಸಲು ಬಂದರು ಪ್ರಾಧಿಕಾರವು ವಿದ್ಯುತ್ ವಾಹನಗಳಿಗೆ ಕ್ರಮೇಣ ಪರಿವರ್ತನೆಯನ್ನು ಯೋಜಿಸುತ್ತಿದೆ. ಇದರ ಜೊತೆಗೆ, ಟರ್ಮಿನಲ್ ಗೇಟ್ ಗಳಲ್ಲಿ ಚಲನೆಯನ್ನು ಸುಧಾರಿಸಲು ಟ್ರಕ್ ಅಪಾಯಿಂಟ್‌ಮೆಂಟ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ, ಆದರೆ ಹೆಚ್ಚುತ್ತಿರುವ ಸರಕು ಪ್ರಮಾಣವನ್ನು ಬೆಂಬಲಿಸಲು ಹೆಚ್ಚುವರಿ ನಿರ್ವಹಣಾ ಸಾಧನಗಳನ್ನು ನಿಯೋಜಿಸಲು ಟರ್ಮಿನಲ್‌ಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.



*****
(ಪ್ರಕಟಣೆ ಐ.ಡಿ.: 2264379)
ವಿಸಿಟರ್ ಕೌಂಟರ್ : 12