ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವಸಂವತ್ಸರದ ಅಂಗವಾಗಿ ಸರ್ವರಿಗೂ ಪ್ರಧಾನಮಂತ್ರಿ ಶುಭ ಹಾರೈಕೆ 

ಪ್ರಕಟಣಾ ದಿನಾಂಕ: 19 MAR 2026 8:03AM by PIB Bengaluru

ನೂತನ ಸಂವತ್ಸರದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ರಾಷ್ಟ್ರಕ್ಕೆ ಆತ್ಮೀಯ ಶುಭಾಶಯ ಕೋರಿದ್ದಾರೆ. ರಾಷ್ಟ್ರದ ಪ್ರಗತಿಗೆ ನವ ಬದ್ಧತೆಯೊಂದಿಗೆ ಈ ವರ್ಷವು ಸಮೃದ್ಧಿಯಿಂದ ಕೂಡಿರಲಿ ಎಂದು ಅವರು ಹಾರೈಸಿದ್ದಾರೆ.

ನವಸಂವತ್ಸರದ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿರುವ ಪ್ರಧಾನಮಂತ್ರಿಯವರು, ಮುಂಬರುವ ಹೊಸ ವರ್ಷವು ಪ್ರತಿಯೊಬ್ಬರ ಜೀವನದಲ್ಲಿ ಸ್ಥೈರ್ಯ, ಆತ್ಮವಿಶ್ವಾಸ ಮತ್ತು ಸೇವಾ ಮನೋಭಾವವನ್ನು ಬಲಪಡಿಸಲಿ ಎಂದು ಪ್ರಾರ್ಥಿಸಿದ್ದಾರೆ. ಈ ಮೌಲ್ಯಗಳು ರಾಷ್ಟ್ರ ನಿರ್ಮಾಣದ ಸಾಮೂಹಿಕ ಪ್ರಯತ್ನಗಳಿಗೆ ಹೊಸ ವೇಗವನ್ನು ನೀಡಲಿ ಎಂದು ಆಶಿಸುತ್ತಾ ಶ್ರೀ ಮೋದಿ ಅವರು, ಎಲ್ಲಾ ನಾಗರಿಕರಿಗೆ ಅನಂತ ಸಂತೋಷ, ಯಶಸ್ಸು ಮತ್ತು ಉತ್ತಮ ಆರೋಗ್ಯ ಹಾರೈಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಹೇಳಿದ್ದಾರೆ:

"देशवासियों को नव संवत्सर की अनंत शुभकामनाएं। मेरी कामना है कि यह नया साल आप सभी के जीवन में साहस, आत्मविश्वास और सेवा की भावना को और सशक्त करे, जो राष्ट्र निर्माण के प्रयासों को भी नई मजबूती दे।"

“ಎಲ್ಲರಿಗೂ ನೂತನ ಸಂವತ್ಸರದ ಶುಭಾಶಯಗಳು. ಸರ್ವರಿಗೂ ಅನಂತ ಸಂತೋಷ, ಯಶಸ್ಸು ಮತ್ತು ಉತ್ತಮ ಆರೋಗ್ಯ ಸಿಗಲಿ. ಈ ಮುಂಬರುವ ಹೊಸ ವರ್ಷವು ಪ್ರತಿಯೊಬ್ಬರ ಜೀವನದಲ್ಲಿ ಸ್ಥೈರ್ಯ, ಆತ್ಮ ವಿಶ್ವಾಸ ಮತ್ತು ಸೇವಾ ಮನೋಭಾವವನ್ನು ಮತ್ತಷ್ಟು ಬಲಪಡಿಸಲಿ. ರಾಷ್ಟ್ರ ನಿರ್ಮಾಣದೆಡೆಗಿನ ನಮ್ಮ ಸಾಮೂಹಿಕ ಪ್ರಯತ್ನಗಳಿಗೆ ಇದು ಹೊಸ ವೇಗವನ್ನು ನೀಡಲಿ ಎಂದು ನಾನು ಆಶಿಸುತ್ತೇನೆ.”

 

*****


(ಪ್ರಕಟಣೆ ಐ.ಡಿ.: 2242326) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Assamese , Manipuri , Punjabi , Gujarati , Telugu