ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ನಿಯತಕಾಲಿಕ ಶ್ರಮಶಕ್ತಿ ಸಮೀಕ್ಷೆ (ಪಿಎಲ್‌ಎಫ್‌ಎಸ್) ಮಾಸಿಕ ಬುಲೆಟಿನ್ ಏಪ್ರಿಲ್, 2026
ನಗರ ಪ್ರದೇಶದ ಡಬ್ಲುಪಿಆರ್ ಸ್ಥಿರವಾಗಿದೆ
ನಗರ ಪ್ರದೇಶದ ಮಹಿಳಾ ನಿರುದ್ಯೋಗ ದರವು (ಯುಆರ್) ಒಂದು ವರ್ಷದ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ
ಪ್ರಕಟಣಾ ದಿನಾಂಕ:
15 MAY 2026 4:00PM by PIB Bengaluru
|
ಮುಖ್ಯಾಂಶಗಳು:
2026ರ ಏಪ್ರಿಲ್ ನಲ್ಲಿ ಒಟ್ಟಾರೆ LFPR (15+ ವರ್ಷಗಳು) ಶೇ. 55.0 ರಷ್ಟಿತ್ತು, ಇದು 2026ರ ಮಾರ್ಚ್‌ನಲ್ಲಿ ಶೇ. 55.4 ಮತ್ತು 2025ರ ಏಪ್ರಿಲ್‌ನಲ್ಲಿ ಶೇ. 55.6 ರಷ್ಟಿತ್ತು.
ಮಹಿಳಾ LFPR (15+ ವರ್ಷಗಳು) 2026ರ ಮಾರ್ಚ್‌ನಲ್ಲಿದ್ದ ಶೇ. 34.4 ಕ್ಕೆ ಪ್ರತಿಯಾಗಿ, 2026ರ ಏಪ್ರಿಲ್ ನಲ್ಲಿ ಶೇ. 33.9 ರಷ್ಟಿದೆ ಎಂದು ಅಂದಾಜಿಸಲಾಗಿದೆ. 2025ರ ಏಪ್ರಿಲ್ ನಲ್ಲಿ ಇದಕ್ಕೆ ಸರಿಹೊಂದುವ ಅಂದಾಜು ಶೇ. 34.2 ರಷ್ಟಿತ್ತು.
2026ರ ಏಪ್ರಿಲ್ ನಲ್ಲಿ ಒಟ್ಟಾರೆ WPR (15+ ವರ್ಷಗಳು) ಶೇ. 52.2 ರಷ್ಟಿತ್ತು, ಇದು 2026ರ ಮಾರ್ಚ್‌ನಲ್ಲಿ ಶೇ. 52.6 ರಷ್ಟಿತ್ತು.
ನಗರ ಪ್ರದೇಶದ WPR (15+ ವರ್ಷಗಳು) ಹಿಂದಿನ ತಿಂಗಳಿಗೆ ಹೋಲಿಸಿದರೆ 2026ರ ಏಪ್ರಿಲ್ ನಲ್ಲಿ ಯಾವುದೇ ಬದಲಾವಣೆಯಿಲ್ಲದೆ ಶೇ. 46.8 ರಲ್ಲೇ ಸ್ಥಿರವಾಗಿದೆ.
ನಗರ ಪ್ರದೇಶದ ನಿರುದ್ಯೋಗ ದರವು (UR - 15+ ವರ್ಷಗಳು) 2026ರ ಮಾರ್ಚ್‌ನಲ್ಲಿದ್ದ ಶೇ. 6.8 ರಿಂದ 2026ರ ಏಪ್ರಿಲ್‌ನಲ್ಲಿ ಶೇ. 6.6 ಕ್ಕೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.
ನಗರ ಪ್ರದೇಶದ ಮಹಿಳಾ ನಿರುದ್ಯೋಗ ದರವು (UR - 15+ ವರ್ಷಗಳು) 2026ರ ಏಪ್ರಿಲ್‌ನಲ್ಲಿ ಶೇ. 8.5 ಕ್ಕೆ ಕುಸಿದಿದ್ದು, ಇದು 2025ರ ಏಪ್ರಿಲ್‌ನಿಂದ ಈಚೆಗೆ ದಾಖಲಾದ ಅತ್ಯಂತ ಕನಿಷ್ಠ ಮಟ್ಟವಾಗಿದೆ.
|
A. ಪರಿಚಯ
MoSPI ನ NSO ನಡೆಸುವ ನಿಯತಕಾಲಿಕ ಶ್ರಮಶಕ್ತಿ ಸಮೀಕ್ಷೆಯು (PLFS), ಜನಸಂಖ್ಯೆಯ ಚಟುವಟಿಕೆಗಳ ಭಾಗವಹಿಸುವಿಕೆ ಮತ್ತು ಉದ್ಯೋಗ ಹಾಗೂ ನಿರುದ್ಯೋಗದ ಪರಿಸ್ಥಿತಿಗಳ ಕುರಿತಾದ ದತ್ತಾಂಶದ ಪ್ರಾಥಮಿಕ ಮೂಲವಾಗಿದೆ. ದೇಶದ ಶ್ರಮಶಕ್ತಿ ಸೂಚಕಗಳ ಮಾಸಿಕ ಮತ್ತು ತ್ರೈಮಾಸಿಕ ಅಂದಾಜುಗಳನ್ನು ಒದಗಿಸಲು 2025ರ ಜನವರಿಯಿಂದ PLFS ಸಮೀಕ್ಷೆಯ ಕಾರ್ಯವಿಧಾನವನ್ನು ಮಾರ್ಪಡಿಸಲಾಗಿದೆ.
PLFS ನ ಮಾಸಿಕ ಫಲಿತಾಂಶಗಳನ್ನು 'ಮಾಸಿಕ ಬುಲೆಟಿನ್ ಗಳ' ರೂಪದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು ಪ್ರಸ್ತುತ ಸಾಪ್ತಾಹಿಕ ಸ್ಥಿತಿ (CWS) ವಿಧಾನವನ್ನು ಅನುಸರಿಸಿ, ಅಖಿಲ ಭಾರತ ಮಟ್ಟದಲ್ಲಿ ಪ್ರಮುಖ ಶ್ರಮ ಮಾರುಕಟ್ಟೆ ಸೂಚಕಗಳಾದ—ಶ್ರಮಶಕ್ತಿ ಭಾಗವಹಿಸುವಿಕೆ ದರ (LFPR), ಕಾರ್ಮಿಕ ಜನಸಂಖ್ಯೆ ಅನುಪಾತ (WPR) ಮತ್ತು ನಿರುದ್ಯೋಗ ದರ (UR) ಗಳ ಅಂದಾಜುಗಳನ್ನು ಪ್ರಸ್ತುತಪಡಿಸುತ್ತದೆ.
2025ರ ಏಪ್ರಿಲ್‌ನಿಂದ 2026ರ ಮಾರ್ಚ್‌ವರೆಗಿನ ಮಾಸಿಕ ಬುಲೆಟಿನ್ ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ 2026ರ ಏಪ್ರಿಲ್‌ನ ಮಾಸಿಕ ಬುಲೆಟಿ ನ್ ಈ ಸರಣಿಯ ಹದಿಮೂರನೇ ಬುಲೆಟಿನ್ ಆಗಿದೆ.
CWS ವಿಧಾನವನ್ನು ಅನುಸರಿಸಿದ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಪ್ರಮುಖ ಫಲಿತಾಂಶಗಳು:
- ಶ್ರಮಶಕ್ತಿ ಭಾಗವಹಿಸುವಿಕೆ ದರವು (LFPR) ಅಲ್ಪ ಪ್ರಮಾಣದ ಇಳಿಕೆಯನ್ನು ತೋರಿಸುತ್ತದೆ:
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಶ್ರಮಶಕ್ತಿ ಭಾಗವಹಿಸುವಿಕೆ ದರವು (LFPR) 2026ರ ಮಾರ್ಚ್‌ನಲ್ಲಿದ್ದ ಶೇ. 55.4 ಕ್ಕೆ ಹೋಲಿಸಿದರೆ 2026ರ ಏಪ್ರಿಲ್‌ನಲ್ಲಿ ಶೇ. 55.0 ರಷ್ಟಿದೆ ಎಂದು ವರದಿಯಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ LFPR ಕ್ರಮವಾಗಿ ಶೇ. 57.5 ಮತ್ತು ಶೇ. 50.1 ರಷ್ಟಾಗಿ ದಾಖಲಾಗಿದೆ.
2025ರ ಏಪ್ರಿಲ್ ಗೆ (ಶೇ. 55.6) ಹೋಲಿಸಿದರೆ, ಒಟ್ಟಾರೆ LFPR 0.6 ಶೇಕಡಾವಾರು ಪಾಯಿಂಟ್‌ಗಳಷ್ಟು ಕಡಿಮೆಯಾಗಿದೆ. ವರ್ಷದ ಅವಧಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ LFPR ಕೂಡ ಕ್ರಮವಾಗಿ 0.5 ಮತ್ತು 0.6 ಶೇಕಡಾವಾರು ಪಾಯಿಂಟ್ ಗಳಷ್ಟು ಕುಸಿತವನ್ನು ದಾಖಲಿಸಿವೆ.

|
2026ರ ಏಪ್ರಿಲ್‌ನಲ್ಲಿ, ವರ್ಷದಿಂದ ವರ್ಷದ ಆಧಾರದ ಮೇಲೆ LFPR ಅಲ್ಪ ಪ್ರಮಾಣದ ಇಳಿಕೆಯನ್ನು ದಾಖಲಿಸಿದೆ.
|
- ಮಹಿಳಾ ಶ್ರಮಶಕ್ತಿ ಭಾಗವಹಿಸುವಿಕೆ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ:
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರ ಶ್ರಮಶಕ್ತಿ ಭಾಗವಹಿಸುವಿಕೆ ದರವು (LFPR) 2026ರ ಮಾರ್ಚ್‌ನಲ್ಲಿದ್ದ ಶೇ. 34.4 ಕ್ಕೆ ಪ್ರತಿಯಾಗಿ, 2026ರ ಏಪ್ರಿಲ್ ನಲ್ಲಿ ಶೇ. 33.9 ರಷ್ಟಿತ್ತು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳಾ LFPR ಕ್ರಮವಾಗಿ ಶೇ. 38.2 ಮತ್ತು ಶೇ. 25.0 ರಷ್ಟಾಗಿ ದಾಖಲಾಗಿದೆ.
2025ರ ಏಪ್ರಿಲ್ ಗೆ ಹೋಲಿಸಿದರೆ, ಒಟ್ಟಾರೆ ಮಹಿಳಾ LFPR ಶೇ. 34.2 ರಿಂದ ಶೇ. 33.9 ಕ್ಕೆ, ಅಂದರೆ 0.3 ಶೇಕಡಾವಾರು ಪಾಯಿಂಟ್ ಗಳಷ್ಟು ಅಲ್ಪ ಪ್ರಮಾಣದಲ್ಲಿ ಕುಸಿದಿದೆ. ಗ್ರಾಮೀಣ ಮಹಿಳಾ LFPR ಯಾವುದೇ ಬದಲಾವಣೆಯಿಲ್ಲದೆ ಸ್ಥಿರವಾಗಿದ್ದರೆ, ನಗರ ಪ್ರದೇಶದ ಮಹಿಳಾ LFPR ವರ್ಷದ ಅವಧಿಯಲ್ಲಿ 0.7 ಶೇಕಡಾವಾರು ಪಾಯಿಂಟ್‌ಗಳಷ್ಟು ಕುಸಿತವನ್ನು ದಾಖಲಿಸಿದೆ.

|
ನಗರ ಪ್ರದೇಶಗಳಲ್ಲಿ ಮಹಿಳಾ ಶ್ರಮಶಕ್ತಿ ಭಾಗವಹಿಸುವಿಕೆಯು ವ್ಯಾಪಕ ಸ್ಥಿರತೆಯನ್ನು ತೋರಿಸುತ್ತದೆ.
|
- ನಗರ ಪ್ರದೇಶದ WPR ಸ್ಥಿರತೆಯನ್ನು ಕಾಯ್ದುಕೊಂಡಿದೆ:
ನಗರ ಪ್ರದೇಶಗಳಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಕಾರ್ಮಿಕ ಜನಸಂಖ್ಯೆ ಅನುಪಾತವು (WPR), 2026ರ ಮಾರ್ಚ್‌ನಲ್ಲಿ ದಾಖಲಾಗಿದ್ದ ಮಟ್ಟದಲ್ಲೇ, ಅಂದರೆ 2026ರ ಏಪ್ರಿಲ್ ನಲ್ಲಿಯೂ ಯಾವುದೇ ಬದಲಾವಣೆಯಿಲ್ಲದೆ ಶೇ. 46.8 ರಷ್ಟಿದೆ. ಒಟ್ಟಾರೆ WPR 2026ರ ಮಾರ್ಚ್‌ನಲ್ಲಿದ್ದ ಶೇ. 52.6 ಮತ್ತು 2025ರ ಏಪ್ರಿಲ್‌ನಲ್ಲಿದ್ದ ಶೇ. 52.8 ಕ್ಕೆ ಹೋಲಿಸಿದರೆ, 2026ರ ಏಪ್ರಿಲ್ ನಲ್ಲಿ ಶೇ. 52.2 ರಷ್ಟಿದೆ ಎಂದು ಅಂದಾಜಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ WPR 2026ರ ಮಾರ್ಚ್‌ನಲ್ಲಿದ್ದ ಶೇ. 55.5 ಮತ್ತು 2025ರ ಏಪ್ರಿಲ್‌ನಲ್ಲಿದ್ದ ಶೇ. 55.4 ಕ್ಕೆ ಹೋಲಿಸಿದರೆ, 2026ರ ಏಪ್ರಿಲ್ ನಲ್ಲಿ ಶೇ. 54.9 ರಷ್ಟಿತ್ತು.



|
ನಗರ ಪ್ರದೇಶದ WPR 2026ರ ಏಪ್ರಿಲ್ ನಲ್ಲಿ ಸ್ಥಿರತೆಯನ್ನು ಪ್ರದರ್ಶಿಸುವುದನ್ನು ಮುಂದುವರಿಸಿದೆ.
|
- ಒಟ್ಟಾರೆ ನಿರುದ್ಯೋಗ ದರವು (UR) ವ್ಯಾಪಕ ಸ್ಥಿರತೆಯನ್ನು ತೋರಿಸುತ್ತದೆ:
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ ನಿರುದ್ಯೋಗ ದರವು (UR), 2026ರ ಮಾರ್ಚ್ ಮತ್ತು 2025ರ ಏಪ್ರಿಲ್ ಎರಡರಲ್ಲೂ ಇದ್ದ ಶೇ. 5.1 ಕ್ಕೆ ಹೋಲಿಸಿದರೆ 2026ರ ಏಪ್ರಿಲ್‌ನಲ್ಲಿ ಶೇ. 5.2 ರಷ್ಟರೊಂದಿಗೆ ಸ್ಥೂಲವಾಗಿ ಸ್ಥಿರವಾಗಿದೆ. ನಗರ ಪ್ರದೇಶದ ನಿರುದ್ಯೋಗ ದರವು (UR) 2026ರ ಮಾರ್ಚ್‌ನಲ್ಲಿದ್ದ ಶೇ. 6.8 ರಿಂದ 2026ರ ಏಪ್ರಿಲ್‌ನಲ್ಲಿ ಶೇ. 6.6 ಕ್ಕೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ, ಆದರೆ ಇದೇ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗ ದರವು ಶೇ. 4.3 ರಿಂದ ಶೇ. 4.6 ಕ್ಕೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ವರ್ಷದಿಂದ ವರ್ಷದ ಹೋಲಿಕೆಯಲ್ಲಿ ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳ ನಿರುದ್ಯೋಗ ದರವು (UR) ಸ್ಥೂಲವಾಗಿ ಒಂದೇ ಮಟ್ಟವನ್ನು ಕಾಯ್ದುಕೊಂಡಿದೆ.

|
ಒಟ್ಟಾರೆ ನಿರುದ್ಯೋಗ ದರವು ವರ್ಷದ ಅವಧಿಯಲ್ಲಿ ಸ್ಥೂಲವಾಗಿ ಸ್ಥಿರವಾಗಿತ್ತು.
|
ನಗರ ಪ್ರದೇಶದ ನಿರುದ್ಯೋಗ ದರದಲ್ಲಿ ಇಳಿಕೆ:
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಲ್ಲಿ ನಿರುದ್ಯೋಗ ದರವು (UR), 2026ರ ಮಾರ್ಚ್‌ನಲ್ಲಿದ್ದ ಶೇ. 5.0 ಮತ್ತು 2025ರ ಏಪ್ರಿಲ್‌ನಲ್ಲಿದ್ದ ಶೇ. 5.2 ಕ್ಕೆ ಹೋಲಿಸಿದರೆ 2026ರ ಏಪ್ರಿಲ್‌ನಲ್ಲಿ ಶೇ. 5.1 ರಷ್ಟಿತ್ತು. ಗ್ರಾಮೀಣ ಪುರುಷರ ನಿರುದ್ಯೋಗ ದರವು (UR) 2026ರ ಏಪ್ರಿಲ್‌ನಲ್ಲಿದ್ದ ಶೇ. 4.7 ಕ್ಕೆ ಪ್ರತಿಯಾಗಿ 2026ರ ಮಾರ್ಚ್‌ನಲ್ಲಿ ಶೇ. 4.4 ರಷ್ಟಿದೆ ಎಂದು ಅಂದಾಜಿಸಲಾಗಿದೆ. ಇದೇ ಅವಧಿಯಲ್ಲಿ ನಗರ ಪ್ರದೇಶದ ಪುರುಷರ ನಿರುದ್ಯೋಗ ದರವು ಶೇ. 6.1 ರಿಂದ ಶೇ. 5.9 ಕ್ಕೆ ಇಳಿಕೆಯಾಗಿದೆ. ವರ್ಷದಿಂದ ವರ್ಷದ ಆಧಾರದ ಮೇಲೆ, ಒಟ್ಟಾರೆ ಪುರುಷರ ನಿರುದ್ಯೋಗ ದರವು 0.1 ಶೇಕಡಾವಾರು ಪಾಯಿಂಟ್ ನಷ್ಟು ಕಡಿಮೆಯಾಗಿದೆ.
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ ನಿರುದ್ಯೋಗ ದರವು (UR), 2026ರ ಮಾರ್ಚ್‌ನಲ್ಲಿದ್ದ ಶೇ. 5.3 ಮತ್ತು 2025ರ ಏಪ್ರಿಲ್ ನಲ್ಲಿದ್ದ ಶೇ. 5.0 ಕ್ಕೆ ಹೋಲಿಸಿದರೆ 2026ರ ಏಪ್ರಿಲ್‌ನಲ್ಲಿ ಶೇ. 5.4 ರಷ್ಟಾಗಿ ದಾಖಲಾಗಿದೆ. ಗ್ರಾಮೀಣ ಮಹಿಳಾ ನಿರುದ್ಯೋಗ ದರವು (UR) ತಿಂಗಳ ಅವಧಿಯಲ್ಲಿ ಇದ್ದ ಶೇ. 4.4 ಕ್ಕೆ ಹೋಲಿಸಿದರೆ ಶೇ. 4.1 ರಷ್ಟಿದೆ. ನಗರ ಪ್ರದೇಶದ ಮಹಿಳಾ ನಿರುದ್ಯೋಗ ದರವು ಶೇ. 9.0 ರಿಂದ ಶೇ. 8.5 ಕ್ಕೆ ಇಳಿಕೆಯಾಗಿದೆ. 2025ರ ಏಪ್ರಿಲ್ ಗೆ ಹೋಲಿಸಿದರೆ, ಒಟ್ಟಾರೆ ಮಹಿಳಾ ನಿರುದ್ಯೋಗ ದರವು 0.4 ಶೇಕಡಾವಾರು ಪಾಯಿಂಟ್ ಗಳಷ್ಟು ಹೆಚ್ಚಾಗಿದೆ.


|
ನಗರ ಪ್ರದೇಶದ ಮಹಿಳಾ ನಿರುದ್ಯೋಗ ದರವು (UR), 2025ರ ಏಪ್ರಿಲ್‌ನಿಂದ ಈಚೆಗೆ ತನ್ನ ಅತ್ಯಂತ ಕನಿಷ್ಠ ಮಟ್ಟವನ್ನು ದಾಖಲಿಸಿದೆ.
|
ಅಖಿಲ ಭಾರತ ಮಟ್ಟದಲ್ಲಿ, ಮಾಸಿಕ ಅಂದಾಜುಗಳು ಸಮೀಕ್ಷೆಗೆ ಒಳಪಟ್ಟ ಒಟ್ಟು 3,74,243 ವ್ಯಕ್ತಿಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ಆಧರಿಸಿವೆ.
|
ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆಗೆ ಒಳಪಟ್ಟ ವ್ಯಕ್ತಿಗಳು: 2,13,027
|
ನಗರ ಪ್ರದೇಶಗಳಲ್ಲಿ ಸಮೀಕ್ಷೆಗೆ ಒಳಪಟ್ಟ ವ್ಯಕ್ತಿಗಳು: 1,61,216
|
|
2026ರ ಏಪ್ರಿಲ್ ನ ಮಾಸಿಕ ಬುಲೆಟಿನ್ ಸಚಿವಾಲಯದ ವೆಬ್ ಸೈಟ್ ನಲ್ಲಿ (https://www.mospi.gov.in) ಲಭ್ಯವಿದೆ.
|
MoSPI ಪ್ರಕಟಣೆಗಳು/ವರದಿಗಳನ್ನು ಪಡೆಯಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
|
PDF ನೋಡಲು ಇಲ್ಲಿ ಕ್ಲಿಕ್ ಮಾಡಿ
******
(ಪ್ರಕಟಣೆ ಐ.ಡಿ.: 2261593)
ವಿಸಿಟರ್ ಕೌಂಟರ್ : 3