ಇಂಧನ ಸಚಿವಾಲಯ
ಭಾರತದ ವಿದ್ಯುತ್ ಪ್ರಸರಣ ಜಾಲವು 5 ಲಕ್ಷ ಸರ್ಕ್ಯೂಟ್ ಕಿ.ಮೀ. ದಾಟಿದೆ
ಏಪ್ರಿಲ್ 2014 ರಿಂದ ಪ್ರಸರಣ ಜಾಲದಲ್ಲಿ 71.6%ರಷ್ಟು ಬೆಳವಣಿಗೆ ಕಂಡಿದೆ
ಹೆಚ್ಚುತ್ತಿರುವ ಪಳೆಯುಳಿಕೆ ರಹಿತ ವಿದ್ಯುತ್ ಉತ್ಪಾದನೆಯನ್ನು ಸ್ಥಳಾಂತರಿಸಲು ಬೇಕಾದ ಅಗತ್ಯ ಸಹಾಯಕ್ಕಾಗಿ ಹೆಚ್ಚುವರಿ 67000 ಸರ್ಕ್ಯೂಟ್ ಕಿಲೋಮೀಟರ್ ಗಳಿಗೆ ವಿಸ್ತರಣೆ ಯೋಜನೆ ಕಾರ್ಯ ನಡೆಯುತ್ತಿದೆ
प्रविष्टि तिथि:
22 JAN 2026 2:05PM by PIB Bengaluru
ಭಾರತದ ರಾಷ್ಟ್ರೀಯ ವಿದ್ಯುತ್ ಪ್ರಸರಣ ಜಾಲವು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ, 5 ಲಕ್ಷ ಸರ್ಕ್ಯೂಟ್ ಕಿಲೋಮೀಟರ್ (ಸಿಕೆಎಂ) ಪ್ರಸರಣ ಮಾರ್ಗಗಳನ್ನು (220 ಕೆವಿ ಮತ್ತು ಅದಕ್ಕಿಂತ ಹೆಚ್ಚಿನ) ಮತ್ತು 1,407 ಜಿವಿಎ ರೂಪಾಂತರ ಸಾಮರ್ಥ್ಯದೊಂದಿಗೆ (220 ಕೆವಿ ಮತ್ತು ಅದಕ್ಕಿಂತ ಹೆಚ್ಚಿನ) ವಿಸ್ತರಣೆ ದಾಟಿದೆ.
ವಿಶ್ವದ ಅತಿದೊಡ್ಡ ಸಿಂಕ್ರೊನಸ್ ರಾಷ್ಟ್ರೀಯ ಗ್ರಿಡ್ ಜನವರಿ 14, 2026 ರಂದು ರಾಜಸ್ಥಾನ ನವೀಕರಿಸಬಹುದಾದ ಇಂಧನ ವಲಯದಿಂದ ಆರ್.ಇ ವಿದ್ಯುತ್ ಅನ್ನು ಸ್ಥಳಾಂತರಿಸಲು ಭಡ್ಲಾ II ರಿಂದ ಸಿಕಾರ್ II ಉಪಕೇಂದ್ರ 765 ಕೆ.ವಿ. ನ 628 ಸಿ.ಕೆ.ಎಂ. ಪ್ರಸರಣ ಮಾರ್ಗವನ್ನು ಕಾರ್ಯಾರಂಭ ಮಾಡುವ ಮೂಲಕ ಈ ಸಾಧನೆಯನ್ನು ಸಾಧಿಸಿದೆ. ಈ ಪ್ರಸರಣ ಮಾರ್ಗದ ಕಾರ್ಯಾರಂಭದೊಂದಿಗೆ ಭಡ್ಲಾ, ರಾಮಗಢ ಮತ್ತು ಫತೇಗಢ ಸೌರಶಕ್ತಿ ಸಂಕೀರ್ಣದ ಆರ್.ಇ. ವಲಯದಿಂದ ಹೆಚ್ಚುವರಿಯಾಗಿ 1100 ಎಂ.ಡಬ್ಲ್ಯೂ. ವಿದ್ಯುತ್ ಅನ್ನು ಸುಲಭವಾಗಿ ಸ್ಥಳಾಂತರಿಸಬಹುದು.
ಏಪ್ರಿಲ್ 2014 ರಿಂದ, ದೇಶದ ಪ್ರಸರಣ ಜಾಲವು 2.09 ಲಕ್ಷ ಸಿ.ಕೆ.ಎಂ. ಪ್ರಸರಣ ಮಾರ್ಗಗಳನ್ನು (220 ಕೆ.ವಿ. ಮತ್ತು ಅದಕ್ಕಿಂತ ಹೆಚ್ಚಿನ) ಸೇರಿಸುವುದರೊಂದಿಗೆ 71.6% ರಷ್ಟು ಪ್ರಸರಣ ಜಾಲವು ಬೆಳೆದಿದೆ, ಇದು 876 ಜಿ.ವಿ.ಎ. ಯಿಂದ ರೂಪಾಂತರ ಸಾಮರ್ಥ್ಯವನ್ನು (220 ಕೆ.ವಿ. ಮತ್ತು ಅದಕ್ಕಿಂತ ಹೆಚ್ಚಿನ) ಹೆಚ್ಚಿಸಿದೆ. ಈಗ 1,20,340 ಎಂ.ಡಬ್ಲ್ಯೂ. ನಷ್ಟು ಇರುವ ಅಂತರ-ಪ್ರಾದೇಶಿಕ ವಿದ್ಯುತ್ ವರ್ಗಾವಣೆ ಸಾಮರ್ಥ್ಯವು ಪ್ರದೇಶಗಳಲ್ಲಿ ವಿದ್ಯುತ್ ನ ತಡೆರಹಿತ ವರ್ಗಾವಣೆಯನ್ನು ಸುಗಮಗೊಳಿಸಿ ಸಕ್ರಿಯಗೊಳಿಸಿದೆ, "ಒಂದು ರಾಷ್ಟ್ರ - ಒಂದು ಗ್ರಿಡ್ - ಒಂದು ಆವರ್ತನ"ದ ದೃಷ್ಟಿಯನ್ನು ಯಶಸ್ವಿಯಾಗಿ ಸಾಕಾರಗೊಳಿಸಿದೆ.
ಪ್ರಸ್ತುತ ಅನುಷ್ಠಾನದಲ್ಲಿರುವ ಅಂತರ ರಾಜ್ಯ ಪ್ರಸರಣ ಯೋಜನೆಗಳು ಸುಮಾರು 40,000 ಸಿಕೆಎಂ ಪ್ರಸರಣ ಮಾರ್ಗಗಳು ಮತ್ತು 399 ಜಿವಿಎ ರೂಪಾಂತರ ಸಾಮರ್ಥ್ಯವನ್ನು ಸೇರಿಸುತ್ತವೆ. ಇವುಗಳ ಜೊತೆಗೆ, ಅನುಷ್ಠಾನದಲ್ಲಿರುವ ಅಂತರ್ ರಾಜ್ಯ ಪ್ರಸರಣ ಯೋಜನೆಗಳು ಇನ್ನೂ 27,500 ಸಿಕೆಎಂ ಪ್ರಸರಣ ಮಾರ್ಗಗಳು ಮತ್ತು 134 ಜಿವಿಎ ರೂಪಾಂತರ ಸಾಮರ್ಥ್ಯವನ್ನು ಸೇರಿಸುವ ನಿರೀಕ್ಷೆಯಿದೆ, ಇದು ಗ್ರಿಡ್ ವಿಶ್ವಾಸಾರ್ಹತೆ ಮತ್ತು ವಿದ್ಯುತ್ ಸ್ಥಳಾಂತರಿಸುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಪ್ರಸರಣ ಸಾಮರ್ಥ್ಯಕ್ಕೆ ಸೇರ್ಪಡೆಯು 2030 ರ ವೇಳೆಗೆ 500 ಜಿವಿಎ ಗುರಿಯನ್ನು ಹೊಂದಿರುವ ಹೆಚ್ಚುತ್ತಿರುವ ಪಳೆಯುಳಿಕೆಯಲ್ಲದ ವಿದ್ಯುತ್ ಉತ್ಪಾದನೆಯನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತದೆ.
ನವೀಕರಿಸಬಹುದಾದ ಇಂಧನ ಏಕೀಕರಣದಲ್ಲಿ ತ್ವರಿತ ಬೆಳವಣಿಗೆಯನ್ನು ಬೆಂಬಲಿಸುತ್ತಾ ದೇಶಾದ್ಯಂತ ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಸುರಕ್ಷಿತ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ನಿರಂತರ ಪ್ರಯತ್ನಗಳನ್ನು 5,00,000 ಸಿಕೆಎಂ ಪ್ರಸರಣ ಮಾರ್ಗಗಳ ಮೈಲಿಗಲ್ಲು ಪ್ರತಿಬಿಂಬಿಸುತ್ತದೆ.
*****
(रिलीज़ आईडी: 2217244)
आगंतुक पटल : 10