ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಸಂತ ಪಂಚಮಿಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಪ್ರಧಾನಮಂತ್ರಿ ಅವರು ಶುಭಾಶಯ ಕೋರಿದ್ದಾರೆ 

प्रविष्टि तिथि: 23 JAN 2026 9:25AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಸಂತ ಪಂಚಮಿಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ. 

ಪ್ರಕೃತಿಯ ಸೌಂದರ್ಯ ಮತ್ತು ದಿವ್ಯತೆಯನ್ನು ಸಂಭ್ರಮಿಸುವ ಈ ಹಬ್ಬದ ಪಾವಿತ್ರ್ಯವನ್ನು ವಿಶೇಷವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದ್ದಾರೆ. ಜ್ಞಾನ ಮತ್ತು ಕಲೆಗಳ ದೇವಿ ಸರಸ್ವತಿಯ ಆಶೀರ್ವಾದ ಎಲ್ಲರಿಗೂ ಲಭಿಸಲಿ ಎಂದು ಪ್ರಧಾನಮಂತ್ರಿ ಅವರು ಪ್ರಾರ್ಥಿಸಿದ್ದಾರೆ. 

ದೇವಿ ಸರಸ್ವತಿಯ ಕೃಪೆಯಿಂದ ಎಲ್ಲಾ ನಾಗರಿಕರ ಜೀವನವು ಕಲಿಕೆ, ಜ್ಞಾನ ಮತ್ತು ಬುದ್ಧಿಮತ್ತೆಯಿಂದ ಸದಾಕಾಲ ಪ್ರಕಾಶಮಾನವಾಗಿರಲಿ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಆಶಿಸಿದ್ದಾರೆ.

ಎಕ್ಸ್ ಪೋಸ್ಟ್‌ನಲ್ಲಿ ಶ್ರೀ ಮೋದಿ ಹೀಗೆ ಹೇಳಿದರು;

“आप सभी को प्रकृति की सुंदरता और दिव्यता को समर्पित पावन पर्व बसंत पंचमी की अनेकानेक शुभकामनाएं। ज्ञान और कला की देवी मां सरस्वती का आशीर्वाद हर किसी को प्राप्त हो। उनकी कृपा से सबका जीवन विद्या, विवेक और बुद्धि से सदैव आलोकित रहे, यही कामना है।”

 

*****


(रिलीज़ आईडी: 2217604) आगंतुक पटल : 6
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Punjabi , Gujarati , Tamil , Telugu , Malayalam