ಜವಳಿ ಸಚಿವಾಲಯ
azadi ka amrit mahotsav

ಜವಳಿ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ನೀಲಂ ಶಮಿರಾವ್ ಅವರಿಂದ ಭಾರತ್ ಟೆಕ್ಸ್ 2026 ಮೊಬೈಲ್ ಅಪ್ಲಿಕೇಷನ್ ಬಿಡುಗಡೆ


'ತಡೆರಹಿತ ಕಾರ್ಯಕ್ರಮ ದಿಕ್ಸೂಚಿ, ಪ್ರದರ್ಶಕರ ಅನ್ವೇಷಣೆ, B2B ಸಭೆಗಳು, ಡಿಜಿಟಲ್ ಬ್ಯಾಡ್ಜ್, ಲೀಡ್ ಕ್ಯಾಪ್ಚರ್ ಮತ್ತು AI-ಆಧರಿತ ಸಹಾಯ ಸಕ್ರಿಯಗೊಳಿಸಲಿರುವ ಭಾರತ್ ಟೆಕ್ಸ್ ಅಪ್ಲಿಕೇಷನ್'

ಭಾರತದ ಅತಿದೊಡ್ಡ ಜಾಗತಿಕ ಜವಳಿ ಕಾರ್ಯಕ್ರಮದಲ್ಲಿ ಜವಳಿ ಸಮುದಾಯಕ್ಕಾಗಿ ಏಕೀಕೃತ ಡಿಜಿಟಲ್ ಒಡನಾಡಿ

ನವದೆಹಲಿಯ ಭಾರತ್ ಮಂಟಪದಲ್ಲಿ 2026ರ ಜುಲೈ 14–17 ರವರೆಗೆ ಭಾರತ್ ಟೆಕ್ಸ್ 2026 ಆಯೋಜನೆ

ಪ್ರಕಟಣಾ ದಿನಾಂಕ: 20 MAY 2026 2:25PM by PIB Bengaluru

ಜವಳಿ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ನೀಲಂ ಶಮಿ ರಾವ್ ಅವರು ಇಂದು ಭಾರತ್ ಟೆಕ್ಸ್ 2026 ಕಾರ್ಯಕ್ರಮ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿದರು. ಇದು ಭಾರತದ ಅತಿದೊಡ್ಡ ಜಾಗತಿಕ ಜವಳಿ ಕಾರ್ಯಕ್ರಮದಲ್ಲಿ ಖರೀದಿದಾರರು, ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಭಾಷಣಕಾರರು, ಮೂಲ ಸಲಹೆಗಾರರು, ಪಾಲುದಾರರು, ಪ್ರದರ್ಶಕರು ಮತ್ತು ಸಂದರ್ಶಕರ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಏಕೀಕೃತ ಡಿಜಿಟಲ್ ವೇದಿಕೆಯಾಗಿದೆ.

ಅಧಿಕೃತ ಭಾರತ್ ಟೆಕ್ಸ್ 2026 ಅಪ್ಲಿಕೇಷನ್ ಕಾರ್ಯಕ್ರಮದ ಡಿಜಿಟಲ್-ಮೊದಲ ವಿಧಾನವನ್ನು ಪ್ರತಿಬಿಂಬಿಸುತ್ತದೆ ಮತ್ತು ವ್ಯಾಪಾರ ಹೊಂದಾಣಿಕೆಯನ್ನು ಬಲಪಡಿಸುವಲ್ಲಿ ಪಾಲ್ಗೊಳ್ಳುವವರ ಅನುಭವವನ್ನು ಸುಧಾರಿಸುವಲ್ಲಿ, ದತ್ತಾಂಶ ಆಧರಿಸಿದ ಒಳಗೊಳ್ಳುವಿಕೆಯನ್ನು ಸಕ್ರಿಯಗೊಳಿಸುವಲ್ಲಿ ಮತ್ತು ಭಾರತ್ ಟೆಕ್ಸ್ 2026 ರ ಒಟ್ಟಾರೆ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಈ ಅಪ್ಲಿಕೇಶನ್ ಅನ್ನು ಭಾರತ್ ಟೆಕ್ಸ್ 2026 ಗಾಗಿ ಸಮಗ್ರ ಡಿಜಿಟಲ್ ಒಡನಾಡಿಯಾಗಿ ಅಭಿವೃದ್ಧಿಪಡಿಸಲಾಗಿದ್ದು, ನೋಂದಾಯಿತ ಭಾಗವಹಿಸುವವರು ಕಾರ್ಯಕ್ರಮದ ಮಾಹಿತಿಯನ್ನು ಪಡೆಯಲು, ಪ್ರದರ್ಶಕರನ್ನು ಭೇಟಿ ಮಾಡಲು, ಸಭೆಗಳನ್ನು ನಿಗದಿಪಡಿಸಲು, ಸ್ಥಳದ ದಿಕ್ಸೂಚಿ ಒದಗಿಸಲು, ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು, ಜ್ಞಾನ ಗೋಷ್ಠಿಗಳನ್ನು ಪ್ರವೇಶಿಸಲು ಮತ್ತು ನೈಜ-ಸಮಯದ ನವೀಕರಣಗಳನ್ನು ಸ್ವೀಕರಿಸುವುದು ಸೇರಿ ಎಲ್ಲವೂ ಒಂದೇ ಮೊಬೈಲ್ ಇಂಟರ್ಫೇಸ್ ಮೂಲಕ ಲಭ್ಯವಾಗುವಂತೆ ಅನುವು ಮಾಡಿಕೊಡುತ್ತದೆ.  

ಅಪ್ಲಿಕೇಷನ್ ಪ್ರದರ್ಶಕರು, ಭಾಷಣಕಾರರು, ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಸಾಗರೋತ್ತರ ಖರೀದಿದಾರರು, ದೇಶೀಯ ಖರೀದಿದಾರರು, ಮೂಲ ಸಲಹೆಗಾರರು ಮತ್ತು ಸಾಮಾನ್ಯ ಸಂದರ್ಶಕರು ಸೇರಿದಂತೆ ಎಲ್ಲಾ ಪಾಲುದಾರರ ಪ್ರವೇಶ,  ವೀಕ್ಷಣೆ ಮತ್ತು ಒಳಗೊಳ್ಳುವಿಕೆಗೆ ಅವಕಾಶ ಮಾಡಿಕೊಡಲಿದೆ.

ಈ ಅಪ್ಲಿಕೇಶನ್‌ನ ಪ್ರಮುಖ ಮುಖ್ಯಾಂಶವೆಂದರೆ ಅದರ AI ಸ್ಮಾರ್ಟ್ ಸಹಾಯಕ, ಅದನ್ನು ಭಾಗವಹಿಸುವವರಿಗೆ 24x7 ಸಂವಾದಾತ್ಮಕ ಮಾರ್ಗದರ್ಶಿಯಾಗಿ ವಿನ್ಯಾಸಗೊಳಿಸಲಾಗಿದೆ. ಬಳಕೆದಾರರು ಕಾರ್ಯಕ್ರಮಕ್ಕೆ ಸಂಬಂಧಿತ ಪ್ರಶ್ನೆಗಳನ್ನು ಸರಳ ಭಾಷೆಯಲ್ಲಿ ಕೇಳಲು ಮತ್ತು ಕಾರ್ಯಕ್ರಮದ ಸ್ಥಳ, ವೇಳಾಪಟ್ಟಿ, ನಿರ್ದೇಶನಗಳು ಮತ್ತು ಇತರ ಪ್ರಮುಖ ಅಂಶಗಳ ಕುರಿತು ಸಂಬಂಧಿತ ಮಾಹಿತಿಯನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಬಳಕೆದಾರ ಸ್ನೇಹಿ ಮತ್ತು ಸ್ಪಂದಿಸುವ ಡಿಜಿಟಲ್ ಇಂಟರ್ಫೇಸ್ ಮೂಲಕ ಭಾರತೀಯ ಮತ್ತು ಅಂತಾರಾಷ್ಟ್ರೀಯ ಭಾಗಿದಾರರನ್ನು ಬೆಂಬಲಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಅಪ್ಲಿಕೇಷನ್ ತನ್ನ ನೆಟ್‌ವರ್ಕಿಂಗ್ ಮತ್ತು ಸಭೆ ಮಾದರಿಗಳ ಮೂಲಕ ರಚನಾತ್ಮಕ ವ್ಯವಹಾರ ನಿಶ್ಚಿತಾರ್ಥವನ್ನು ಸಹ ಬೆಂಬಲಿಸುತ್ತದೆ. ಪ್ರದರ್ಶಕರು, ಖರೀದಿದಾರರು ಮತ್ತು ಪ್ರತಿನಿಧಿಗಳು ಸಂಬಂಧಿತ ಪಾಲುದಾರರನ್ನು ಕಂಡುಹಿಡಿಯಲು, ಸಭೆಗಳನ್ನು ನಿಗದಿಪಡಿಸಲು, ಲಭ್ಯತೆಯನ್ನು ನಿರ್ವಹಿಸಲು, ಸಭೆಯ ವಿನಂತಿಗಳನ್ನು ಸ್ವೀಕರಿಸಲು ಮತ್ತು ದೃಢಪಡಿಸಿದ ಸಂವಹನಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಲೀಡ್ ವಾಲೆಟ್ ಮತ್ತು QR-ಆಧಾರಿತ ಲೀಡ್ ಕ್ಯಾಪ್ಚರ್ ವೈಶಿಷ್ಟ್ಯವು ಪ್ರದರ್ಶಕರು ಮತ್ತು ಭಾಗವಹಿಸುವವರು ಡಿಜಿಟಲ್ ಬ್ಯಾಡ್ಜ್‌ಗಳನ್ನು ಸ್ಕ್ಯಾನ್ ಮಾಡಲು ಮತ್ತು ಕಾರ್ಯಕ್ರಮದ ನಂತರದ ಅನುಸರಣೆಗಾಗಿ ರಚನಾತ್ಮಕ ಸಂಪರ್ಕ ವಿವರಗಳನ್ನು ಉಳಿಸಲು ಅನುವು ಮಾಡಿಕೊಡುತ್ತದೆ.

ಈ ಅಪ್ಲಿಕೇಷನ್ ಭಾರತ್ ಮಂಟಪದಾದ್ಯಂತ ಸುಧಾರಿತ ದಿಕ್ಸೂಚಿ (ನ್ಯಾವಿಗೇಷನ್) ಮತ್ತು ದಾರಿ ಸೂಚಿಸುವ ವೇಫೈಂಡಿಂಗ್ ಬೆಂಬಲವನ್ನು ಸಹ ನೀಡುತ್ತದೆ. ಭಾಗವಹಿಸುವವರು ತಳಮಟ್ಟದ ಯೋಜನೆಗಳನ್ನು ಪ್ರವೇಶಿಲಸು, ಬೂತ್‌ಗಳನ್ನು ಹುಡುಕಲು, ಕಂಪನಿಗಳನ್ನು ಪತ್ತೆಹಚ್ಚಲು ಮತ್ತು ಸ್ಥಳದೊಳಗೆ ಮಳಿಗೆ ಮಟ್ಟದಲ್ಲಿ ನಿರ್ದೇಶನಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಜಾಗತಿಕ ಖರೀದಿದಾರರು ಮತ್ತು ವ್ಯಾಪಾರ ಸಂದರ್ಶಕರಿಗೆ, ಪ್ರದರ್ಶಕರ ಅನ್ವೇಷಣೆ ಮಾದರಿ ವಿವಿಧ ಪ್ರದರ್ಶಕರ ವರ್ಗಗಳಲ್ಲಿ ರಚನಾತ್ಮಕ ಹುಡುಕಾಟ ಮತ್ತು ಫಿಲ್ಟರಿಂಗ್ ಅನ್ನು ಅನುಮತಿಸುತ್ತದೆ. ಬಳಕೆದಾರರು ಹೆಸರು, ಉತ್ಪನ್ನ ವರ್ಗ ಮತ್ತು ಪ್ರದರ್ಶಕರ ಪ್ರಕಾರದ ಮೂಲಕ ಕಂಪನಿಗಳನ್ನು ಹುಡುಕಲು ಸಾಧ್ಯವಾಗುತ್ತದೆ. ಜವಳಿ ಮೌಲ್ಯ ಸರಣಿಯಾದ್ಯಂತ ಉದ್ದೇಶಿತ ಮೂಲ (ಸೋರ್ಸಿಂಗ್) ಮತ್ತು ಕೇಂದ್ರೀಕೃತ ವ್ಯಾಪಾರ ಸಂವಹನಗಳನ್ನು ಸಕ್ರಿಯಗೊಳಿಸುತ್ತದೆ.

ಅಪ್ಲಿಕೇಷನ್ ಕಾರ್ಯಕ್ರಮದ ನೇರ ಕಾರ್ಯಸೂಚಿ ಮತ್ತು ಜ್ಞಾನ ಗೋಷ್ಠಿಗಳಿಗೆ ಲಭ್ಯತೆಯನ್ನು ಒದಗಿಸುತ್ತದೆ, ಭಾಗವಹಿಸುವವರು ಪೂರ್ಣ ಸಮ್ಮೇಳನ ವೇಳಾಪಟ್ಟಿಯನ್ನು ವೀಕ್ಷಿಸಲು, ವೈಯಕ್ತಿಕ ಕಾರ್ಯಸೂಚಿಯನ್ನು ರಚಿಸಲು ಮತ್ತು ಗೋಷ್ಠಿ ಎಚ್ಚರಿಕೆಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಇದು ಭಾರತ್ ಟೆಕ್ಸ್ 2026 ರ ಭಾಗವಾಗಿ ಆಯೋಜಿಸಲಾದ ನೀತಿ ಸಂವಾದಗಳು, ಉದ್ಯಮ ಚರ್ಚೆಗಳು ಮತ್ತು ಜ್ಞಾನಕ್ಕೆ ಸಂಬಂಧಿಸಿದ ಒಳಗೊಳ್ಳುವಿಕೆಗಳಲ್ಲಿ ಉತ್ತಮ ಭಾಗವಹಿಸುವಿಕೆಯನ್ನು ಬೆಂಬಲಿಸುತ್ತದೆ.

ಭಾರತ್ ಟೆಕ್ಸ್ ಆಪ್‌ ಪಡೆಯಲಯ ಲಿಂಕ್‌ ಗಾಗಿ ಇಲ್ಲಿ ಸ್ಕ್ಯಾನ್ ಮಾಡಿ https://onelink.to/zcrm4s.

ಭಾರತ್ ಟೆಕ್ಸ್ 2026 ಅನ್ನು ಭಾರತ ಸರ್ಕಾರದ ಜವಳಿ ಸಚಿವಾಲಯದ ಬೆಂಬಲದೊಂದಿಗೆ 11 ಜವಳಿ ರಫ್ತು ಉತ್ತೇಜನ ಮಂಡಳಿಗಳು ಮತ್ತು ಕೈಗಾರಿಕಾ ಸಂಸ್ಥೆಗಳ ಒಕ್ಕೂಟವಾದ ಭಾರತ್ ಟೆಕ್ಸ್ ಟ್ರೇಡ್ ಫೆಡರೇಶನ್ ಆಯೋಜಿಸುತ್ತಿದೆ. ಗೌರವಾನ್ವಿತ ಪ್ರಧಾನ ಮಂತ್ರಿಯವರ 5F ದೃಷ್ಟಿಕೋನ, ಫಾರ್ಮ್ ಟು ಫೈಬರ್ ಟು ಫ್ಯಾಕ್ಟರಿ ಟು ಫ್ಯಾಷನ್ ಟು ಫಾರಿನ್ ನಿಂದ ಸ್ಫೂರ್ತಿ ಪಡೆದಿರುವ ಈ ಕಾರ್ಯಕ್ರಮವು ಭಾರತವನ್ನು ವಿಶ್ವಾಸಾರ್ಹ, ಸುಸ್ಥಿರ ಮತ್ತು ನಾವೀನ್ಯತೆ ಆಧರಿಸಿದ ಜಾಗತಿಕ ಜವಳಿ ಮೂಲ ಮತ್ತು ಹೂಡಿಕೆ ತಾಣವಾಗಿ ಇರಿಸಲು ಪ್ರಯತ್ನಿಸುತ್ತದೆ.

ಭಾರತ್ ಟೆಕ್ಸ್ 2026, 2026ರ ಜುಲೈ 14-17ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದ್ದು, ಜಾಗತಿಕ ಜವಳಿ ಪೂರಕ ವ್ಯವಸ್ಥೆಯಾದ್ಯಂತ 7,000 ಕ್ಕೂ ಅಧಿಕ ಅಂತಾರಾಷ್ಟ್ರೀಯ ಖರೀದಿದಾರರು ಮತ್ತು 1,30,000 ಕ್ಕೂ ಅಧಿಕ ವ್ಯಾಪಾರಿಗಳನ್ನು ಒಗ್ಗೂಡಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮವು ಭಾರತದ ಸಮಗ್ರ ಜವಳಿ ಮೌಲ್ಯ ಸರಣಿಯನ್ನು ಪ್ರದರ್ಶಿಸುತ್ತದೆ, ಇದರಲ್ಲಿ ಫೈಬರ್‌ಗಳು, ನೂಲುಗಳು, ಬಟ್ಟೆಗಳು, ಉಡುಪು, ಗೃಹ ಜವಳಿ, ತಾಂತ್ರಿಕ ಜವಳಿ, ಕೈಮಗ್ಗಗಳು, ಕರಕುಶಲ ವಸ್ತುಗಳು, ಸುಸ್ಥಿರ ಜವಳಿ ಮತ್ತು ಬುದ್ಧಿವಂತ ಉತ್ಪಾದನಾ ತಂತ್ರಜ್ಞಾನಗಳು ಸೇರಿವೆ. ಭಾರತ್ ಟೆಕ್ಸ್ 2026 ಎಕ್ಸ್‌ಪೋ ಕುರಿತು ಹೆಚ್ಚಿನ ಮಾಹಿತಿ  www.bharat-tex.com ನಲ್ಲಿ ಲಭ್ಯವಿದೆ.

 

*****


(ಪ್ರಕಟಣೆ ಐ.ಡಿ.: 2263219) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Malayalam