ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಚೈತ್ರ ಶುಕ್ಲಾದಿ, ಯುಗಾದಿ, ಗುಡಿ ಪಡ್ವಾ, ಚೇಟಿ ಚಾಂದ್, ನವ್ ರೇಹ್ ಮತ್ತು ಸಾಜಿಬು ಚೈರೋಬಾ ಮುನ್ನಾದಿನದಂದು ರಾಷ್ಟ್ರಪತಿ ಶುಭಾಶಯ

ಪ್ರಕಟಣಾ ದಿನಾಂಕ: 18 MAR 2026 4:27PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಚೈತ್ರ ಶುಕ್ಲಾದಿ, ಯುಗಾದಿ, ಗುಡಿ ಪಡ್ವಾ, ಚೇಟಿ ಚಾಂದ್, ನವ್ ರೇಹ್ ಮತ್ತು ಸಾಜಿಬು ಚೈರಾಬಾದ ಮುನ್ನಾದಿನದಂದು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ: “ಚೈತ್ರ ಶುಕ್ಲಾದಿ, ಯುಗಾದಿ, ಗುಡಿ ಪಡ್ವಾ, ಚೇತಿ ಚಾಂದ್, ನವ್ ರೇಹ್ ಮತ್ತು ಸಾಜಿಬು ಚೈರೋಬಾ ಶುಭ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿರುವ ಎಲ್ಲಾ ಸಹ ನಾಗರಿಕರಿಗೆ ನನ್ನ ಶುಭಾಶಯಗಳು.

 ಹೊಸ ವರ್ಷದಂದು ಈ ಹಬ್ಬಗಳ ಆಚರಣೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪ್ರಕೃತಿಯೊಂದಿಗಿನ ನಮ್ಮ ಗಾಢ ಸಂಪರ್ಕದ ಸಂಕೇತವಾಗಿದೆ. ಅವು ಹೊಸ ಭರವಸೆ, ಹೊಸ ಸಂಕಲ್ಪ ಮತ್ತು ಸಕಾರಾತ್ಮಕ ಮನೋಭಾವದೊಂದಿಗೆ ಜೀವನದಲ್ಲಿ ಮುನ್ನಡೆಯಲು ನಮಗೆ ಸ್ಫೂರ್ತಿ ನೀಡುತ್ತವೆ. ಇವು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಇತರರೊಂದಿಗೆ ಸಂತಸ ಹಂಚಿಕೊಳ್ಳುವ ನಮ್ಮ ಸಂಪ್ರದಾಯಗಳ ರೋಮಾಂಚಕ ಅಭಿವ್ಯಕ್ತಿಯಾಗಿವೆ.

ಈ ಹಬ್ಬಗಳು ಪ್ರೀತಿ ಮತ್ತು ಸಾಮರಸ್ಯದೊಂದಿಗೆ ಭಾರತದ ವಿವಿಧ ಸಮುದಾಯಗಳಲ್ಲಿ ಏಕತೆಯನ್ನು ಪೋಷಿಸಲಿ ಹಾಗೂ ಎಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಸೌಖ್ಯ ತರಲಿ.”

ರಾಷ್ಟ್ರಪತಿಗಳ ಸಂದೇಶವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

 

*****


(ಪ್ರಕಟಣೆ ಐ.ಡಿ.: 2241923) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Telugu