ಲೋಕಸಭಾ ಸಚಿವಾಲಯ
ಡಾ. ನೀಲಂ ಸಂಜೀವ ರೆಡ್ಡಿ ಅವರಿಗೆ ಪುಷ್ಪ ನಮನ ಸಲ್ಲಿಸಿದ ಲೋಕಸಭಾ ಸ್ಪೀಕರ್
ಪ್ರಕಟಣಾ ದಿನಾಂಕ:
19 MAY 2026 1:48PM by PIB Bengaluru
ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಭಾರತದ ಮಾಜಿ ರಾಷ್ಟ್ರಪತಿ ಮತ್ತು ಲೋಕಸಭೆಯ ಮಾಜಿ ಸ್ಪೀಕರ್ ಡಾ. ನೀಲಂ ಸಂಜೀವ ರೆಡ್ಡಿ ಅವರ ಜನ್ಮದಿನವಾದ ಇಂದು ಸಂವಿಧಾನ ಸದನದ ಸೆಂಟ್ರಲ್ ಹಾಲ್ ನಲ್ಲಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಸಂಸತ್ ಸದಸ್ಯರು, ಮಾಜಿ ಸಂಸದರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಪುಷ್ಪ ನಮನ ಸಲ್ಲಿಸಿದರು.
ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಉತ್ಪಲ್ ಕುಮಾರ್ ಸಿಂಗ್ ಮತ್ತು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಸಿ. ಮೋದಿ ಕೂಡ ಡಾ. ರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಲೋಕಸಭಾ ಸಚಿವಾಲಯವು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಹೊರತಂದ ಡಾ. ನೀಲಂ ಸಂಜೀವ ರೆಡ್ಡಿ ಅವರ ವಿವರಗಳನ್ನು ಒಳಗೊಂಡ ಕಿರುಪುಸ್ತಕವನ್ನು ಗಣ್ಯರಿಗೆ ನೀಡಲಾಯಿತು.
*****
(ಪ್ರಕಟಣೆ ಐ.ಡಿ.: 2262745)
ವಿಸಿಟರ್ ಕೌಂಟರ್ : 4