ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಮೈ ಭಾರತ್ ನಿಂದ ಭಾರತದಾದ್ಯಂತ ರಾಷ್ಟ್ರೀಯ ಮತದಾರರ ದಿನದ ಪಾದಯಾತ್ರೆ / ಭಾನುವಾರಗಳಂದು ಸೈಕಲ್ 2026 ಆಯೋಜನೆ

प्रविष्टि तिथि: 24 JAN 2026 4:13PM by PIB Bengaluru

ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿನ ಸ್ವಾಯತ್ತ ಸಂಸ್ಥೆಯಾದ ಮೇರಾ ಯುವ ಭಾರತ್ ರಾಷ್ಟ್ರೀಯ ಮತದಾರರ ದಿನಾಚರಣೆ 2026 ರ ಅಂಗವಾಗಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ರಾಜಧಾನಿಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಚಟುವಟಿಕೆಗಳೊಂದಿಗೆ 2026ರ ಜನವರಿ 25 ರಂದು ರಾಷ್ಟ್ರವ್ಯಾಪಿ ರಾಷ್ಟ್ರೀಯ ಮತದಾರರ ದಿನದ ಪಾದಯಾತ್ರೆ / ಭಾನುವಾರಗಳಂದು ಸೈಕಲ್ ಸವಾರಿ ಆಯೋಜಿಸಲಿದೆ.

ಭಾರತೀಯ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ಅಂಗವಾಗಿ ವಾರ್ಷಿಕವಾಗಿ ಆಚರಿಸಲಾಗುವ ರಾಷ್ಟ್ರೀಯ ಮತದಾರರ ದಿನವು, ಯುವಜನರು ಮತ್ತು ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ವಿಶೇಷ ಆದ್ಯತೆ ನೀಡುತ್ತಾ ಮಾಹಿತಿಯುಕ್ತ, ನೈತಿಕ ಮತ್ತು ಸಕ್ರಿಯವಾಗಿ ಚುನಾವಣಾ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರನಿರ್ಮಾಣದಲ್ಲಿ ಜನರ ಪಾಲ್ಗೊಳ್ಳುವಿಕೆ ಎಂಬ ಮಾನ್ಯ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಉಪಕ್ರಮವು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯ ಕೇಂದ್ರಭಾಗದಲ್ಲಿ ಯುವ ನಾಗರಿಕರನ್ನಿರಿಸಿದೆ.

ಈ ಕಾರ್ಯಕ್ರಮವು ಸಾಧ್ಯವಿರುವೆಡೆಗಳಲ್ಲಿ ಖೇಲೋ ಇಂಡಿಯಾ / ಭಾರತೀಯ ಕ್ರೀಡಾ ಪ್ರಾಧಿಕಾರದ ಭಾನುವಾರದ ಸೈಕಲ್ ಉಪಕ್ರಮ ಸಹಿತವಾಗಿ ದೈಹಿಕ ಸದೃಢತೆ ಮತ್ತು ಸಮುದಾಯದ ಭಾಗವಹಿಸುವಿಕೆಯೊಂದಿಗೆ ಮತದಾರರ ಜಾಗೃತಿಯನ್ನು ಸಂಯೋಜಿಸಿದೆ. ಪಾದಯಾತ್ರೆಗಳು ಮತ್ತು ಸೈಕ್ಲಿಂಗ್ ಚಟುವಟಿಕೆಗಳ ಮೂಲಕ ಮೈ ಭಾರತ್ ಸ್ವಯಂಸೇವಕರು ಸಮುದಾಯಗಳೊಂದಿಗೆ ಬೆರೆಯುತ್ತಾರೆ. ಮತದಾರರ ನೋಂದಣಿ ಬಗ್ಗೆ ತಿಳಿಸುತ್ತಾ ಮತದಾನದ ಮಹತ್ವದ ಬಗ್ಗೆ ವಿವರಿಸುತ್ತಾ ಸಮಗ್ರ ಮತ್ತು ಪಾಲ್ಗೊಳ್ಳುವಿಕಾತ್ಮಕವಾಗಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಉತ್ತೇಜನ ನೀಡುತ್ತಾರೆ.

36 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳಲ್ಲಿ, ಸುಮಾರು 1,000 'ಮೈ ಭಾರತ್' ಸ್ವಯಂಸೇವಕರು ಸಾಂವಿಧಾನಿಕ ಪ್ರಾಧಿಕಾರಗಳು ಆಯೋಜಿಸುವ ಧ್ವಜಾರೋಹಣ ಸಮಾರಂಭಗಳು, ಮೊದಲ ಬಾರಿಯ ಮತದಾರರಿಗೆ ಸನ್ಮಾನ, ಮತದಾರರ ಜಾಗೃತಿ ಸಂವಾದ, ಪ್ರತಿಜ್ಞೆ ಸ್ವೀಕಾರ, ಸಾರ್ವಜನಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ರೀತಿಯ ಚಟುವಟಿಕೆಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳು, ಸ್ಥಳೀಯ ಆಡಳಿತ, ಚುನಾಯಿತ ಪ್ರತಿನಿಧಿಗಳು ಮತ್ತು ಪ್ರತಿ ಜಿಲ್ಲೆಯ ಸ್ಥಳೀಯವಾಗಿ ಹೊಂದಿಕೊಳ್ಳಬಲ್ಲ ಸುಮಾರು 500 ಸ್ವಯಂಸೇವಕರೊಂದಿಗೆ 763 ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುವುದು.

ಈ ರಾಷ್ಟ್ರವ್ಯಾಪಿ ಸಂಪರ್ಕ ಕಾರ್ಯಕ್ರಮದ ಮೂಲಕ, ಯುವಜನರಲ್ಲಿ ಪ್ರಜಾಸತ್ತಾತ್ಮಕ ಪ್ರಜ್ಞೆಯನ್ನು ಬಲಪಡಿಸುವ ಮತ್ತು ದೇಶಾದ್ಯಂತ 2026ರ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ಏಕರೂಪದ ಆಚರಣೆ ಖಚಿತಪಡಿಸಿಕೊಳ್ಳುವ ಗುರಿಯನ್ನು ಮೈ ಭಾರತ್ ಹೊಂದಿದೆ. ಈ ಉಪಕ್ರಮದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲು ಜಿಲ್ಲಾ ಮಟ್ಟದ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗುವುದು.

 

*****


(रिलीज़ आईडी: 2218276) आगंतुक पटल : 5
इस विज्ञप्ति को इन भाषाओं में पढ़ें: Marathi , Malayalam , English , Urdu , हिन्दी , Gujarati , Tamil