ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ನಾಳೆ ಮಾದರಿ ಯುವ ಗ್ರಾಮಸಭೆ (MYGS) ರಾಷ್ಟ್ರೀಯ ಪ್ರಶಸ್ತಿ ಪ್ರದಾನ


ಯುವ-ನೇತೃತ್ವದ ಸಹಭಾಗಿತ್ವಾತ್ಮಕ ಆಡಳಿತ ಸಂಭ್ರಮಿಸುವ MYGS ಪ್ರಶಸ್ತಿಗಳು

प्रविष्टि तिथि: 27 JAN 2026 5:45PM by PIB Bengaluru

ಮಾದರಿ ಯುವ ಗ್ರಾಮ ಸಭೆ (MYGS) ವಿಜೇತರನ್ನು ಅಭಿನಂದಿಸಲು ಪಂಚಾಯತ್ ರಾಜ್ ಸಚಿವಾಲಯವು ಶಿಕ್ಷಣ ಸಚಿವಾಲಯ (ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ) ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಜಂಟಿಯಾಗಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2026  ಜನವರಿ 28 ರಂದು ನವದೆಹಲಿಯಲ್ಲಿ ಆಯೋಜಿಸಲಿದೆ. 

ಕೇಂದ್ರ ಪಂಚಾಯತ್ ರಾಜ್ ರಾಜ್ಯ ಖಾತೆ ಸಚಿವರಾದ ಪ್ರೊ. ಎಸ್.ಪಿ. ಸಿಂಗ್ ಬಘೇಲ್ ಮತ್ತು ಕೇಂದ್ರ ಶಿಕ್ಷಣ ರಾಜ್ಯ ಖಾತೆ ಸಚಿವರಾದ ಡಾ. ಸುಕಾಂತ ಮಜುಂದಾರ್ ಈ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ, ಮಾದರಿ ಯುವ ಗ್ರಾಮ ಸಭೆ ಉಪಕ್ರಮದ ಪರಿವರ್ತನಾತ್ಮಕ ಪಯಣ ದಾಖಲಿಸುವ ಸಮಗ್ರ ಸಂಕಲನವನ್ನು ಸಹ ಬಿಡುಗಡೆ ಮಾಡಲಾಗುವುದು. ಪಂಚಾಯತ್ ರಾಜ್ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನವೋದಯ ವಿದ್ಯಾಲಯ ಸಮಿತಿ ಮತ್ತು ಏಕಲವ್ಯ ಮಾದರಿ ವಸತಿ ಶಾಲೆಗಳ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಲಿದ್ದಾರೆ. ಈ ಸಮಾರಂಭವು ದೇಶಾದ್ಯಂತದ ಮಾದರಿ (ಅನುಕರಣಾತ್ಮಕ) ಗ್ರಾಮ ಸಭೆಗಳು ಮತ್ತು ಗ್ರಾಮ ಪಂಚಾಯತ್ ಕಾರ್ಯಕಲಾಪ ಗಳಲ್ಲಿ ಭಾಗವಹಿಸಿದ 619 ಜವಾಹರ್ ನವೋದಯ ವಿದ್ಯಾಲಯಗಳು ಮತ್ತು 200 ಏಕಲವ್ಯ ಮಾದರಿ ವಸತಿ ಶಾಲೆಗಳ 28,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾಧನೆಗಳನ್ನು ಸಂಭ್ರಮಿಸಲಿದೆ. ವಿಜೇತ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಪಂಚಾಯತ್ ರಾಜ್ ಸಂಸ್ಥೆ (PRI) ನ ಚುನಾಯಿತ ಪ್ರತಿನಿಧಿಗಳು ಮತ್ತು MYGS ಉಪಕ್ರಮದೊಂದಿಗೆ ಸಹಯೋಗ ಹೊಂದಿರುವ ಪ್ರಮುಖ ಸಂಬಂಧಿತರು ಸೇರಿದಂತೆ ಸುಮಾರು 900 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮವು ಬೆಳಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ ನಿಗದಿಯಾಗಿದ್ದು, ಜವಾಹರ್ ನವೋದಯ ವಿದ್ಯಾಲಯ, ಉನಾ (ಹಿಮಾಚಲ ಪ್ರದೇಶ) ಮತ್ತು ಏಕಲವ್ಯ ಮಾದರಿ ವಸತಿ ಶಾಲೆ, ಕೊಸಂಬುಡಾ (ಛತ್ತೀಸ್‌ಗಢ) ಗಳಿಂದ ಅಣಕು ಗ್ರಾಮ ಸಭೆಯ ನೇರ ಪ್ರದರ್ಶನಗಳಿರಲಿವೆ. ಇದು ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಅನುಭವದ ಕಲಿಕೆಯನ್ನು ಪ್ರಸ್ತುತಪಡಿಸಲಿದೆ. ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 73ನೇ ಸಾಂವಿಧಾನಿಕ ತಿದ್ದುಪಡಿಯಡಿಯಲ್ಲಿ ಕಲ್ಪಿಸಲಾದ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯ ಅಪೇಕ್ಷಣೀಯ ತಿಳುವಳಿಕೆಗಾಗಿ ವಿಜೇತ ಶಾಲೆಗಳು ಮತ್ತು ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.

Backgrounder on MYGS  : https://www.pib.gov.in/PressReleasePage.aspx?PRID=2184163&reg=3&lang=2

PR on Launch of MYGS Initiative: https://www.pib.gov.in/PressReleasePage.aspx?PRID=2184325&reg=3&lang=2

 

*****


(रिलीज़ आईडी: 2219414) आगंतुक पटल : 4
इस विज्ञप्ति को इन भाषाओं में पढ़ें: English , Urdu , हिन्दी , Malayalam