ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ನಡೆದ ಸ್ಟಡಿ ಇನ್ ಇಂಡಿಯಾ ಶೈಕ್ಷಣಿಕ-ರಾಜತಾಂತ್ರಿಕ ಸಮಾವೇಶ 2026ರಲ್ಲಿ 50ಕ್ಕೂ ಅಧಿಕ ದೇಶಗಳ ರಾಜತಾಂತ್ರಿಕರನ್ನು ಉದ್ದೇಶಿಸಿ ಭಾಷಣ ಮಾಡಿದ ಶ್ರೀ ಧರ್ಮೇಂದ್ರ ಪ್ರಧಾನ್


ಭಾರತದ ವೇಗವಾಗಿ ಬೆಳೆಯುತ್ತಿರುವ , ನಾವೀನ್ಯತೆ ಆಧರಿಸಿದ ಶಿಕ್ಷಣ ವ್ಯವಸ್ಥೆಯೊಂದಿಗೆ ಸಹಕರಿಸಲು ಶಿಕ್ಷಣ ಸಚಿವರು ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕರೆ

ಜಾಗತಿಕ ಶೈಕ್ಷಣಿಕ ಪಾಲುದಾರಿಕೆಗಳನ್ನು ಗಾಢವಾಗಿಸಲು ನವದೆಹಲಿಯಲ್ಲಿರುವ ರಾಜತಾಂತ್ರಿಕ ಮಿಷನ್ ಗಳೊಂದಿಗಿನ ಸಮಾವೇಶದಿಂದ ಸಂಬಂಧ ಮತ್ತಷ್ಟು ಬಲವರ್ಧನೆ

ಜಾಗತಿಕ ಶೈಕ್ಷಣಿಕ ತಾಣವಾಗಿ ಭಾರತ ತನ್ನ ಸ್ಥಾನ ಬಲಪಡಿಸಿಕೊಳ್ಳಲು ನೆರವಾಗುತ್ತಿರುವ ಎನ್ ಇಪಿ 2020 ಸುಧಾರಣೆಗಳು

ಜಗತ್ತನ್ನು ಅಧ್ಯಯನ ಮಾಡಲು, ನಾವೀನ್ಯತೆಗಳನ್ನು ಕೈಗೊಳ್ಳಲು ಮತ್ತು ಒಗ್ಗೂಡಿ ಬೆಳೆಯಲು ಇಡೀ ವಿಶ್ವವನ್ನು ಆಹ್ವಾನಿಸಿದ ಭಾರತ

ಪ್ರಕಟಣಾ ದಿನಾಂಕ: 02 MAR 2026 3:14PM by PIB Bengaluru

ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ನವದೆಹಲಿಯಲ್ಲಿಂದು ಸುಷ್ಮಾ ಸ್ವರಾಜ್ ಭವನದಲ್ಲಿ ಶಿಕ್ಷಣ ಸಚಿವಾಲಯ ಆಯೋಜಿಸಿರುವ ಸ್ಟಡಿ ಇನ್ ಇಂಡಿಯಾ ಶೈಕ್ಷಣಿಕ-ರಾಜತಾಂತ್ರಿಕ ಸಮಾವೇಶ 2026 ಅನ್ನು ಉದ್ದೇಶಿಸಿ ಮಾತನಾಡುತ್ತಿದರು. ಉನ್ನತ ಶಿಕ್ಷಣದಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚಿಸಲು 50 ಕ್ಕೂ ಅಧಿಕ ದೇಶಗಳ ರಾಯಭಾರಿಗಳು, ಹೈಕಮಿಷನರ್‌ಗಳು, ರಾಜತಾಂತ್ರಿಕ ಮಿಷನ್ ಗಳ ಪ್ರತಿನಿಧಿಗಳು ಮತ್ತು ಸಚಿವಾಲಯದ ಅಧಿಕಾರಿಗಳನ್ನು ಸಮಾವೇಶ ಒಗೂಡಿಸಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಶಿಕ್ಷಣ ಸಚಿವರು, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಅಡಿಯಲ್ಲಿ ಭಾರತದ ಶಿಕ್ಷಣ ವ್ಯವಸ್ಥೆಯ ಪರಿವರ್ತನೆಯ ಕುರಿತು ಮಾತನಾಡಿದರು, ಶಿಕ್ಷಣದ ಅಂತಾರಾಷ್ಟ್ರೀಕರಣದಲ್ಲಿ ಆಗುತ್ತಿರುವ ಮಹತ್ವದ ಪ್ರಗತಿಗಳು ಮತ್ತು ಗುಣಮಟ್ಟ, ನಾವೀನ್ಯತೆ ಮತ್ತು ಲಭ್ಯತೆಯ ಮೇಲೆ ಭಾರತದ ಹೆಚ್ಚಿನ ಗಮನ ಹರಿಸುತ್ತಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

ಸ್ವಾತಂತ್ರ್ಯದ ಶತಮಾನೋತ್ಸವ ವರ್ಷವನ್ನು ಆಚರಿಸುವ 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಕನಸನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೊಂದಿದ್ದು, ಆದರ ಸಕಾರಾಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಭಾರತವು ಜಾಗತಿಕ ಆರ್ಥಿಕ ಆಯಾಮದಲ್ಲಿ ಪ್ರಕಾಶಮಾನವಾದ ತಾಣವಾಗಿ ಮುಂದುವರೆದಿದದೆ, ಅಧ್ಯಯನಕ್ಕೆ, ಸಂಶೋಧನೆ ಮಾಡಲು, ನಾವೀನ್ಯತೆ ಕೈಗೊಳ್ಳಲು ಮತ್ತು ಅವುಗಳನ್ನು ಜಾರಿಗೊಳಿಸಲು ಅಪಾರ ಅವಕಾಶಗಳನ್ನು ಒದಗಿಸಿಕೊಡುತ್ತಿದೆ ಎಂದು ಸಚಿವರು ಒತ್ತಿ ಹೇಳಿದರು.

ಭಾರತದ ದೊಡ್ಡ ಶಕ್ತಿ ಅದರ ಸಕ್ರಿಯ ಜ್ಞಾನ ಪೂರಕ ವ್ಯವಸ್ಥೆ, ಜನಸಂಖ್ಯಾ ಲಾಭಾಂಶ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿದೆ ಎಂದು ಸಚಿವರು ಒತ್ತಿ ಹೇಳಿದರು. ಎನ್ ಇಪಿ 2020 ಮತ್ತು ಸ್ಟಡಿ ಇನ್ ಇಂಡಿಯಾ ಉಪಕ್ರಮದ ಮೂಲಕ,  ದೇಶವು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಂಸ್ಥೆಗಳಿಗೆ ಜಾಗತಿಕ ಅವಕಾಶಗಳನ್ನು ವಿಸ್ತರಿಸುತ್ತಿದೆ ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ(ಎಐ), ಜೈವಿಕ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಗಳಿಂದ ಸುಸ್ಥಿರ ಇಂಧನವರೆಗೆ ಭಾರತವು ವಿಶ್ವಾಸಾರ್ಹ ನಾವೀನ್ಯತೆ ಪಾಲುದಾರನಾಗಿ ಹೊರಹೊಮ್ಮುತ್ತಿದೆ, ಸಹಯೋಗ, ಸಾಮರ್ಥ್ಯ ವೃದ್ಧಿ ಮತ್ತು ಹಂಚಿಕೆಯ ಜ್ಞಾನದಲ್ಲಿ ಬೇರೂರಿರುವ ಜಾಗತಿಕ ದಕ್ಷಿಣ ಮಾದರಿಯನ್ನು ಮುನ್ನಡೆಸುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಅನಿಶ್ಚಿತತೆ ಮತ್ತು ಕ್ಷಿಪ್ರ ಬದಲಾವಣೆಯಿಂದ ಗುರುತಿಸಲ್ಪಟ್ಟ ವಿಶ್ವದಲ್ಲಿ ಸಮಾಜಗಳ ನಡುವೆ ಶಿಕ್ಷಣವು ಕಾಯಂ ಸೇತುವೆಯಾಗಿದೆ ಎಂದು ಒತ್ತಿ ಹೇಳಿದ ಅವರು ಪಾಲುದಾರ ರಾಷ್ಟ್ರಗಳೊಂದಿಗೆ ಬಲವಾದ ಜ್ಞಾನ ಸೇತುವೆಗಳನ್ನು ನಿರ್ಮಿಸಲು ಭಾರತ ಪ್ರಯತ್ನಿಸುತ್ತದೆ ಎಂದು ಹೇಳಿದರು. ಭಾರತದ ವೇಗವಾಗಿ ಬೆಳೆಯುತ್ತಿರುವ ನಾವೀನ್ಯತೆ-ಆಧರಿಸಿದ ಬಹುಶಿಸ್ತೀಯ ಮತ್ತು ಪ್ರವೇಶ ಸ್ನೇಹಿ ಶಿಕ್ಷಣ ವ್ಯವಸ್ಥೆಯೊಂದಿಗೆ ಸಹಕರಿಸಲು ಸಚಿವರು ಶ್ರೇಷ್ಠ ಸಂಸ್ಥೆಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಕಾರ್ಯದರ್ಶಿ ಡಾ. ವಿನೀತ್ ಜೋಶಿ, ಕಳೆದ ಆರು ವರ್ಷಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಭಾರತದ ಉನ್ನತ ಶಿಕ್ಷಣ ಸುಧಾರಣೆಗಳಿಗೆ, ವಿಶೇಷವಾಗಿ ಬಹುಶಿಸ್ತೀಯ ಶಿಕ್ಷಣವನ್ನು ಮುನ್ನಡೆಸುವಲ್ಲಿ ಕೌಶಲ್ಯವನ್ನು ಮುಖ್ಯವಾಹಿನಿಯ ಕಲಿಕೆಗೆ ಸಂಯೋಜಿಸುವಲ್ಲಿ ಮತ್ತು ಅಂತಾರಾಷ್ಟ್ರೀಕರಣವನ್ನು ಬಲಪಡಿಸುವಲ್ಲಿ ಸ್ಪಷ್ಟ ದಿಕ್ಸೂಚಿಯನ್ನು ಒದಗಿಸಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಭಾರತೀಯ ಸಂಸ್ಥೆಗಳು ಜಂಟಿ, ಡ್ಯುಯಲ್ ಮತ್ತು ಟ್ವಿನ್ನಿಂಗ್ ಕಾರ್ಯಕ್ರಮಗಳ ಮೂಲಕ ಜಾಗತಿಕ ಒಳಗೊಳ್ಳುವಿಕೆಯನ್ನು ಬಲವರ್ಧನೆಗೊಳಿಸುತ್ತಿವೆ, ಆದರೆ ಪ್ರಮುಖ ವಿಶ್ವವಿದ್ಯಾಲಯಗಳು ತಮ್ಮ ಅಂತಾರಾಷ್ಟ್ರೀಯ ಹೆಜ್ಜೆಗುರುತನ್ನು ವಿಸ್ತರಿಸುತ್ತಿವೆ ಎಂದು ಒತ್ತಿ ಹೇಳಿದರು. ವಿಶ್ವವಿದ್ಯಾಲಯ ಧನಸಹಾಯ ಆಯೋಗವು(ಯುಜಿಸಿ) ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುವ ಪಾರದರ್ಶಕ ಮತ್ತು ಸಮಯೋಚಿತ ನಿಯಂತ್ರಕ ಚೌಕಟ್ಟನ್ನು ಜಾರಿಗೆ ತಂದಿದೆ, ಆಸ್ಟ್ರೇಲಿಯಾ, ಇಟಲಿ, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕಾದಾದ್ಯಂತದ ಪ್ರಮುಖ ಸಂಸ್ಥೆಗಳಿಂದ ಅರ್ಜಿಗಳು ಒಂದು ತಿಂಗಳೊಳಗೆ ಅನುಮೋದನೆ ಪಡೆದಿವೆ ಎಂದು ಅವರು ಹೇಳಿದರು. ಸ್ಟಡಿ ಇನ್ ಇಂಡಿಯಾ ಉಪಕ್ರಮವನ್ನು ಭಾರತದೊಂದಿಗೆ ಪರಸ್ಪರ ಪ್ರಯೋಜನಕಾರಿ ಜಾಗತಿಕ ಶಿಕ್ಷಣ ಪಾಲುದಾರಿಕೆಯನ್ನು ನಿರ್ಮಿಸಲು ಮುಕ್ತ ಆಹ್ವಾನ ಎಂದು ಅವರು ವಿವರಿಸಿದರು.

ಈ ಸಮಾವೇಶವು ಈ ಕೆಳಗಿನ ವಿಷಯಗಳ ಕುರಿತು ಕೇಂದ್ರೀಕೃತ ವಿಷಯಾಧಾರಿತ ಗೋಷ್ಠಿಗಳನ್ನು ಒಳಗೊಂಡಿತ್ತು:

  • ಜಾಗತಿಕ ಶೈಕ್ಷಣಿಕ ಕೊಡುಗೆಯಾಗಿ ಭಾರತೀಯ ಜ್ಞಾನ ವ್ಯವಸ್ಥೆಗಳು
  • SPARC ಮತ್ತು GIAN ಮೂಲಕ ಶೈಕ್ಷಣಿಕ ಪಾಲುದಾರಿಕೆಗಳು
  • ಕೃತಕ ಬುದ್ಧಿಮತ್ತೆ ಮತ್ತು ಸುಧಾರಿತ ತಂತ್ರಜ್ಞಾನಗಳು
  • ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಿಗೆ ಯುಜಿಸಿ ನಿಯಮಗಳು 2023
  • ಅಂತಾರಾಷ್ಟ್ರೀಯ ಶಾಖಾ ಕ್ಯಾಂಪಸ್‌ಗಳು ಮತ್ತು ಸಕ್ರಿಯಗೊಳಿಸುವ ಚೌಕಟ್ಟುಗಳು
  • ಭಾರತದ ಕೌಶಲ್ಯ ವಿನ್ಯಾಸವನ್ನು ಅಂತಾರಾಷ್ಟ್ರೀಕರಣಗೊಳಿಸುವುದು

ಚರ್ಚೆಗಳು ಭಾರತದ ವಿಕಸನಗೊಳ್ಳುತ್ತಿರುವ ಉನ್ನತ ಶಿಕ್ಷಣ ಪರಿಸರ ವ್ಯವಸ್ಥೆಯ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿದವು ಮತ್ತು ವಿದ್ಯಾರ್ಥಿಗಳ ಪಯಣ, ಜಂಟಿ ಕಾರ್ಯಕ್ರಮಗಳು, ಸಂಶೋಧನಾ ಪಾಲುದಾರಿಕೆಗಳು ಮತ್ತು ಕ್ಯಾಂಪಸ್‌ಗಳ ಸ್ಥಾಪನೆ ಸೇರಿದಂತೆ ಸಹಯೋಗಕ್ಕಾಗಿ ಸಮಗ್ರ ಮಾರ್ಗಗಳನ್ನು ಪ್ರಸ್ತುತಪಡಿಸಿದವು.

ಸ್ಟಡಿ ಇನ್ ಇಂಡಿಯಾ ಶೈಕ್ಷಣಿಕ-ರಾಜತಾಂತ್ರಿಕ ಸಮಾವೇಶ-2026 ಪಾಲುದಾರ ರಾಷ್ಟ್ರಗಳ ವಿದ್ಯಾರ್ಥಿಗಳನ್ನು ಭಾರತದಲ್ಲಿ ಉನ್ನತ ಶಿಕ್ಷಣ ಮತ್ತು ಅಲ್ಪಾವಧಿಯ ಕಾರ್ಯಕ್ರಮಗಳನ್ನು ಮುಂದುವರಿಸಲು ಆಹ್ವಾನಿಸುವ ಮೂಲಕ, ಸಾಂಸ್ಥಿಕ ಸಹಯೋಗಗಳನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ಜಾಗತಿಕವಾಗಿ ಶ್ರೇಯಾಂಕಿತ ವಿಶ್ವವಿದ್ಯಾಲಯಗಳನ್ನು ಭಾರತದಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಆಹ್ವಾನಿಸುವ ಮೂಲಕ ಭಾರತದ ಶಿಕ್ಷಣದಲ್ಲಿ ರಾಜತಾಂತ್ರಿಕ ಒಳಗೊಳ್ಳುವಿಕೆಯನ್ನು ಬಲಪಡಿಸಲು ನಿರ್ದಿಷ್ಟ ವೇದಿಕೆಯನ್ನು ಒದಗಿಸಿತು.

 

*****


(ಪ್ರಕಟಣೆ ಐ.ಡಿ.: 2234539) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Tamil , Telugu , Malayalam