ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

2026ರ ಏಪ್ರಿಲ್ 21 ರಂದು 18ನೇ ನಾಗರಿಕ ಸೇವಾ ದಿನದ ಅಂಗವಾಗಿ ರಾಷ್ಟ್ರದ ನಾಗರಿಕ ಸೇವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್

ಪ್ರಕಟಣಾ ದಿನಾಂಕ: 20 APR 2026 12:47PM by PIB Bengaluru

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (ಡಿ.ಎ..ಆರ್.ಪಿ.ಜಿ.-DARPG), ಏಪ್ರಿಲ್ 21, 2026 ರ ಮಂಗಳವಾರದಂದು 18ನೇ ನಾಗರಿಕ ಸೇವಾ ದಿನವನ್ನು ಆಚರಿಸಲಿದೆ. ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ನಾಗರಿಕ ಸೇವಾ ದಿನವನ್ನು ಭಾರತದಾದ್ಯಂತ ನಾಗರಿಕ ಸೇವಕರು/ಅಧಿಕಾರಿಗಳು ನಾಗರಿಕರ ಹಿತದೃಷ್ಟಿಯಿಂದ ತಮ್ಮನ್ನು ತಾವು ಪುನರ್ಸಮರ್ಪಿಸಿಕೊಳ್ಳಲು ಮತ್ತು ಸಾರ್ವಜನಿಕ ಸೇವೆಗೆ ತಮ್ಮ ಬದ್ಧತೆ ಮತ್ತು ತಮ್ಮ ಕೆಲಸದಲ್ಲಿನ ಶ್ರೇಷ್ಠತೆಯನ್ನು ನವೀಕರಿಸಲು ಒಂದು ಸಂದರ್ಭವಾಗಿ ವಾರ್ಷಿಕವಾಗಿ ಆಚರಿಸಲಾಗುತ್ತದೆ. 1947ರಲ್ಲಿ ದಿನದಂದು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಖಿಲ ಭಾರತ ಆಡಳಿತ ಸೇವೆಯ ಪ್ರೊಬೇಷನರ್‌ಗಳನ್ನು ಉದ್ದೇಶಿಸಿ ಮಾತನಾಡುತ್ತಾ, ನಾಗರಿಕ ಸೇವಕರನ್ನು ಭಾರತದ ಉಕ್ಕಿನ ಚೌಕಟ್ಟು ಎಂದು ಬಣ್ಣಿಸಿದರು. ಈ ಸಂದರ್ಭವು ನಾಗರಿಕ ಸೇವಕರು ನಾಗರಿಕ ಕೇಂದ್ರಿತ ಆಡಳಿತಕ್ಕೆ ತಮ್ಮ ಬದ್ಧತೆಯನ್ನು ನವೀಕರಿಸಲು ಅವಕಾಶವನ್ನು ಒದಗಿಸುತ್ತದೆ. 2026ರ ನಾಗರಿಕ ಸೇವಾ ದಿನದ ವಿಷಯವು "ವಿಕ್ಷಿತ್ ಭಾರತ: ನಾಗರಿಕ-ಕೇಂದ್ರಿತ ಆಡಳಿತ ಮತ್ತು ಅಭಿವೃದ್ಧಿ ಕೊನೆಯ ಮೈಲಿಯವರೆಗೂ". ಇದು ವಿಕಸಿತ ಭಾರತ 2047ರ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ ಹಾಗು ಕೊನೆಯ ಮೈಲಿ/ಕಟ್ಟಕಡೆಯ ವ್ಯಕ್ತಿಯವರೆಗೂ ಸೌಲಭ್ಯ ವಿತರಣೆ ಮತ್ತು ಸಮಗ್ರ ಅಭಿವೃದ್ಧಿಯ ಮೇಲೆ ಬಲವಾದ ಒತ್ತು ನೀಡುವ ಮೂಲಕ ಪಾರದರ್ಶಕ, ಜವಾಬ್ದಾರಿಯುತ ಮತ್ತು ನಾಗರಿಕ-ಕೇಂದ್ರಿತ ಆಡಳಿತಕ್ಕೆ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ.

ಉದ್ಘಾಟನಾ ಅಧಿವೇಶನದಲ್ಲಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಗೌರವಾನ್ವಿತ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಭಾಷಣ ಮತ್ತು ಸಂಪುಟ ಕಾರ್ಯದರ್ಶಿ ಡಾ. ಟಿ.ವಿ. ಸೋಮನಾಥನ್ ಅವರ ಸ್ವಾಗತ ಭಾಷಣ ಇರುತ್ತದೆ. ಉದ್ಘಾಟನಾ ಅಧಿವೇಶನದ ನಂತರ 'ನಾಗರಿಕ ಸೇವೆಗಳ ಪಾತ್ರ ಮತ್ತು ಪರಿಣಾಮಕಾರಿತ್ವ - ಬಾಹ್ಯ ದೃಷ್ಟಿಕೋನ' ಕುರಿತು ಪ್ಯಾನೆಲ್ ಚರ್ಚೆ ನಡೆಯಲಿದ್ದು, ಇದು ಸರ್ಕಾರ, ಕೈಗಾರಿಕೆ ಮತ್ತು ನೀತಿ ಸಂಸ್ಥೆಗಳ ಪ್ರಖ್ಯಾತ ವ್ಯಕ್ತಿಗಳನ್ನು ಒಟ್ಟುಗೂಡಿಸಿ ಆಡಳಿತದಲ್ಲಿ ಹೊಣೆಗಾರಿಕೆ, ನಾವೀನ್ಯತೆ ಮತ್ತು ಸೇವಾ ವಿತರಣೆಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸುತ್ತದೆ.

ಕಾರ್ಯಕ್ರಮದ ಸಮಯದಲ್ಲಿ ನಿಗದಿಪಡಿಸಲಾದ ನಾಲ್ಕು ಉಪಗುಂಪು ಅಧಿವೇಶನಗಳು ಪ್ರಮುಖ ಆಡಳಿತದ ಆದ್ಯತೆಗಳ ಕುರಿತು ಗಮನ ಕೇಂದ್ರೀಕೃತ ವಿಷಯಾಧಾರಿತ ಚರ್ಚೆಗಳನ್ನು ಒಳಗೊಂಡಿರುತ್ತವೆ. 'ಪಿ.ಎಂ. ವಿಶ್ವಕರ್ಮ ಮೂಲಕ ಸುಸ್ಥಿರ ಜೀವನೋಪಾಯ' ಎಂಬ ವಿಷಯದ ಕುರಿತಾದ ಅಧಿವೇಶನದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಅಧ್ಯಕ್ಷತೆ ವಹಿಸಲಿದ್ದಾರೆ. 'ಭಾರತದಲ್ಲಿ ಸಾಂಕ್ರಾಮಿಕವಲ್ಲದ: ರೋಗಗಳ ನಿಭಾಯಿಸುವಿಕೆ: ತಡೆಗಟ್ಟುವಿಕೆಯಿಂದ ಆರೈಕೆಯವರೆಗೆ' ಎಂಬ ವಿಷಯದ ಕುರಿತಾದ ಅಧಿವೇಶನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅಧ್ಯಕ್ಷತೆ ವಹಿಸಲಿದ್ದಾರೆ. 'ಕೆಸಿಸಿ ಮತ್ತು ಇತರ ಉಪಕ್ರಮಗಳ ಮೂಲಕ ರೈತರ ಆರ್ಥಿಕ ಅಪಾಯವನ್ನು ತಗ್ಗಿಸುವುದು' ಎಂಬ ವಿಷಯದ ಕುರಿತಾದ ಅಧಿವೇಶನದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆ ವಹಿಸಲಿದ್ದಾರೆ. 'ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಮೂಲಕ ಭಾರತದ ನಿವ್ವಳ-ಶೂನ್ಯ ಹಾದಿಯನ್ನು ವೇಗಗೊಳಿಸುವುದು' ಎಂಬ ವಿಷಯದ ಕುರಿತು ಪ್ರತ್ಯೇಕವಾದ  ಅಧಿವೇಶನ ನಡೆಯಲಿದೆ. ನಾಗರಿಕ ಕೇಂದ್ರಿತ ಆಡಳಿತವನ್ನು ಬಲಪಡಿಸುವ ಮತ್ತು ಕೊನೆಯ ಹಂತದ ಸೇವಾ ವಿತರಣೆಯನ್ನು ಸುಧಾರಿಸುವ ಕಡೆಗೆ ಆಳವಾದ ಚರ್ಚೆಗಳು ಮತ್ತು ಉತ್ತಮ ಅಭ್ಯಾಸಗಳ ವಿನಿಮಯಕ್ಕಾಗಿ ಅಧಿವೇಶನಗಳು ಹಿರಿಯ ಅಧಿಕಾರಿಗಳು, ತಜ್ಞರು ಮತ್ತು ಪಾಲುದಾರರನ್ನು ಒಟ್ಟುಗೂಡಿಸುತ್ತವೆ. ಈ ಕಾರ್ಯಕ್ರಮವು 'ನಾಗರಿಕ ಸೇವೆಗಳಲ್ಲಿ ನೈತಿಕತೆ ಮತ್ತು ದಕ್ಷತೆ' ಕುರಿತು ಸಂಪುಟ ಕಾರ್ಯದರ್ಶಿ ಅವರ ಭಾಷಣದೊಂದಿಗೆ ಸಮಾರೋಪಗೊಳ್ಳಲಿದೆ.

ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು, ಕಾರ್ಯದರ್ಶಿಗಳು, ಹೆಚ್ಚುವರಿ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಉಪ ಕಾರ್ಯದರ್ಶಿಗಳು, ಸಹಾಯಕ ಕಾರ್ಯದರ್ಶಿಗಳು ಮತ್ತು ರಾಜ್ಯ ಸರಕಾರಗಳ ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕೇಂದ್ರ ತರಬೇತಿ ಸಂಸ್ಥೆಗಳ ಮುಖ್ಯಸ್ಥರು, ರೆಸಿಡೆಂಟ್  ಆಯುಕ್ತರು, ಕೇಂದ್ರ ಸೇವೆಗಳ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2253757) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , Bengali-TR , English , Urdu , हिन्दी , Marathi , Manipuri , Gujarati