ಪಂಚಾಯತ್ ರಾಜ್ ಸಚಿವಾಲಯ
“ಸಶಕ್ತ ಪಂಚಾಯತ್-ನೇತ್ರಿ” ಅಭಿಯಾನದಡಿಯಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳ ರಾಷ್ಟ್ರೀಯ ಸಮ್ಮೇಳನವನ್ನು ಕೇಂದ್ರ ಪಂಚಾಯತಿ ರಾಜ್ ಸಚಿವಾಲಯವು (ಎಂ.ಒ.ಪಿ.ಆರ್) ಮಾರ್ಚ್ 11, 2026 ರಂದು ಆಯೋಜಿಸಲಿದೆ
ಪ್ರಕಟಣಾ ದಿನಾಂಕ:
10 MAR 2026 1:27PM by PIB Bengaluru
ಕೇಂದ್ರ ಪಂಚಾಯಿತಿ ರಾಜ್ ಸಚಿವಾಲಯವು ಸಶಕ್ತ “ಪಂಚಾಯತ್-ನೇತ್ರಿ” ಅಭಿಯಾನದಡಿಯಲ್ಲಿ ಪಂಚಾಯತ್ ಗಳ ಚುನಾಯಿತ ಮಹಿಳಾ ಪ್ರತಿನಿಧಿಗಳ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಮಾರ್ಚ್ 11, 2026 ರಂದು ನವದೆಹಲಿಯಲ್ಲಿ ಆಯೋಜಿಸಲಿದೆ. ಈ ಸಮ್ಮೇಳನದಲ್ಲಿ ಕೇಂದ್ರ ಪಂಚಾಯತಿ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್; ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ; ಕೇಂದ್ರ ಪಂಚಾಯತಿ ರಾಜ್ ರಾಜ್ಯ ಸಚಿವರಾದ ಪ್ರೊ. ಎಸ್. ಪಿ. ಸಿಂಗ್ ಬಘೇಲ್ ಮತ್ತು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವೆ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ ಭಾಗವಹಿಸಲಿದ್ದಾರೆ. ಕೇಂದ್ರ ಪಂಚಾಯತಿ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್, ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಮಹಿಳಾ ಚುನಾಯಿತ ಪ್ರತಿನಿಧಿಗಳು, ವಿಶ್ವಸಂಸ್ಥೆಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 700 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಮ್ಮೇಳನವು “ಸಶಕ್ತ ಪಂಚಾಯತ್-ನೇತ್ರಿ” ಅಭಿಯಾನದ ಪ್ರಾರಂಭದ ಒಂದು ವರ್ಷವನ್ನು ಸೂಚಿಸುತ್ತದೆ ಮತ್ತು ಭಾರತದಲ್ಲಿ ಮಹಿಳಾ ನೇತೃತ್ವದ ತಳಮಟ್ಟದ ಆಡಳಿತವನ್ನು ಆಚರಿಸಲು ಮತ್ತು ಬಲಪಡಿಸಲು ರಾಷ್ಟ್ರೀಯ ವೇದಿಕೆಯಾಗಿ ಈದು ಕಾರ್ಯನಿರ್ವಹಿಸುತ್ತದೆ.
ಈ ಸಮ್ಮೇಳನದ ಸಂದರ್ಭದಲ್ಲಿ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಂದ ಗುರುತಿಸಲ್ಪಟ್ಟ ಅತ್ಯುತ್ತಮ ಬದಲಾವಣೆ ತಂದಿರುವ(ಬೀಕನ್) ಮಹಿಳಾ ಪಂಚಾಯತ್ ನಾಯಕಿಯರನ್ನು ಗೌರವಿಸಲಾಗುತ್ತದೆ. ಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಗಳ ಅತ್ಯುತ್ತಮ ಕ್ರಮ-ಪದ್ಧತಿ-ಅಭ್ಯಾಸಗಳು ಮತ್ತು ಪರಿವರ್ತನೆಯ ಕಥೆಗಳ (ಮಹಿಳಾ ಚುನಾಯಿತ ಪ್ರತಿನಿಧಿಗಳಿಗೆ ವಿಶೇಷ ತರಬೇತಿ ಮಾಡ್ಯೂಲ್ ಅನ್ನು ಆಧರಿಸಿದ ಗ್ರಾಮೀಣ ಆಡಳಿತದಲ್ಲಿ ಬದಲಾವಣೆಯ ಏಜೆಂಟ್) ಸಂಕಲನವನ್ನು ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ನಿರ್ಭಯಾ ಉಪಕ್ರಮಗಳೊಂದಿಗೆ ಸಹ ಪ್ರಾರಂಭಿಸಲಾಗುವುದು. ಸಮ್ಮೇಳನವು ಎರಡು ತಾಂತ್ರಿಕ ಅಧಿವೇಶನಗಳನ್ನು ಸಹ ಒಳಗೊಂಡಿರುತ್ತದೆ, ಒಂದು ಗ್ರಾಮೀಣ ಆಡಳಿತದಲ್ಲಿ ಮಹಿಳಾ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಇನ್ನೊಂದು ಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಗಳನ್ನು ಅಭಿವೃದ್ಧಿಪಡಿಸುವುದು.
ಹಿನ್ನೆಲೆ: ಮಾರ್ಚ್ 4, 2025 ರಂದು, ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು ನವದೆಹಲಿಯಲ್ಲಿ “ಸಶಕ್ತ ಪಂಚಾಯತ್-ನೇತ್ರಿ” ಅಭಿಯಾನವನ್ನು ಪ್ರಾರಂಭಿಸಿತು. ಉದ್ದೇಶಿತ ಸಾಮರ್ಥ್ಯ-ನಿರ್ಮಾಣ ಉಪಕ್ರಮವಾಗಿ ಕಲ್ಪಿಸಲಾದ ಅಭಿಯಾನವು ತಳಮಟ್ಟದಲ್ಲಿ ಮಹಿಳಾ ಚುನಾಯಿತ ಪ್ರತಿನಿಧಿಗಳ (ಡಬ್ಲ್ಯೂ.ಇ.ಆರ್.) ನಾಯಕತ್ವ, ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಮತ್ತು ಆಡಳಿತ ಪಾತ್ರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಪರಿಷ್ಕೃತ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ (ಆರ್.ಜಿ.ಎಸ್.ಎ) ಅಡಿಯಲ್ಲಿ, ಸಚಿವಾಲಯವು 2025–26ರಲ್ಲಿ 7,18,434 ಮಹಿಳಾ ಚುನಾಯಿತ ಪ್ರತಿನಿಧಿ (ಡಬ್ಲ್ಯೂ.ಇ.ಆರ್.) ಗಳಿಗೆ ತರಬೇತಿ ನೀಡಿದೆ ಮತ್ತು ಮಾಸ್ಟರ್ ತರಬೇತುದಾರರು ಸೇರಿದಂತೆ 1,21,512 ಮಹಿಳಾ ಚುನಾಯಿತ ಪ್ರತಿನಿಧಿ (ಡಬ್ಲ್ಯೂ.ಇ.ಆರ್.)ಗಳಿಗೆ "ಬದಲಾವಣೆಯ ಹರಿಕಾರರಾಗುವುದು: ಸ್ಥಳೀಯ ಆಡಳಿತ ಮತ್ತು ಅದರಾಚೆಗೆ ಮಹಿಳಾ ನಾಯಕಿಯರನ್ನು ಸಬಲೀಕರಣಗೊಳಿಸುವುದು" ಎಂಬ ವಿಶೇಷ ಮಾಡ್ಯೂಲ್ ಅಡಿಯಲ್ಲಿ ಸಾಮರ್ಥ್ಯವನ್ನು ನೀಡಿದೆ. ಇದರ ಜೊತೆಗೆ, 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 744 ಮಾದರಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಗಳನ್ನು ಗುರುತಿಸಲಾಗಿದೆ, ಆಡಳಿತದಲ್ಲಿ ಭಾಗವಹಿಸುವಿಕೆ, ಆರೋಗ್ಯ ಮತ್ತು ಪೋಷಣೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಆರ್ಥಿಕ ಅವಕಾಶಗಳು, ಸುರಕ್ಷತೆ ಮತ್ತು ಭದ್ರತೆಯಂತಹ ಪ್ರಮುಖ ಸೂಚಕಗಳ ಪ್ರಗತಿಯನ್ನು ಪತ್ತೆಹಚ್ಚಲು ಮೀಸಲಾದ ಡ್ಯಾಶ್ ಬೋರ್ಡ್ಗಳನ್ನು ಹೊಂದಿದೆ.

*****
(ಪ್ರಕಟಣೆ ಐ.ಡಿ.: 2237458)
ವಿಸಿಟರ್ ಕೌಂಟರ್ : 15