ರಕ್ಷಣಾ ಸಚಿವಾಲಯ
azadi ka amrit mahotsav

ಆತ್ಮನಿರ್ಭರ ಭಾರತ: ರಕ್ಷಣಾ ಸಚಿವಾಲಯ ಮತ್ತು ಬಿಇಎಲ್‌ ಐಎಎಫ್‌ಗೆ ಮೌಂಟೇನ್‌ ರಾಡಾರ್‌ಗಳಿಗಾಗಿ 1,950 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದವು

प्रविष्टि तिथि: 31 MAR 2026 2:42PM by PIB Bengaluru

ಆತ್ಮನಿರ್ಭರ ಭಾರತ್‌ ಮತ್ತು ಮೇಕ್‌-ಇನ್‌-ಇಂಡಿಯಾ ಅಡಿಯಲ್ಲಿಭಾರತದ ಸ್ಥಳೀಯ ರಕ್ಷ ಣಾ ಸಾಮರ್ಥ್ಯ‌ಗಳನ್ನು ಬಲಪಡಿಸಲು, ರಕ್ಷಣಾ ಸಚಿವಾಲಯವು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ನೊಂದಿಗೆ ಭಾರತೀಯ ವಾಯುಪಡೆಗೆ ಸಂಬಂಧಿಸಿದ ಉಪಕರಣಗಳು ಮತ್ತು ಅಗತ್ಯ ಮೂಲಸೌಕರ್ಯಗಳು ಸೇರಿದಂತೆ ಎರಡು ಮೌಂಟೇನ್‌ ರಾಡಾರ್‌ಗಳನ್ನು ಖರೀದಿಸಲು ಸುಮಾರು 1,950 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಮುಖ ಬಂಡವಾಳ ಸ್ವಾಧೀನ ಒಪ್ಪಂದಕ್ಕೆ ಸಹಿ ಹಾಕಿದೆ. ಖರೀದಿ (ಭಾರತೀಯ-ದೇಶೀಯವಾಗಿ ವಿನ್ಯಾಸಗೊಳಿಸಿದ, ಅಭಿವೃದ್ಧಿಪಡಿಸಿದ ಮತ್ತು ತಯಾರಿಸಿದ) ವಿಭಾಗದ ಒಪ್ಪಂದಕ್ಕೆ 2026ರ ಮಾರ್ಚ್‌ 31ರಂದು ನವದೆಹಲಿಯಲ್ಲಿ ರಕ್ಷಣಾ ಸಚಿವಾಲಯ ಮತ್ತು ಬಿಇಎಲ್‌ ನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿಸಹಿ ಹಾಕಲಾಯಿತು.

ಈ ಮೌಂಟೇನ್‌ ರಾಡಾರ್‌ಅನ್ನು ಡಿಆರ್‌ಡಿಒದ ಎಲೆಕ್ಟ್ರಾನಿಕ್ಸ್‌ ಮತ್ತು ರಾಡಾರ್‌ ಅಭಿವೃದ್ಧಿ ಸಂಸ್ಥೆ ಸ್ಥಳೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ ಮತ್ತು ಇದನ್ನು ಬಿಇಎಲ್‌ ತಯಾರಿಸಲಿದೆ. ಈ ರಾಡಾರ್‌ಗಳ ಸ್ಥಾಪನೆ ಮತ್ತು ಕಾರ್ಯಾರಂಭವು ದೇಶದ ವಾಯು ರಕ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತದೆ. ಈ ಖರೀದಿಯು ವಿದೇಶಿ ಉಪಕರಣಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

 

*****


(रिलीज़ आईडी: 2247436) आगंतुक पटल : 64
इस विज्ञप्ति को इन भाषाओं में पढ़ें: English , Urdu , Marathi , हिन्दी , Punjabi , Gujarati , Telugu