ಪ್ರಧಾನ ಮಂತ್ರಿಯವರ ಕಛೇರಿ
3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಐಸ್ಲ್ಯಾಂಡ್ ಪ್ರಧಾನಮಂತ್ರಿಯೊಂದಿಗೆ ಸಭೆ ನಡೆಸಿದರು
ಪ್ರಕಟಣಾ ದಿನಾಂಕ:
19 MAY 2026 6:44PM by PIB Bengaluru
3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದಲ್ಲಿ ಓಸ್ಲೋದಲ್ಲಿ ಐಸ್ಲ್ಯಾಂಡ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀಮತಿ ಕ್ರಿಸ್ಟರ್ನ್ ಫ್ರಾಸ್ಟಾಡೊಟ್ಟಿರ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಭೆ ನಡೆಸಿದರು.
ಪ್ರಧಾನಮಂತ್ರಿ ಶ್ರೀಮತಿ ಫ್ರಾಸ್ಟಾಡೊಟ್ಟಿರ್ ಅವರು ಅಧಿಕಾರ ವಹಿಸಿಕೊಂಡ ನಂತರ ಇದು ಇಬ್ಬರು ನಾಯಕರ ಮೊದಲ ಸಭೆಯಾಗಿದೆ. ಐಸ್ಲ್ಯಾಂಡ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಪ್ರಧಾನಮಂತ್ರಿಯಾಗಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀಮತಿ ಫ್ರಾಸ್ಟಾಡೊಟ್ಟಿರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಭಾರತ-ಯುರೋಪಿಯನ್ ಮುಕ್ತ ವ್ಯಾಪಾರ ಸಂಘ (ಇ.ಎಫ್.ಟಿ.ಎ.), ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ (ಟಿಇಪಿಎ) ಜಾರಿಗೆ ಬರುವ ಸಂದರ್ಭದಲ್ಲಿ, ದ್ವಿಪಕ್ಷೀಯ ಸಂಬಂಧಗಳನ್ನು ಗಾಢಗೊಳಿಸುವ ಬಗ್ಗೆ ಇಬ್ಬರು ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ವ್ಯಾಪಾರ, ಹೂಡಿಕೆ ಮತ್ತು ಉತ್ಪಾದನಾ ಸಹಯೋಗದಲ್ಲಿ ನಿಜವಾದ ದ್ವಿಪಕ್ಷೀಯ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ (ಟಿಇಪಿಎ) ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ ಎಂದು ಇಬ್ಬರೂ ನಾಯಕರು ಪರಸ್ಪರ ಒಪ್ಪಿಕೊಂಡರು.
ಭೂಶಾಖದ ಶಕ್ತಿ, ಮೀನುಗಾರಿಕೆ, ನವೀನ ತಂತ್ರಜ್ಞಾನಗಳು, ಸೃಜನಶೀಲ ಆರ್ಥಿಕತೆ, ಸಂಸ್ಕೃತಿ, ಪ್ರವಾಸೋದ್ಯಮ, ಚಲನಶೀಲತೆ ಮತ್ತು ಜನರಿಂದ ಜನರಿಗೆ ಸಂಪರ್ಕಗಳಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಗತಿಯನ್ನು ಇಬ್ಬರೂ ನಾಯಕರು ಪರಿಶೀಲಿಸಿದರು. ಆರ್ಕ್ಟಿಕ್ ಸಂಶೋಧನೆಯಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು.
ಪರಸ್ಪರ ಅನುಕೂಲಕರ ಸಮಯಕಾಶದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಐಸ್ಲ್ಯಾಂಡ್ ಪ್ರಧಾನಮಂತ್ರಿಯವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಹ್ವಾನಿಸಿದರು.
*****
(ಪ್ರಕಟಣೆ ಐ.ಡಿ.: 2263119)
ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ:
Tamil
,
Manipuri
,
English
,
Urdu
,
हिन्दी
,
Marathi
,
Bengali
,
Assamese
,
Punjabi
,
Gujarati
,
Telugu
,
Malayalam