ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ತಂತ್ರಜ್ಞಾನದ ವ್ಯಾಪಕತೆ ಮತ್ತು ಹೂಡಿಕೆಯ ಮೇಲಿನ ಲಾಭದ (ROI) ಮೇಲೆ ಕೇಂದ್ರೀಕರಿಸಿದ ಎಐ ರಾಷ್ಟ್ರಗಳ ಮೊದಲ ಗುಂಪಿನಲ್ಲಿ ಭಾರತ: ವಿಶ್ವ ಆರ್ಥಿಕ ವೇದಿಕೆಯಲ್ಲಿ ಸಚಿವರಾದ ಅಶ್ವಿನಿ ವೈಷ್ಣವ್


ಎಐ ಶಕ್ತಿಯು ಆರ್ಥಿಕತೆ ಮತ್ತು ಅಳವಡಿಕೆಯಿಂದ ಬರುತ್ತದೆಯೇ ಹೊರತು ಮಾದರಿಯ ಗಾತ್ರದಿಂದಲ್ಲ: ದಾವೋಸ್‌ ನಲ್ಲಿ ಸಚಿವರ ಹೇಳಿಕೆ

38,000 ಜಿಪಿಯುಗಳ ಮೂಲಕ ಸರ್ಕಾರವು ಕೈಗೆಟುಕುವ ದರದ ಎಐ ಕಂಪ್ಯೂಟ್ ಅನ್ನು ಸಕ್ರಿಯಗೊಳಿಸುತ್ತದೆ: ಅಶ್ವಿನಿ ವೈಷ್ಣವ್

ಎಐ ಆಡಳಿತಕ್ಕೆ ಭಾರತದಿಂದ ತಾಂತ್ರಿಕ-ಕಾನೂನು ವಿಧಾನ ಅಳವಡಿಕೆ; ಪೂರ್ವಾಗ್ರಹ ಮತ್ತು ಡೀಪ್‌ ಫೇಕ್ ಪತ್ತೆ ಹಚ್ಚುವಿಕೆಯ ಮೇಲೆ ಗಮನ

ಆರ್ಥಿಕತೆಯಾದ್ಯಂತ ಎಐ ತಂತ್ರಜ್ಞಾನವು ಸರ್ವವ್ಯಾಪಕತೆಯು ಭಾರತದ ಕಾರ್ಯತಂತ್ರದ ಕೇಂದ್ರಬಿಂದುವಾಗಿದೆ

प्रविष्टि तिथि: 21 JAN 2026 4:05PM by PIB Bengaluru

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು 20 ಜನವರಿ 2026 ರಂದು ದಾವೋಸ್‌ ನ ವಿಶ್ವ ಆರ್ಥಿಕ ವೇದಿಕೆಯಲ್ಲಿ (ಡಬ್ಲ್ಯುಇಎಫ್) ನಡೆದ "ಎಐ ಪವರ್ ಪ್ಲೇ, ನೋ ರೆಫರೀಸ್" ಎಂಬ ಶೀರ್ಷಿಕೆಯ ಚರ್ಚೆಯಲ್ಲಿ ಭಾಗವಹಿಸಿ, ಬೃಹತ್ ಪ್ರಮಾಣದ ಎಐ ವ್ಯಾಪಿಸುವಿಕೆ, ಆರ್ಥಿಕ ಕಾರ್ಯಸಾಧ್ಯತೆ ಮತ್ತು ತಾಂತ್ರಿಕ-ಕಾನೂನು ಆಡಳಿತಕ್ಕೆ ಒತ್ತು ನೀಡುವ ಮೂಲಕ ಕೃತಕ ಬುದ್ಧಿಮತ್ತೆ (ಎಐ) ಕುರಿತಾದ ಭಾರತದ ದೃಷ್ಟಿಕೋನವನ್ನು ವಿವರಿಸಿದರು.

ಜಾಗತಿಕ ಎಐ ಮೈತ್ರಿಗಳು ಮತ್ತು ಭೌಗೋಳಿಕ ರಾಜಕೀಯದ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರಾದರು, ಭಾರತವು ನಿಸ್ಸಂದೇಹವಾಗಿ ಎಐ ರಾಷ್ಟ್ರಗಳ ಮೊದಲ ಗುಂಪಿಗೆ ಸೇರಿದೆ ಎಂದು ಪ್ರತಿಪಾದಿಸಿದರು. ಎಐ ವಾಸ್ತುಶಿಲ್ಪವು ಅಪ್ಲಿಕೇಶನ್, ಮಾಡೆಲ್, ಚಿಪ್, ಮೂಲಸೌಕರ್ಯ ಮತ್ತು ಇಂಧನ ಎಂಬ ಐದು ಪದರಗಳನ್ನು ಒಳಗೊಂಡಿದೆ; ಮತ್ತು ಭಾರತವು ಈ ಐದೂ ಪದರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. "ಅಪ್ಲಿಕೇಶನ್ ಪದರದಲ್ಲಿ, ಭಾರತವು ಬಹುಶಃ ಜಗತ್ತಿಗೆ ಸೇವೆಗಳ ಅತಿದೊಡ್ಡ ಪೂರೈಕೆದಾರನಾಗಲಿದೆ" ಎಂದ ಅವರು, ಎಐ ನಲ್ಲಿನ ಹೂಡಿಕೆಯ ಮೇಲಿನ ಲಾಭವು (ROI) ಕೇವಲ ಬೃಹತ್ ಮಾದರಿಗಳನ್ನು ರಚಿಸುವುದರಿಂದ ಬರುವುದಿಲ್ಲ, ಬದಲಾಗಿ ಉದ್ಯಮ ಮಟ್ಟದ ಅಳವಡಿಕೆ ಮತ್ತು ಉತ್ಪಾದಕತೆಯ ಹೆಚ್ಚಳದಿಂದ ಬರುತ್ತದೆ ಎಂದು ತಿಳಿಸಿದರು. ಸುಮಾರು ಶೇಕಡಾ 95 ರಷ್ಟು ಎಐ ಬಳಕೆಯ ಸಂದರ್ಭಗಳನ್ನು 20-50 ಬಿಲಿಯನ್ ಪ್ಯಾರಾಮೀಟರ್ ಶ್ರೇಣಿಯ ಮಾದರಿಗಳ ಮೂಲಕ ಪರಿಹರಿಸಬಹುದು, ಇವುಗಳಲ್ಲಿ ಹಲವು ಈಗಾಗಲೇ ಭಾರತದ ಬಳಿ ಇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಭೌಗೋಳಿಕ ರಾಜಕೀಯದಲ್ಲಿ ಎಐ ಪಾತ್ರದ ಬಗ್ಗೆ ಮಾತನಾಡಿದ ಶ್ರೀ ವೈಷ್ಣವ್ ಅವರು, ಭೌಗೋಳಿಕ ರಾಜಕೀಯ ಶಕ್ತಿಯನ್ನು ಕೇವಲ ಬೃಹತ್ ಎಐ ಮಾದರಿಗಳ ಮಾಲೀಕತ್ವಕ್ಕೆ ಸಮೀಕರಿಸಬಾರದು ಎಂದು ಎಚ್ಚರಿಸಿದರು. ಅಂತಹ ಮಾದರಿಗಳನ್ನು ಸ್ವಿಚ್ ಆಫ್ ಮಾಡಬಹುದು ಮತ್ತು ಅವು ಅವುಗಳ ತಯಾರಕರಿಗೇ ಆರ್ಥಿಕ ಒತ್ತಡವನ್ನು ಉಂಟುಮಾಡಬಹುದು ಎಂದು ಅವರು ಹೇಳಿದರು. "ಐದನೇ ಕೈಗಾರಿಕಾ ಕ್ರಾಂತಿ ಎಂದು ನಾನು ಕರೆಯುವ ಈ ಹಂತದ ಆರ್ಥಿಕತೆಯು ಹೂಡಿಕೆಯ ಮೇಲಿನ ಲಾಭದಿಂದ (ROI) ಬರುತ್ತದೆ — ಅಂದರೆ ಸಾಧ್ಯವಿರುವ ಅತ್ಯಧಿಕ ಲಾಭವನ್ನು ಪಡೆಯಲು ಅತ್ಯಂತ ಕಡಿಮೆ ವೆಚ್ಚದ ಪರಿಹಾರವನ್ನು ಅಳವಡಿಸಿಕೊಳ್ಳುವುದು" ಎಂದು ಅವರು ಹೇಳಿದರು. ಪರಿಣಾಮಕಾರಿ ಎಐ ಅಳವಡಿಕೆಯು ಹೆಚ್ಚಾಗಿ ಸಿಪಿಯುಗಳು, ಸಣ್ಣ ಮಾದರಿಗಳು ಮತ್ತು ಉದಯೋನ್ಮುಖ ಕಸ್ಟಮ್ ಸಿಲಿಕಾನ್‌ ಗಳ ಮೇಲೆ ಅವಲಂಬಿತವಾಗಿದೆ, ಇದು ಯಾವುದೇ ಒಂದು ದೇಶದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೇವಲ ಪ್ರಮಾಣದಿಂದಲೇ ಎಐ ಪ್ರಾಬಲ್ಯ ಸಾಧಿಸುವ ಕಲ್ಪನೆಯನ್ನು ಸವಾಲು ಮಾಡುತ್ತದೆ ಎಂದು ಅವರು ಹೇಳಿದರು.

ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಯಶಸ್ಸನ್ನು ಉಲ್ಲೇಖಿಸಿದ ಸಚಿವರಾದರು, ಸರ್ಕಾರವು ಜೀವನದ ಪ್ರತಿಯೊಂದು ಕ್ಷೇತ್ರ ಮತ್ತು ಆರ್ಥಿಕತೆಯಲ್ಲಿ ಎಐ ವ್ಯಾಪಕತೆಯನ್ನು ವ್ಯವಸ್ಥಿತವಾಗಿ ಅನುಸರಿಸುತ್ತಿದೆ ಎಂದು ಹೇಳಿದರು. ಜಿಪಿಯುಗಳ ಲಭ್ಯತೆಯು ಒಂದು ಪ್ರಮುಖ ಅಡಚಣೆಯೆಂದು ಗುರುತಿಸಿದ ಅವರು, ಭಾರತವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯನ್ನು ಅಳವಡಿಸಿಕೊಂಡಿದೆ ಮತ್ತು ಸುಮಾರು 38,000 ಜಿಪಿಯುಗಳನ್ನು ಸಾಮಾನ್ಯ ರಾಷ್ಟ್ರೀಯ ಕಂಪ್ಯೂಟ್ ಸೌಲಭ್ಯವಾಗಿ ಒಟ್ಟುಗೂಡಿಸಿದೆ ಎಂದು ಹೇಳಿದರು. ಈ ಸೌಲಭ್ಯವು ಸರ್ಕಾರದ ನೆರವಿನಿಂದ ಕೂಡಿದ್ದು ಮತ್ತು ಸಬ್ಸಿಡಿ ಹೊಂದಿದ್ದು, ವಿದ್ಯಾರ್ಥಿಗಳು, ಸಂಶೋಧಕರು, ನವೋದ್ಯಮಗಳು ಮತ್ತು ನಾವೀನ್ಯಕಾರರಿಗೆ ಜಾಗತಿಕ ವೆಚ್ಚದ ಸುಮಾರು ಮೂರನೇ ಒಂದು ಭಾಗದಷ್ಟು ದರದಲ್ಲಿ ಕೈಗೆಟುಕುವ ಪ್ರವೇಶವನ್ನು ಒದಗಿಸುತ್ತದೆ ಎಂದರು. ಸಚಿವರಾದರು ಭಾರತದ ಎಐ ಕಾರ್ಯತಂತ್ರದ ನಾಲ್ಕು ಸ್ತಂಭಗಳನ್ನು ಈ ಕೆಳಗಿನಂತೆ ವಿವರಿಸಿದರು:

  • ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಸಾಮಾನ್ಯ ಕಂಪ್ಯೂಟ್ ಸೌಲಭ್ಯ.

· ಹೆಚ್ಚಿನ ಪ್ರಾಯೋಗಿಕ ಅಗತ್ಯಗಳನ್ನು ಪೂರೈಸುವ ಉಚಿತ ಎಐ ಮಾದರಿಗಳ ಗುಚ್ಛ.

· ಬೃಹತ್ ಪ್ರಮಾಣದ ಕೌಶಲ್ಯ ಅಭಿವೃದ್ಧಿ, 10 ಮಿಲಿಯನ್ ಜನರಿಗೆ ಎಐ ನಲ್ಲಿ ತರಬೇತಿ ನೀಡುವ ಕಾರ್ಯಕ್ರಮಗಳು ಪ್ರಗತಿಯಲ್ಲಿವೆ.

  • ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮವು ದೇಶೀಯ ಮತ್ತು ಜಾಗತಿಕ ಉದ್ಯಮಗಳಿಗಾಗಿ ಎಐ-ಚಾಲಿತ ಉತ್ಪಾದಕತೆ ಮತ್ತು ದಕ್ಷತೆಯತ್ತ ಹೊರಳಲು ಅನುವು ಮಾಡಿಕೊಡುತ್ತದೆ.

ನಿಯಂತ್ರಣ ಮತ್ತು ಆಡಳಿತದ ಕುರಿತು ಮಾತನಾಡಿದ ಶ್ರೀ ವೈಷ್ಣವ್, ಎಐ ನಿಯಂತ್ರಣಕ್ಕೆ ತಾಂತ್ರಿಕ-ಕಾನೂನು ವಿಧಾನದ ಮಹತ್ವವನ್ನು ಒತ್ತಿಹೇಳಿದರು. ನಿಯಂತ್ರಣವು ಕೇವಲ ಕಾನೂನುಗಳ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ, ಬದಲಾಗಿ ಪೂರ್ವಾಗ್ರಹ ಮತ್ತು ಡೀಪ್‌ ಫೇಕ್‌ ಗಳಂತಹ ಹಾನಿಗಳನ್ನು ತಗ್ಗಿಸುವ ತಾಂತ್ರಿಕ ಪರಿಕರಗಳ ಬೆಂಬಲವನ್ನು ಹೊಂದಿರಬೇಕು ಎಂದು ಅವರು ಹೇಳಿದರು. "ಉದಾಹರಣೆಗೆ, ಡೀಪ್‌ಫೇಕ್ ಪತ್ತೆ ವ್ಯವಸ್ಥೆಗಳು ನ್ಯಾಯಾಲಯಗಳಲ್ಲಿ ಪರಿಶೀಲನೆಗೆ ಒಳಪಡುವಂತಹ ನಿಖರತೆಯನ್ನು ಹೊಂದಿರಬೇಕು" ಎಂದ ಅವರು, ಡೀಪ್‌ಫೇಕ್‌ ಗಳನ್ನು ಪತ್ತೆಹಚ್ಚಲು, ಪೂರ್ವಾಗ್ರಹವನ್ನು ತಗ್ಗಿಸಲು ಮತ್ತು ಉದ್ಯಮಗಳಲ್ಲಿ ಅಳವಡಿಸುವ ಮೊದಲು ಮಾದರಿಗಳ ಸರಿಯಾದ 'ಅನ್‌-ಲರ್ನಿಂಗ್' ಖಚಿತಪಡಿಸಿಕೊಳ್ಳಲು ಭಾರತವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿಸಿದರು.

ಈ ಚರ್ಚೆಯನ್ನು ಇಯಾನ್ ಬ್ರೆಮ್ಮರ್ (ಅಧ್ಯಕ್ಷರು ಮತ್ತು ಸಂಸ್ಥಾಪಕರು, ಯುರೇಷಿಯಾ ಗ್ರೂಪ್) ನಿರ್ವಹಿಸಿದರು. ಬ್ರಾಡ್ ಸ್ಮಿತ್ (ಉಪಾಧ್ಯಕ್ಷರು ಮತ್ತು ಅಧ್ಯಕ್ಷರು, ಮೈಕ್ರೋಸಾಫ್ಟ್), ಕ್ರಿಸ್ಟಾಲಿನಾ ಜಾರ್ಜಿವಾ (ವ್ಯವಸ್ಥಾಪಕ ನಿರ್ದೇಶಕರು, ಐಎಂಎಫ್) ಮತ್ತು ಖಾಲಿದ್ ಅಲ್-ಫಾಲಿಹ್ (ಹೂಡಿಕೆ ಸಚಿವರಾದರು, ಸೌದಿ ಅರೇಬಿಯಾ) ಈ ಚರ್ಚೆಯಲ್ಲಿ ಸೇರಿದ್ದರು.

 

*****

 


(रिलीज़ आईडी: 2216956) आगंतुक पटल : 14
इस विज्ञप्ति को इन भाषाओं में पढ़ें: English , Urdu , Marathi , हिन्दी , Gujarati , Tamil