ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026ಗಾಗಿ ಮತ್ತೆ ಆರಂಭವಾದ ಮಾಧ್ಯಮ ನೋಂದಣಿ; ಅರ್ಜಿ ಸಲ್ಲಿಸಲು ಕೊನೆಯ ಅವಕಾಶ
ಪ್ರಕಟಣಾ ದಿನಾಂಕ:
11 FEB 2026 4:08PM by PIB Bengaluru
ಭಾರತ ಎಐ ಶೃಂಗಸಭೆಯ ಮಾಧ್ಯಮ ಮಾನ್ಯತೆ ಅವಕಾಶವನ್ನು 2025ರ ಡಿಸೆಂಬರ್ 29 ರಂದು ಆರಂಭಿಸಲಾಗಿತ್ತು ಮತ್ತು 2026ರ ಫೆಬ್ರವರಿ 8 ರಂದು ಹೊಸ ನೋಂದಣಿಗಳನ್ನು ಮುಕ್ತಾಯಗೊಳಿಸಲಾಯಿತು. ಆನಂತರ ಮೊದಲು ನೋಂದಾಯಿಸಲು ಸಾಧ್ಯವಾಗದವರು ನೋಂದಣಿಗಳನ್ನು ಮರು ಆರಂಭಿಸುವಂತೆ ಹಲವು ಮನವಿಗಳನ್ನು ಸ್ವೀಕರಿಸಲಾಗಿದೆ.
ಆ ಹಿನ್ನೆಲೆಯಲ್ಲಿ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026ಕ್ಕೆ ಮಾಧ್ಯಮ ನೋಂದಣಿಯನ್ನು ಕೊನೆಯ ಬಾರಿಗೆ ಪುನಃ ತೆರೆಯಲಾಗಿದೆ, ಇದು ಮಾಧ್ಯಮ ಪ್ರತಿನಿಧಿಗಳು ಶೃಂಗಸಭೆಯ ವರದಿಗಾಗಿ ನೋಂದಾಯಿಸಿಕೊಳ್ಳಲು ಕೊನೆಯ ಅವಕಾಶವನ್ನು ಒದಗಿಸುತ್ತದೆ. ಇದು ಸೀಮಿತ 48-ಗಂಟೆಗಳ ಅವಕಾಶವಾಗಿದ್ದು, ಇದು 2026ರ ಫೆಬ್ರವರಿ 13ರ ಶುಕ್ರವಾರ ಅಂತಾರಾಷ್ಟ್ರೀಯ ಕಾಲಮಾನ 4 ಗಂಟೆಗೆ ಮುಕ್ತಾಯವಾಗಲಿದೆ. ನೋಂದಾಯಿಸಲು ವೆಬ್‌ಲಿಂಕ್; https://impact.indiaai.gov.in/media-accreditation
ಅರ್ಜಿದಾರರು ತಮ್ಮ ಅರ್ಜಿ ನಮೂನೆಗಳನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಓದಲು ವಿನಂತಿಸಲಾಗಿದೆ, ಇದು ಯಶಸ್ವಿ ಪ್ರಕ್ರಿಯೆಯನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಾಕಷ್ಟು ದಾಖಲೆಗಳು ಅಥವಾ ವಿವರಗಳಿಲ್ಲದ ಅರ್ಜಿಗಳನ್ನು ತಿರಸ್ಕರಿಸುವ ಸಾಧ್ಯತೆಯಿದೆ.
ಈ ಹಿಂದೆ ಅರ್ಜಿಗಳನ್ನು ಸಲ್ಲಿಸಿದ ಮಾಧ್ಯಮ ಪ್ರತಿನಿಧಿಗಳು ಮತ್ತೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.
ಈ ಅವಕಾಶ ಮುಕ್ತಾಯದ ನಂತರ ಮಾಧ್ಯಮ ಮಾನ್ಯತೆಗಾಗಿ ಯಾವುದೇ ವಿನಂತಿಗಳನ್ನು ಪರಿಗಣಿಸಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು.
*****
(ಪ್ರಕಟಣೆ ಐ.ಡಿ.: 2226455)
ವಿಸಿಟರ್ ಕೌಂಟರ್ : 5