ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ದೇಶಾದ್ಯಂತ ನವೀಕರಿಸಬಹುದಾದ ಇಂಧನ ಜಾಗೃತಿಯನ್ನು ಕೇಂದ್ರ ಸರ್ಕಾರ ಉತ್ತೇಜಿಸುತ್ತದೆ
ಪ್ರಕಟಣಾ ದಿನಾಂಕ:
17 MAR 2026 3:29PM by PIB Bengaluru
ಕೇಂದ್ರ ಸರ್ಕಾರವು ತನ್ನ ವೆಬ್‌ಸೈಟ್ ಗಳು, ಸಾಮಾಜಿಕ ಮಾಧ್ಯಮ, ಮೊಬೈಲ್ ಅಪ್ಲಿಕೇಶನ್, ಮುದ್ರಣ, ಹೊರಾಂಗಣ, ದೂರದರ್ಶನ, ರೇಡಿಯೋ ಮುಂತಾದ ಸಂವಹನ ಮಾಧ್ಯಮಗಳನ್ನು ಬಳಸುವ ಜಾಹೀರಾತುಗಳ ಮೂಲಕ ಸಿಬಿಸಿ ಮತ್ತು ಅದರ ಎಂಪನೇಲ್ಡ್ ಏಜೆನ್ಸಿಗಳು, ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ), ದೂರ ದರ್ಶನ, ಅಖಿಲ ಭಾರತ ರೇಡಿಯೋ (ಎಐಆರ್), ರಾಜ್ಯ ನೋಡಲ್ ಏಜೆನ್ಸಿಗಳು (ಎಸ್.ಎನ್.ಎ.), ಶೈಕ್ಷಣಿಕ ಸಂಸ್ಥೆಗಳು ಮತ್ತು ರಾಷ್ಟ್ರೀಯ ಪ್ರದರ್ಶನಗಳ ಮೂಲಕ ನವೀಕರಿಸಬಹುದಾದ ಇಂಧನ (ಆರ್.ಇ) ಕುರಿತು ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತದೆ.
ಗ್ರಾಮೀಣ ಮತ್ತು ದೂರದ ಪ್ರದೇಶಗಳು ಸೇರಿದಂತೆ ತಮ್ಮ ರಾಜ್ಯಗಳಲ್ಲಿ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲು ರಾಜ್ಯ ನೋಡಲ್ ಏಜೆನ್ಸಿ/ಡಿಸ್ಕಾಮ್ ಗಳಿಗೆ ಹಣವನ್ನು ಒದಗಿಸಲಾಗುತ್ತದೆ. ಹಣಕಾಸು ವರ್ಷ 25-26ರ ಅವಧಿಯಲ್ಲಿ 27 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಣವನ್ನು ನೀಡಲಾಗಿದೆ. ಹೋರ್ಡಿಂಗ್ ಗಳು/ಬ್ಯಾನರ್ ಗಳು, ಮುದ್ರಣ ಜಾಹೀರಾತುಗಳು, ರೇಡಿಯೋ ಜಿಂಗಲ್ ಗಳು, ಮೇಳಗಳು, ಸೂರ್ಯ ರಥ, ಇತ್ಯಾದಿ ಪ್ರಚಾರ ಚಟುವಟಿಕೆಗಳನ್ನು ವಿವಿಧ ರಾಜ್ಯ ನೋಡಲ್ ಏಜೆನ್ಸಿಗಳು/ಡಿಸ್ಕಾಮ್ ಗಳು ಮುಂತಾದ ಎಲ್ಲಾ ಆಯಾಮಗಳ ಮೂಲಕ ಹಾಗೂ ಇತರ ಲಭ್ಯ ವ್ಯವಸ್ಥೆಗಳನ್ನು ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ತನ್ನ ಯೋಜನೆಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಬಳಸಿಕೊಂಡಿವೆ. ಇದರ ಜೊತೆಗೆ, ಸಚಿವಾಲಯವು ದೇಶಾದ್ಯಂತ ಕಾಲಕಾಲಕ್ಕೆ ಹಲವಾರು ಪರಿಶೀಲನಾ ಸಭೆಗಳು, ಸಾಮರ್ಥ್ಯ ವೃದ್ಧಿ ಕಾರ್ಯಾಗಾರಗಳು ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತದೆ.
ಐ.ಐ.ಟಿ ಬಾಂಬೆ, ದೆಹಲಿ ಮತ್ತು ರೂರ್ಕಿಯಂತಹ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳು (ಎನ್.ಎಸ್.ಟಿ.ಐ.ಗಳು), ಕೈಗಾರಿಕಾ ತರಬೇತಿ ಸಂಸ್ಥೆಗಳು (ಐ.ಟಿ.ಐ.ಗಳು), ರಾಷ್ಟ್ರೀಯ ಉದ್ಯಮಶೀಲತೆ ಮತ್ತು ಸಣ್ಣ ವ್ಯವಹಾರ ಅಭಿವೃದ್ಧಿ ಸಂಸ್ಥೆ (ಎನ್.ಐ.ಇ.ಎಸ್.ಬಿ.ಯು.ಡಿ), ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ (ಎನ್.ಐ.ಎಸ್.ಇ), ಹಸಿರು ಉದ್ಯೋಗಗಳ ಕೌಶಲ್ಯ ಮಂಡಳಿ (ಎಸ್.ಸಿ.ಜಿ.ಜೆ) ಮತ್ತು ಇತರ ವಲಯ ಕೌಶಲ್ಯ ಮಂಡಳಿ (ಎಸ್.ಎಸ್.ಸಿ.ಗಳು) ಇತ್ಯಾದಿಗಳು ಪಠ್ಯಕ್ರಮ ಬೆಂಬಲ ಅಥವಾ ವಿಶೇಷ ಕಾರ್ಯಕ್ರಮಗಳ ಮೂಲಕ ನವೀಕರಿಸಬಹುದಾದ ಇಂಧನ ಜಾಗೃತಿಯಲ್ಲಿ ತೊಡಗಿಸಿಕೊಂಡಿವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ:-
i. ಐಐಟಿ ರೂರ್ಕಿಯಿಂದ ಜಲ ಉರ್ಜಮಿತ್ರ ಕಾರ್ಯಕ್ರಮ
ii. ಎನ್‌ಎಸ್‌ಟಿಐಗಳು ಮತ್ತು ಐಟಿಐಗಳು, ಎನ್‌ಐಇಎಸ್‌ಬಿಯುಡಿ, ಎನ್‌ಐಎಸ್‌ಇ, ಎಸ್‌ಸಿಜಿಜೆ ಮತ್ತು ಇತರ ಎಸ್‌ಎಸ್‌ಸಿಗಳ ಮೂಲಕ ಡಿಜಿಟಿಯಿಂದ ಹಸಿರು ಹೈಡ್ರೋಜನ್ ವಲಯ ಕಾರ್ಯಕ್ರಮಕ್ಕಾಗಿ ಕೌಶಲ್ಯಪೂರ್ಣ ಮಾನವಶಕ್ತಿ.
iii. ಡಾ. ಬಿ. ಆರ್. ಅಂಬೇಡ್ಕರ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಜಲಂಧರ್‌ನಲ್ಲಿ ನವೀಕರಿಸಬಹುದಾದ ಇಂಧನದಲ್ಲಿ ಎಂ. ಟೆಕ್ ಕಾರ್ಯಕ್ರಮ
iv. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಸಹಯೋಗದಲ್ಲಿ ಜಂಟಿ ಎಂ. ಟೆಕ್ ಗಾಗಿ 'ಹಸಿರು ಇಂಧನ ಮತ್ತು ಸುಸ್ಥಿರ ಅಭಿವೃದ್ಧಿ' ಕುರಿತ ಕಾರ್ಯಕ್ರಮ
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಖಾತೆ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಅವರು ಇಂದು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಸಲ್ಲಿಸಿದ್ದಾರೆ.
*****
(ಪ್ರಕಟಣೆ ಐ.ಡಿ.: 2241478)
ವಿಸಿಟರ್ ಕೌಂಟರ್ : 5