ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕೃತಕ ಬುದ್ಧಿಮತ್ತೆಯೊಂದಿಗೆ ಭಾರತವು ಅಸಾಧಾರಣ ಮುನ್ನಡೆ ಸಾಧಿಸಲು ಅವಕಾಶವನ್ನು ಹೊಂದಿದೆ: ಸುಂದರ್ ಪಿಚೈ
ನಾವು ಅಗಾಧ ಪ್ರಗತಿ ಮತ್ತು ಹೊಸ ಆವಿಷ್ಕಾರಗಳ ಹೊಸ್ತಿಲಲ್ಲಿದ್ದೇವೆ: ಸುಂದರ್ ಪಿಚೈ
`ಭಾರತ-ಯುಎಸ್ ಕನೆಕ್ಟ್’ ಉಪಕ್ರಮವು ಎರಡೂ ದೇಶಗಳ ನಡುವಿನ ಜಲಾಂತರ್ಗಾಮಿ ಕೇಬಲ್ ಮೂಲಕ ಜಾಗತಿಕ ಸಂಪರ್ಕವನ್ನು ವಿಸ್ತರಿಸಲು ಅಕ್ಷರಶಃ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ
ಪ್ರಕಟಣಾ ದಿನಾಂಕ:
20 FEB 2026 8:35PM by PIB Bengaluru
ಎಐ ಇಂಪ್ಯಾಕ್ಟ್ ಶೃಂಗಸಭೆ 2026ನ್ನು ಉದ್ದೇಶಿಸಿ ಮಾತನಾಡುತ್ತಾ, ಗೂಗಲ್ ನ ಸಿಇಒ ಸುಂದರ್ ಪಿಚೈ, ಕೃತಕ ಬುದ್ಧಿಮತ್ತೆಯನ್ನು ದಶಕದ ನಿರ್ಣಾಯಕ ಶಕ್ತಿ ಎಂದು ಬಣ್ಣಿಸಿದರು ಮತ್ತು ಅದರ ಪ್ರಯೋಜನಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಜಾಗತಿಕ ಸಹಯೋಗದ ಮಹತ್ವವನ್ನು ಒತ್ತಿ ಹೇಳಿದರು.
"ನಾವು ಅಗಾಧ ಪ್ರಗತಿ ಮತ್ತು ಹೊಸ ಆವಿಷ್ಕಾರಗಳ ಹೊಸ್ತಿಲಲ್ಲಿದ್ದೇವೆ, ಆದರೆ ಉತ್ತಮ ಫಲಿತಾಂಶಗಳನ್ನು ಖಾತರಿಪಡಿಸಲಾಗಿಲ್ಲ. ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು ಎಲ್ಲರಿಗೂ ಮತ್ತು ಎಲ್ಲೆಡೆ ಲಭ್ಯವಾಗುವಂತೆ ನೋಡಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡಬೇಕು" ಎಂದು ಅವರು ಹೇಳಿ ತ್ವರಿತ ನಾವೀನ್ಯತೆಯ ಜೊತೆಗಿನ ಜವಾಬ್ದಾರಿಯನ್ನು ಉಲ್ಲೇಖಿಸಿದರು.

ದ್ವಿಪಕ್ಷೀಯ ಸಹಕಾರದ ಕಾರ್ಯತಂತ್ರದ ಮಹತ್ವವನ್ನು ಒತ್ತಿ ಹೇಳುತ್ತಾ, ಪಿಚೈ, "ಯುಎಸ್ ಇಂಡಿಯಾ ಪಾಲುದಾರಿಕೆಯು ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ." ಎಂದರು. ಭಾರತದ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಅವರು, " ಕೃತಕ ಬುದ್ಧಿಮತ್ತೆಯೊಂದಿಗೆ ಭಾರತವು ಅಸಾಧಾರಣ ಮುನ್ನಡೆ ಸಾಧಿಸಲು ಅವಕಾಶವನ್ನು ಹೊಂದಿದೆ ಎಂದು ನಾನು ನಂಬುತ್ತೇನೆ ಮತ್ತು ಉತ್ಪನ್ನಗಳು, ಪ್ರಮಾಣ ಮತ್ತು ಮೂಲಸೌಕರ್ಯ ಸೇರಿದಂತೆ ಪೂರ್ಣ ಪ್ರಮಾಣದ ಬದ್ಧತೆಯೊಂದಿಗೆ ನಾವು ಅದನ್ನು ಬೆಂಬಲಿಸುತ್ತಿದ್ದೇವೆ" ಎಂದು ಹೇಳಿದರು.
ಅವರು ಮೂರು ಪ್ರಮುಖ ಸ್ತಂಭಗಳಾದ ಉತ್ಪನ್ನಗಳು, ಕೌಶಲ್ಯ ಮತ್ತು ಮೂಲಸೌಕರ್ಯಗಳಲ್ಲಿ ಗೂಗಲ್ ನ ಪ್ರಯತ್ನಗಳನ್ನು ವಿವರಿಸಿದರು. ನೈಜ-ಪ್ರಪಂಚಕ್ಕೆ ಬೇಕಾಗುವ ಪರಿಕರಗಳಾದ, "ರೈತರಿಗೆ ಸಕಾಲಿಕ ಮಾನ್ಸೂನ್ ಮುನ್ಸೂಚನೆಗಳನ್ನು ತಲುಪಿಸುವುದು" ಎನ್ನುವುದರಿಂದ ಹಿಡಿದು ಆರೋಗ್ಯ ಕಾರ್ಯಕರ್ತರಿಗೆ ಮಧುಮೇಹ ರೆಟಿನೋಪತಿಯಂತಹ ರೋಗಗಳನ್ನು ಪರೀಕ್ಷಿಸಲು" ಸಹಾಯ ಮಾಡುವವರೆಗೆ, ಭಾರತೀಯ ಭಾಷೆಗಳಲ್ಲಿ ಎಐ ಪರಿಕರಗಳ ಲಭ್ಯತೆಯನ್ನು ಹೆಚ್ಚಿಸುವವರೆಗಿನ ಉಪಕ್ರಮಗಳನ್ನು ಅವರು ಸೂಚಿಸಿದರು.
ಕೌಶಲ್ಯ ಅಭಿವೃದ್ಧಿಯ ಕುರಿತು ಅವರು, "ಎಐ ಕೌಶಲ್ಯ ಸದನದ ಮೂಲಕ, ನಾವು 10 ದಶಲಕ್ಷ ಭವಿಷ್ಯದ ಭಾರತೀಯ ನಾಯಕರಿಗೆ ಜಾಗತಿಕ ಪ್ರಗತಿಗೆ ಅಗತ್ಯವಿರುವ ಸಾಧನಗಳನ್ನು ಒದಗಿಸುತ್ತಿದ್ದೇವೆ" ಎಂದು ಘೋಷಿಸಿದರು. ಮೂಲಸೌಕರ್ಯದ ಕುರಿತು ಪಿಚೈ, ವಿಶಾಖಪಟ್ಟಣದಲ್ಲಿ ಸ್ಥಾಪಿಸಲಾಗುತ್ತಿರುವ ಎಐ ಹಬ್ ಸೇರಿದಂತೆ ಭಾರತದಲ್ಲಿ ಗೂಗಲ್ ನ $15 ಶತಕೋಟಿ ಹೂಡಿಕೆಯನ್ನು ಉಲ್ಲೇಖಿಸಿದರು. ಪೂರ್ಣಗೊಂಡ ನಂತರ, ಈ ಹಬ್ ಗಿಗಾವ್ಯಾಟ್-ಪ್ರಮಾಣದ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಹೊಂದಿದೆ ಮತ್ತು ದೇಶಾದ್ಯಂತ ವ್ಯವಹಾರಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುತ್ತದೆ.
ಪಿಚೈ ʻಭಾರತ-ಅಮೆರಿಕಾ ಕನೆಕ್ಟ್ ʼ ಉಪಕ್ರಮದ ಬಗ್ಗೆ ಅವರು ಗಮನ ಸೆಳೆದರು, ಇದು ಎರಡೂ ರಾಷ್ಟ್ರಗಳ ನಡುವೆ ಸಮುದ್ರದೊಳಗಿನ ಕೇಬಲ್ ಮಾರ್ಗಗಳನ್ನು ವಿಸ್ತರಿಸುತ್ತದೆ ಮತ್ತು "ನಮ್ಮ ಎರಡು ದೇಶಗಳ ನಡುವೆ ಅಕ್ಷರಶಃ ಸೇತುವೆ"ಯಾಗಿ ಕಾರ್ಯನಿರ್ವಹಿಸುತ್ತದೆ. ಚೇತರಿಕೆಯ ಅಗತ್ಯವನ್ನು ಒತ್ತಿ ಹೇಳಿದ ಅವರು, "ಹಂಚಿಕೆಯ ನಂಬಿಕೆಯ ಅಡಿಪಾಯದ ಮೇಲೆ ನಿರ್ಮಿಸಲಾದ ಸ್ಥಿರ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳಿಲ್ಲದೆ ಇದು ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳಿದರು.
ಭಾರತದ ಎಐ ಭವಿಷ್ಯವು ತಾಂತ್ರಿಕ ಪ್ರಗತಿಯಿಂದ ಮಾತ್ರವಲ್ಲದೆ, ವಿಶ್ವಾಸಾರ್ಹ ಪಾಲುದಾರಿಕೆಗಳು, ದೊಡ್ಡ ಪ್ರಮಾಣದ ಪರಿಣಿತಿ ಕೌಶಲ್ಯ ಮತ್ತು ಬಲವಾದ ಯುಎಸ್-ಭಾರತ ಸಹಯೋಗದಲ್ಲಿ ನೆಲೆಗೊಂಡಿರುವ ನಿರಂತರ ಮೂಲಸೌಕರ್ಯ ಹೂಡಿಕೆಯಿಂದ ರೂಪುಗೊಳ್ಳುತ್ತದೆ ಎನ್ನುವ ಸ್ಪಷ್ಟ ಸಂದೇಶವನ್ನು ಅವರ ಭಾಷಣವು ದೃಢಪಡಿಸಿತು.
*****
(ಪ್ರಕಟಣೆ ಐ.ಡಿ.: 2231124)
ವಿಸಿಟರ್ ಕೌಂಟರ್ : 2