ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ವಾಹನದಿಂದ ಎಲ್ಲದಕ್ಕೂ (V2X) ಸಂವಹನದ ನಿಯಂತ್ರಣ ಚೌಕಟ್ಟಿನ ಕುರಿತು ಸಮಾಲೋಚನಾ ದಾಖಲೆಯನ್ನು ಬಿಡುಗಡೆ ಮಾಡಿದ ಟ್ರಾಯ್

ಪ್ರಕಟಣಾ ದಿನಾಂಕ: 30 APR 2026 2:35PM by PIB Bengaluru

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್ ) ಇಂದು ವಾಹನದಿಂದ ಎಲ್ಲವೂ (V2X) ಸಂವಹನಕ್ಕಾಗಿ ನಿಯಂತ್ರಣ ಚೌಕಟ್ಟಿನ ಕುರಿತ ಸಮಾಲೋಚನಾ ದಾಖಲೆಯನ್ನು ಬಿಡುಗಡೆ ಮಾಡಿದೆ.

ಭಾರತ ಸರ್ಕಾರದ ಸಂಪರ್ಕ ಸಚಿವಾಲಯದ ದೂರಸಂಪರ್ಕ ಇಲಾಖೆ (ಡಿಒಟಿ) 2025ರ ಡಿ.1ರಂದು ತನ್ನ ಪತ್ರದ ಮೂಲಕ ವಾಹನದಿಂದ ಎಲ್ಲವೂ (V2X) ಗಾಗಿ ನಿಯಂತ್ರಣ ಕಾರ್ಯವಿಧಾನದ ಕುರಿತು ಟ್ರಾಯ್ ಕಾಯ್ದೆ I997ರ ಷರತ್ತು 11(1)(ಎ) ನಿಯಮಗಳ ಅಡಿಯಲ್ಲಿ (ತಿದ್ದುಪಡಿ ಮಾಡಿದಂತೆ) ಶಿಫಾರಸುಗಳನ್ನು ಒದಗಿಸುವಂತೆ ಟ್ರಾಯ್  ಅನ್ನು ವಿನಂತಿಸಿದೆ.

ಈ ನಿಟ್ಟಿನಲ್ಲಿ ವಾಹನದಿಂದ ಎಲ್ಲವೂ (V2X) ಸಂವಹನಕ್ಕಾಗಿ ನಿಯಂತ್ರಣ ಚೌಕಟ್ಟಿನ ಕುರಿತು ಸಮಾಲೋಚನಾ ದಾಖಲೆಯನ್ನು ಟ್ರಾಯ್ ವೆಬ್‌ಸೈಟ್‌ನಲ್ಲಿ (www.trai.gov.in) ಬಿಡುಗಡೆ ಮಾಡಲಾಗಿದೆ. ಸಮಾಲೋಚನಾ ದಾಖಲೆಯಲ್ಲಿ ಎತ್ತಲಾದ ಸಮಸ್ಯೆಗಳ ಕುರಿತು ಲಿಖಿತ ಅಭಿಪ್ರಾಯಗಳನ್ನು 2026ರ ಮೇ 28 ರೊಳಗೆ ಪಾಲುದಾರರಿಂದ ಮತ್ತು 2026ರ ಜೂನ್ 11 ರೊಳಗೆ ಪ್ರತಿ-ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.

ಅಭಿಪ್ರಾಯಗಳು/ಪ್ರತಿ-ಟಿಪ್ಪಣಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಕಳುಹಿಸಬಹುದು, ಅಲ್ಲದೆ, advmn@trai.gov.in ನಲ್ಲಿ ಟ್ರಾಯ್ ನ ಸಲಹೆಗಾರರಾದ ಶ್ರೀ ಅಖಿಲೇಶ್ ಕುಮಾರ್ (ಜಾಲ, ತರಂಗಾಂತರ ಮತ್ತು ಪರವಾನಗಿ) ತ್ರಿವೇದಿ ಅವರಿಗೆ ಕಳುಹಿಸಬಹುದು. ಯಾವುದೇ ಸ್ಪಷ್ಟೀಕರಣ/ಮಾಹಿತಿಗಾಗಿ ಟ್ರಾಯ್ ನ ಸಲಹೆಗಾರರಾದ ಶ್ರೀ ಅಖಿಲೇಶ್ ಕುಮಾರ್ ತ್ರಿವೇದಿ (ಜಾಲ, ತರಂಗಾಂತರ ಮತ್ತು ಪರವಾನಗಿ) ಅವರನ್ನು ದೂರವಾಣಿ ಸಂಖ್ಯೆ +91-11-20907758 ಮೂಲಕ ಸಂಪರ್ಕಿಸಬಹುದು.

 

*****


(ಪ್ರಕಟಣೆ ಐ.ಡಿ.: 2256936) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी