ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
₹18.4 ಲಕ್ಷ ಕೋಟಿ ಒಟ್ಟು ಸಂಚಿತ ವ್ಯಾಪಾರ ಮೌಲ್ಯ (ಜಿಎಂವಿ) ಸಾಧಿಸಿದ ಸರ್ಕಾರಿ ಇ-ಮಾರುಕಟ್ಟೆ (ಜಿಇಎಂ), ಪ್ರಮುಖ ಡಿಜಿಟಲ್ ಸಾರ್ವಜನಿಕ ಖರೀದಿ ವೇದಿಕೆಯಾಗಿ ಹೊರಹೊಮ್ಮಿದೆ
ಎಂ.ಎಸ್.ಇ. ಗಳು, ಮಹಿಳಾ ನೇತೃತ್ವದ ಉದ್ಯಮಗಳು ಮತ್ತು ನವೋದ್ಯಮಗಳ ಹೆಚ್ಚುತ್ತಿರುವ ಭಾಗವಹಿಸುವಿಕೆಯೊಂದಿಗೆ ಸರ್ಕಾರಿ ಇ-ಮಾರುಕಟ್ಟೆ (ಜಿಇಎಂ)ಯಲ್ಲಿ ಸಾರ್ವಜನಿಕ ಖರೀದಿಯು ಗಮನಾರ್ಹ ಬೆಳವಣಿಗೆಯನ್ನು ಕಾಣುತ್ತಿದೆ
ಪ್ರಕಟಣಾ ದಿನಾಂಕ:
06 APR 2026 4:01PM by PIB Bengaluru
ಸರ್ಕಾರಿ ಇ-ಮಾರುಕಟ್ಟೆಯು (ಜಿಇಎಂ) ₹18.4 ಲಕ್ಷ ಕೋಟಿಗಳ ಸಂಚಿತ ಒಟ್ಟು ವ್ಯಾಪಾರ ಮೌಲ್ಯವನ್ನು (ಜಿಎಂವಿ) ಸಾಧಿಸಿದೆ, ಇದರಲ್ಲಿ 2025–26ರ ಹಣಕಾಸು ವರ್ಷದಲ್ಲಿ ₹5 ಲಕ್ಷ ಕೋಟಿ ಜಿಎಂವಿ ದಾಟಿದೆ. ಈ ವೇದಿಕೆಯು ಪಾರದರ್ಶಕ, ಪರಿಣಾಮಕಾರಿ ಮತ್ತು ಅಂತರ್ಗತ ಡಿಜಿಟಲ್ ಸಾರ್ವಜನಿಕ ಖರೀದಿ ವ್ಯವಸ್ಥೆಯಾಗಿ ವಿಕಸನಗೊಳ್ಳುತ್ತಲೇ ಇದೆ, ಇದು ಭಾರತದ ಸಾರ್ವಜನಿಕ ಆರ್ಥಿಕತೆಯನ್ನು ಬಲಪಡಿಸಲು ಕೊಡುಗೆ ನೀಡುತ್ತದೆ.
ಈ ಮೈಲಿಗಲ್ಲು ಸರ್ಕಾರಿ ಘಟಕಗಳಾದ್ಯಂತ ದೊಡ್ಡ ಪ್ರಮಾಣದ ಖರೀದಿಯನ್ನು ಸಕ್ರಿಯಗೊಳಿಸುವ ಸಾರ್ವಜನಿಕ ಡಿಜಿಟಲ್ ವೇದಿಕೆಯಾಗಿ ಸರ್ಕಾರಿ ಇ-ಮಾರುಕಟ್ಟೆಯ (ಜಿಇಎಂ) ಬೆಳೆಯುತ್ತಿರುವ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ವೇದಿಕೆಯು ಖರೀದಿ ನಿರ್ಧಾರಗಳನ್ನು ಸುಗಮಗೊಳಿಸುತ್ತದೆ, ಪ್ರದೇಶಗಳಾದ್ಯಂತ ಉದ್ಯಮಗಳನ್ನು ಸರ್ಕಾರದ ಬೇಡಿಕೆಗೆ ಸಂಪರ್ಕಿಸುತ್ತದೆ ಮತ್ತು ಸಾರ್ವಜನಿಕ ಖರ್ಚಿನಲ್ಲಿ ಆರ್ಥಿಕ ಸೇರ್ಪಡೆ, ಸುಸ್ಥಿರತೆ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುತ್ತದೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸರ್ಕಾರಿ ಇ-ಮಾರುಕಟ್ಟೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಿಹಿರ್ ಕುಮಾರ್ ಅವರು, ₹18.4 ಲಕ್ಷ ಕೋಟಿಗಳ ಸಂಚಿತ ಒಟ್ಟು ವ್ಯಾಪಾರ ಮೌಲ್ಯವನ್ನು (ಜಿಎಂವಿ) ದಾಟುವುದು ಪಾರದರ್ಶಕ ಮತ್ತು ತಂತ್ರಜ್ಞಾನ ಆಧಾರಿತ ಖರೀದಿ ಪರಿಸರ ವ್ಯವಸ್ಥೆಯಲ್ಲಿ ಖರೀದಿದಾರರು, ಮಾರಾಟಗಾರರು ಮತ್ತು ಸಂಸ್ಥೆಗಳ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು (ಎಂ.ಎಸ್.ಇ.ಗಳು), ಮಹಿಳಾ ಉದ್ಯಮಿಗಳು, ಎಸ್.ಸಿ./ಎಸ್.ಟಿ. ಉದ್ಯಮಗಳು ಮತ್ತು ನವೋದ್ಯಮಗಳಿಗೆ ಪ್ರವೇಶವನ್ನು ವಿಸ್ತರಿಸಲು ಸರ್ಕಾರಿ ಇ-ಮಾರುಕಟ್ಟೆಯು (ಜಿಇಎಂ) ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದೆ. 2025–26ನೇ ಹಣಕಾಸು ವರ್ಷದಲ್ಲಿ, ಒಟ್ಟು ಆರ್ಡರ್ ಗಳಲ್ಲಿ ಶೇ. 68 ರಷ್ಟು ಎಂ.ಎಸ್.ಇ.ಗಳಿಂದ ಕಾರ್ಯಗತಗೊಳಿಸಲ್ಪಟ್ಟವು, ಇದು ಒಟ್ಟು ಸಂಚಿತ ವ್ಯಾಪಾರ ಮೌಲ್ಯದ(ಜಿಎಂವಿ) ಶೇ. 47.1 ರಷ್ಟುಆಗಿತ್ತು.
11 ಲಕ್ಷಕ್ಕೂ ಹೆಚ್ಚು ಎಂ.ಎಸ್.ಇ.ಗಳು ಸರ್ಕಾರಿ ಇ-ಮಾರುಕಟ್ಟೆ(ಜಿಇಎಂ) ವೇದಿಕೆಯಲ್ಲಿ ನೋಂದಾಯಿಸಲ್ಪಟ್ಟಿವೆ ಮತ್ತು 2025–26ನೇ ಹಣಕಾಸು ವರ್ಷದಲ್ಲಿ ₹2.36 ಲಕ್ಷ ಕೋಟಿ ಮೌಲ್ಯದ 51 ಲಕ್ಷಕ್ಕೂ ಹೆಚ್ಚು ಆರ್ಡರ್ ಗಳನ್ನು ಸ್ವೀಕರಿಸಿವೆ, ಇದು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ. 20 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. 2.1 ಲಕ್ಷಕ್ಕೂ ಹೆಚ್ಚು ಮಹಿಳಾ ನೇತೃತ್ವದ ಎಂ.ಎಸ್.ಇ.ಗಳು ಪೋರ್ಟಲ್ನಲ್ಲಿ ನೋಂದಾಯಿಸಲ್ಪಟ್ಟಿವೆ ಮತ್ತು ₹28,000 ಕೋಟಿಗಿಂತ ಹೆಚ್ಚಿನ ಆರ್ಡರ್ಗಳನ್ನು ಸ್ವೀಕರಿಸಿವೆ, ಇದು ಸರಿಸುಮಾರು ಶೇ. 28 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಎಸ್.ಸಿ./ಎಸ್.ಟಿ. ಸಮುದಾಯದವರ ಎಂ.ಎಸ್.ಇ.ಗಳು ₹6,000 ಕೋಟಿಗೂ ಹೆಚ್ಚು ಮೌಲ್ಯದ ಆರ್ಡರ್ಗಳನ್ನು ಪಡೆದಿವೆ, ಇದು ಸುಮಾರು ಶೇಕಡಾ 28 ರಷ್ಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಸ್ಟಾರ್ಟ್ಅಪ್ ಗಳು ಸಹ ಗಮನಾರ್ಹವಾಗಿ ಕೊಡುಗೆ ನೀಡಿವೆ, ಅದೇ ಅವಧಿಯಲ್ಲಿ ₹19,000 ಕೋಟಿಗೂ ಹೆಚ್ಚು ಮೌಲ್ಯದ ಆರ್ಡರ್ ಗಳನ್ನು ಪಡೆದುಕೊಂಡಿವೆ, ಇದು ಶೇಕಡಾ 36 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಸೂಚಿಸುತ್ತದೆ.
ತಂತ್ರಜ್ಞಾನವು ಸರ್ಕಾರಿ ಇ-ಮಾರುಕಟ್ಟೆ(ಜಿಇಎಂ) ನ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಲೇ ಇದೆ. ಖರೀದಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಸಮಗ್ರತೆಯನ್ನು ಹೆಚ್ಚಿಸಲು ವೇದಿಕೆಯು ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ (ಎಂ.ಎಲ್.) ಮತ್ತು ಸುಧಾರಿತ ವಿಶ್ಲೇಷಣೆಗಳನ್ನು ಬಳಸಿಕೊಳ್ಳುತ್ತದೆ. ಪ್ರಮುಖ ತಂತ್ರಜ್ಞಾನ-ಚಾಲಿತ ಮಧ್ಯಸ್ಥಿಕೆಗಳು ಯಂತ್ರ ಕಲಿಕೆ (ಎಂ.ಎಲ್.) -ಆಧಾರಿತ ಕ್ಯಾಟಲಾಗ್ ಮೌಲ್ಯೀಕರಣ ಮತ್ತು ದೋಷಗಳನ್ನು ಕಡಿಮೆ ಮಾಡಲು ಪೂರ್ವ-ಸ್ಯಾನಿಟಿ ಪರಿಶೀಲನೆಗಳು ಮತ್ತು ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ವೈಪರೀತ್ಯಗಳನ್ನು ಪತ್ತೆಹಚ್ಚಲು ನೈಜ-ಸಮಯದ ವಿಶ್ಲೇಷಣೆಗಳನ್ನು ಒಳಗೊಂಡಿವೆ.
ಅನಿಂತ್ರಿತ ಅಸಹಜ ಬೆಲೆ ನಿಗದಿ, ಶಂಕಿತ ಕುಶಲ ಬಿಡ್ಡಿಂಗ್ ನಡವಳಿಕೆ, ತಾಂತ್ರಿಕ ನಿರಾಕರಣೆ ವೈಪರೀತ್ಯಗಳು ಮತ್ತು ಸಂಭಾವ್ಯ ಖರೀದಿದಾರ-ಮಾರಾಟಗಾರರ ಒಪ್ಪಂದದಂತಹ ಮಾದರಿಗಳನ್ನು ಗುರುತಿಸಲು ಸುಧಾರಿತ ವಿಶ್ಲೇಷಣಾತ್ಮಕ ಪರಿಕರಗಳನ್ನು ಬಳಸಲಾಗುತ್ತದೆ. ಬಿಡ್ ಹೆಲ್ತ್ ಸ್ಕೋರ್ ಗಳು ಸೇರಿದಂತೆ ಸಿಸ್ಟಮ್-ಚಾಲಿತ ಪರಿಕರಗಳು, ಸುಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಬೆಂಬಲಿಸುತ್ತವೆ ಮತ್ತು ಖರೀದಿ ಪರಿಸರ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಬಲಪಡಿಸುತ್ತವೆ.
ಕೇಂದ್ರ ಸಚಿವಾಲಯಗಳು, ಇಲಾಖೆಗಳು ಮತ್ತು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿ.ಪಿ.ಎಸ್.ಇ.ಗಳು) ಬಲವಾದ ಅಳವಡಿಕೆಯ ನಂತರ, ಸರ್ಕಾರಿ ಇ-ಮಾರುಕಟ್ಟೆ(ಜಿಇಎಂ) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಹೆಚ್ಚಿನ ಭಾಗವಹಿಸುವಿಕೆಗೆ ಸಾಕ್ಷಿಯಾಗುತ್ತಿದೆ. 2025–26ರ ಹಣಕಾಸು ವರ್ಷದಲ್ಲಿ ರಾಜ್ಯಗಳ ಖರೀದಿಯು ಶೇಕಡಾ 38.3 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು ವೇದಿಕೆಯ ವಿಸ್ತರಣೆಯಲ್ಲಿ ಅವುಗಳ ಹೆಚ್ಚುತ್ತಿರುವ ಪಾತ್ರವನ್ನು ಸೂಚಿಸುತ್ತದೆ.
ರಾಜ್ಯಗಳ ಹೆಚ್ಚುತ್ತಿರುವ ಅಳವಡಿಕೆಯು ಪಾರದರ್ಶಕ, ಪರಿಣಾಮಕಾರಿ ಮತ್ತು ಜವಾಬ್ದಾರಿಯುತ ಖರೀದಿ ವ್ಯವಸ್ಥೆಯಾಗಿ ಸರ್ಕಾರಿ ಇ-ಮಾರುಕಟ್ಟೆ(ಜಿಇಎಂ)ಯಲ್ಲಿ ಹೆಚ್ಚಿದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ, ಇದು ಪ್ರದೇಶಗಳಲ್ಲಿ ವ್ಯಾಪಕ ಪ್ರವೇಶ ಮತ್ತು ಸಾರ್ವಜನಿಕ ಸಂಗ್ರಹಣೆಯ ಆಳವಾದ ನುಗ್ಗುವಿಕೆಯನ್ನು ಸುಗಮಗೊಳಿಸುತ್ತದೆ.
*****
(ಪ್ರಕಟಣೆ ಐ.ಡಿ.: 2249423)
ವಿಸಿಟರ್ ಕೌಂಟರ್ : 9