ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಗಣರಾಜ್ಯೋತ್ಸವದ ಮುನ್ನಾದಿನದಂದು ದೇಶವನ್ನುದ್ದೇಶಿಸಿ ಭಾರತದ ರಾಷ್ಟ್ರಪತಿ ಅವರ ಭಾಷಣ

प्रविष्टि तिथि: 24 JAN 2026 5:06PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಗಣರಾಜ್ಯೋತ್ಸವದ ಮುನ್ನಾದಿನವಾದ ನಾಳೆ (ಜನವರಿ 25, 2026) ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ರಾಷ್ಟ್ರಪತಿಗಳ ಭಾಷಣವು ಆಕಾಶವಾಣಿಯ ಎಲ್ಲಾ ರಾಷ್ಟ್ರೀಯ ಜಾಲ ಮತ್ತು ದೂರದರ್ಶನದ ಎಲ್ಲಾ ವಾಹಿನಿಗಳಲ್ಲಿ ರಾತ್ರಿ 7 ಗಂಟೆಯಿಂದ ಪ್ರಸಾರವಾಗಲಿದೆ. ಮೊದಲಿಗೆ ಹಿಂದಿಯಲ್ಲಿ ನಂತರ ಇಂಗ್ಲಿಷ್ ನಲ್ಲಿ ಬಿತ್ತರವಾಗಲಿದೆ. ಹಿಂದಿ ಮತ್ತು ಇಂಗ್ಲಿಷ್‌ ನಲ್ಲಿ ಭಾಷಣ ಪ್ರಸಾರದ ನಂತರ ದೂರದರ್ಶನದ ಪ್ರಾದೇಶಿಕ ವಾಹಿನಿಗಳು ಪ್ರಾದೇಶಿಕ ಅವತರಣಿಕೆ ಪ್ರಸಾರ ಮಾಡಲಿವೆ. ಆಕಾಶವಾಣಿಯ ಆಯಾ ಪ್ರಾದೇಶಿಕ ಜಾಲಗಳಲ್ಲಿ ರಾತ್ರಿ 9.30 ರಿಂದ (2130 ಗಂಟೆ) ಪ್ರಾದೇಶಿಕ ಭಾಷಾ ಆವೃತ್ತಿ ಬಿತ್ತರಗೊಳ್ಳಲಿದೆ.

 

*****


(रिलीज़ आईडी: 2218228) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Gujarati , Tamil , Malayalam