ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜ್ಞಾನ ಹಂಚಿಕೆಯ ಶಾಶ್ವತ ಸಂಪೂರ್ಣತೆ ಬಗ್ಗೆ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 20 FEB 2026 9:29AM by PIB Bengaluru

ಅನಂತವಾದ ಜ್ಞಾನವನ್ನು ಬೇರೆಯವರೊಂದಿಗೆ ಹಂಚಿಕೊಂಡರೂ ಅಥವಾ ಅದನ್ನು ವಿಸ್ತರಿಸಿಕೊಂಡರೂ ಅದರ ಪೂರ್ಣತೆ ಕಡಿಮೆಯಾಗುವುದಿಲ್ಲ ಎಂಬ ವಿಚಾರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಕೃತ ಶ್ಲೋಕ ಮೂಲಕ ಪ್ರತಿಬಿಂಬಿಸಿದ್ದಾರೆ. 

ಈಗಿರುವ ಜ್ಞಾನದಿಂದ ಕಲಿಯುವುದು ಮತ್ತು ಅದರಿಂದ ಹೊಸ ಫಲಿತಾಂಶಗಳನ್ನು ಸೃಷ್ಟಿಸುವುದು ಅಂತ್ಯವಿಲ್ಲದ ಹೊಸ ಸಾಧ್ಯತೆಗಳು ಮತ್ತು ನವೀನತೆಗಳನ್ನು ಉಂಟುಮಾಡುತ್ತದೆ, ಆದರೆ ಮೂಲ ಬುದ್ಧಿಮತ್ತೆ ಹಾಗೆ ಉಳಿಯುತ್ತದೆ ಎಂದು ಹೇಳಿದ್ದಾರೆ. 

ಈಶಾವಾಸ್ಯೋಪನಿಷತ್ ನ ಶ್ಲೋಕವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಗಳು, ಶಾಶ್ವತ ಜ್ಞಾನದ ಬಗ್ಗೆ ತಮ್ಮ ಎಕ್ಸ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿವರಣೆ ನೀಡಿದ್ದಾರೆ.

“पूर्णमदः पूर्णमिदं पूर्णात् पूर्णमुदच्यते।

पूर्णस्य पूर्णमादाय पूर्णमेवावशिष्यते॥”

 

*****


(रिलीज़ आईडी: 2230578) आगंतुक पटल : 43
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam