ರೈಲ್ವೇ ಸಚಿವಾಲಯ
azadi ka amrit mahotsav

ರೈಲ್ವೆ ಮೂಲಸೌಕರ್ಯ ವಿಸ್ತರಣೆಗೆ ಸಮಗ್ರ ಏಕೀಕೃತ ಕೈಗಾರಿಕಾ ಸಾಮರ್ಥ್ಯ, ಕೌಶಲ್ಯ ಮತ್ತು ತಂತ್ರಜ್ಞಾನ ಅಳವಡಿಕೆ ಪ್ರಮುಖ ಅಂಶಗಳಾಗಿವೆ: ಅಶ್ವಿನಿ ವೈಷ್ಣವ್


ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಸರಕು ಸಾಗಣೆಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವ ಮತ್ತು ಬಲಪಡಿಸುವ ಕುರಿತು ಬಜೆಟ್ ವೆಬಿನಾರ್ ಅನ್ನು ಉದ್ದೇಶಿಸಿ ಕೇಂದ್ರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಭಾಷಣ ಮಾಡಿದರು

ಎಲ್ಲಾ ಒಂದಾಗಿ ಜೊತೆ ಕೂಡಿ ಪ್ರವರ್ತಿಸುವ ( ಸಿಂಕ್ರೊನೈಸ್ಡ್) ಸಾಮರ್ಥ್ಯ ವಿಸ್ತರಣೆ, ಬಲವಾದ ಗುಣಮಟ್ಟದ ಮಾನದಂಡಗಳು ಮತ್ತು ಒಪ್ಪಂದದ ಸುಧಾರಣೆಗಳು ವಿವಾದಗಳನ್ನು ಕಡಿಮೆ ಮಾಡಲು ಮತ್ತು ಸಕಾಲಿಕ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಮೂರು ಪ್ರಮುಖ ಗಮನಾರ್ಹ ಕ್ಷೇತ್ರಗಳಾಗಿವೆ

ರೈಲ್ವೆ ಯೋಜನೆಗಳ ಬಹು ಆಯಾಮದ ಸಂಕೀರ್ಣತೆಯನ್ನು  ವಿವರಿಸುತ್ತಾ, ಅನುಷ್ಠಾನದಲ್ಲಿ ಕ್ಷೇತ್ರದ ಪರಿಣತಿ ಮತ್ತು ವಲಯ-ನಿರ್ದಿಷ್ಟ ಅನುಭವಕ್ಕಾಗಿ ಕೇಂದ್ರ ಸಚಿವರು ಕರೆ ನೀಡಿದರು

ಪ್ರಕಟಣಾ ದಿನಾಂಕ: 03 MAR 2026 7:10PM by PIB Bengaluru

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಬಜೆಟ್ ವೆಬಿನಾರ್ ಸರಣಿಯ ಎರಡನೇ ಕಂತನ್ನು ಉದ್ದೇಶಿಸಿ "ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವುದು ಮತ್ತು ಬಲಪಡಿಸುವುದು: ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಸರಕು ಸಾಗಣೆ" ಎಂಬ ವಿಷಯದ ಮೇಲೆ ಕೇಂದ್ರೀಕರಿಸಿ ಭಾಷಣ ಮಾಡಿದರು.

ಕೇಂದ್ರ ಸಚಿವರು ಈ ವಲಯಕ್ಕೆ ಈ ಮೂರು ಪ್ರಮುಖ ಹಾಗೂ ಗಮನಾರ್ಹ ಕ್ಷೇತ್ರಗಳನ್ನು ವೆಬಿನಾರ್ ನಲ್ಲಿ  ವಿವರಿಸಿದರು : ಒಂದಾಗಿ ಪ್ರವರ್ತಿಸುವಂತೆ (ಸಿಂಕ್ರೊನೈಸ್) ಮಾಡಿದ ರೀತಿಯಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವುದು, ಗುಣಮಟ್ಟ ಮತ್ತು ಅರ್ಹತಾ ಮಾನದಂಡಗಳನ್ನು ಬಲಪಡಿಸುವುದು ಮತ್ತು ವಿವಾದಗಳನ್ನು ಕಡಿಮೆ ಮಾಡಲು ಮತ್ತು ಯೋಜನೆಗಳ ಸಕಾಲಿಕ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ದಸ್ತಾವೇಜನ್ನು ಮತ್ತು ಒಪ್ಪಂದದ ಚೌಕಟ್ಟುಗಳನ್ನು ಸುಧಾರಿಸುವುದು.

ರೈಲ್ವೆ ಮೂಲಸೌಕರ್ಯದ ಸಿಂಕ್ರೊನೈಸ್ಡ್ ವಿಸ್ತರಣೆ

ಕಳೆದ ಒಂದು ದಶಕದಲ್ಲಿ ಭಾರತದ ರೈಲ್ವೆ ಜಾಲದ ಅಭೂತಪೂರ್ವ ಬೆಳವಣಿಗೆಯನ್ನು ಕೇಂದ್ರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಹೇಳಿದರು. ಜರ್ಮನಿಯ ಒಟ್ಟು ರೈಲ್ವೆ ಜಾಲವನ್ನು ಮೀರಿಸಿದ , ಸುಮಾರು 35,000 ಕಿಮೀ ಹೊಸ ಹಳಿಗಳನ್ನು ಈಗಾಗಲೇ ಸೇರಿಸಲಾಗಿದೆ. ಇದಲ್ಲದೆ, ಸುಮಾರು 99% ನೆಟ್‌ವರ್ಕ್ ಅನ್ನು ವಿದ್ಯುದ್ದೀಕರಿಸಲಾಗಿದೆ.

ಇಂತಹ ಕ್ಷಿಪ್ರ ಗಾತ್ರ ವಿಸ್ತಾರ (ಸ್ಕೇಲಿಂಗ್) ಒಂದು ಪ್ರಮುಖ ಸವಾಲನ್ನು ಒಡ್ಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು: ಸರ್ಕಾರದ ವಿಸ್ತರಣೆಯೊಂದಿಗೆ ಉದ್ಯಮ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಹೆಚ್ಚಿಸುವುದು. ರೈಲ್ವೆ ಅಭಿವೃದ್ಧಿಯು ಮೂಲಭೂತವಾಗಿ ಉದ್ಯಮ ಮತ್ತು ಸರ್ಕಾರದ ನಡುವಿನ ಪಾಲುದಾರಿಕೆಯಾಗಿದೆ. ಯೋಜನಾ ಪ್ರಮಾಣದಲ್ಲಿ ಹಠಾತ್ ಹೆಚ್ಚಳ ಅಥವಾ ಇಳಿಕೆ ಉದ್ಯಮದ ಸನ್ನದ್ಧತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ, ಕೌಶಲ್ಯ, ಮೇಲ್ವಿಚಾರಣೆ, ಗುಣಮಟ್ಟದ ಮಾನದಂಡಗಳು ಮತ್ತು ತಂತ್ರಜ್ಞಾನ ಅಳವಡಿಕೆಯು ಮೂಲಸೌಕರ್ಯ ವಿಸ್ತರಣೆಯೊಂದಿಗೆ ಸಿಂಕ್ರೊನೈಸ್ ಆಗಬೇಕು. ಉದ್ಯಮದ ಪಾಲುದಾರರಿಂದ ಒಳಹರಿವು(ಇನ್‌ಪುಟ್‌)ಗಳು ಭವಿಷ್ಯದ ಸುಧಾರಣೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು  ಹೇಳಿದರು.


ಹೈ-ಸ್ಪೀಡ್ ರೈಲು ದೃಷ್ಟಿಕೋನ ಮತ್ತು ಪರಿವರ್ತನಾ ಯೋಜನೆಗಳು

ಹೈ-ಸ್ಪೀಡ್ ರೈಲು ಅಭಿವೃದ್ಧಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ವೈಷ್ಣವ್ ಅವರು, ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್ ಅನ್ನು ಕಡಿದಾದ ರೇಖೆ ಎಂದು ವಿವರಿಸಿದರು. ಗಂಟೆಗೆ 160 ಕಿ.ಮೀ. ಮೀರಿದ ರೈಲು ಕಾರ್ಯಾಚರಣೆಗಳು ವಿನ್ಯಾಸ ಮತ್ತು ಕಾರ್ಯಾಚರಣೆಯ ಸಂಕೀರ್ಣತೆಯನ್ನು ಅಪಾಯಕಾರಿಯಾಗಿ ಹೆಚ್ಚಿಸುತ್ತವೆ ಎಂದು ತಿಳಿಸಿದರು.

ಐಐಟಿಗಳು, ಉದ್ಯಮ ಪಾಲುದಾರರು ಮತ್ತು ರೈಲ್ವೆ ಎಂಜಿನಿಯರ್‌ ಗಳ ಸಹಯೋಗದ ಮೂಲಕ, ಭಾರತವು ಈ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ.

ಈ ಯಶಸ್ಸಿನ ಮೇಲೆ, ಗೌರವಾನ್ವಿತ ಪ್ರಧಾನಮಂತ್ರಿಯವರು 4,000 ಕಿ.ಮೀ. ಉದ್ದದ ಏಳು ಹೊಸ ಹೈ-ಸ್ಪೀಡ್ ಪ್ರಯಾಣಿಕರ ಕಾರಿಡಾರ್‌ ಗಳನ್ನು ಅನುಮೋದಿಸಿದ್ದಾರೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಮೂಲಸೌಕರ್ಯ ಗುರಿಗಳನ್ನು ಸಾಧಿಸಲು ರೈಲ್ವೆಗಳು, ಕೈಗಾರಿಕೆಗಳು, ಪೂರೈಕೆ ಸರಪಳಿಗಳು, ಸಲಕರಣೆ ತಯಾರಕರು, ಸೇವಾ ಪೂರೈಕೆದಾರರು, ಕಾರ್ಯಾಚರಣೆಗಳು ಮತ್ತು ನಿರ್ವಹಣಾ ತಂಡಗಳು, ಸಿಗ್ನಲಿಂಗ್ ತಜ್ಞರು, ರೋಲಿಂಗ್ ಸ್ಟಾಕ್ ತಯಾರಕರು ಮತ್ತು ವಿಶೇಷ ವಿದ್ಯುತ್ ವಾಹಕಗಳ ಉತ್ಪಾದಕರಲ್ಲಿ ಸಂಘಟಿತ ಪ್ರಯತ್ನಗಳು ಬೇಕಾಗುತ್ತವೆ ಎಂದು ಕೇಂದ್ರ ಸಚಿವ ಶ್ರೀ ವೈಷ್ಣವ್ ಅವರು ಹೇಳಿದರು. ಈ ಸವಾಲುಗಳ ಕುರಿತು ಚರ್ಚಿಸಲು ಅವರು ಪ್ರಮುಖ ನಿರ್ಮಾಣ ಮತ್ತು ವಿನ್ಯಾಸ ಸಂಸ್ಥೆಗಳನ್ನು ಕೇಂದ್ರೀಕೃತ ಕಾರ್ಯಾಗಾರಗಳಿಗೆ ಆಹ್ವಾನಿಸಿದರು.

ಗುಣಮಟ್ಟ, ಅರ್ಹತೆ ಮತ್ತು ಟೆಂಡರ್ ಮಾನದಂಡಗಳನ್ನು ಬಲಪಡಿಸುವುದು

ಅರ್ಹತಾ ಮಾನದಂಡಗಳನ್ನು ಬಿಗಿಗೊಳಿಸುವ ಮತ್ತು ಅತಿಯಾದ ಉಪಗುತ್ತಿಗೆಯನ್ನು ಕಡಿಮೆ ಮಾಡುವ ತುರ್ತು ಅಗತ್ಯವನ್ನು ಶ್ರೀ ವೈಷ್ಣವ್ ಅವರು ಹೇಳಿದರು.  ಸಾರ್ವಜನಿಕ ಯೋಜನೆಗಳು, ಇನ್ನೂ ಕಠಿಣ ಗುಣಮಟ್ಟ ಮತ್ತು ಹೊಣೆಗಾರಿಕೆ ಮಾನದಂಡಗಳನ್ನು ಪಾಲಿಸಬೇಕು, ಸರ್ಕಾರಿ ನಿಧಿಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಮತ್ತು ವಿವಾದಗಳು ಕಡಿಮೆಯಾಗುತ್ತಿವೆ ಎಂದು ಅವರು ಹೇಳಿದರು.

ಕೈಗಾರಿಕಾ ಸಹಯೋಗ ಮತ್ತು ಪಾಲುದಾರರ ಪಾಲ್ಗೊಳ್ಳುವಿಕೆ

ಬಜೆಟ್ ನಂತರದ ವೆಬಿನಾರ್‌ ಸರಣಿಯಲ್ಲಿ ತಮ್ಮ ಒಳನೋಟಗಳನ್ನು ನೀಡಿದ ಉದ್ಯಮ ವೃತ್ತಿಪರರು, ವಿವಿಧ ಸಚಿವಾಲಯಗಳ ಪ್ರತಿನಿಧಿಗಳು, ಕಾರ್ಯನಿರ್ವಾಹಕ ಸಂಸ್ಥೆಗಳು ಮತ್ತು ಪಾಲುದಾರರಿಗೆ ಕೇಂದ್ರ ಸಚಿವರಾದ ಶ್ರೀ ವೈಷ್ಣವ್ ಅವರು ಧನ್ಯವಾದ ಅರ್ಪಿಸಿದರು. ಈ ಸಲಹೆಗಳು ವಲಯದಾದ್ಯಂತ ಸುಧಾರಣೆಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು.

ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಖಟ್ಟರ್, ಶ್ರೀ ಸರ್ಬಾನಂದ ಸೋನೋವಾಲ್ ಮತ್ತು ಶ್ರೀ ಕೆ. ರಾಮ್ ಮೋಹನ್ ನಾಯ್ಡು ಅವರ ಜೊತೆಗೆ ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳು; ವಿದ್ಯುತ್; ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಕೇಂದ್ರ ಬಜೆಟ್ ಘೋಷಣೆಗಳಿಗೆ ಅನುಗುಣವಾಗಿ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಮತ್ತು ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ವೆಬಿನಾರ್ ಪರಿಣಾಮಕಾರಿ ವೇದಿಕೆಯಾಗಿದೆ ಎಂದು ಕೇಂದ್ರ ಸಚಿವರು ವರ್ಣಿಸಿದರು.

 

*****


(ಪ್ರಕಟಣೆ ಐ.ಡಿ.: 2235266) ವಿಸಿಟರ್ ಕೌಂಟರ್ : 54
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Telugu