ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ರಾಷ್ಟ್ರಪತಿಗಳಿಂದ ಜೈಸಲ್ಮೇರ್ ವಾಯುಪಡೆ ನಿಲ್ದಾಣದಲ್ಲಿ ಸ್ವದೇಶಿ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂಡ್ ನಲ್ಲಿ ಹಾರಾಟ
ಪ್ರಚಂಡ್ ನಲ್ಲಿನ ಹಾರಾಟವು ದೇಶದ ರಕ್ಷಣಾ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ನವ ಹೆಮ್ಮೆಯ ಭಾವ ಮೂಡಿಸಿದೆ : ರಾಷ್ಟ್ರಪತಿ ದ್ರೌಪದಿ ಮುರ್ಮು
ಪ್ರಕಟಣಾ ದಿನಾಂಕ:
27 FEB 2026 12:39PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಜಸ್ಥಾನದ ಜೈಸಲ್ಮೇರ್ ವಾಯುಪಡೆ ನಿಲ್ದಾಣದಲ್ಲಿ ದೇಶಿಯವಾಗಿ ನಿರ್ಮಿಸಲಾಗಿರುವ ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂಡ್ ನಲ್ಲಿ ಇಂದು (ಫೆಬ್ರವರಿ 27, 2026) ಹಾರಾಟ ನಡೆಸಿದರು. ಇದಕ್ಕೂ ಮುನ್ನ ಅವರು, 2023 ರ ಸುಖೋಯ್ 30 ಎಂಕೆಐ ಮತ್ತು 2025ರ ರಫೇಲ್ ವಿಮಾನದಲ್ಲಿ ಹಾರಾಟ ನಡೆಸಿದರು.

ಈ ಕಾರ್ಯಾಚರಣೆಯನ್ನು ಎರಡು ಲಘು ಯುದ್ಧ ಹೆಲಿಕಾಫ್ಟರ್ (ಎಲ್ ಸಿ ಎಚ್) ರಚನೆಯಾಗಿ ಕೈಗೊಳ್ಳಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗ್ರೂಪ್ ಕ್ಯಾಪ್ಟನ್ ನಯನ್ ಶಾಂತಿಲಾಲ್ ಬಹುವಾ ಅವರೊಂದಿಗೆ ಮೊದಲ ವಿಮಾನದಲ್ಲಿ ಹಾರಾಟ ನಡೆಸಿದರೆ, ವಾಯುಪಡೆಯ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್ ಮತ್ತು ಗ್ರೂಪ್ ಕ್ಯಾಪ್ಟನ್ ಎ ಮಹೇಂದ್ರ ಎರಡನೇ ವಿಮಾನದಲ್ಲಿ ಹಾರಾಟ ಕೈಗೊಂಡರು. ಸುಮಾರು 25 ನಿಮಿಷಗಳ ಹಾರಾಟದಲ್ಲಿ, ಅವರು ಗಡಿಸರ್ ಸರೋವರ ಮತ್ತು ಜೈಸಲ್ಮೇರ್ ಕೋಟೆಯ ಮೇಲೆ ಹಾರಿದರು ಮತ್ತು ಟ್ಯಾಂಕ್ ಗುರಿಯ ಮೇಲೆ ದಾಳಿ ಮಾಡಿದರು.

ನಂತರ ಸಂದರ್ಶಕರ ಪುಸ್ತಕದಲ್ಲಿ, ರಾಷ್ಟ್ರಪತಿಗಳು ಕಿರು ಟಿಪ್ಪಣಿ ಮೂಲಕ ತಮ್ಮ ಭಾವನೆಗಳನ್ನು ಹೀಗೆ ವ್ಯಕ್ತಪಡಿಸಿದ್ದಾರೆ: "ಭಾರತದ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಲಘು ಯುದ್ಧ ಹೆಲಿಕಾಪ್ಟರ್ 'ಪ್ರಚಂಡ್' ನಲ್ಲಿ ಹಾರಾಟ ನಡೆಸಿದುದು ನನಗೆ ವಿಶಿಷ್ಟ ಅನುಭವ ನೀಡಿದೆ. ಈ ಹಾರಾಟವು ರಾಷ್ಟ್ರದ ರಕ್ಷಣಾ ಸಾಮರ್ಥ್ಯಗಳ ಬಗ್ಗೆ ನನ್ನಲ್ಲಿ ಹೊಸ ಹೆಮ್ಮೆಯ ಭಾವನೆಯನ್ನು ತುಂಬಿದೆ. ಈ ಹಾರಾಟವನ್ನು ಯಶಸ್ವಿಯಾಗಿ ಆಯೋಜಿಸಿದ ಭಾರತೀಯ ವಾಯುಪಡೆ ಮತ್ತು ಜೈಸಲ್ಮೇರ್ ವಾಯುಪಡೆ ನಿಲ್ದಾಣದ ಇಡೀ ತಂಡಕ್ಕೆ ಅಭಿನಂದನೆಗಳು.”

ಸಂಜೆ, ರಾಷ್ಟ್ರಪತಿಗಳು ಜೈಸಲ್ಮೇರ್ ನಲ್ಲಿ ಭಾರತೀಯ ವಾಯುಪಡೆಯ ಸಮಾರಾಭ್ಯಾಸ ‘ವಾಯುಶಕ್ತಿ’ ವೀಕ್ಷಿಸಲಿದ್ದಾರೆ.

*****
(ಪ್ರಕಟಣೆ ಐ.ಡಿ.: 2233514)
ವಿಸಿಟರ್ ಕೌಂಟರ್ : 6