ರೈಲ್ವೇ ಸಚಿವಾಲಯ
azadi ka amrit mahotsav

ದೇಶಾದ್ಯಂತ ರೈಲು ಸಂಪರ್ಕವನ್ನು ಬಲಪಡಿಸಲು 1,900 ಕಿ.ಮೀ ಗೂ ಅಧಿಕ ಉದ್ದದ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಭಾರತೀಯ ರೈಲ್ವೆ ಇತ್ತೀಚೆಗೆ ಪೂರ್ಣಗೊಳಿಸಿದೆ

ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ, ಭೈರಬಿ-ಸಾಯಿರಾಂಗ್, ಪುಣೆ-ಮೀರಜ್-ಲೋಂಡಾ ಮತ್ತು ಕಟ್ನಿ-ಬೀನಾ ಮಾರ್ಗಗಳು ಸೇರಿದಂತೆ ಪ್ರಮುಖ ರೈಲ್ವೆ ಯೋಜನೆಗಳು ಪೂರ್ಣ

ಪ್ರಮುಖ ರೈಲ್ವೆ ಯೋಜನೆಗಳ ಪರಿಣಾಮಕಾರಿ ಮತ್ತು ತ್ವರಿತ ಅನುಷ್ಠಾನವು ಪ್ರಯಾಣಿಕರ ಸಂಪರ್ಕವನ್ನು ಬಲಪಡಿಸಿದೆ, ಸರಕು ಸಾಗಣೆ ದಕ್ಷತೆಯನ್ನು ಹೆಚ್ಚಿಸಿದೆ ಮತ್ತು ಭಾರತದ ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಮುನ್ನಡೆಸುತ್ತಿದೆ

ಜಾಲದ ಸಾಮರ್ಥ್ಯವನ್ನು ವಿಸ್ತರಿಸಲು ಕಳೆದ 5 ವರ್ಷಗಳಲ್ಲಿ ₹2,93,000 ಕೋಟಿ ಮೌಲ್ಯದ 308 ಹೊಸ ಮಾರ್ಗ, ಗೇಜ್ ಪರಿವರ್ತನೆ ಮತ್ತು ದ್ವಿಪಥಗೊಳಿಸುವಿಕೆ ಯೋಜನೆಗಳಿಗೆ ಭಾರತೀಯ ರೈಲ್ವೆ ಅನುಮೋದನೆ ನೀಡಿದೆ

ಪ್ರಕಟಣಾ ದಿನಾಂಕ: 13 MAR 2026 5:27PM by PIB Bengaluru

ಕಳೆದ 11 ವರ್ಷಗಳಲ್ಲಿ ಭಾರತೀಯ ರೈಲ್ವೆಯು ರೈಲ್ವೆ ಜಾಲದ ಸಾಮರ್ಥ್ಯ ವರ್ಧನೆಯನ್ನು ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಂಡಿದೆ. ಭಾರತೀಯ ರೈಲ್ವೆಯಾದ್ಯಂತ ಹೊಸ ಹಳಿಗಳ ನಿಯೋಜನೆ/ಅಳವಡಿಕೆಯ ವಿವರಗಳನ್ನು ಕೆಳಗೆ ನೀಡಲಾಗಿದೆ:

ಅವಧಿ

ನಿಯೋಜಿಸಲಾದ ಹೊಸ ಹಳಿ

ಹೊಸ ಹಳಿಗಳ ಸರಾಸರಿ ನಿಯೋಜನೆ

2009-14

7,599 ಕಿ.ಮೀ

ದಿನಕ್ಕೆ 4.2 ಕಿ.ಮೀ

2014-25

34,428 ಕಿ.ಮೀ

ದಿನಕ್ಕೆ 8.6 ಕಿ.ಮೀ (2 ಪಟ್ಟಿಗಿಂತ ಹೆಚ್ಚು)

ಇತ್ತೀಚೆಗೆ ಪೂರ್ಣಗೊಂಡ ಕೆಲವು ಯೋಜನೆಗಳು ಈ ಕೆಳಗಿನಂತಿವೆ:

ಕ್ರಮ ಸಂಖ್ಯೆ

ಯೋಜನೆಯ ಹೆಸರು

ಉದ್ದ (ಕಿ.ಮೀ ಗಳಲ್ಲಿ)

1

ಉಧಮ್‌ಪುರ- ಶ್ರೀನಗರ- ಬಾರಾಮುಲ್ಲಾ ಹೊಸ ಮಾರ್ಗ

272

2

ಭೈರಬಿ - ಸಾಯಿರಾಂಗ್ ಹೊಸ ಮಾರ್ಗ

51

3

ದೇವಬಂದ್ - ರೂರ್ಕಿ ಹೊಸ ಮಾರ್ಗ

27

4

ಚುರು - ರತನ್‌ಗಢ್ ದ್ವಿಪಥಗೊಳಿಸುವಿಕೆ

43

5

ತೋರಿ-ಶಿವಪುರ 3ನೇ ಮಾರ್ಗ

44

6

ಅರಾರಿಯಾ - ಗಲ್ಗಲಿಯಾ ಹೊಸ ಮಾರ್ಗ

110

7

ಹಿಮ್ಮತ್‌ನಗರ - ಖೇಡ್‌ಬ್ರಹ್ಮ ಗೇಜ್ ಪರಿವರ್ತನೆ

55

8

ಬಹ್ರೈಚ್- ನಾನ್‌ಪಾರಾ -ನೇಪಾಳ ಗಂಜ್ ಗೇಜ್ ಪರಿವರ್ತನೆ

56

9

ಡೊಮಿಂಗಢ್- ಗೋರಖ್‌ಪುರ -ಕುಸುಮಿ 3ನೇ ಮಾರ್ಗ ಮತ್ತು ಗೋರಖ್‌ಪುರ -ನಕಹಾ ದ್ವಿಪಥಗೊಳಿಸುವಿಕೆ

21

10

ವಿಜಾಪುರ - ಅಂಬಲಿಯಾಸನ್ ಗೇಜ್ ಪರಿವರ್ತನೆ

43

11

ಪುಣೆ- ಮಿರಜ್ -ಲೋಂಡಾ ದ್ವಿಪಥಗೊಳಿಸುವಿಕೆ

467

12

ಮನ್ಮಾಡ್ - ಜಲಗಾಂವ್ 3ನೇ ಮಾರ್ಗ

160

13

ಫೆಫ್ನಾ –ಇಂದಾರಾ- ಮೌ -ಶಹಗಂಜ್ ದ್ವಿಪಥಗೊಳಿಸುವಿಕೆಗೊಳಿಸುವಿಕೆ

150

14

ಅದ್ರಾಜ್ -ಮೋತಿ -ವಿಜಾಪುರ ಗೇಜ್ ಪರಿವರ್ತನೆ

40

15

ಕಟ್ನಿ -ಬೀನಾ 3ನೇ ಮಾರ್ಗ

279

16

ಗಾಂಧಿಧಾಮ- ಆದಿಪುರ ಚತುಷ್ಪಥಗೊಳಿಸುವಿಕೆ

21

17

ಖಾಟುವಾಸ್ - ನಾರ್ನಾಲ್ ದ್ವಿಪಥಗೊಳಿಸುವಿಕೆ

24

18

ಪೆನುಕೊಂಡ- ಧರ್ಮಾವರಂ ದ್ವಿಪಥಗೊಳಿಸುವಿಕೆ

42

ರೈಲ್ವೆ ಮೂಲಸೌಕರ್ಯ ಯೋಜನೆಗಳು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಈ ಕೆಳಗಿನಂತೆ ಅನುವು ಮಾಡಿಕೊಡುತ್ತವೆ:

  • ದೇಶದ ಇತರ ಭಾಗಗಳೊಂದಿಗೆ ಪ್ರದೇಶದ ಉತ್ತಮ ಸಂಪರ್ಕ.
  • ಸರಕು ಮತ್ತು ಸೇವೆಗಳ ವೇಗದ ಸಂಚಾರ.
  • ಲಾಜಿಸ್ಟಿಕ್ಸ್ ದಕ್ಷತೆಯ ಸುಧಾರಣೆ ಮತ್ತು ಸಾರಿಗೆ ವೆಚ್ಚದಲ್ಲಿ ಕಡಿತ.
  • ಮಾರ್ಗದ ಸಾಮರ್ಥ್ಯ ಹೆಚ್ಚಳ.
  • ಪ್ರದೇಶದ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳ ಹೆಚ್ಚಳ.
  • ಕಾರ್ಯಾಚರಣೆಯ ಅಡೆತಡೆಗಳ ಕಡಿತ.
  • ಪ್ರವಾಸೋದ್ಯಮ ಉದ್ಯಮದ ಅಭಿವೃದ್ಧಿ ಮತ್ತು ಪ್ರದೇಶದಲ್ಲಿ ಕೈಗಾರಿಕಾ ಚಟುವಟಿಕೆಗಳ ಹೆಚ್ಚಳ.

ಯಾವುದೇ ರೈಲ್ವೆ ಯೋಜನೆಯ ಅನುಮೋದನೆಯು ಈ ಕೆಳಗಿನವುಗಳನ್ನು ಒಳಗೊಂಡಂತೆ ಹಲವು ನಿಯತಾಂಕಗಳು/ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ:

  • ನಿರೀಕ್ಷಿತ ಸಂಚಾರ ಅಂದಾಜುಗಳು ಮತ್ತು ಉದ್ದೇಶಿತ ಮಾರ್ಗದ ಲಾಭದಾಯಕತೆ.
  • ಯೋಜನೆಯು ಒದಗಿಸುವ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ.
  • ಬಿಟ್ಟುಹೋದ ಕೊಂಡಿಗಳ ಸಂಪರ್ಕ ಮತ್ತು ಹೆಚ್ಚುವರಿ ಮಾರ್ಗವನ್ನು ಒದಗಿಸುವುದು.
  • ದಟ್ಟಣೆ ಇರುವ/ಸಂಪೂರ್ಣ ಭರ್ತಿಯಾಗಿರುವ ಮಾರ್ಗಗಳ ವಿಸ್ತರಣೆ.
  • ರಾಜ್ಯ ಸರ್ಕಾರಗಳು/ಕೇಂದ್ರ ಸಚಿವಾಲಯಗಳು/ಸಾರ್ವಜನಿಕ ಪ್ರತಿನಿಧಿಗಳು ಮಂಡಿಸಿದ ಬೇಡಿಕೆಗಳು.
  • ರೈಲ್ವೆಯ ಸ್ವಂತ ಕಾರ್ಯಾಚರಣೆಯ ಅಗತ್ಯತೆಗಳು.
  • ಸಾಮಾಜಿಕ-ಆರ್ಥಿಕ ಪರಿಗಣನೆಗಳು.
  • ನಿಧಿಯ ಒಟ್ಟಾರೆ ಲಭ್ಯತೆ.

ರೈಲ್ವೆ ಯೋಜನೆಯ ಪೂರ್ಣಗೊಳಿಸುವಿಕೆಯು ಈ ಕೆಳಗಿನವುಗಳನ್ನು ಒಳಗೊಂಡಂತೆ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ:

  • ಭೂಸ್ವಾಧೀನ.
  • ಅರಣ್ಯ ಇಲಾಖೆಯ ಅನುಮತಿ.
  • ಅಡ್ಡಿಯುಂಟುಮಾಡುವ ಸೌಕರ್ಯಗಳ ಸ್ಥಳಾಂತರ.
  • ವಿವಿಧ ಪ್ರಾಧಿಕಾರಗಳಿಂದ ಶಾಸನಬದ್ಧ ಅನುಮತಿಗಳು.
  • ಪ್ರದೇಶದ ಭೂವೈಜ್ಞಾನಿಕ ಮತ್ತು ಸ್ಥಳದ ಪರಿಸ್ಥಿತಿಗಳು.
  • ಯೋಜನಾ ಸ್ಥಳದ ಪ್ರದೇಶದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ.
  • ನಿರ್ದಿಷ್ಟ ಯೋಜನಾ ಸ್ಥಳಕ್ಕಾಗಿ ವರ್ಷದಲ್ಲಿ ಕೆಲಸ ಮಾಡಬಹುದಾದ ತಿಂಗಳುಗಳ ಸಂಖ್ಯೆ ಇತ್ಯಾದಿ.

ರೈಲ್ವೆ ಯೋಜನೆಗಳ ಪರಿಣಾಮಕಾರಿ ಮತ್ತು ತ್ವರಿತ ಅನುಷ್ಠಾನಕ್ಕಾಗಿ ಸರ್ಕಾರವು ತೆಗೆದುಕೊಂಡ ವಿವಿಧ ಕ್ರಮಗಳು ಹೀಗಿವೆ:

  • ನಿಧಿಯ ಹಂಚಿಕೆಯಲ್ಲಿ ಗಣನೀಯ ಹೆಚ್ಚಳ.
  • ಕ್ಷೇತ್ರ ಮಟ್ಟದಲ್ಲಿ ಅಧಿಕಾರಗಳ ಹಂಚಿಕೆ.
  • ವಿವಿಧ ಹಂತಗಳಲ್ಲಿ ಯೋಜನೆಯ ಪ್ರಗತಿಯ ನಿಕಟ ಮೇಲ್ವಿಚಾರಣೆ.
  • ತ್ವರಿತ ಭೂಸ್ವಾಧೀನ, ಅರಣ್ಯ ಮತ್ತು ವನ್ಯಜೀವಿ ಅನುಮತಿಗಳಿಗಾಗಿ ಮತ್ತು ಯೋಜನೆಗಳಿಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರಗಳು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕ ಸಾಧಿಸುವುದು.

ಕಳೆದ 05 ವರ್ಷಗಳಲ್ಲಿ, ಭಾರತೀಯ ರೈಲ್ವೆಯಲ್ಲಿ ಅಂದಾಜು ₹2,93,000 ಕೋಟಿ ವೆಚ್ಚದ 308 ಯೋಜನೆಗಳನ್ನು (ಹೊಸ ಮಾರ್ಗ, ಗೇಜ್ ಪರಿವರ್ತನೆ ಮತ್ತು ದ್ವಿಪಥಗೊಳಿಸುವಿಕೆ) ಮಂಜೂರು ಮಾಡಲಾಗಿದೆ. ಇದು ಹೆಚ್ಚಿನ ಸಂಖ್ಯೆಯ ರೈಲುಗಳನ್ನು ಓಡಿಸಲು ರೈಲ್ವೆ ಜಾಲದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಮಂಜೂರಾದ ಕೆಲವು ಪ್ರಮುಖ ಯೋಜನೆಗಳು ಈ ಕೆಳಗಿನಂತಿವೆ:

ಕ್ರಮ ಸಂಖ್ಯೆ

ಯೋಜನೆಯ ಹೆಸರು

   ವೆಚ್ಚ  (ಕೋಟಿ ರೂ.ಗಳಲ್ಲಿ)

1

ಚೋಪನ್ - ಚುನಾರ್ ದ್ವಿಪಥಗೊಳಿಸುವಿಕೆ (102 ಕಿ.ಮೀ)

1,553

2

ಗುಂಟೂರು – ಬೀಬಿನಗರ ದ್ವಿಪಥಗೊಳಿಸುವಿಕೆ (239 ಕಿ.ಮೀ)

3,238

3

ಮುದ್ಖೇಡ್ - ಮೆಡ್ಚಲ್ ಮತ್ತು ಮಹಬೂಬ್‌ನಗರ - ಧೋನ್ ದ್ವಿಪಥಗೊಳಿಸುವಿಕೆ (418 ಕಿ.ಮೀ)

5,655

4

ಸಮಖಿಯಾಲಿ - ಗಾಂಧಿಧಾಮ ಚತುಷ್ಪಥಗೊಳಿಸುವಿಕೆ (53 ಕಿ.ಮೀ)

1,571

5

ಮೆರ್ಟಾ ಸಿಟಿ - ರಾಸ್ ಮತ್ತು ಮೆರ್ಟಾ ರೋಡ್‌ ನಲ್ಲಿ ಬೈಪಾಸ್ ಹೊಸ ಮಾರ್ಗ (56 ಕಿ.ಮೀ)

1,038

6

ಲುಮಡಿಂಗ್ - ಫರ್ಕೇಟಿಂಗ್ ದ್ವಿಪಥಗೊಳಿಸುವಿಕೆ (140 ಕಿ.ಮೀ)

2,334

7

ಅಜ್ಮೀರ್ - ಚಂದೇರಿಯಾ ದ್ವಿಪಥಗೊಳಿಸುವಿಕೆ (178 ಕಿ.ಮೀ)

1,813

8

ಮೋಟುಮರಿ - ವಿಷ್ಣುಪುರಂ RoR ನೊಂದಿಗೆ ದ್ವಿಪಥಗೊಳಿಸುವಿಕೆ (100 ಕಿ.ಮೀ)

1,746

9

ವಿಕ್ರಮಶಿಲಾ - ಕಟಾರಿಯಾ ಹೊಸ ಮಾರ್ಗ, ಗಂಗಾ ನದಿಗೆ ಹೊಸ ಸೇತುವೆಯೊಂದಿಗೆ (26 ಕಿ.ಮೀ)

2,549

10

ಗುಣುಪುರ - ತೆರುಬಾಲಿ ಹೊಸ ಮಾರ್ಗ (74 ಕಿ.ಮೀ)

1,326

11

ಮಲ್ಕಾನ್‌ಗಿರಿ - ಪಾಂಡುರಂಗಪುರಂ ಹೊಸ ಮಾರ್ಗ (174 ಕಿ.ಮೀ)

4,109

12

ಬಾದಾಂಪಹಾರ್ - ಕೆಂದುಝಾರ್‌ಗಢ್ ಹೊಸ ಮಾರ್ಗ (82 ಕಿ.ಮೀ)

2,106

13

ಜುನಾಗಢ್ - ನಬರಂಗಪುರ ಹೊಸ ಮಾರ್ಗ (116 ಕಿ.ಮೀ)

3,274

14

ಬುರಾಮರ - ಚಕುಲಿಯಾ ಹೊಸ ಮಾರ್ಗ (60 ಕಿ.ಮೀ)

1,639

15

ಅಜಂತಾ ಗುಹೆಗಳ ರೈಲು ಸಂಪರ್ಕ (174 ಕಿ.ಮೀ)

7,105

16

ಬಂಗ್ರಿಪೋಸಿ - ಗೊರುಮಹಿಸಾನಿ ಹೊಸ ಮಾರ್ಗ (86 ಕಿ.ಮೀ)

2,549

17

ಚಾಂಡಿಲ್ - ಅನಾರಾ - ದಾಮೋದರ್ 3ನೇ ಮಾರ್ಗ (121 ಕಿ.ಮೀ)

2,170

18

ಬರ್ಗಢ್ ರೋಡ್ - ನವಾಪಾರಾ ರೋಡ್ ಹೊಸ ಮಾರ್ಗ (138 ಕಿ.ಮೀ)

2,926

19

ಸರ್ದೇಗಾ - ಭಾಲುಮುಡಾ ಹೊಸ ಎರಡು ಮಾರ್ಗ (37 ಕಿ.ಮೀ)

1,360

20

ವಾರಾಣಸಿ - ಪಂ. ದೀನ್ ದಯಾಳ್ ಉಪಾಧ್ಯಾಯ ಮಲ್ಟಿಟ್ರ್ಯಾಕಿಂಗ್, ಗಂಗಾ ನದಿಗೆ ರೈಲು ಮತ್ತು ರಸ್ತೆ ಸೇತುವೆಯೊಂದಿಗೆ (15 ಕಿ.ಮೀ)

2,642

21

ಜಲಗಾಂವ್ - ಮನ್ಮಾಡ್ 4ನೇ ಮಾರ್ಗ (160 ಕಿ.ಮೀ)

2,773

22

ಭುಸಾವಲ್ - ಖಾಂಡ್ವಾ 3ನೇ ಮತ್ತು 4ನೇ ಮಾರ್ಗ (131 ಕಿ.ಮೀ)

3,514

23

ಸಂಬಲ್ಪುರ - ಜರಪಾಡಾ 3ನೇ ಮತ್ತು 4ನೇ ಮಾರ್ಗ (127 ಕಿ.ಮೀ)

3,916

24

ಝಾರ್ಸುಗುಡಾ - ಸಾಸನ್ 3ನೇ ಮತ್ತು 4ನೇ ಮಾರ್ಗ (35 ಕಿ.ಮೀ)

1,181

25

ಗೊಂಡಿಯಾ - ಬಲ್ಲಾರ್ಶಾ ದ್ವಿಪಥಗೊಳಿಸುವಿಕೆ (240 ಕಿ.ಮೀ)

4,819

26

ಖಾರ್ಸಿಯಾ - ನಯಾ ರಾಯ್‌ಪುರ - ಪರ್ಮಲಕಾಸ 5ನೇ ಮತ್ತು 6ನೇ ಮಾರ್ಗ (278 ಕಿ.ಮೀ)

8,741

27

ವಾರ್ಧಾ - ಬಲ್ಹಾರ್ಶಾ ಚತುಷ್ಪಥಗೊಳಿಸುವಿಕೆ (135 ಕಿ.ಮೀ)

2,381

28

ಬಳ್ಳಾರಿ - ಚಿಕ್ಕಜಾಜೂರು ದ್ವಿಪಥಗೊಳಿಸುವಿಕೆ (185 ಕಿ.ಮೀ)

3,342

29

ಕೊಡರ್ಮಾ - ಬರ್ಕಾಕಾನಾ ದ್ವಿಪಥಗೊಳಿಸುವಿಕೆ (133 ಕಿ.ಮೀ)

3,063

30

ಇಟಾರ್ಸಿ - ನಾಗ್ಪುರ 4ನೇ ಮಾರ್ಗ (297 ಕಿ.ಮೀ)

5,451

31

ಡಾಂಗೋವಾಪೋಸಿ - ಜರೋಲಿ 3ನೇ ಮತ್ತು 4ನೇ ಮಾರ್ಗ (43 ಕಿ.ಮೀ)

1,752

32

ಸಿಕಂದರಾಬಾದ್ - ವಾಡಿ 3ನೇ ಮತ್ತು 4ನೇ ಮಾರ್ಗ (173 ಕಿ.ಮೀ)

5,012

33

ಫರ್ಕೇಟಿಂಗ್ - ನ್ಯೂ ತಿನ್ಸುಕಿಯಾ ದ್ವಿಪಥಗೊಳಿಸುವಿಕೆ (194 ಕಿ.ಮೀ)

3,634

34

ಬಖ್ತಿಯಾರ್‌ಪುರ - ರಾಜಗಿರ್ - ತಿಲೈಯಾ ದ್ವಿಪಥಗೊಳಿಸುವಿಕೆ (104 ಕಿ.ಮೀ)

2,192

35

ಗೊಂಡಿಯಾ - ಡೊಂಗರ್‌ಗಢ್ 4ನೇ ಮಾರ್ಗ (84 ಕಿ.ಮೀ)

2,223

36

ವಾರ್ಧಾ - ಭುಸಾವಲ್ 3ನೇ ಮತ್ತು 4ನೇ ಮಾರ್ಗ (314 ಕಿ.ಮೀ)

9,197

37

ಹೊಸಪೇಟೆ - ಬಳ್ಳಾರಿ ಚತುಷ್ಪಥಗೊಳಿಸುವಿಕೆ (65 ಕಿ.ಮೀ)

2,372

38

ಕಸಾರಾ - ಮನ್ಮಾಡ್ 3ನೇ ಮತ್ತು 4ನೇ ಮಾರ್ಗ (131 ಕಿ.ಮೀ)

10,154

39

ಪುನಾರಖ್ - ಕಿಯುಲ್ 3ನೇ ಮತ್ತು 4ನೇ ಮಾರ್ಗ (50 ಕಿ.ಮೀ)

2,668

40

ಗಮ್ಹಾರಿಯಾ - ಚಾಂಡಿಲ್ 3ನೇ ಮತ್ತು 4ನೇ ಮಾರ್ಗ (55 ಕಿ.ಮೀ)

1,168

41

ಸೈಂಥಿಯಾ- ಪಖೂರ್ 4ನೇ ಮಾರ್ಗ (81 ಕಿ.ಮೀ)

1,569

42

ಸಂತ್ರಾಗಾಚಿ- ಖರಗ್‌ಪುರ 4ನೇ ಮಾರ್ಗ (111 ಕಿ.ಮೀ)

2,905

43

ನೆರ್ಗುಂಡಿ- ಬಾರಂಗ್ ಮತ್ತು ಖುರ್ದಾ ರೋಡ್- ವಿಜಯನಗರಂ 3ನೇ ಮಾರ್ಗ (385 ಕಿ.ಮೀ)

5,618

44

ಸೋನ್ ನಗರ - ಅಂದಾಲ್ ಮಲ್ಟಿ ಟ್ರ್ಯಾಕಿಂಗ್ (375 ಕಿ.ಮೀ)

13,606

45

ಗೋರಖ್‌ಪುರ ಕಾಂಟ್ - ವಾಲ್ಮೀಕಿ ನಗರ ದ್ವಿಪಥಗೊಳಿಸುವಿಕೆ (96 ಕಿ.ಮೀ)

1,270

46

ಜೈಪುರ - ಸವಾಯಿ ಮಾಧೋಪುರ ದ್ವಿಪಥಗೊಳಿಸುವಿಕೆ (131 ಕಿ.ಮೀ)

1,269

47

ಲೂನಿ - ಸಮದರಿ - ಭಿಲ್ಡಿ ದ್ವಿಪಥಗೊಳಿಸುವಿಕೆ (272 ಕಿ.ಮೀ)

3,531

48

ನರ್ಕತಿಯಾಗಂಜ್ - ರಕ್ಸೌಲ್ - ಸೀತಾಮರ್ಹಿ - ದರ್ಭಾಂಗ ಮತ್ತು ಸೀತಾಮರ್ಹಿ - ಮುಜಾಫರ್‌ಪುರ ದ್ವಿಪಥಗೊಳಿಸುವಿಕೆ (256 ಕಿ.ಮೀ)

4,553

49

ಪ್ರಯಾಗ್‌ರಾಜ್ (ಇರಾದತ್‌ಗಂಜ್) - ಮಾಣಿಕ್‌ಪುರ 3ನೇ ಮಾರ್ಗ (84 ಕಿ.ಮೀ)

1,640

50

ತಿರುಪತಿ - ಪಾಕಾಲಾ - ಕಾಟಪಾಡಿ ದ್ವಿಪಥಗೊಳಿಸುವಿಕೆ (104 ಕಿ.ಮೀ)

1,332

51

ರತ್ಲಾಮ್ - ನಾಗ್ಡಾ 3ನೇ ಮತ್ತು 4ನೇ ಮಾರ್ಗ (41 ಕಿ.ಮೀ)

1,018

52

ಅಲುವಾಬಾರಿ ರೋಡ್ - ನ್ಯೂ ಜಲ್ಪೈಗುರಿ 3ನೇ ಮತ್ತು 4ನೇ ಮಾರ್ಗ (57 ಕಿ.ಮೀ)

1,786

53

ಔರಂಗಾಬಾದ್ (ಛತ್ರಪತಿ ಸಂಭಾಜಿನಗರ) - ಪರ್ಭಾನಿ (177 ಕಿ.ಮೀ)

2,179

54

ಭಾಗಲ್ಪುರ - ದುಮ್ಕಾ - ರಾಂಪುರಹಟ್ ದ್ವಿಪಥಗೊಳಿಸುವಿಕೆ (177 ಕಿ.ಮೀ)

3,169

55

ಇಟಾರ್ಸಿ - ಬೀನಾ 4ನೇ ಮಾರ್ಗ (237 ಕಿ.ಮೀ)

4,329

56

ವಡೋದರಾ - ರತ್ಲಾಮ್ 3ನೇ ಮತ್ತು 4ನೇ ಮಾರ್ಗ (259 ಕಿ.ಮೀ)

8,885

57

ದೇವಭೂಮಿ ದ್ವಾರಕಾ (ಓಖಾ) - ಕನಾಲಸ್ ದ್ವಿಪಥಗೊಳಿಸುವಿಕೆ (141 ಕಿ.ಮೀ)

1,457

58

ಬದಲಾಪುರ - ಕರ್ಜತ್ 3ನೇ ಮತ್ತು 4ನೇ ಮಾರ್ಗ (32 ಕಿ.ಮೀ)

1,324

59

ದೆಹಲಿ - ಅಂಬಾಲಾ ಕಾಂಟ್ 3ನೇ ಮತ್ತು 4ನೇ ಮಾರ್ಗ (194 ಕಿ.ಮೀ)

5,983

60

ಗೊಂಡಿಯಾ - ಜಬಲ್ಪುರ ದ್ವಿಪಥಗೊಳಿಸುವಿಕೆ (231 ಕಿ.ಮೀ)

5,236

61

ಮನ್ಮಾಡ್ - ಇಂದೋರ್ ಹೊಸ ಮಾರ್ಗ (360 ಕಿ.ಮೀ)

18,529

62

ಎರುಪಾಲಂ - ಅಮರಾವತಿ - ನಂಬೂರು ಹೊಸ ಮಾರ್ಗ (57 ಕಿ.ಮೀ)

2,245

63

ವಧವನ್ ಬಂದರು ಮತ್ತು ನ್ಯೂ ಪಾಲ್ಘರ್ ಸ್ಟೇಷನ್ ಹೊಸ ಎರಡು ಮಾರ್ಗ (22 ಕಿ.ಮೀ)

1,507

64

ದೇಶಲ್ಪರ್ - ಹಾಜಿಪಿರ್ - ಲೂನಾ ಮತ್ತು ವಯೋರ್ - ಲಖ್‌ಪತ್ ಹೊಸ ಮಾರ್ಗ (145 ಕಿ.ಮೀ)

2,526

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರವಾಗಿ ಈ ಮಾಹಿತಿಯನ್ನು ನೀಡಿದ್ದಾರೆ.

 


(ಪ್ರಕಟಣೆ ಐ.ಡಿ.: 2239888) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Odia