ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಮಧ್ಯಪ್ರಾಚ್ಯದಲ್ಲಿನ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ನಡುವೆ ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ - ಇಂಧನ ಪೂರೈಕೆ ಬಲವಾಗಿದೆ
ಭಾರತದ ಕಚ್ಚಾ ಮತ್ತು ಪೆಟ್ರೋಲಿಯಂ ಸಂಗ್ರಹಣೆ ವ್ಯವಸ್ಥೆ ಬಹುವಿಧರೂಪದಲ್ಲಿದೆ; ಪೂರೈಕೆ ನಿಟ್ಟಿನಲ್ಲಿ ನಿಯಂತ್ರಣ ಕೊಠಡಿಯಿಂದ 24×7 ತಾಸು ಮೇಲ್ವಿಚಾರಣಾ ವ್ಯವಸ್ಥೆ ಮಾಡಲಾಗಿದೆ
ಪ್ರಕಟಣಾ ದಿನಾಂಕ:
03 MAR 2026 4:51PM by PIB Bengaluru
ಮಧ್ಯಪ್ರಾಚ್ಯದಲ್ಲಿ ಹಗೆತನ ಮತ್ತು ಉಲ್ಬಣಿಸಿ ವಿಕಸನಗೊಳ್ಳುತ್ತಿರುವ ಜಾಗತಿಕ ಇಂಧನ ವ್ಯತಿರಿಕ್ತ ಪರಿಸ್ಥಿತಿಯ ನಂತರ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು ಪ್ರಸ್ತುತ ಸಮಕಾಲೀನ ಸನ್ನಿವೇಶದಲ್ಲಿ ದೇಶದ ಇಂಧನ ಸನ್ನದ್ಧತೆಯ ಕುರಿತು ಮಾಧ್ಯಮಗಳಿಗೆ ವಿವರ ನೀಡಿದರು.
ಭಾರತವು ಜಾಗತಿಕವಾಗಿ ಮೂರನೇ ಅತಿದೊಡ್ಡ ಕಚ್ಚಾ ಇಂಧನ ಆಮದುದಾರ ದೇಶವಾಗಿದೆ, ನಾಲ್ಕನೇ ಅತಿದೊಡ್ಡ ಸಂಸ್ಕರಣಾಗಾರ ಮತ್ತು ಐದನೇ ಅತಿದೊಡ್ಡ ಪೆಟ್ರೋಲಿಯಂ ಉತ್ಪನ್ನಗಳ ರಫ್ತುದಾರ ದೇಶವಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಲಾಯಿತು. ಮಧ್ಯಪ್ರಾಚ್ಯದಿಂದ ಉಂಟಾಗುವ ಅಲ್ಪಾವಧಿಯ ಅಡೆತಡೆಗಳನ್ನು ಎದುರಿಸಲು ದೇಶವು ಕಚ್ಚಾ ತೈಲ ಮತ್ತು ಪೆಟ್ರೋಲ್, ಡೀಸೆಲ್ ಮತ್ತು ಎ.ಟಿ.ಎಫ್. ಸೇರಿದಂತೆ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನುಗಳಿಂದ ಸಮೃದ್ಧವಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ, ಭಾರತವು ತನ್ನ ಮೂಲಗಳನ್ನು ವೈವಿಧ್ಯಗೊಳಿಸಿ ಬಹುರೂಪದ ಸಂಗ್ರಹಣಾ ವ್ಯವಸ್ಥೆಯ ಮೂಲಕ ತನ್ನ ಜನಸಂಖ್ಯೆಗೆ ಅಗತ್ಯದ ಇಂಧನದ ಲಭ್ಯತೆ ಮತ್ತು ಕೈಗೆಟುಕುವಿಕೆಯನ್ನು ಖಚಿತಪಡಿಸಿಕೊಂಡಿದೆ ಎಂದು ಮಾಧ್ಯಮಗಳಿಗೆ ತಿಳಿಸಲಾಯಿತು. ಭಾರತೀಯ ಇಂಧನ ಕಂಪನಿಗಳು ಈಗ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಿಸಲ್ಪಡದ ಇಂಧನ ಪೂರೈಕೆಗಳಿಗೆ ಹೊಂದಿಕೊಂಡು ಲಭ್ಯತೆ ಹಾಗೂ ಪ್ರವೇಶವನ್ನು ಮಾಡಿವೆ. ಅಂತಹ ಸರಕುಗಳು ಸದಾ ಲಭ್ಯವಿರುತ್ತವೆ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಹೋಗುವ ಮಾರ್ಗದಲ್ಲಿ ತಾತ್ಕಾಲಿಕವಾಗಿ ಪರಿಣಾಮ ಬೀರಬಹುದಾದ ಸರಬರಾಜುಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಮತ್ತು ದಾಸ್ತಾನು ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಕೇಂದ್ರ ಸಚಿವಾಲಯವು 24×7 ತಾಸು ಮೇಲ್ವಿಚಾರಣೆಯ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಪ್ರಸ್ತುತ, ಕೇಂದ್ರ ಸರ್ಕಾರವು ದಾಸ್ತಾನುಗಳ ವಿಷಯದಲ್ಲಿ ಸಾಕಷ್ಟು ಆರಾಮದಾಯಕವಾಗಿದೆ. ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಹೆಚ್ಚಿನ ಆದ್ಯತೆಯಾಗಿ ಉಳಿದಿದೆ. ನಿರಂತರ ಮೇಲ್ವಿಚಾರಣೆಯ ಆಧಾರದ ಮೇಲೆ, ಪರಿಸ್ಥಿತಿಯ ಒತ್ತಡವನ್ನು ಮತ್ತಷ್ಟು ತಗ್ಗಿಸಲು ಅಗತ್ಯವಿದ್ದರೆ ಹಂತ ಹಂತವಾಗಿ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆಪೂರ್ವಕವಾಗಿ ವರ್ತಿಸುತ್ತಿದೆ ಹಾಗೂ ಬಹಳಷ್ಟು ಆಶಾವಾದಿಯಾಗಿದೆ.


*****
(ಪ್ರಕಟಣೆ ಐ.ಡಿ.: 2235202)
ವಿಸಿಟರ್ ಕೌಂಟರ್ : 85
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Bengali-TR
,
Punjabi
,
Gujarati
,
Odia
,
Telugu
,
Malayalam