ಆಯುಷ್
ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದಿಂದ ಕರ್ನಾಟಕದಲ್ಲಿ ಕಾಯಚಿಕಿತ್ಸೆಯ ಕುರಿತು ಎರಡು ದಿನಗಳ ರಾಷ್ಟ್ರೀಯ ತರಬೇತಿ ಕಾರ್ಯಕ್ರಮ ಆಯೋಜನೆ
ಶೈಕ್ಷಣಿಕ ಗೋಷ್ಠಿಗಳಲ್ಲಿ ಉಪನ್ಯಾಸ ನೀಡಿದ ಪ್ರಖ್ಯಾತರು ಮತ್ತು ಶಿಕ್ಷಣ ತಜ್ಞರು
ಪ್ರಕಟಣಾ ದಿನಾಂಕ:
26 FEB 2026 2:02PM by PIB Bengaluru
ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ (ಆರ್ ಎ ವಿ) 2026ರ ಫೆಬ್ರವರಿ 23 ಮತ್ತು 24 ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮತ್ತು ಆಸ್ಪತ್ರೆಯಲ್ಲಿ ಕಾಯಚಿಕಿತ್ಸೆಯ ಕುರಿತು ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.
ಉದ್ಘಾಟನಾ ಸಮಾರಂಭದಲ್ಲಿ ಆರ್ ಎ ವಿ ನಿರ್ದೇಶಕಿ ಡಾ. ವಂದನಾ ಸಿರೋಹ; ಉಜಿರೆಯ ಎಸ್ ಡಿ ಎಂ ಶೈಕ್ಷಣಿಕ ಸೊಸೈಟಿಯ ಎಸ್ ಡಿ ಎಂ ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಪ್ರೊ. ಪ್ರಸನ್ನ ನರಸಿಂಹ ರಾವ್; ಹಾಸನದ ಎಸ್ ಡಿ ಎಂ ಆಯುರ್ವೇದ ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಶೈಲಜಾ ಉಪ್ಪಿನಕುದೂರು ಮತ್ತು ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಕಾಯಚಿಕಿತ್ಸೆಯ ವಿಭಾಗದ ಮಾಜಿ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರು ಮತ್ತು ಬೆಂಗಳೂರಿನ ಶ್ರೀ ಶ್ರೀ ಆಯುರ್ವೇದ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಡಾ. ಬಿ. ಜಿ. ಗೋಪಿನಾಥ್ ಸೇರಿದಂತೆ ಹಲವು ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸ ವಿಭಾಗದ ಮುಖ್ಯಸ್ಥ ಡಾ. ತೋಟದ್ ಮುತ್ತಪ್ಪ; ಮೈಸೂರಿನ ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಕಾಯಚಿಕಿತ್ಸದ ಪ್ರಾಧ್ಯಾಪಕಿ ಡಾ. ವೀಣಾ ಜಿ. ರಾವ್; ಮತ್ತು ಮಗನ್‌ಭಾಯ್ ಅಡೆನ್‌ವಾಲಾ ಮಹಾಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದ ಕುಲಪತಿ ವಿ.ಡಿ.ಎಸ್.ಎನ್. ಗುಪ್ತಾ ಸೇರಿದಂತೆ ಕ್ಷೇತ್ರದ ಪ್ರಖ್ಯಾತ ತಜ್ಞರು ಶೈಕ್ಷಣಿಕ ಗೋಷ್ಠಿಗಳನ್ನು ಉಪನ್ಯಾಸಗಳನ್ನು ನೀಡಿದರು.
ಕಾಯಾಚಿಕಿತ್ಸ ವಲಯದಲ್ಲಿ ಆಯುರ್ವೇದ ವೈದ್ಯರ ವೈದ್ಯಕೀಯ ಜ್ಞಾನವನ್ನು ಬಲಪಡಿಸುವುದು ಮತ್ತು ಶೈಕ್ಷಣಿಕ ಮತ್ತು ಪ್ರಾಯೋಗಿಕ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಆಯುರ್ವೇದ ಆಂತರಿಕ ಔಷಧದಲ್ಲಿನ ಸಮಕಾಲೀನ ಕ್ಲಿನಿಕಲ್ ಅಪ್ಲಿಕೇಷನ್ ಗಳು ಮತ್ತು ಈ ವಲಯದಲ್ಲಿ ಆಗಿರುವ ಪ್ರಗತಿಗಳ ಮೇಲೆ ಕೇಂದ್ರೀಕರಿಸುವ ಸಂವಾದಾತ್ಮಕ ಚರ್ಚೆಗಳು ಮತ್ತು ತಜ್ಞರ ನೇತೃತ್ವದ ಗೋಷ್ಠಿಗಳಲ್ಲಿ ತೊಡಗಿಸಿಕೊಂಡಿದ್ದರು.




*****
(ಪ್ರಕಟಣೆ ಐ.ಡಿ.: 2233050)
ವಿಸಿಟರ್ ಕೌಂಟರ್ : 10