ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯೂರೋಪ್ ದುಂಡು ಮೇಜಿನ ಕೈಗಾರಿಕಾ ಸಭೆ (ಇಆರ್‌ಟಿ) ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಪ್ರಕಟಣಾ ದಿನಾಂಕ: 18 MAY 2026 12:12AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ಮೇ 17ರಂದು ಗೋಥೆನ್‌ಬರ್ಗ್‌ನಲ್ಲಿ ನಡೆದ ಯೂರೋಪ್ ದುಂಡು ಮೇಜಿನ ಕೈಗಾರಿಕಾ ಸಭೆ(ಇಆರ್‌ಟಿ)ಯನ್ನು ಉದ್ದೇಶಿಸಿ ಮಾತನಾಡಿದರು. ಸ್ವೀಡನ್‌ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಉಲ್ಫ್ ಕ್ರಿಸ್ಟರ್ಸನ್,  ಐರೋಪ್ಯ ಒಕ್ಕೂಟ ಆಯೋಗದ ಅಧ್ಯಕ್ಷರಾದ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್, ಯೂರೋಪಿನ ಹಿರಿಯ ಉದ್ಯಮ ಮುಖಂಡರು ಮತ್ತು ಪ್ರಮುಖ ಯೂರೋಪ್ ಮತ್ತು ಭಾರತೀಯ ಕಂಪನಿಗಳ ಪ್ರತಿನಿಧಿಗಳು ವೋಲ್ವೊ ಸಮೂಹ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದರು.

ಪ್ರಧಾನ ಭಾಷಣದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಭಾರತ ಮತ್ತು ಯೂರೋಪ್ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರ ಒಮ್ಮುಖವನ್ನು ಪ್ರಸ್ತಾಪಿಸಿದರು. ಹೆಚ್ಚು ಸಂಕೀರ್ಣವಾಗಿರುವ ಅನಿಶ್ಚಿತ ಜಾಗತಿಕ ಪರಿಸರದಲ್ಲಿ ವಿಶ್ವಾಸಾರ್ಹ ಪಾಲುದಾರಿಕೆಗಳ ಮಹತ್ವಕ್ಕೆ ಅವರು ಒತ್ತು ನೀಡಿದರು.

ಭಾರತ-ಯೂರೋಪ್ ಸಂಬಂಧ ಹೆಚ್ಚಾಗುತ್ತಿರುವುದನ್ನು ಪ್ರಧಾನಮಂತ್ರಿ ಮೋದಿ ಸ್ವಾಗತಿಸಿದರು, ಇದರಲ್ಲಿ ಹೆಗ್ಗುರುತಾಗಿರುವ ಭಾರತ-ಯೂರೋಪ್ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಯಶಸ್ವಿಯೂ ಸೇರಿದೆ. ಈ ಒಪ್ಪಂದವನ್ನು ವ್ಯಾಪಾರ, ತಂತ್ರಜ್ಞಾನ, ಉತ್ಪಾದನೆ, ಸೇವೆಗಳು ಮತ್ತು ಚೇತರಿಕೆಯ ಪೂರೈಕೆ ಸರಪಳಿಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ಪರಿವರ್ತನೀಯ ಆರ್ಥಿಕ ಪಾಲುದಾರಿಕೆ ಎಂದು ಅವರು ಬಣ್ಣಿಸಿದರು. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ)ನಂತಹ ಸಂಪರ್ಕ ಯೋಜನೆಗಳು ಭಾರತ-ಯೂರೋಪ್ ವ್ಯವಹಾರ ಪಾಲುದಾರಿಕೆಗೆ ಹೊಸ ಮೌಲ್ಯಗಳನ್ನು ಸೇರಿಸಿವೆ ಎಂದು ಅವರು ತಿಳಿಸಿದರು.

ಭಾರತ ಇಂದು ಹೂಡಿಕೆ, ನಾವೀನ್ಯತೆ ಮತ್ತು ಉತ್ಪಾದನೆಗೆ ವಿಶ್ವದ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿದೆ. ಭಾರತದ ತ್ವರಿತ ಆರ್ಥಿಕ ಬೆಳವಣಿಗೆ, ಮುಂದಿನ ಪೀಳಿಗೆಯ ಆರ್ಥಿಕ ಸುಧಾರಣೆಗಳು, ಆಡಳಿತದಲ್ಲಿ ವ್ಯಾಪಾರ ಮಾಡುವ ಸುಲಭತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವಿಸ್ತರಿಸುವುದು, ರೋಮಾಂಚಕ ಉತ್ಪಾದನಾ ಪರಿಸರ ವ್ಯವಸ್ಥೆ ಮತ್ತು ವೇಗವಾಗಿ ರೂಪಾಂತರಗೊಳ್ಳುವ ಮೂಲಸೌಕರ್ಯ ವಲಯ ಕುರಿತು ಪ್ರಧಾನ ಮಂತ್ರಿ ಪ್ರಸ್ತಾಪಿಸಿದರು. "ಭಾರತಕ್ಕಾಗಿ ವಿನ್ಯಾಸ, ಭಾರತದಲ್ಲಿ ತಯಾರಿಸಿ ಮತ್ತು ಭಾರತದಿಂದ ರಫ್ತು ಮಾಡಿ" ಎಂಬ ಭಾರತದ ದೃಷ್ಟಿಕೋನವನ್ನು ಅವರು ಪುನರುಚ್ಚರಿಸಿದರು. ಐರೋಪ್ಯ ಕಂಪನಿಗಳು ವಿಶ್ವಾಸಾರ್ಹ ಮತ್ತು ನಂಬಿಕಾರ್ಹ ಆರ್ಥಿಕ ಪಾಲುದಾರರಾಗಿ ಭಾರತದೊಂದಿಗೆ ತಮ್ಮ ತೊಡಗಿಸಿಕೊಳ್ಳುವಿಕೆಯನ್ನು ಗಾಢವಾಗಿಸಬೇಕು ಎಂದು ಅವರು ಆಹ್ವಾನ ನೀಡಿದರು.

ಚೇತರಿಕೆಯ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಭಾರತ ಮತ್ತು ಯೂರೋಪ್ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. ಸಾರಿಗೆ, ಸರಕು ಸಾಗಣೆ, ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್ ಮತ್ತು ಪರಮಾಣು ಶಕ್ತಿಯಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳು ಸೇರಿದಂತೆ ಭಾರತದ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಮತ್ತು ಇಂಧನ ಪರಿವರ್ತನೆ, ಟೆಲಿಕಾಂ ಮತ್ತು ಡಿಜಿಟಲ್ ಮೂಲಸೌಕರ್ಯ, ಎಐ, ಸೆಮಿಕಂಡಕ್ಟರ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಆಳವಾದ ತಂತ್ರಜ್ಞಾನ ಉತ್ಪಾದನೆ, ಹಸಿರು ಪರಿವರ್ತನೆ ಮತ್ತು ಶುದ್ಧ ಇಂಧನ, ಮೂಲಸೌಕರ್ಯ, ಚಲನಶೀಲತೆ ಮತ್ತು ನಗರ ಪರಿವರ್ತನೆ ಮತ್ತು ಆರೋಗ್ಯ ಮತ್ತು ಜೀವ ವಿಜ್ಞಾನಗಳಂತಹ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವಂತೆ ಪ್ರಧಾನಮಂತ್ರಿ ಅವರು ಯೂರೋಪ್ ಉದ್ಯಮ ನಾಯಕರಿಗೆ ಆಹ್ವಾನ ನೀಡಿದರು.

ಭಾರತ ಮತ್ತು ಯೂರೋಪ್ ನಡುವಿನ ಪ್ರತಿಭೆ ಚಲನಶೀಲತೆ, ಶಿಕ್ಷಣ ಮತ್ತು ಕೌಶಲ್ಯ ಪಾಲುದಾರಿಕೆಗಳ ಮಹತ್ವಕ್ಕೆ ಪ್ರಧಾನಮಂತ್ರಿ ಮೋದಿ ಒತ್ತು ನೀಡಿದರು. ಭವಿಷ್ಯದ ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತದ ಯುವ ಮತ್ತು ಕೌಶಲ್ಯಪೂರ್ಣ ನೌಕರಪಡೆಯು ಪ್ರಮುಖ ಶಕ್ತಿಯಾಗಿದೆ ಎಂದ ಅವರು, ಜನರಿಂದ ಜನರಿಗೆ ಸಂಬಂಧಗಳು ಮತ್ತು ನಾವೀನ್ಯತೆ ಪಾಲುದಾರಿಕೆಗಳನ್ನು ಗಾಢಗೊಳಿಸುವ ಅಗತ್ಯವವಿದೆ ಎಂದರು.

ಭಾರತ-ಯೂರೋಪ್ ಸಿಇಒಗಳ ದುಂಡು ಮೇಜಿನ ಸಭೆಯನ್ನು ವಾರ್ಷಿಕವಾಗಿ ಆಯೋಜಿಸಬೇಕು, ಇಆರ್‌ಟಿಯಲ್ಲಿ ಭಾರತ ಮೇಜು ಸಿದ್ಧಗೊಳಿಸಬೇಕು ಪ್ರಧಾನಮಂತ್ರಿ ಸಲಹೆ ನೀಡಿದರು.

ಭಾರತ-ಯೂರೋಪ್ ಆರ್ಥಿಕ ಮತ್ತು ಕೈಗಾರಿಕಾ ಸಹಕಾರ ಬಲಪಡಿಸುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಈ ಸಂವಾದವು ಒಂದು ಪ್ರಮುಖ ವೇದಿಕೆ ಒದಗಿಸಿತು. ಸುಸ್ಥಿರ ಬೆಳವಣಿಗೆ, ತಾಂತ್ರಿಕ ಸಹಭಾಗಿತ್ವ ಮತ್ತು ಚೇತರಿಕೆ ಮತ್ತು ಹೊಂದಾಣಿಕೆಯ ಜಾಗತಿಕ ಪಾಲುದಾರಿಕೆಗಳಿಗೆ ಭಾರತ ಮತ್ತು ಯೂರೋಪಿನ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿತು.

 

*****


(ಪ್ರಕಟಣೆ ಐ.ಡಿ.: 2262213) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , English , Urdu , Marathi , हिन्दी , Assamese , Manipuri , Bengali , Gujarati , Tamil , Malayalam