ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತ ಎಐ ಮಿಷನ್ ಮತ್ತು ಎನ್ ಎಚ್ ಎ ಬೆಂಗಳೂರಿನ ಎಬಿ ಪಿಎಂ-ಜೆಎವೈ ಆಟೋ-ಅಡ್ಜುಡಿಕೇಶನ್ ಹ್ಯಾಕಥಾನ್ ಪ್ರದರ್ಶನ 2026ರ ವಿಜೇತರನ್ನು ಸನ್ಮಾನಿಸಲಾಯಿತು


ಐ ಐ ಎಸ್ ಸಿ ಬೆಂಗಳೂರಿನಲ್ಲಿ ಆರೋಗ್ಯ ವಿಮೆ ಹಕ್ಕುಗಳ ನಿರ್ವಹಣೆಯಲ್ಲಿ ಪ್ರವರ್ತಕ ಎಐ ಪರಿಹಾರಗಳನ್ನು ಅಭಿವೃದ್ಧಿಪಡಿಸಿದ ಒಂಬತ್ತು ನಾವೀನ್ಯಕಾರರನ್ನು ಗುರುತಿಸಿ ಗೌರವಿಸಲಾಗಿದೆ

ಪ್ರಕಟಣಾ ದಿನಾಂಕ: 13 MAY 2026 2:11PM by PIB Bengaluru

ಭಾರತ ಎಐ ಮಿಷನ್ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ ಎಚ್ ಎ) ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ) ಸಹಯೋಗದೊಂದಿಗೆ, ಮೇ 9, 2026 ರಂದು ಬೆಂಗಳೂರಿನ ಐಐಎಸ್ ಸಿಯಲ್ಲಿ ನಡೆದ ಎಬಿ ಪಿಎಂ-ಜೆಎವೈ ಆಟೋ-ಅಡ್ಜುಡಿಕೇಶನ್ ಹ್ಯಾಕಥಾನ್ ಶೋಕೇಸ್ 2026ರ ವಿಜೇತರನ್ನು ಸನ್ಮಾನಿಸಿತು, ಇದು ಸಾರ್ವಜನಿಕ ಆರೋಗ್ಯ ವಿಮೆಯಲ್ಲಿ ಎಐ-ಚಾಲಿತ ನಾವೀನ್ಯತೆಯ ಎರಡು ದಿನಗಳ ರಾಷ್ಟ್ರೀಯ ಪ್ರದರ್ಶನದ ಮುಕ್ತಾಯವನ್ನು ಕಂಡಿತು.

ಎನ್ಎಚ್ಎ ಮತ್ತು ಐ ಐ ಎಸ್ ಸಿ ಬೆಂಗಳೂರಿನ ಸಹಯೋಗದೊಂದಿಗೆ ಆಯೋಜಿಸಲಾದ ಈ ಹ್ಯಾಕಥಾನ್, ವಿಮೆ ಹಕ್ಕುಗಳ ತೀರ್ಪು ನೀಡುವಲ್ಲಿ ವೇಗ, ಪಾರದರ್ಶಕತೆ ಮತ್ತು ನಿಖರತೆಯನ್ನು ಸುಧಾರಿಸುವ ಜೊತೆಗೆ ವಂಚನೆ ಪತ್ತೆ ಹಚ್ಚುವಿಕೆಯನ್ನು ಬಲಪಡಿಸುವ ಪರಿಹಾರಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಶ್ರೀ ಸುನಿಲ್ ಕುಮಾರ್ ಬರ್ನ್ವಾಲ್; ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮಹಾನಿರ್ದೇಶಕ ಶ್ರೀ ಅಭಿಷೇಕ್ ಸಿಂಗ್, ಎನ್ಎಚ್ಎ ಜಂಟಿ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಯಾದವ್ ಮತ್ತು ಸಚಿವಾಲಯದ ಜಂಟಿ ನಿರ್ದೇಶಕರಾದ ಶ್ರೀಮತಿ ಶಿಖಾ ದಹಿಯಾ ಅವರು ಎಐ ಚಾಲಿತ ಹಕ್ಕುಗಳ ತೀರ್ಪನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಪರಿಹಾರಗಳ   ನಾವೀನ್ಯಕಾರರನ್ನು ಸನ್ಮಾನಿಸಿದರು.

ವಿಶ್ವದ ಅತಿದೊಡ್ಡ ಸಾರ್ವಜನಿಕ ಅನುದಾನಿತ ಆರೋಗ್ಯ ಭರವಸೆ ಯೋಜನೆಗಳಲ್ಲಿ ಒಂದಾದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ, ವಿಮೆ ಹಕ್ಕುಗಳ ತೀರ್ಪು ನೀಡುವಲ್ಲಿ ನಿರ್ಣಾಯಕವಾದ ಮೂರು ಪ್ರಭಾವಶಾಲಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಈ ಹ್ಯಾಕಥಾನ್ ಆಹ್ವಾನಿಸಿತ್ತು. ಎಬಿ ಪಿಎಂ-ಜೆಎವೈ ಯೋಜನೆಯು 1,900ಕ್ಕೂ ಹೆಚ್ಚು ಚಿಕಿತ್ಸಾ ಪ್ಯಾಕೇಜುಗಳ ಅಡಿಯಲ್ಲಿ ಪ್ರತಿದಿನ ಅಪಾರ ಸಂಖ್ಯೆಯ ವಿಮೆ ಹಕ್ಕುಗಳನ್ನು   ಪ್ರಕ್ರಿಯೆಗೊಳಿಸುತ್ತದೆ.

ಹ್ಯಾಕಥಾನ್ ವಿಜೇತರು

ಸಮಸ್ಯೆ 1: ವೈದ್ಯಕೀಯ ದಾಖಲೆಗಳ ವರ್ಗೀಕರಣ ಮತ್ತು ಎಸ್‌ಟಿಜಿ ಅನುಸರಣೆ

ಮಿಶ್ರ ಗುಣಮಟ್ಟದ ಆರೋಗ್ಯ ದಾಖಲೆಗಳನ್ನು ಸ್ವಯಂಚಾಲಿತವಾಗಿ ಓದುವುದು, ಪ್ರಮುಖ ದತ್ತಾಂಶವನ್ನು ಹೊರತೆಗೆಯುವುದು, ಕಡ್ಡಾಯವಾಗಿ ಇರಬೇಕಾದ ದೃಶ್ಯ ಅಂಶಗಳನ್ನು ಪತ್ತೆಹಚ್ಚುವುದು ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ ಎಚ್‌ ಎ) ಒದಗಿಸಿರುವ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿಗಳ (ಎಸ್‌ ಟಿ ಜಿ) ಅನುಸರಣೆಯನ್ನು ಪರಿಶೀಲಿಸುವುದು  .

  • ವಿಜೇತರು: ವಿನಯ್ ಬಾಬು ಉಲ್ಲಿ
  • ರನ್ನರ್ ಅಪ್:   ಖುಷಿ ಸಿಂಗ್
  • ಎರಡನೇ ರನ್ನರ್ ಅಪ್:  ವಿಜಯ್ ಬಾಲಾಜಿ

ಸಮಸ್ಯೆ 2: ರೇಡಿಯಾಲಾಜಿಕಲ್ ಇಮೇಜ್-ಆಧಾರಿತ ಸ್ಥಿತಿ ಪತ್ತೆ ಮತ್ತು ವರದಿಗಳ ಹೊಂದಾಣಿಕೆ.

ಎಸ್ ಟಿ ಜಿ ಅಡಿಯಲ್ಲಿ ಸಾಕ್ಷ್ಯವಾಗಿ ಸಲ್ಲಿಸಲಾದ ಎಕ್ಸ್-ರೇ , ಸಿಟಿ ಸ್ಕ್ಯಾನ್  ಮತ್ತು ಎಂಆರ್ಐ ಅಂತಹ ಚಿತ್ರ ಆಧಾರಿತ ತನಿಖೆಗಳನ್ನು ಪ್ರಮಾಣೀಕರಿಸುವುದು ಹಾಗೂ ವಿಮೆ ಹಕ್ಕುಗಳನ್ನು ನಿಖರವಾಗಿ ಮತ್ತು ಸಮರ್ಥವಾಗಿ ನಿರ್ಣಯಿಸಲು ಅವುಗಳನ್ನು ವರದಿಗಳೊಂದಿಗೆ ಹೋಲಿಕೆ ಮಾಡುವುದು..

  • ವಿಜೇತರು: ಹರೀಶ್ ಕುಮಾರ್
  • ರನ್ನರ್ ಅಪ್: ಭರತ್ ವರ್ಮ ಸಂಗರಾಜು
  • ಎರಡನೇ ರನ್ನರ್ ಅಪ್: ಆರ್ನಾಲ್ಡ್ ಸಚಿತ್

ಸಮಸ್ಯೆ 3: ದಾಖಲೆಗಳ ನಕಲಿ ಮತ್ತು ಡೀಪ್ ಫೇಕ್ ಪತ್ತೆಹಚ್ಚುವಿಕೆ

ವಿಮೆ ಹಕ್ಕುಗಳನ್ನು ಸಲ್ಲಿಸುವ ಹಂತದಲ್ಲಿಯೇ ತಿದ್ದಲಾದ ಡಿಸ್ಚಾರ್ಜ್ ಸಮ್ಮರಿಗಳು, ಕುಶಲತೆಯಿಂದ ಮಾರ್ಪಡಿಸಿದ ಬಿಲ್ಲುಗಳು, ನಕಲಿ ಗುರುತುಗಳು ಮತ್ತು ಎಐನಿಂದ ಮಾಡಿದ ಕಲಾಕೃತಿಗಳು ಸೇರಿದಂತೆ ನಕಲಿ ಅಥವಾ ಕೃತಕವಾಗಿ ಸೃಷ್ಟಿಸಿದ ದಾಖಲೆಗಳನ್ನು ಪತ್ತೆಹಚ್ಚುವುದು.

  • ವಿಜೇತರು:  ಪ್ರವೀಣ್ ಶ್ರೀಧರ್
  • ರನ್ನರ್ ಅಪ್: ನಿಖಿಲೇಶ್ವರ ರಾವ್ ಸುಲಕೆ
  • ಎರಡನೇ ರನ್ನರ್ ಅಪ್:   ಸುಮಂತ್ ನಾಯ್ಡು ಮತ್ತಿರೆಡ್ಡಿ

ವಿಜೇತ ತಂಡಗಳು ಕ್ರಮವಾಗಿ ₹5 ಲಕ್ಷ, ₹3 ಲಕ್ಷ ಮತ್ತು ₹2 ಲಕ್ಷ ನಗದು ಬಹುಮಾನಗಳನ್ನು ಪಡೆದವು.  ಆಯ್ಕೆಯಾದ ಪರಿಹಾರಗಳನ್ನು ಭವಿಷ್ಯದಲ್ಲಿ ಎಬಿ ಪಿಎಂ-ಜೆಎವೈ ಯೋಜನೆಯ ವ್ಯವಸ್ಥೆಯೊಳಗೆ ಅಳವಡಿಸಿಕೊಳ್ಳುವ ಬಗ್ಗೆ ಪರಿಗಣಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2260714) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , English , Urdu , हिन्दी , Marathi