ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026 ರ ಸಂದರ್ಭದಲ್ಲಿ ಜಾಗತಿಕ ತಂತ್ರಜ್ಞಾನದ ನಾಯಕರು ಪ್ರಜಾಸತ್ತಾತ್ಮಕ, ಅಂತರ್ಗತ ಮಾಹಿತಿ ತಂತ್ರಜ್ಞಾನದ ಭವಿಷ್ಯವನ್ನು ರೂಪಿಸಲಿದ್ದಾರೆ
ಮಾಹಿತಿ ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣವು ಮುಂದಿನ ಏಕೈಕ ನ್ಯಾಯಯುತ ಮತ್ತು ಸುರಕ್ಷಿತ ಮಾರ್ಗವಾಗಿದೆ: ಸ್ಯಾಮ್ ಆಲ್ಟ್ ಮನ್, ಸಿಇಒ, OpenAI
ಮೂಲಸೌಕರ್ಯ, ಕೌಶಲ್ಯ ಮತ್ತು ಭಾಷಾ ವೈವಿಧ್ಯತೆಯು AI ಜಾಗತಿಕ ದಕ್ಷಿಣಕ್ಕೆ ಸೇವೆ ಸಲ್ಲಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳವುದು ಅತ್ಯಗತ್ಯವಾಗಿದೆ: ಬ್ರಾಡ್ ಸ್ಮಿತ್, ಉಪಾಧ್ಯಕ್ಷ ಮತ್ತು ಅಧ್ಯಕ್ಷ, ಮೈಕ್ರೋಸಾಫ್ಟ್
ಐತಿಹಾಸಿಕವಾಗಿ ಹಿಂದುಳಿದಿರುವ ಸಮುದಾಯಗಳಲ್ಲಿ ಜೀವನವನ್ನು ಸ್ಪಷ್ಟವಾಗಿ ಸುಧಾರಿಸುವುದೇ AI ನ ನಿಜವಾದ ಸಾರ್ಥಕತೆಯಾಗಿದೆ: ಅಂಕುರ್ ವೋರಾ, ಆಫ್ರಿಕಾ ಮತ್ತು ಭಾರತದ ಕಛೇರಿಗಳು, ಗೇಟ್ಸ್ ಫೌಂಡೇಶನ್
ಜಾಗತಿಕ ಸಮೃದ್ಧಿ ಹಾಗೂ ಬೆಳವಣಿಗೆಗೆ AI ಅನ್ನು ಎಂಜಿನ್ ಆಗಿ ಬಳಸುವುದೇ ಏಕೈಕ ಮಾರ್ಗವಾಗಿದೆ: ಜೂಲಿ ಸ್ವೀಟ್, ಅಧ್ಯಕ್ಷ ಮತ್ತು ಸಿಇಒ, ಆಕ್ಸೆಂಚರ್
ಪ್ರಕಟಣಾ ದಿನಾಂಕ:
19 FEB 2026 7:13PM by PIB Bengaluru
ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026 ರ ಭಾಗವಾಗಿ, OpenAI ನ ಸಿಇಒ ಆದ ಸ್ಯಾಮ್ ಆಲ್ಟ್ ಮನ್; ಮೈಕ್ರೋಸಾಫ್ಟ್ ನ ಉಪಾಧ್ಯಕ್ಷ ಮತ್ತು ಅಧ್ಯಕ್ಷರಾದ ಬ್ರಾಡ್ ಸ್ಮಿತ್; ಗೇಟ್ಸ್ ಫೌಂಡೇಶನ್‌ನ ಆಫ್ರಿಕಾ ಮತ್ತು ಭಾರತದ ಕಛೇರಿಗಳ ಅಧ್ಯಕ್ಷರಾದ ಅಂಕುರ್ ವೋರಾ; ಮತ್ತು ಆಕ್ಸೆಂಚರ್‌ನ ಅಧ್ಯಕ್ಷರಾದ ಮತ್ತು ಸಿಇಒ ಆದ ಜೂಲಿ ಸ್ವೀಟ್ ಅವರು ಪ್ರಮುಖ ಭಾಷಣಗಳನ್ನು ಮಾಡಿದರು. ಪ್ರಜಾಪ್ರಭುತ್ವೀಕರಣ, ಸೇರ್ಪಡೆ, ಜಾಗತಿಕ ಮಾನದಂಡಗಳು ಮತ್ತು ಮಾನವ ನೇತೃತ್ವದ ಪುನರ್ನಿರ್ಮಾಣವನ್ನು ಒತ್ತಿಹೇಳುತ್ತಾ ಕೃತಕ ಬುದ್ಧಿಮತ್ತೆಯ ಪರಿವರ್ತನಾ ಸಾಮರ್ಥ್ಯವನ್ನು ಅವರು ಒತ್ತಿ ಹಿಡಿದರು. ಇಂದು ಇಂಡಿಯಾ AI ಶೃಂಗಸಭೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಈ ಶೃಂಗಸಭೆಯಲ್ಲಿ ಅವರು ಸೇರ್ಪಡೆ ಮತ್ತು ಸಬಲೀಕರಣಕ್ಕಾಗಿ, ವಿಶೇಷವಾಗಿ ಜಾಗತಿಕ ದಕ್ಷಿಣಕ್ಕೆ ಮಾಹಿತಿ ತಂತ್ರಜ್ಞಾನವು ಒಂದು ಸಾಧನವಾಗಬೇಕು ಎಂಬುದನ್ನು ಹೇಳಿದರು.

OpenAI ನ ಸಿಇಒ ಆದ ಸ್ಯಾಮ್ ಆಲ್ಟ್ ಮನ್, ತಾಂತ್ರಿಕ ಪ್ರಗತಿಯ ಅಸಾಧಾರಣ ವೇಗ ಮತ್ತು ಅದರ ಪಥವನ್ನು ರೂಪಿಸುವಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತಾ, "ನಾವು ಪ್ರಸ್ತುತದಲ್ಲಿ, ನಿಜವಾದ ಸೂಪರ್ ಬುದ್ಧಿಮತ್ತೆಯ ಆರಂಭಿಕ ದಿನಗಳಿಂದ ನಾವು ಕೇವಲ ಒಂದೆರಡು ವರ್ಷಗಳ ಅಂತರದಲ್ಲಿರಬಹುದು. ಅದು ಸರಿಯೆಂದರೆ, 2028 ರ ಅಂತ್ಯದ ವೇಳೆಗೆ, ವಿಶ್ವದ ಬೌದ್ಧಿಕ ಸಾಮರ್ಥ್ಯದ ಹೆಚ್ಚಿನ ಭಾಗವು ಡೇಟಾ ಕೇಂದ್ರಗಳ ಹೊರಗಿರುವುದಕ್ಕಿಂತ ಅಂತರ್ಗತವಾಗಲಿದೆ" ಎಂದು ಅವರು ಹೇಳಿದರು. ಮುಕ್ತತೆ ಮತ್ತು ಸಾಮಾಜಿಕ ಸ್ಥಿತಿಸ್ಥಾಪಕತ್ವದ ಮಹತ್ವವನ್ನು ಒತ್ತಿ ಹೇಳಿದ ಅವರು, "AI ನ ಪ್ರಜಾಪ್ರಭುತ್ವೀಕರಣವು ಮುಂದಿನ ಏಕೈಕ ನ್ಯಾಯಯುತ ಮತ್ತು ಸುರಕ್ಷಿತ ಮಾರ್ಗವಾಗಿದೆ. AI ನ ಪ್ರಜಾಪ್ರಭುತ್ವೀಕರಣವು ಮಾನವೀಯತೆಯನ್ನು ಪ್ರವರ್ಧಮಾನಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ" ಎಂದು ಹೇಳಿದರು.

ಜಾಗತಿಕ ತಂತ್ರಜ್ಞಾನದ ಅಂತರವನ್ನು ಪರಿಹರಿಸುವಲ್ಲಿ AI ಅನ್ನು ನಿರ್ಣಾಯಕ ಶಕ್ತಿಯಾಗಿ ಮೈಕ್ರೋಸಾಫ್ಟ್ ನ ಉಪಾಧ್ಯಕ್ಷ ಮತ್ತು ಅಧ್ಯಕ್ಷ ಬ್ರಾಡ್ ಸ್ಮಿತ್ ರೂಪಿಸಿದರು, "ಈ ಶತಮಾನದ ಯಾವುದೇ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ AI, ಈ ಆರ್ಥಿಕ ಅಂತರವನ್ನು ತಗ್ಗಿಸುವಲ್ಲಿ ಅಥವಾ ಉಲ್ಬಣಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅದನ್ನು ನಾವು ಹೇಗೆ ಉತ್ತಮ ಪಡಿಸಬಹುದು ಎಂಬುದು ನಮ್ಮ ಇಂದಿನ ಪ್ರಸ್ತುತ ಏಕೈಕ ಪ್ರಮುಖ ಪ್ರಶ್ನೆಯಾಗಿದೆ." AI ಜಾಗತಿಕ ದಕ್ಷಿಣಕ್ಕೆ ಸೇವೆ ಸಲ್ಲಿಸುವುದನ್ನು ಮತ್ತು ವಿಶಾಲಾಧಾರಿತ ಸಮೃದ್ಧಿಯನ್ನು ಹೊಂದಲು ಮೂಲಸೌಕರ್ಯ, ಕೌಶಲ್ಯ ಮತ್ತು ಭಾಷಾ ವೈವಿಧ್ಯತೆ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

ಗೇಟ್ಸ್ ಫೌಂಡೇಶನ್‌ನ ಆಫ್ರಿಕಾ ಮತ್ತು ಭಾರತದ ಕಛೇರಿಗಳ ಅಧ್ಯಕ್ಷರಾದ ಅಂಕುರ್ ವೋರಾ ಅವರು ಆರೋಗ್ಯ, ಶಿಕ್ಷಣ ಮತ್ತು ಕೃಷಿ ಫಲಿತಾಂಶಗಳನ್ನು ತೀವ್ರಗೊಳಿಸಲು AI ನ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಿ, "AI ಜಗತ್ತು ಎಲ್ಲರಿಗೂ ಅಭಿವೃದ್ದಿ ಹೊಂದಲು ಸಹಾಯ ಮಾಡುತ್ತದೆ ಎಂದು ಅನೇಕ ಜನರು ಊಹಿಸುತ್ತಾರೆ. ಇತರರು ಇದು ಸವಲತ್ತು ಪಡೆದ ಕೆಲವರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ ಎಂದು ಊಹಿಸುತ್ತಾರೆ. ಆದರೆ ವಾಸ್ತವವೆಂದರೆ, ಇದು ಮುನ್ಸೂಚನೆಯ ವಿಷಯವದೆ ಒಂದು ಆಯ್ಕೆಯಾಗಿದೆ." ಹೊಸ ಲೋಕೋಪಕಾರಿ ಉಪಕ್ರಮಗಳನ್ನು ಘೋಷಿಸಿದ ಅವರು, AI ನ ನಿಜವಾದ ಅಳತೆಯು ಐತಿಹಾಸಿಕವಾಗಿ ಹಿಂದುಳಿದ ಸಮುದಾಯಗಳಲ್ಲಿ ಜೀವನವನ್ನು ಸ್ಪಷ್ಟವಾಗಿ ಸುಧಾರಿಸುತ್ತದೆಯೇ ಎಂಬುದು ಎಂದು ಒತ್ತಿ ಹೇಳಿದರು.

"AI ಅನ್ನು ಬೆಳವಣಿಗೆಗೆ ಎಂಜಿನ್ ಆಗಿ ಬಳಸುವುದೇ ಎಲ್ಲರ ಜಾಗತಿಕ ಸಮೃದ್ಧಿಗೆ ಏಕೈಕ ಮಾರ್ಗವಾಗಿದೆ" ಎಂದು ಹೇಳುತ್ತಾ, ಆಕ್ಸೆಂಚರ್‌ನ ಅಧ್ಯಕ್ಷೆ ಮತ್ತು ಸಿಇಒ ಜೂಲಿ ಸ್ವೀಟ್ ಅವರು ಕಂಪನಿಗಳು, ಸರ್ಕಾರಗಳು ಮತ್ತು ವ್ಯಕ್ತಿಗಳಲ್ಲಿ ಪುನರ್ವಿಮರ್ಶೆಗೆ ಕರೆ ನೀಡಿದರು. ಸುಸ್ಥಿರ ಪ್ರಗತಿಗೆ ನಾಯಕತ್ವ, ಜಾಗತಿಕ ಮಾನದಂಡಗಳು, ಕಾರ್ಯಪಡೆಯ ಪರಿವರ್ತನೆ ಮತ್ತು ಜನರನ್ನು ದೃಢವಾಗಿ ಮುನ್ನಡೆಸುವಾಗ, AI ಬೆಳವಣಿಗೆಯನ್ನು ನಡೆಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಬದ್ಧತೆಯ ಅಗತ್ಯವಿರುತ್ತದೆ ಎಂದು ಅವರು ಒತ್ತಿ ಹೇಳಿದರು.
ಒಟ್ಟಾರೆಯಾಗಿ, ನಾಲ್ಕು ಪ್ರಮುಖ ಭಾಷಣಗಳು AI ವ್ಯಾಖ್ಯಾನವನ್ನು ಸೆರೆಹಿಡಿದಿವೆ: ಜವಾಬ್ದಾರಿ, ಸೇರ್ಪಡೆ ಮತ್ತು ಜಾಗತಿಕ ಸಹಕಾರದ ತುರ್ತು ಅಗತ್ಯದ ಜೊತೆಗೆ ಅಭೂತಪೂರ್ವ ತಾಂತ್ರಿಕ ವೇಗವರ್ಧನೆ. ಸೂಪರ್‌ಇಂಟೆಲಿಜೆನ್ಸ್ ಮತ್ತು ಸಾರ್ವಭೌಮ ಸಾಮರ್ಥ್ಯದಿಂದ ಮೂಲಸೌಕರ್ಯ, ಕೌಶಲ್ಯ ಮತ್ತು ಸಾಮಾಜಿಕ ಪ್ರಭಾವದವರೆಗೆ, ನಾಯಕರು ಹಂಚಿಕೆಯ ಮೇಲೆ ಒಂದಾಗಿ, AI ವಿಭಜನೆಗಳನ್ನು ಇನ್ನೂ ಹೆಚ್ಚಿಸದೆ, ಅವುಗಳನ್ನು ನಿವಾರಣೆ ಮಾಡಬೇಕು; ಅಧಿಕಾರವನ್ನು ಕೇಂದ್ರೀಕರಿಸಬಾರದು, ಆದರೆ ಅವಕಾಶವನ್ನು ಸೃಷ್ಟಿಸಬೇಕು; ಮತ್ತು ಅಂತಿಮವಾಗಿ ಮಾನವ ಮೌಲ್ಯಗಳು, ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಉದ್ದೇಶಪೂರ್ವಕ ನಾಯಕತ್ವದಿಂದ ರೂಪಿಸಲ್ಪಡಬೇಕು ಎಂಬ ತೀರ್ಮಾನಕ್ಕೆ ಬಂದರು.
*****
(ಪ್ರಕಟಣೆ ಐ.ಡಿ.: 2230569)
ವಿಸಿಟರ್ ಕೌಂಟರ್ : 4