ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ರಾಷ್ಟ್ರೀಯ ಮತದಾರರ ದಿನದಂದು ರಾಷ್ಟ್ರದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ ನರೇಂದ್ರ ಮೋದಿ; ಮೈ ಭಾರತ್ ನಿಂದ ರಾಷ್ಟ್ರವ್ಯಾಪಿ ಪಾದಯಾತ್ರೆಗೆ ಚಾಲನೆ
ಸದೃಢ ಪ್ರಜಾಪ್ರಭುತ್ವಕ್ಕಾಗಿ “ನಾವು ಮಾಡುತ್ತೇವೆ” ಎಂಬ ಸ್ಫೂರ್ತಿ; ಮೈ ಭಾರತ್ ಸ್ವಯಂಸೇವಕರಿಗೆ ಗೌರವಾನ್ವಿತ ಪ್ರಧಾನಮಂತ್ರಿ ಪತ್ರ
“ಮತದಾರರು ಪ್ರಜಾಪ್ರಭುತ್ವದ ಆತ್ಮ” – ಪ್ರಧಾನಮಂತ್ರಿ ನರೇಂದ್ರ ಮೋದಿ
ಮೈ ಭಾರತ್ ಪೋರ್ಟಲ್ ನಲ್ಲಿ ನೋಂದಾಯಿಸುವಂತೆ ಯುವಜನತೆಗೆ ಪ್ರಧಾನಮಂತ್ರಿ ಕರೆ
“ಮತದಾರರು ನಮ್ಮ ಅಭಿವೃದ್ಧಿ ಪಯಣದಲ್ಲಿ ಭಾಗ್ಯವಿದಾತರು”: ಪ್ರಧಾನಮಂತ್ರಿ ನರೇಂದ್ರ ಮೋದಿ
प्रविष्टि तिथि:
25 JAN 2026 2:49PM by PIB Bengaluru
ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಪ್ರೀತಿಯ ಶುಭಾಶಯಗಳನ್ನು ಕೋರಿದ್ದಾರೆ ಮತ್ತು ಭಾರತದ ಭವಿಷ್ಯದ _ಸಾಧನೆಗೆ ಯುವಕರು ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಯುವಜನತೆ ಮತ್ತು ಸಹನಾಗರಿಕರಿಗೆ ಹೃದಯಪೂರ್ವಕ ಪತ್ರವನ್ನು ಬರೆದಿರುವ ಅವರು, ಯುವಜನತೆ ಮೈ ಭಾರತ್ ಪೋರ್ಟಲ್ ಮೂಲಕ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಉತ್ತೇಜಿಸಿದ್ದಾರೆ. ಪ್ರಧಾನಮಂತ್ರಿ ಅವರು ಭಾರತದ ಯುವಜನತೆಗೆ “ನಾವು ಮಾಡುತ್ತೇವೆ”(ಕ್ಯಾನ್ ಡೂ) ಸ್ಫೂರ್ತಿಯೊಂದಿಗೆ ಶ್ಲಾಘಿಸಿದ್ದಾರೆ ಮತ್ತು ಯುವಜನರ ಬದ್ಧತೆ ಮತ್ತು ಸಕ್ರಿಯ ಮನೋಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯುವಜನತೆ ಬದಲಾವಣೆಗೆ ಕಾಯದೆ ಫಲಿತಾಂಶಗಳನ್ನು ರೂಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಭಾರತದ ಮೊದಲ ಸಾರ್ವತ್ರಿಕ ಚುನಾವಣೆ 1951ರಲ್ಲಿ ನಡೆದು, 75 ವರ್ಷಗಳು ಪೂರ್ಣಗೊಂಡಿರುವುದನ್ನು ಸ್ಮರಿಸಿಕೊಂಡಿರುವ ಗೌರವಾನ್ವಿತ ಪ್ರಧಾನಮಂತ್ರಿ ಅವರು, ದೇಶದಲ್ಲಿ ಪ್ರಜಾಪ್ರಭುತ್ವದ ಪ್ರಕ್ರಿಯೆ “ಪ್ರಜಾಪ್ರಭುತ್ವದ ಹಬ್ಬ” ಎಂದು ಬಣ್ಣಿಸಿದ್ದಾರೆ. ಅಲ್ಲದೆ ಪ್ರಧಾನಮಂತ್ರಿ ಅವರು, ಭಾರತ ‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ’ ಮತ್ತು ‘ಪ್ರಜಾಪ್ರಭುತ್ವದ ಮಾತೃ’ ಎಂಬ ಎರಡು ಹೆಗ್ಗುರುತುಗಳಿಂದ ಗುರುತಿಸಿಕೊಂಡಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ವಿಶೇಷವಾಗಿ ಮೆರಾ ಯುವ ಭಾರತ್ (ಮೈ ಭಾರತ್), ಸ್ವಯಂಸೇವಕರನ್ನುದ್ದೇಶಿಸಿ ಅವರಿಗೆ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರೊಂದಿಗೆ ಸಂಭ್ರಮಾಚರಣೆ ಮಾಡುವಂತೆ ಮತ್ತು ಅವರ ಹಕ್ಕಿನ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದ್ದಾರೆ.
ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರ ಪ್ರಮುಖ ಪಾತ್ರವನ್ನು ಉಲ್ಲೇಖಿಸಿರುವ ಪ್ರಧಾನಮಂತ್ರಿ ಅವರು, “ಮತದಾರರಾಗುವುದು ಪ್ರಜಾಪ್ರಭುತ್ವದ ಅತಿ ದೊಡ್ಡ ಸವಲತ್ತು ( ಪ್ರಿವಿಲೇಜ್) ಮತ್ತು ಜವಾಬ್ದಾರಿಯಾಗಿದೆ. ಮತದಾನ ಒಂದು ಪವಿತ್ರ ಸಾಂವಿಧಾನಿಕ ಹಕ್ಕು ಮತ್ತು ಭಾರತದ ಭವಿಷ್ಯದಲ್ಲಿ ಭಾಗಿಯಾಗುವ ಗುರುತಾಗಿದೆ. ಮತದಾರರು ನಮ್ಮ ಅಭಿವೃದ್ಧಿ ಪಯಣದಲ್ಲಿ ಭಾಗ್ಯವಿದಾತರು. ಬೆರಳ ಮೇಲಿನ ಅಳಿಸಲಾಗದ ಶಾಹಿ ನಮ್ಮ ಪ್ರಜಾಪ್ರಭುತ್ವ ಸಕ್ರಿಯ ಮತ್ತು ಉದ್ದೇಶಪೂರ್ವಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಖಾತ್ರಿಪಡಿಸುವ ಸಂಕೇತವಾಗಿದೆ” ಎಂದು ಹೇಳಿದ್ದಾರೆ.
ನಂತರ ತಮ್ಮ ಮನ್ ಕಿ ಬಾತ್ ನಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಅವರು, ಮತದಾರರು ನಮ್ಮ ಪ್ರಜಾಪ್ರಭುತ್ವದ ಆತ್ಮ ಎಂದು ಪ್ರತಿಪಾದಿಸಿದ್ದಾರೆ ಹಾಗು ಮತದಾನ ಮಾಡುವುದು ಕೇವಲ ಸಾಂವಿಧಾನಿಕ ಹಕ್ಕಲ್ಲ, ಅದು ಕಡ್ಡಾಯ ನಾಗರಿಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರ ದೂರದೃಷ್ಟಿಯಿಂದ ಸ್ಫೂರ್ತಿ ಪಡೆದಿರುವ ಗೌರವಾನ್ವಿತ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಶ್ರೀ ಮನ್ಸುಖ್ ಮಾಂಡವೀಯ “ಮೈಭಾರತ್ ಯುವ ಸ್ವಯಂಸೇವಕರು ಮೊದಲ ಬಾರಿಗೆ ಮತದಾನ ಮಾಡುತ್ತಿರುವವರ ಪ್ರಜಾಪ್ರಭುತ್ವ ಪಯಣವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಪರಿವರ್ತಿಸಲಿದ್ದಾರೆ” ಎಂದು ಪುನರುಚ್ಛರಿಸಿದ್ದಾರೆ ಹಾಗೂ “ಮೊದಲ ಮತದಾನ, ಮೊದಲ ಹೊಣೆಗಾರಿಕೆ, ಮೊದಲ ಹೆಮ್ಮೆ” ಉಪಕ್ರಮವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.
ಗೌರವಾನ್ವಿತ ಪ್ರಧಾನಮಂತ್ರಿ ಅವರ ಕರೆಯನ್ನು ಸಕ್ರಿಯ ಸಾಮೂಹಿಕ ಚಳವಳಿಯಾಗಿ ಪರಿವರ್ತಿಸಿದ ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು “ಮೈ ಭಾರತ್ ಮೈ ವೋಟ್” ಧ್ಯೇಯದಡಿ ಆಚರಿಸುತ್ತಿದೆ.
ರಾಷ್ಟ್ರೀಯ ಆಚರಣೆಯ ಭಾಗವಾಗಿ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಗೌರವಾನ್ವಿತ ಶ್ರೀ ಮನ್ಸುಖ್ ಮಾಂಡವೀಯ ಕರೈಕಲ್ ನಲ್ಲಿ ರಾಷ್ಟ್ರೀಯ ಮತದಾರರ ದಿನದ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಆ ಮೂಲಕ ಯುವ ಪ್ರಜೆಗಳು ಮತದಾರರಾಗಿ ನೋಂದಾಯಿಸಿಕೊಳ್ಳಲು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಯುವಜನತೆಯನ್ನು ಉತ್ತೇಜಿಸಿದರು. ಯುವಜನ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಖಾತೆ ಸಚಿವರಾದ ಗೌರವಾನ್ವಿತ ಶ್ರೀಮತಿ ರಕ್ಷಾ ನಿಖಿಲ್ ಖಾಡ್ಸೆ, ಅಮೃತಸರ್ ನಲ್ಲಿ ರಾಷ್ಟ್ರೀಯ ಮತದಾರರ ದಿನದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು ಮತ್ತು ಮೈ ಭಾರತ್ ಸ್ವಯಂಪ್ರತಿನಿಧಿಗಳು ಮೊದಲ ಬಾರಿಗೆ ಮತದಾರರೊಂದಿಗೆ ತೊಡಗಿಕೊಂಡು ಜವಾಬ್ದಾರಿಯುತ ಮತ್ತು ಎಲ್ಲರನ್ನೊಳಗೊಂಡ ಪ್ರಜಾಪ್ರಭುತ್ವದ ಪಾಲ್ಗೊಳ್ಳುವಿಕೆಯ ಸಂದೇಶವನ್ನು ಪುನರುಚ್ಛರಿಸಿದರು
ಈ ಕಾರ್ಯಕ್ರಮವು ಮಾಹಿತಿಯುಕ್ತ, ನೈತಿಕ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಜತೆಗೆ ರಾಷ್ಟ್ರವ್ಯಾಪಿ ಯುವಜನತೆಯನ್ನು ಸಜ್ಜುಗೊಳಿಸುವ ಉಪಕ್ರಮವಾಗಿ ಕಾರ್ಯನಿರ್ವಹಿಸಿತು.
*****
(रिलीज़ आईडी: 2218485)
आगंतुक पटल : 9