ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
azadi ka amrit mahotsav

ಮುಂಬೈನ ಹಜ್‌ ಹೌಸ್‌ ನಲ್ಲಿ ರಾಜ್ಯ ಹಜ್‌ ನಿರೀಕ್ಷಕರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ಪ್ರಾರಂಭ


ಕಾರ್ಯಾಚರಣಾ ಶಿಷ್ಟಾಚಾರಗಳು, ಸಮನ್ವಯ ಕಾರ್ಯವಿಧಾನಗಳು, ಕಲ್ಯಾಣ ಕ್ರಮಗಳ ಬಗ್ಗೆ ಎಸ್‌ಐಗಳಿಗೆ ಪರಿಚಯ ಮಾಡಿಕೊಡುವತ್ತ ಕಾರ್ಯಕ್ರಮವು ಗಮನ ಹರಿಸುತ್ತದೆ

प्रविष्टि तिथि: 24 JAN 2026 6:04PM by PIB Bengaluru

ರಾಜ್ಯ ಹಜ್‌ ಇನ್‌ಸ್ಪೆಕ್ಟರ್‌ಗಳಿಗೆ (ಎಸ್‌.ಎಚ್‌.ಐ.ಗಳು) ಎರಡು ದಿನಗಳ ತರಬೇತಿ ಕಾರ್ಯಕ್ರಮ ಇಂದು ಮುಂಬೈನ ಹಜ್‌ ಹೌಸ್‌ನಲ್ಲಿ ಪ್ರಾರಂಭವಾಯಿತು. ಜನವರಿ 24 ಮತ್ತು 25ರಂದು ನಡೆಯಲಿರುವ ತರಬೇತಿ ಅಧಿವೇಶನವು ಸೌದಿ ಅರೇಬಿಯಾದಲ್ಲಿ (ಕೆಎಸ್‌ಎ) ಮುಂಬರುವ ಹಜ್‌ ಋುತುವಿನಲ್ಲಿ ಎಸ್‌ಎಚ್‌ಐಗಳನ್ನು ಅವರ ಪಾತ್ರಗಳು ಮತ್ತು ಜವಾಬ್ದಾರಿಗಳಿಗಾಗಿ ಸಮಗ್ರವಾಗಿ ಸಿದ್ಧಪಡಿಸುವ ಗುರಿಯನ್ನು ಹೊಂದಿದೆ.

ಈ ಕಾರ್ಯಕ್ರಮವು ಭಾರತೀಯ ಹಜ್‌ ಯಾತ್ರಿಕರಿಗೆ ಸುಗಮ ಸೌಲಭ್ಯ ಮತ್ತು ಪರಿಣಾಮಕಾರಿ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆಯ ಶಿಚ್ಟಾಚಾರಗಳು, ಸಮನ್ವಯ ಕಾರ್ಯವಿಧಾನಗಳು, ಕಲ್ಯಾಣ ಕ್ರಮಗಳು ಮತ್ತು ತಳಮಟ್ಟದ ಸವಾಲುಗಳೊಂದಿಗೆ ಎಸ್‌ಎಚ್‌ಐಗಳಿಗೆ ಪರಿಚಯಿಸುವತ್ತ ಗಮನ ಹರಿಸುತ್ತದೆ.

ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಡಾ.ಚಂದ್ರಶೇಖರ್‌ ಕುಮಾರ್‌, ಯಾತ್ರಾರ್ಥಿಗಳಿಗೆ ಸುರಕ್ಷಿತ, ಸುಗಮ ಮತ್ತು ಗೌರವಯುತ ಹಜ್‌ ಅನುಭವವನ್ನು ಖಾತ್ರಿಪಡಿಸುವಲ್ಲಿ ರಾಜ್ಯ ಹಜ್‌ ಇನ್‌ಸ್ಪೆಕ್ಟರ್‌ಗಳು ವಹಿಸಿದ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ಕೆಎಸ್‌ಎಯಲ್ಲಿ ವಾಸ್ತವ್ಯದ ಸಮಯದಲ್ಲಿ ಯಾತ್ರಿಗಳಿಗೆ ಸಹಾಯ ಮಾಡುವಾಗ ಉನ್ನತ ಮಟ್ಟದ ತಾಳ್ಮೆಯನ್ನು ಕಾಪಾಡಿಕೊಳ್ಳಲು, ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಲು ಮತ್ತು ಸ್ವಾಭಾವಿಕ, ಸಹಾನುಭೂತಿ ಮತ್ತು ಸೇವಾ ಆಧಾರಿತ ಮನೋಭಾವವನ್ನು ಅಳವಡಿಸಿಕೊಳ್ಳಲು ಅವರು ಎಸ್‌ ಎಚ್‌ ಐಗಳನ್ನು ಒತ್ತಾಯಿಸಿದರು. ಎಸ್‌ಐಗಳ ನಡವಳಿಕೆ ಮತ್ತು ಸ್ಪಂದಿಸುವಿಕೆಯು ಯಾತ್ರಾರ್ಥಿಗಳ ಒಟ್ಟಾರೆ ಅನುಭವ ಮತ್ತು ಯೋಗಕ್ಷೇಮದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಕಾರ್ಯದರ್ಶಿ ಒತ್ತಿ ಹೇಳಿದರು.

ತರಬೇತಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಹಜ್‌ ಸಮಿತಿಯ ಸಿಇಒ ಶ್ರೀ ಸಹ್ನವಾಸ್‌ ಸಿ, ಅವರು ಹಜ್‌ ಸಮಯದಲ್ಲಿ ಕಾರ್ಯಾಚರಣೆಯ ಅಂಶಗಳು ಮತ್ತು ವಿವಿಧ ಮಧ್ಯಸ್ಥಗಾರರೊಂದಿಗೆ ಸಮನ್ವಯವನ್ನು ಬಿಂಬಿಸಿದರು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ನಿರ್ದೇಶಕ (ಹಜ್‌) ಶ್ರೀ ನಜೀಮ್‌ ಅಹ್ಮದ್‌ ಅವರು ಆಡಳಿತಾತ್ಮಕ ಕಾರ್ಯವಿಧಾನಗಳು, ಪ್ರಮಾಣಿತ ಕಾರ್ಯಾಚರಣಾ ಶಿಷ್ಟಾಚಾರಗಳು ಮತ್ತು ಸಮಯೋಚಿತ ಕುಂದುಕೊರತೆ ಪರಿಹಾರದ ಮಹತ್ವದ ಬಗ್ಗೆ ಭಾಗವಹಿಸಿದವರಿಗೆ ವಿವರಿಸಿದರು.

ಹಜ್‌ ಸಮಯದಲ್ಲಿ ಆರೋಗ್ಯ ಮತ್ತು ಸುರಕ್ಷತಾ ಅಂಶಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉಪ ಮಹಾನಿರ್ದೇಶಕ ಡಾ.ಎಲ್‌.ಸ್ವಾಸ್ಥಿಚರಣ್‌ ಅವರು ಚರ್ಚಿಸಿದರು. ಅವರು ಸಾರ್ವಜನಿಕ ಆರೋಗ್ಯ ಸನ್ನದ್ಧತೆ, ತಡೆಗಟ್ಟುವ ಕ್ರಮಗಳು ಮತ್ತು ಯಾತ್ರಾರ್ಥಿಗಳ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ವೈದ್ಯಕೀಯ ತಂಡಗಳೊಂದಿಗೆ ಸಮನ್ವಯದ ಬಗ್ಗೆ ಎಸ್‌ಎಚ್‌ಐಗಳಿಗೆ ಸಂವೇದನಾಶೀಲತೆ ಮೂಡಿಸಿದರು.

ತರಬೇತಿ ಕಾರ್ಯಕ್ರಮವು ಯಾತ್ರಾರ್ಥಿಗಳ ಅನುಕೂಲ, ವಸತಿ ಮತ್ತು ಸಾರಿಗೆ ನಿರ್ವಹಣೆ, ಆರೋಗ್ಯ ಮತ್ತು ಸುರಕ್ಷತಾ ಶಿಷ್ಟಾಚಾರಗಳು, ತುರ್ತು ಪ್ರತಿಕ್ರಿಯೆ, ಸೌದಿ ಅಧಿಕಾರಿಗಳೊಂದಿಗೆ ಸಮನ್ವಯ ಮತ್ತು ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ ಡಿಜಿಟಲ್‌ ವೇದಿಕೆಗಳ ಬಳಕೆ ಕುರಿತು ವಿವರವಾದ ಅಧಿವೇಶನಗಳನ್ನು ಒಳಗೊಂಡಿದೆ.

ಎರಡು ದಿನಗಳ ಕಾರ್ಯಕ್ರಮವು ನಾಳೆ, ಜನವರಿ 25ರಂದು ಮುಕ್ತಾಯಗೊಳ್ಳಲಿದ್ದು, ಮುಂಬರುವ ಹಜ್‌ ಋುತುವಿನಲ್ಲಿರಾಜ್ಯ ಹಜ್‌ ನಿರೀಕ್ಷ ಕರ ಸನ್ನದ್ಧತೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿರುವ ಸಂವಾದಾತ್ಮಕ ಅಧಿವೇಶನಗಳು ಮತ್ತು ಚರ್ಚೆಗಳೊಂದಿಗೆ ಮುಕ್ತಾಯಗೊಳ್ಳುತ್ತದೆ.

 

*****


(रिलीज़ आईडी: 2218362) आगंतुक पटल : 4
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati