ಇಂಧನ ಸಚಿವಾಲಯ
azadi ka amrit mahotsav

ಭಾರತ್ ವಿದ್ಯುತ್ ಶೃಂಗಸಭೆ 2026ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿದ್ಯುತ್ ಸಚಿವರ ಸಭೆಯ ಅಧ್ಯಕ್ಷತೆ ವಹಿಸಿದ ಇಂಧನ ಸಚಿವರು


ಸಭೆಯು ಇಂಧನ ಸುರಕ್ಷತೆ ಖಾತ್ರಿಪಡಿಸಿಕೊಳ್ಳುವತ್ತ ಗಮನಹರಿಸುತ್ತದೆ; ಅಗತ್ಯ ಸುಧಾರಣೆ ಜಾರಿಗೆ ತರಲು ಕೇಂದ್ರವು ರಾಜ್ಯಗಳಿಗೆ ಸಂಪೂರ್ಣ ಬೆಂಬಲ ನೀಡುತ್ತದೆ -ಶ್ರೀ ಮನೋಹರ್ ಲಾಲ್ ಹೇಳಿಕೆ

ಡಿಸ್ಕಾಮ್‌ಗಳ ಗ್ರಾಹಕ ಸೇವಾ ರೇಟಿಂಗ್‌ಗಳು ಮತ್ತು 2024-25ರ ಹಣಕಾಸು ವರ್ಷದ ವಿತರಣಾ ಸೌಕರ್ಯಗಳ ಶ್ರೇಯಾಂಕ ವರದಿಗಳ ಬಿಡುಗಡೆ

ಪ್ರಕಟಣಾ ದಿನಾಂಕ: 20 MAR 2026 1:32PM by PIB Bengaluru

ಭಾರತ್ ವಿದ್ಯುತ್ ಶೃಂಗಸಭೆ 2026ರ ಎರಡನೇ ದಿನವಾದ ಇಂದು (20.3.2026) ಕೇಂದ್ರ ಇಂಧನ ಸಚಿವರಾದ ಶ್ರೀ ಮನೋಹರ್ ಲಾಲ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ವಿದ್ಯುತ್ ಸಚಿವರ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯ ಸಹ-ಅಧ್ಯಕ್ಷತೆಯನ್ನು ಕೇಂದ್ರ ಇಂಧನ ಸಚಿವರಾದ ಶ್ರೀ ಮನೋಹರ್ ಲಾಲ್ ವಹಿಸಿದ್ದರು, ಅದರಲ್ಲಿ ಇಂಧನ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ನಾಯಕ್ ವಹಿಸಿದ್ದರು ಮತ್ತು ಚಂಡೀಗಢ ಮತ್ತು ಪಂಜಾಬ್‌ನ ಆಡಳಿತಾಧಿಕಾರಿ ಶ್ರೀ ಗುಲಾಬ್ ಚಂದ್ ಕಟಾರಿಯಾ, ಇಂಧನ ಕಾರ್ಯದರ್ಶಿ ಶ್ರೀ ಪಂಕಜ್ ಅಗರ್ವಾಲ್, ಎಂಎನ್ ಆರ್ ಇ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಮತ್ತು ಇಂಧನ ಸಚಿವರು ಮತ್ತು ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಮನೋಹರ್ ಲಾಲ್ , ಬಿಇಎಸ್ 2026 ವಿಕಸಿತ ಭಾರತ 2047ರ ದೂರದೃಷ್ಟಿಯನ್ನು ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಆರ್ಥಿಕ ಬೆಳವಣಿಗೆ ಮತ್ತು ಮೂಲಸೌಕರ್ಯಕ್ಕೆ ವಿದ್ಯುತ್ ಮೂಲಭೂತವಾಗಿದೆ ಎಂದು ಒತ್ತಿ ಹೇಳಿದ ಅವರು 520 ಗಿಗಾವ್ಯಾಟ್ ಗಿಂತ ಹೆಚ್ಚಿನ ಸ್ಥಾಪಿತ ಸಾಮರ್ಥ್ಯ, ಡಿಸ್ಕಾಂ ಗಳ ಕಾರ್ಯಕ್ಷಮತೆ ಸುಧಾರಣೆ, ದೊಡ್ಡ ಪ್ರಮಾಣದ ಸ್ಮಾರ್ಟ್ ಮೀಟರ್ ನಿಯೋಜನೆ ಮತ್ತು ಕಡಿಮೆಯಾದ ವಿದ್ಯುತ್ ಕೊರತೆ ಸೇರಿದಂತೆ ಭಾರತದ ಸಾಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

ಕೈಗೆಟುಕುವ ದರದಲ್ಲಿ ಮತ್ತು ಪರಿಣಾಮಕಾರಿ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆಯನ್ನು ಖಾತ್ರಿಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಘಟಿತ ಪ್ರಯತ್ನಗಳಿಗೆ ಅವರು ಕರೆ ನೀಡಿದರು. ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಇಂಧನ ಭದ್ರತೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ತಲಾ ಇಂಧನ ಬಳಕೆಯನ್ನು ಹೆಚ್ಚಿಸುವ ಮತ್ತು ನವೀಕರಿಸಬಹುದಾದ ಇಂಧನದತ್ತ ಪರಿವರ್ತನೆಯನ್ನು ವೇಗಗೊಳಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು. ಶುದ್ಧ ಇಂಧನ ಮೂಲವಾಗಿ ಪರಮಾಣು ಶಕ್ತಿಯ ಸಾಮರ್ಥ್ಯವನ್ನು ಅವರು ಉಲ್ಲೇಖಿಸಿದರು ಮತ್ತು ಶಾಂತಿ ಕಾಯ್ದೆಯನ್ನು ಒಂದು ಮಹತ್ವದ ಹೆಜ್ಜೆ ಎಂದು ಕರೆದರು.

ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಒಳಗೊಂಡಂತೆ ಅಗತ್ಯ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಶ್ರೀ ಮನೋಹರ್ ಲಾಲ್ ಭರವಸೆ ನೀಡಿದರು.

ವಿದ್ಯುತ್ ವಲಯವನ್ನು ಪರಿವರ್ತಿಸುವಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಶ್ರೀಪಾದ ನಾಯಕ್ ಅವರು ಪ್ರಮುಖ ಉದಾಹರಣೆಯಾಗಿ ಸ್ಮಾರ್ಟ್ ಮೀಟರಿಂಗ್ ಅನ್ನು ಉಲ್ಲೇಖಿಸಿದರು. ಭಾರತದ ಸ್ಥಾಪಿತ ಸಾಮರ್ಥ್ಯದ ಅರ್ಧದಷ್ಟು ಬಳಿಸಿದರೆ ಬರಿದಾಗದೇ ಇರುವಂತಹ ಇಂಧನ ಮೂಲಗಳಾಗಿವೆ ಎಂದು ಅವರು ಹೇಳಿದರು ಮತ್ತು 2047ರ ವೇಳೆಗೆ ವಿಕಸಿತ ಭಾರತ ದೂರದೃಷ್ಟಿಯನ್ನು ಸಾಧಿಸಲು ತಂತ್ರಗಳನ್ನು ರೂಪಿಸುವ ಹೊಸ ಕರಡು ರಾಷ್ಟ್ರೀಯ ವಿದ್ಯುತ್ ನೀತಿಯ ಮಹತ್ವವನ್ನು ಒತ್ತಿ ಹೇಳಿದರು.

ಸಭೆಯಲ್ಲಿ ಇಂಧನ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವುದು ಮತ್ತು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವುದು, ವಿಶೇಷವಾಗಿ ಪಳೆಯುಳಿಕೆ ಇಂಧನ ಮೂಲಗಳ ಮೂಲಕ ಗಮನಹರಿಸಲಾಯಿತು. ದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ಸಾಮೂಹಿಕ ಮತ್ತು ಸಂಘಟಿತ ಕ್ರಮದ ಅಗತ್ಯವನ್ನು ವಿದ್ಯುತ್ ಮತ್ತು ಎಂಎನ್ ಆರ್ ಇ  ಕಾರ್ಯದರ್ಶಿಗಳು ಒತ್ತಿ ಹೇಳಿದರು.

ಪ್ರಮುಖ ವರದಿಗಳ ಬಿಡುಗಡೆ

ಈ ಸಭೆಯಲ್ಲಿ ವಿದ್ಯುತ್ ಸಚಿವಾಲಯವು 2024-25ನೇ ಹಣಕಾಸು ವರ್ಷದ ಎರಡು ವರದಿಗಳನ್ನು ಡಿಸ್ಕಾಮ್ಸ್‌ನ ಗ್ರಾಹಕ ಸೇವಾ ರೇಟಿಂಗ್‌ಗಳು (ಸಿ ಎಸ್‌ ಆರ್ ಡಿ) ಮತ್ತು 2024-25ನೇ ಹಣಕಾಸು ವರ್ಷದ ವಿತರಣಾ ಸೌಕರ್ಯಗಳ ಶ್ರೇಯಾಂಕ (ಡಿಯುಆರ್) ವರದಿಗಳನ್ನು ಬಿಡುಗಡೆ ಮಾಡಿತು.

ಡಿಸ್ಕಾಂಗಳ (ಸಿಎಸ್ ಆರ್ ಡಿ) ವರದಿಯ ಗ್ರಾಹಕ ಸೇವಾ ರೇಟಿಂಗ್ಗಳು

ತ್ವರಿತ ಮತ್ತು ನಿಖರವಾದ ಮೀಟರಿಂಗ್ ಮತ್ತು ಬಿಲ್ಲಿಂಗ್, ಸಕಾಲಿಕ ಮತ್ತು ಪರಿಣಾಮಕಾರಿ ಕುಂದುಕೊರತೆ ಪರಿಹಾರ ಮತ್ತು ನ್ಯಾಯಯುತ, ಪಾರದರ್ಶಕ ಸುಂಕ-ನಿಗದಿ ಸೇರಿದಂತೆ ಮೂಲ ಮಾನದಂಡಗಳು ಮತ್ತು ನಿರೀಕ್ಷೆಗಳನ್ನು ನಿಗದಿಪಡಿಸುವ ಮೂಲಕ ಸಿಎಸ್‌ ಆರ್ ಡಿ ಗ್ರಾಹಕ ಸೇವೆಯಲ್ಲಿ ಡಿಸ್ಕಾಂಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ. ಸಿಎಸ್ ಆರ್ ಡಿ ವರದಿಯು ಗ್ರಾಹಕ ತೃಪ್ತಿಯನ್ನು ಹೆಚ್ಚಿಸಲು ಮತ್ತು ಅಂತರ-ಶಿಸ್ತಿನ ಕಲಿಕೆಯನ್ನು ಬೆಳೆಸಲು ಸಮಗ್ರ ಕಾರ್ಯತಂತ್ರವನ್ನು ರೂಪಿಸುವ ಗುರಿ ಹೊಂದಿದೆ. ಪ್ರಮುಖ ಕ್ಷೇತ್ರಗಳಲ್ಲಿ ಡಿಸ್ಕಾಂಗಳನ್ನು ನಿರ್ಣಯಿಸಲು ವಿದ್ಯುತ್ ನಿಯಮಗಳ ಸೇವಾ ಮಾನದಂಡಗಳನ್ನು ಬಳಸಿಕೊಂಡು ಇದು ಗ್ರಾಹಕ ಕೇಂದ್ರಿತ ಸೇವೆಗಳ ಶ್ರೇಣಿಯನ್ನು ಪರಿಶೀಲಿಸುತ್ತದೆ ಮತ್ತು ಈ ನಿಯಮಗಳ ಅನುಸರಣೆ ಮತ್ತು ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಮೌಲ್ಯಮಾಪನ ಮಾಡುತ್ತದೆ.

ಸಲ್ಲಿಸಿರುವ ದತ್ತಾಂಶ ಮತ್ತು ಫಲಿತಾಂಶದ ಅಂಕಗಳ ಆಧಾರದ ಮೇಲೆ, ಡಿಸ್ಕಾಂಗಳು ಏಳು ಶ್ರೇಣಿಗಳಲ್ಲಿ ಒಂದನ್ನು ಪಡೆಯುತ್ತವೆ: A+, A,B+, B, C+, C, ಅಥವಾ D. ಈ ಶ್ರೇಣೀಕೃತ ಶ್ರೇಣೀಕರಣವು ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಲು ಮತ್ತು ಸೇವಾ ಗುಣಮಟ್ಟದಲ್ಲಿ ನಿರಂತರ ಸುಧಾರಣೆಗಳನ್ನು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಮೌಲ್ಯಮಾಪನ ಮಾಡಲಾದ 66 ಡಿಸ್ಕಾಂಗಳಲ್ಲಿ - 6 ಡಿಸ್ಕಾಂಗಳಿಗೆ A+ ಎಂದು ಶ್ರೇಯಾಂಕ ನೀಡಲಾಗಿದ್ದು, 21ಕ್ಕೆ  A ಮತ್ತು 27 ಕ್ಕೆ B+ ಎಂದು ಶ್ರೇಯಾಂಕ ನೀಡಲಾಗಿದೆ.

ಡಿಸ್ಕಾಂಗಳ ಕಾರ್ಯಕ್ಷಮತೆ ಬಲಗೊಂಡಿದೆ, ಇದು ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಶ್ರೇಣಿಗಳನ್ನು ಪಡೆಯುತ್ತಿರುವುದು ಮತ್ತು ಹೆಚ್ಚಿನ ಗ್ರಾಹಕರು ಸುಧಾರಿತ ಸೇವೆಗಳಿಂದ ಪ್ರಯೋಜನ ಪಡೆಯುತ್ತಿರುವುದು ಸಕಾರಾತ್ಮಕ ರಾಷ್ಟ್ರೀಯ ಹಾದಿಯನ್ನು ಸೂಚಿಸುತ್ತದೆ. ಇದೇ ವೇಳೆ ಕಡಿಮೆ ಡಿಸ್ಕಾಂಗಳು ಮತ್ತು ಗ್ರಾಹಕರು ಕೆಳ ಬ್ಯಾಂಡ್‌ಗಳಿಗೆ (ಸಿ ಮತ್ತು ಡಿ) ವರ್ಗಕ್ಕೆ ಸೇರುತ್ತಾರೆ, ಇದು ಮಾಪಕದ ಕೆಳಗಿನ ತುದಿಯಲ್ಲಿ ಪ್ರಗತಿಯನ್ನು ಸೂಚಿಸುತ್ತದೆ.

ವಿತರಣಾ ಉಪಯುಕ್ತತೆಗಳ ಶ್ರೇಯಾಂಕ (ಡಿಯುಆರ್) ವರದಿ

ದೇಶಾದ್ಯಂತ ವಿದ್ಯುತ್ ವಿತರಣಾ ಸೌಕರ್ಯಗಳ ಕಾರ್ಯಕ್ಷಮತೆಯ ಸಮಗ್ರ ಮತ್ತು ವಸ್ತುನಿಷ್ಠ ಮೌಲ್ಯಮಾಪನವನ್ನು ಡಿಯುಆರ್ ನೀಡುತ್ತದೆ. ಹಿಂದಿನ ಆವೃತ್ತಿಗಳ ಒಳನೋಟಗಳನ್ನು ಆಧರಿಸಿ, ವರದಿಯು ಸಾಂಪ್ರದಾಯಿಕ ಕಾರ್ಯಕ್ಷಮತೆ ಸೂಚಕಗಳನ್ನು ಮೀರಿ ಸಾಂಸ್ಥಿಕ ಸಾಮರ್ಥ್ಯ, ಆರ್ಥಿಕ ಸುಸ್ಥಿರತೆ, ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿತರಣಾ ಫಲಿತಾಂಶಗಳನ್ನು ಒಳಗೊಂಡ ಬಹು ಆಯಾಮದ ಮೌಲ್ಯಮಾಪನ ಚೌಕಟ್ಟನ್ನು ಅಳವಡಿಸಿಕೊಳ್ಳುತ್ತದೆ. ಡಿಯುಆರ್ ಉಪಕ್ರಮವು ಭಾರತದ ದೀರ್ಘಕಾಲೀನ ಇಂಧನ ಪರಿವರ್ತನೆ ಮತ್ತು ಅಭಿವೃದ್ಧಿ ಗುರಿಗಳನ್ನು ಬೆಂಬಲಿಸುವ ಮೂಲಕ ಆರ್ಥಿಕವಾಗಿ ಸುಸ್ಥಿರ, ಕಾರ್ಯಾಚರಣೆಯ ದಕ್ಷತೆ ಮತ್ತು ಗ್ರಾಹಕ-ಕೇಂದ್ರಿತ ವಿದ್ಯುತ್ ವಿತರಣಾ ಪೂರಕ ವ್ಯವಸ್ಥೆಯ ಸೃಷ್ಟಿಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ. ಈ ವರ್ಷ ಒಟ್ಟು 66 ಸೌಕರ್ಯಗಳು ಡಿಯುಆರ್ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ.

DUR REPORT

CSRD REPORT

 

*****


(ಪ್ರಕಟಣೆ ಐ.ಡಿ.: 2242957) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Manipuri , Gujarati , Telugu