ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಆಂಧ್ರಪ್ರದೇಶದ ವಿಜಯವಾಡದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಮತ್ತು ಉದ್ಯೋಗ ಹಾಗು ಕೈಗಾರಿಕಾ ಕಾರ್ಯದರ್ಶಿಗಳ ಎರಡು ದಿನಗಳ ಪ್ರಾದೇಶಿಕ ಸಮ್ಮೇಳನವನ್ನು ಉದ್ಘಾಟಿಸಿದ ಸಚಿವರಾದ ಶೋಭಾ ಕರಂದ್ಲಾಜೆ

प्रविष्टि तिथि: 27 JAN 2026 4:45PM by PIB Bengaluru

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಇಂದು ವಿಜಯವಾಡದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಮತ್ತು ಉದ್ಯೋಗ ಹಾಗು ಕೈಗಾರಿಕಾ ಕಾರ್ಯದರ್ಶಿಗಳ ಎರಡು ದಿನಗಳ ಪ್ರಾದೇಶಿಕ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿದರು. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಹಿರಿಯ ಅಧಿಕಾರಿಗಳು, ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ರಾಜ್ಯಗಳು, ಪುದುಚೇರಿಯ ಕೇಂದ್ರಾಡಳಿತ ಪ್ರದೇಶ ಮತ್ತು ದಿಲ್ಲಿಯ ಎನ್.ಸಿ.ಟಿ.ಗಳ ಹಿರಿಯ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸಚಿವಾಲಯದ ಅಡಿಯಲ್ಲಿರುವ ಸಂಸ್ಥೆಗಳಾದ ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ), ನೌಕರರ ಭವಿಷ್ಯ ನಿಧಿ ಸಂಸ್ಥೆ (ಇ.ಪಿ.ಎಫ್.ಒ), ದತ್ತೋಪಂತ್ ಠೇಂಗಡಿ ಕಾರ್ಮಿಕರ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ (ಡಿ.ಟಿ.ಎನ್.ಬಿ.ಡಬ್ಲ್ಯು.ಇ.ಡಿ), ಡೈರೆಕ್ಟರೇಟ್ ಜನರಲ್ ಫ್ಯಾಕ್ಟರಿ ಸಲಹಾ ಸೇವೆ ಮತ್ತು ಕಾರ್ಮಿಕ ಸಂಸ್ಥೆಗಳು (ಡಿ.ಜಿ.ಎಫ್.ಎ.ಎಸ್.ಎಲ್.ಐ), ಡೈರೆಕ್ಟರೇಟ್ ಜನರಲ್ ಆಫ್ ಮೈನ್ಸ್ ಸೇಫ್ಟಿ (ಡಿ.ಜಿ.ಎಂ.ಎಸ್) ಮತ್ತು ವಿ.ವಿ.. ಗಿರಿ ರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ವಿ.ವಿ.ಜಿ.ಎನ್.ಎಲ್.ಐ) ಗಳ ಹಿರಿಯ ಅಧಿಕಾರಿಗಳು ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಾಲ್ಕು ಕಾರ್ಮಿಕ ಸಂಹಿತೆಗಳ ಸುಗಮ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಮತ್ತು ESIC, EPFO ​​ಮತ್ತು ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆ (ಪಿ.ಎಂ.ವಿ.ಬಿ.ಆರ್.ವೈ.)ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸುವ ಉದ್ದೇಶದಿಂದ, ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಪ್ರಮುಖ ಪಾಲುದಾರರನ್ನು ಒಳಗೊಂಡಂತೆ ಸಚಿವಾಲಯವು ಯೋಜಿಸಿರುವ ಐದು ಪ್ರಾದೇಶಿಕ ಸಮ್ಮೇಳನಗಳ ಸರಣಿಯಲ್ಲಿ ಸಮ್ಮೇಳನವು ಮೂರನೆಯದಾಗಿದೆ.

ತಮ್ಮ ಭಾಷಣದಲ್ಲಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವರು, ನಾಲ್ಕು ಕಾರ್ಮಿಕ ಸಂಹಿತೆಗಳ ಪರಿಣಾಮಕಾರಿ ಮತ್ತು ಸಕಾಲಿಕ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಮುಖ ಪಾತ್ರವನ್ನು ಹೇಳಿದರು. 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ ಏಕೀಕರಿಸುವುದನ್ನು ಅವರು ಐತಿಹಾಸಿಕ ಮತ್ತು ಪರಿವರ್ತನಾ ಸುಧಾರಣೆ ಎಂದು ವಿವರಿಸಿದರು, ಇದನ್ನು ರಾಜ್ಯಗಳು, ಉದ್ಯೋಗದಾತರು ಮತ್ತು ಕಾರ್ಮಿಕರ ಪ್ರತಿನಿಧಿಗಳೊಂದಿಗೆ ಬಹು ಸುತ್ತಿನ ಚರ್ಚೆಗಳು ಸೇರಿದಂತೆ ವ್ಯಾಪಕ ಪಾಲುದಾರರ ಸಮಾಲೋಚನೆಗಳ ನಂತರ ಕೈಗೊಳ್ಳಲಾಗಿದೆ. ಕಾರ್ಮಿಕ ನಿಯಂತ್ರಣವನ್ನು ವಿಕಸನಗೊಳ್ಳುತ್ತಿರುವ ಕೆಲಸದ ಪ್ರಪಂಚದೊಂದಿಗೆ ಜೋಡಿಸುವ ಅಗತ್ಯವನ್ನು ಉಲ್ಲೇಖಿಸಿದ ಸಚಿವರು, ಸಂಹಿತೆಗಳು ಪಾರದರ್ಶಕತೆಯನ್ನು ಉತ್ತೇಜಿಸುತ್ತವೆ, ಅನುಸರಣೆಯನ್ನು ಸರಳಗೊಳಿಸುತ್ತವೆ ಮತ್ತು ಸಮತೋಲಿತ ಹಾಗು ತಂತ್ರಜ್ಞಾನ-ಸಕ್ರಿಯಗೊಳಿಸಿದ ಆಡಳಿತ ಚೌಕಟ್ಟಿನ ಮೂಲಕ ಕಾರ್ಮಿಕರ ಕಲ್ಯಾಣವನ್ನು ಬಲಪಡಿಸುತ್ತವೆ ಎಂದು ಹೇಳಿದರು. ಏಕರೂಪದ ವ್ಯಾಖ್ಯಾನಗಳು, ವೆಬ್ ಆಧಾರಿತ ತಪಾಸಣೆಗಳು, ಸಣ್ಣ ಅಪರಾಧಗಳ ಅಪರಾಧಮುಕ್ತೀಕರಣ, ಕಾರ್ಮಿಕ ಶಕ್ತಿಯಲ್ಲಿ/ಕಾರ್ಯಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು, ಮನೆಯಿಂದ ಕೆಲಸ ಮಾಡಲು ಅನುವು ಮಾಡಿಕೊಡುವ ನಿಬಂಧನೆಗಳು ಮತ್ತು ಮೊದಲ ಬಾರಿಗೆ ಗಿಗ್, ಪ್ಲಾಟ್‌ಫಾರ್ಮ್ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವಂತಹ ಪ್ರಮುಖ ಪ್ರಗತಿಪರ ನಿಬಂಧನೆಗಳತ್ತ ಅವರು ಗಮನ ಸೆಳೆದರು. ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಒತ್ತಿ ಹೇಳಿದ ಸಚಿವರು, ಬಲವಾದ ಕೇಂದ್ರ-ರಾಜ್ಯ ಸಮನ್ವಯ, ನಿಯಮಗಳ ಸಕಾಲಿಕ ಅಂತಿಮಗೊಳಿಸುವಿಕೆ, ಕೇಂದ್ರ ಪೋರ್ಟಲ್‌ಗಳೊಂದಿಗೆ ರಾಜ್ಯ ಐಟಿ ವ್ಯವಸ್ಥೆಗಳ ಏಕೀಕರಣ, ಕ್ಷೇತ್ರ ಮಟ್ಟದ ಕಾರ್ಯಕರ್ತರ ಸಾಮರ್ಥ್ಯ ವೃದ್ಧಿ ಮತ್ತು ಕೊನೆಯ ಹಂತದವರೆಗೆ ಪರಿಣಾಮಕಾರಿ ಮಾಹಿತಿ ಪ್ರಸರಣಕ್ಕೆ ಕರೆ ನೀಡಿದರು. 2047 ರ ವಿಕಸಿತ ಭಾರತ ದೃಷ್ಟಿಕೋನವನ್ನು ಮುನ್ನಡೆಸುವಲ್ಲಿ ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆ ಸೇರಿದಂತೆ ಇ.ಎಸ್.ಐ.ಸಿ.(ESIC) ವ್ಯಾಪ್ತಿ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿ ಉಪಕ್ರಮಗಳ ವಿಸ್ತರಣೆಯನ್ನು ಅವರು ಉಲ್ಲೇಖಿಸಿದರು.

ಆಂಧ್ರಪ್ರದೇಶ ಸರ್ಕಾರದ ಕಾರ್ಮಿಕ ಸಚಿವರಾದ ಶ್ರೀ ವಾಸಮಸೆಟ್ಟಿ ಸುಭಾಷ್ ಅವರು ಸಮ್ಮೇಳನವನ್ನುದ್ದೇಶಿಸಿ ಮಾತನಾಡುತ್ತಾ, ಕಾರ್ಮಿಕ ಸಂಹಿತೆಗಳು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರಿ ಒಕ್ಕೂಟದ ಮನೋಭಾವವನ್ನು ಪ್ರತಿಬಿಂಬಿಸುವ ಮಹತ್ವದ ಸುಧಾರಣೆಯಾಗಿದೆ ಎಂದು ಹೇಳಿದರು. ಸಮ್ಮೇಳನದಲ್ಲಿ ನಡೆದ ಚರ್ಚೆಗಳು, ಹಿಂದಿನ ಪ್ರಾದೇಶಿಕ ಸಮಾಲೋಚನೆಗಳೊಂದಿಗೆ, ಸಂಹಿತೆಗಳ ಅನುಷ್ಠಾನವನ್ನು ಬಲಪಡಿಸಲು ಕೊಡುಗೆ ನೀಡುತ್ತವೆ ಎಂದು ಅವರು ಹೇಳಿದರು. ಸಂಹಿತೆಗಳು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ ಮತ್ತು ಅನುಸರಣೆಯನ್ನು ಸರಳೀಕರಿಸುತ್ತವೆ ಹಾಗು ವ್ಯವಹಾರ ಮಾಡುವ ಅನುಕೂಲತೆಗಳನ್ನು ಸುಧಾರಿಸುತ್ತವೆ ಎಂಬುದರತ್ತ ಸಚಿವರು ಗಮನ ಸೆಳೆದರು. ಉದ್ಯೋಗದಾತರು ಮತ್ತು ಕಾರ್ಮಿಕರ ನಡುವೆ ಪರಿಣಾಮಕಾರಿ ಸಮನ್ವಯದ ಅಗತ್ಯವನ್ನು ಅವರು ಒತ್ತಿ ಹೇಳಿದರು ಮತ್ತು ಕಾರ್ಮಿಕರ ಹಕ್ಕುಗಳು ಹಾಗು ಬಾಧ್ಯತೆಗಳ ಕುರಿತು ಕೊನೆಯ ಹಂತದವರೆಗೆ  ಅರಿವಿನ ಮಹತ್ವವನ್ನು ಒತ್ತಿ ಹೇಳಿದರು. ಎ.ಎಸ್.ಐ.ಸಿ.ಯ  ಪಾತ್ರವನ್ನು ಉಲ್ಲೇಖಿಸಿದ ಅವರು, ಸಾಮಾಜಿಕ ಭದ್ರತೆ ಮತ್ತು ವೈದ್ಯಕೀಯ ಪ್ರಯೋಜನಗಳಿಗೆ ವ್ಯಾಪಕ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಅದರ ವ್ಯಾಪ್ತಿ/ತಲುಪುವಿಕೆ ಮತ್ತು ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲು ಕರೆ ನೀಡಿದರು.

ಸಮ್ಮೇಳನದ ಸಂದರ್ಭವನ್ನು ವಿವರಿಸುತ್ತ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಹಿರಿಯ ಕಾರ್ಮಿಕ ಮತ್ತು ಉದ್ಯೋಗ ಸಲಹೆಗಾರ ಶ್ರೀ ಅಲೋಕ್ ಚಂದ್ರ ಅವರು, ನಾಲ್ಕು ಕಾರ್ಮಿಕ ಸಂಹಿತೆಗಳ ಸುಗಮ ಮತ್ತು ಸಂಘಟಿತ ಅನುಷ್ಠಾನವನ್ನು ಬೆಂಬಲಿಸಲು ಮತ್ತು ಇ.ಎಸ್.ಐ.ಸಿ., ಇ.ಪಿ.ಎಫ್.ಒ.  ​​ಮತ್ತು ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆ ಗಳಂತಹ ಉಪಕ್ರಮಗಳಿಗೆ ಸಂಬಂಧಿಸಿದ ಸುಧಾರಣೆಗಳು ಸೇರಿದಂತೆ ಪ್ರಮುಖ ಕಾರ್ಮಿಕ ಮತ್ತು ಉದ್ಯೋಗ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರಾದೇಶಿಕ ಕಾರ್ಮಿಕ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಕಾರ್ಮಿಕ ಸಂಹಿತೆಗಳ ಪರಿಣಾಮಕಾರಿ ಮತ್ತು ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನಿಯಮಗಳನ್ನು ಸಕಾಲಿಕವಾಗಿ ಅಂತಿಮಗೊಳಿಸುವುದು, ಐಟಿ ಸಿದ್ಧತೆ, ಅಂಗಡಿಗಳು ಮತ್ತು ಸಂಸ್ಥೆ ಸ್ಥಾಪನೆ ಕಾಯ್ದೆಗಳ ಸಮನ್ವಯತೆ, ಸಾಮರ್ಥ್ಯ ವೃದ್ಧಿ ಹಾಗು  ಕೇಂದ್ರ-ರಾಜ್ಯಗಳ ನಿಕಟ ಸಮನ್ವಯದ ಮಹತ್ವವನ್ನು ಒತ್ತಿಹೇಳಲಾಯಿತು.

ಉದ್ಘಾಟನೆಯ ನಂತರ, ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ನಿಯಮಗಳನ್ನು ರಚಿಸುವಲ್ಲಿ ಆಗಿರುವ ಪ್ರಗತಿಯನ್ನು ವಿವರಿಸುವ ಪ್ರಸ್ತುತಿಗಳನ್ನು ನೀಡಿದರು, ಜೊತೆಗೆ ಐಟಿ ವ್ಯವಸ್ಥೆಗಳ ಸನ್ನದ್ಧತೆಯ ಕುರಿತು ಸಕಾಲಿಕ ಮಾಹಿತಿಗಳನ್ನು ನೀಡಿದರು. ಚರ್ಚೆಗಳು  ನಿಯಮಗಳನ್ನು ಅಂತಿಮಗೊಳಿಸುವುದು, ಸಂಹಿತೆಯ ನಿಬಂಧನೆಗಳಿಗೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಐಟಿ ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ನವೀಕರಿಸುವುದು ಹಾಗು ಕೇಂದ್ರ ಐಟಿ ವಾಸ್ತುಶಿಲ್ಪದೊಂದಿಗೆ ರಾಜ್ಯ ಮಟ್ಟದ ವ್ಯವಸ್ಥೆಗಳ ಅಡೆತಡೆ ರಹಿತ  ಏಕೀಕರಣದ ಅವಕಾಶಗಳು ಒಳಗೊಂಡಂತೆ ಪ್ರಮುಖ ಅಂಶಗಳ ಮೇಲೆ ಕೇಂದ್ರೀಕೃತವಾಗಿದ್ದವು.

ಸಚಿವಾಲಯ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಈ ಸಮ್ಮೇಳನವು ನಿಯಮಗಳು ಮತ್ತು ನಿಬಂಧನೆಗಳ ಕುರಿತು ಆಳವಾದ ಚರ್ಚೆಗಳು, ಅಂತರಗಳು ಮತ್ತು ವ್ಯತ್ಯಾಸಗಳನ್ನು ಗುರುತಿಸುವುದು ಮತ್ತು ಶಾಸನಬದ್ಧ ಅಧಿಸೂಚನೆಗಳನ್ನು ಹೊರಡಿಸುವುದನ್ನು ವೇಗಗೊಳಿಸಲು ವೇದಿಕೆಯನ್ನು ಒದಗಿಸಿತು. ಸಂಹಿತೆಗಳ ಅಡಿಯಲ್ಲಿ ಕಲ್ಪಿಸಲಾದ ಮಂಡಳಿಗಳು, ನಿಧಿಗಳು ಮತ್ತು ಇತರ ಸಾಂಸ್ಥಿಕ ವ್ಯವಸ್ಥೆಗಳ ಸ್ಥಾಪನೆಯ ಕುರಿತು ಚರ್ಚೆಗಳನ್ನು ಸಹ ನಡೆಸಲಾಯಿತು. ಇದರ ಜೊತೆಗೆ, ನಾಲ್ಕು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಪ್ರಸ್ತಾವಿತ ಯೋಜನೆಗಳ ಕುರಿತು ಸಮಾಲೋಚನೆಗಳನ್ನು ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಬೆಂಬಲಿಸಲು ಡಿಜಿಟಲ್ ವೇದಿಕೆಗಳ ಕುರಿತು ಚರ್ಚೆಗಳನ್ನು ನಡೆಸಲು ವೇದಿಕೆ ಅವಕಾಶ ಮಾಡಿಕೊಟ್ಟಿತು. ಕ್ಷೇತ್ರ ಕಾರ್ಯಕರ್ತರ ಸಾಮರ್ಥ್ಯ ವೃದ್ಧಿ ಮತ್ತು ಕಾರ್ಮಿಕ ಸಂಹಿತೆಗಳ ಉದ್ದೇಶಗಳು ಮತ್ತು ಕಾರ್ಯಾಚರಣೆಯ ಚೌಕಟ್ಟಿನ ಬಗ್ಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಪಾಲುದಾರರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಒತ್ತು ನೀಡಲಾಯಿತು.

 

*****


(रिलीज़ आईडी: 2219243) आगंतुक पटल : 12
इस विज्ञप्ति को इन भाषाओं में पढ़ें: English , Urdu , हिन्दी , Tamil