ನೀತಿ ಆಯೋಗ
azadi ka amrit mahotsav

ಸ್ಟೇಟ್ ಸಪೋರ್ಟ್ ಮಿಷನ್ ಅಡಿಯಲ್ಲಿ ನೀತಿ ಆಯೋಗವು ನೈಸರ್ಗಿಕ ಕೃಷಿಯ ಕುರಿತು ರಾಷ್ಟ್ರೀಯ ಕಾರ್ಯಾಗಾರವನ್ನು ಏರ್ಪಡಿಸಿತು

ಪ್ರಕಟಣಾ ದಿನಾಂಕ: 02 MAR 2026 2:13PM by PIB Bengaluru

ದೇಶಾದ್ಯಂತದ ರೈತರು, ನೀತಿ ನಿರೂಪಕರು, ವಿಜ್ಞಾನಿಗಳು, ನವೋದ್ಯಮಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳನ್ನು ಒಟ್ಟುಗೂಡಿಸಿ ನೀತಿ ಆಯೋಗವು ತನ್ನ ರಾಜ್ಯ ಬೆಂಬಲ ಮಿಷನ್ (ಸ್ಟೇಟ್ ಸಪೋರ್ಟ್ ಮಿಷನ್ – ಎಸ್. ಎಸ್. ಎಂ) ಅಡಿಯಲ್ಲಿ ನೈಸರ್ಗಿಕ ಕೃಷಿಯ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ರೈತರು, ವಿಸ್ತರಣಾ ಅಧಿಕಾರಿಗಳು ಮತ್ತು ಕ್ಷೇತ್ರ ಮಟ್ಟದ ಕಾರ್ಯಕರ್ತರನ್ನು ನೈಸರ್ಗಿಕ ಕೃಷಿ ಪದ್ಧತಿಗಳ ಕುರಿತು ಪ್ರದೇಶ-ಸಂಬಂಧಿತ ಮತ್ತು ಪ್ರಾಯೋಗಿಕ ಜ್ಞಾನದೊಂದಿಗೆ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಅಭಿವೃದ್ಧಿಪಡಿಸಲಾದ ನೈಸರ್ಗಿಕ ಕೃಷಿಯ ಕುರಿತು ತರಬೇತಿ ಕೈಪಿಡಿಗಳ ಬಿಡುಗಡೆ ಮಾಡುವುದು ಈ ಕಾರ್ಯಾಗಾರದ ಪ್ರಮುಖ ಅಂಶವಾಗಿತ್ತು.

ಸುಸ್ಥಿರ, ರೈತ ಕೇಂದ್ರಿತ ಕೃಷಿ ವ್ಯವಸ್ಥೆಗಳ ಪ್ರಾಮುಖ್ಯತೆ ಮತ್ತು ಮಣ್ಣಿನ ಆರೋಗ್ಯವನ್ನು ಸುಧಾರಿಸುವಲ್ಲಿ, ಇನ್ ಪುಟ್ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಮತ್ತು ರೈತರ ಆದಾಯವನ್ನು ಹೆಚ್ಚಿಸುವಲ್ಲಿ ನೈಸರ್ಗಿಕ ಕೃಷಿಯ ಪಾತ್ರವನ್ನು ಒತ್ತಿ ಹೇಳಿದ ಗುಜರಾತ್ ಮತ್ತು ಮಹಾರಾಷ್ಟ್ರದ ಗೌರವಾನ್ವಿತ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್ ಜಿ ಅವರ ವರ್ಚುವಲ್ ಭಾಷಣ ರೂಪಿಸುವ ಮೂಲಕ ಕಾರ್ಯಾಗಾರವನ್ನು ವಿಶೇಷವಾಗಿ ಏರ್ಪಡಿಸಲಾಯಿತು.

ಜುನಾಗಢ ಕೃಷಿ ವಿಶ್ವವಿದ್ಯಾಲಯ, ಡಾ. ವೈ.ಎಸ್. ಪರ್ಮಾರ್ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾಲಯ ಮತ್ತು ಗುಜರಾತ್ ನೈಸರ್ಗಿಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಸೇರಿದಂತೆ ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಗೆ ಈ ಕಾರ್ಯಕ್ರಮ ವಿಶೇಷ ಸಾಕ್ಷಿಯಾಯಿತು.

ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮತ್ತು ಒಡಿಶಾದ ರೈತರು, ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ.) ವಿಜ್ಞಾನಿಗಳು ಚರ್ಚೆಗಳಲ್ಲಿ ಭಾಗವಹಿಸಿದ್ದರು, ಇದು ನೈಸರ್ಗಿಕ ಕೃಷಿ ಪರಿವರ್ತನೆಗಳಲ್ಲಿ ಇಡೀ ಭಾರತದ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಅಪೇಡಾ, ನಬಾರ್ಡ್, ಸಹಕಾರ ಸಚಿವಾಲಯ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ದಹದ್), ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಅಟಾರಿಗಳು ಸೇರಿದಂತೆ ಪ್ರಮುಖ ಕೇಂದ್ರ ಸಂಸ್ಥೆಗಳು ಮತ್ತು ಸಚಿವಾಲಯಗಳ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು ಮತ್ತು ವೈವಿದ್ಯಮಯ ಒಮ್ಮುಖ  ಕಾರ್ಯಕ್ರಮದಲ್ಲಿ, ಪ್ರಮಾಣೀಕರಣ, ಮಾರುಕಟ್ಟೆ ಸಂಪರ್ಕಗಳು ಮತ್ತು ಸಾಂಸ್ಥಿಕ ಬೆಂಬಲದ ಕುರಿತು ಒಳನೋಟಗಳನ್ನು ಪರಸ್ಪರ ಹಂಚಿಕೊಂಡರು.

ಕಾರ್ಯಾಗಾರವು ಕೃಷಿ-ಸ್ಟಾರ್ಟ್ಅಪ್ ಗಳು, ನಾಗರಿಕ ಸಮಾಜ ಸಂಸ್ಥೆಗಳು, ಚಾಂಪಿಯನ್ ರೈತರು ಮತ್ತು ರೈತ ಉತ್ಪಾದಕ ಗುಂಪುಗಳ ಭಾಗವಹಿಸುವಿಕೆಯನ್ನು ಕಂಡಿತು, ಇದು ಭಾರತದಲ್ಲಿ ನೈಸರ್ಗಿಕ ಕೃಷಿಯನ್ನು ಬೆಂಬಲಿಸುವ ಬೆಳೆಯುತ್ತಿರುವ ಪರಿಸರ ವ್ಯವಸ್ಥೆಯನ್ನು ಎತ್ತಿ ತೋರಿಸಿತು.

ಮೊದಲ ದಿನದಂದು ಒಟ್ಟು 770 ನೈಸರ್ಗಿಕ ಕೃಷಿ ಆಸಕ್ತರು, ನೈಸರ್ಗಿಕ ಕೃಷಿ ಕ್ಷೇತ್ರದ ವಿವಿಧ ಪಾಲುದಾರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಮುಕ್ತ ಮನೆ ಚರ್ಚೆಯನ್ನು ನಡೆಸಲಾಯಿತು, ಇದು ರೈತರು ಮತ್ತು ವೃತ್ತಿಪರರಿಗೆ ನೈಸರ್ಗಿಕ ಕೃಷಿಗೆ ದತ್ತು, ಪ್ರಮಾಣೀಕರಣ, ಮಾರುಕಟ್ಟೆಗಳು ಮತ್ತು ಸಾಂಸ್ಥಿಕ ಬೆಂಬಲಕ್ಕೆ ಸಂಬಂಧಿಸಿದ ಅವರ ಕಾಳಜಿಗಳು, ಕ್ಷೇತ್ರ ಮಟ್ಟದ ಸವಾಲುಗಳು ಮತ್ತು ಅನುಮಾನಗಳನ್ನು ಮುಕ್ತವಾಗಿ ಚರ್ಚಿಸಲು ವೇದಿಕೆಯನ್ನು ಒದಗಿಸಿತು. ಮೊದಲ ದಿನವು ಬಲವಾದ ಕ್ಷೇತ್ರ ಪ್ರದರ್ಶನಗಳು, ಪುರಾವೆ ಆಧಾರಿತ ದೃಢೀಕರಣ ಮತ್ತು ರೈತರ ನೇತೃತ್ವದ ಮಾದರಿಗಳ ಅಗತ್ಯತೆಯ ಕುರಿತು ಒಮ್ಮತದೊಂದಿಗೆ ಮುಕ್ತಾಯಗೊಂಡಿತು.

ಕಾರ್ಯಾಗಾರದ ಎರಡನೇ ದಿನವು ಕ್ಷೇತ್ರ ಭೇಟಿಗಳು ಮತ್ತು ನೇರ ಪ್ರದರ್ಶನಗಳ ಮೇಲೆ ಕೇಂದ್ರೀಕರಿಸಿತು, ಭಾಗವಹಿಸುವವರು ತಲಮಟ್ಟದಲ್ಲಿ ನೆಲ-ಹೊಲಗಳಲ್ಲಿನ ನೈಸರ್ಗಿಕ ಕೃಷಿ ಪದ್ಧತಿಗಳನ್ನು ವೀಕ್ಷಿಸಲು ಮತ್ತು ವೃತ್ತಿಪರರೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಾಯಿತು. ಕ್ಷೇತ್ರ ಭೇಟಿಯಲ್ಲಿ ಹಾಗೂ ವೈವಿದ್ಯಮಯ ಗುಣಲಕ್ಷಣಗಳ ವಿವಿಧ ಬೆಳೆಗಳಿಗೆ ಎನ್.ಎಫ್ ಅಭ್ಯಾಸಗಳ ಪ್ಯಾಕೇಜ್ ನ ಪ್ರಾತ್ಯಕ್ಷಿಕೆಗಳು ಹಾಗೂ ಜಮೀನಿನಲ್ಲಿ ಜೈವಿಕ ಒಳಹರಿವಿನ ಸಿದ್ಧತೆಗಳು ಮತ್ತು ಯಾಂತ್ರೀಕೃತಗೊಂಡ ವ್ಯವಸ್ಥೆ ಮೂಲಕ ಪ್ರಾತ್ಯಕ್ಷತೆಗಳು ಸೇರಿದ್ದವು.

ನೈಸರ್ಗಿಕ ಕೃಷಿಯ ತರಬೇತಿ ಕೈಪಿಡಿಗಳನ್ನು ಇಲ್ಲಿ ವೀಕ್ಷಿಸಬಹುದು:

ರೈತರ ಸಬಲೀಕರಣ: ನೈಸರ್ಗಿಕ ಕೃಷಿ ತರಬೇತಿ ಟೂಲ್ ಕಿಟ್ ಮತ್ತು ಅತ್ಯುತ್ತಮ ಅಭ್ಯಾಸಗಳ ಮಾರ್ಗದರ್ಶಿ: https://niti.gov.in/sites/default/files/2026-03/Training-Manual-English.pdf


किसान सशक्तिकरण: प्राकृतिक खेती प्रशिक्षण एवम सर्वोत्तम अभ्यास मार्गदर्शिका: https://niti.gov.in/sites/default/files/2026-03/Training-manual-Hindi.pdf

 

*****


(ಪ್ರಕಟಣೆ ಐ.ಡಿ.: 2234571) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Marathi , Tamil , Telugu