ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

77ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಪಂಚಾಯತಿ ರಾಜ್ ಸಚಿವಾಲಯವು ಪಂಚಾಯತ್ ನಾಯಕರನ್ನು ಸನ್ಮಾನಿಸಲಿದೆ; ಪಂಚಮ್ ಚಾಟ್‌ಬಾಟ್ ಮತ್ತು ಇತರ ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಲಿದೆ

प्रविष्टि तिथि: 24 JAN 2026 2:40PM by PIB Bengaluru

2026ರ ಜನವರಿ 25 ರಂದು ಹೊಸದಿಲ್ಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಮೆರವಣಿಗೆಯನ್ನು ವೀಕ್ಷಿಸಲು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾದ ಚುನಾಯುತ ಪಂಚಾಯತ್ ಪ್ರತಿನಿಧಿಗಳನ್ನು ಗೌರವಿಸಲು ಪಂಚಾಯತಿ ರಾಜ್ ಸಚಿವಾಲಯವು ಸನ್ಮಾನ ಸಮಾರಂಭವನ್ನು ಆಯೋಜಿಸಲಿದೆ. ಪಂಚಾಯತಿ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಕೇಂದ್ರ ಪಂಚಾಯತಿ ರಾಜ್ ಸಹಾಯಕ ಸಚಿವರಾದ ಪ್ರೊ. ಎಸ್. ಪಿ. ಸಿಂಗ್ ಬಾಘೇಲ್ ಅವರು ಸನ್ಮಾನಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಯುನಿಸೆಫ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಪಂಚಮ್ - ಪಂಚಾಯತ್ ಸಹಾಯ ಮತ್ತು ಸಂದೇಶ ಕಳುಹಿಸುವ ಚಾಟ್‌ಬಾಟ್, ಗ್ರಾಮೋದಯ ಸಂಕಲ್ಪ ನಿಯತಕಾಲಿಕೆಯ 17 ನೇ ಸಂಚಿಕೆ, ಪಂಚಾಯತಿ ರಾಜ್ ಸಂಸ್ಥೆಗಳ ಕುರಿತಾದ ಮೂಲ ಅಂಕಿಅಂಶಗಳ ಸಂಗ್ರಹ - 2025, ಪಂಚಾಯತ್ ಮಟ್ಟದಲ್ಲಿ ಸೇವಾ ವಿತರಣೆಯ ಕುರಿತು ತಜ್ಞರ ಸಮಿತಿ ವರದಿ ಮತ್ತು ಪಿ.ಇ.ಎಸ್.ಎ. (PESA)  ಕಾರ್ಯಕ್ಷಮತೆ ಹಾಗು ಅನುಷ್ಠಾನ ಶ್ರೇಣಿ ಸೂಚಕಗಳು ಸೇರಿದಂತೆ ಸಚಿವಾಲಯದ ಪ್ರಮುಖ ಉಪಕ್ರಮಗಳು ಮತ್ತು ಪ್ರಕಟಣೆಗಳ ಬಿಡುಗಡೆ ಹಾಗು ಉದ್ಘಾಟನೆಯನ್ನು ಮಾಡಲಾಗುತ್ತದೆ. ಸಂವಿಧಾನ ದಿನ - 2025 ರ ಸ್ಮರಣಾರ್ಥವಾಗಿ ಆಯೋಜಿಸಲಾದ ನಿಮ್ಮ ಸಂವಿಧಾನವನ್ನು ತಿಳಿದುಕೊಳ್ಳಿ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳು ಮತ್ತು ಪ್ರಮಾಣಪತ್ರಗಳನ್ನು ಸಹ ನೀಡಲಾಗುತ್ತದೆ.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಪರಿಪಕ್ವತೆಯನ್ನು ಸಾಧಿಸಿದ ಪಂಚಾಯತ್‌ಗಳ ಸರಪಂಚ್‌ಗಳು, ಮುಖ್ಯಸ್ಥರು, ಗ್ರಾಮ ಪ್ರಧಾನರು ಮತ್ತು ಬ್ಲಾಕ್ ಹಾಗು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಗೌರವಕ್ಕೆ ಪಾತ್ರರಾಗಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ನಾಮನಿರ್ದೇಶನಗೊಂಡ ಸುಮಾರು 240 ಪಂಚಾಯತ್ ಮುಖ್ಯಸ್ಥರನ್ನು ಅವರ ತಳಮಟ್ಟದ ಕೊಡುಗೆಗಳು ಮತ್ತು ವಿಕ್ಷಿತ್ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವಲ್ಲಿ ಅವರ ಪಾತ್ರಕ್ಕಾಗಿ ಗುರುತಿಸಲಾಗುತ್ತಿದೆ. ಗಣರಾಜ್ಯೋತ್ಸವದ ಪರೇಡ್‌ಗಾಗಿ, ಸಚಿವಾಲಯವು ಪಿಆರ್‌ಐಗಳು/ಆರ್‌ಎಲ್‌ಬಿಗಳ ಮುಖ್ಯಸ್ಥರು ಮತ್ತು  ಅವರ ಸಂಗಾತಿಗಳಿಗೆ ಆತಿಥ್ಯವನ್ನು ಆಯೋಜಿಸುತ್ತಿದೆ, ಒಟ್ಟು ಸುಮಾರು 450 ವಿಶೇಷ ಅತಿಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಶೇಷ ಆಹ್ವಾನಿತರು 2026ರ ಜನವರಿ 25ರಂದು ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿ ಸ್ವಾತಂತ್ರ್ಯದ ನಂತರದ ಭಾರತದ ನಾಯಕತ್ವ ಮತ್ತು ಆಡಳಿತ ಪ್ರಯಾಣದ ಅನುಭವವನ್ನು ಪಡೆಯಲಿದ್ದಾರೆ ಮತ್ತು "ಸ್ವಾಮಿತ್ವ ಯೋಜನೆ: ಆತ್ಮನಿರ್ಭರ್ ಪಂಚಾಯತ್ ಸೆ ಸಮೃದ್ಧ್ ಏವಂ ಆತ್ಮನಿರ್ಭರ್ ಭಾರತ್" ಎಂಬ ಶೀರ್ಷಿಕೆಯ ಪರೇಡ್ ನಲ್ಲಿ ಸಚಿವಾಲಯದ ಟ್ಯಾಬ್ಲೋವನ್ನು ವೀಕ್ಷಿಸುತ್ತಾರೆ.

 

*****


(रिलीज़ आईडी: 2218191) आगंतुक पटल : 9
इस विज्ञप्ति को इन भाषाओं में पढ़ें: Tamil , Malayalam , English , Urdu , हिन्दी , Marathi