ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ವರ್ಷಾಂತ್ಯದ ಪರಾಮರ್ಶೆ 2025: ಬೃಹತ್ ಕೈಗಾರಿಕೆಗಳ ಸಚಿವಾಲಯ


“2025: ಬೃಹತ್ ಕೈಗಾರಿಕಾ ಸಚಿವಾಲಯವು ದಾಖಲೆ ಮಟ್ಟದ ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್ಐ) ಯೋಜನೆಯ ಹೂಡಿಕೆಗಳು ಮತ್ತು ಪಿಎಂ ಇ-ಡ್ರೈವ್ ಯೋಜನೆಯ ಯಶಸ್ಸಿನೊಂದಿಗೆ ಭಾರತದ ವಿದ್ಯುಚ್ಛಾಲಿತ ವಾಹನ(ಇವಿ)ಗಳ ವಲಯವನ್ನು ಮುನ್ನಡೆಸುತ್ತಿದೆ”

“ವಿದ್ಯುಚ್ಛಾಲಿತ ವಾಹನ(ಇವಿ)ಗಳಿಂದ ಸುಧಾರಿತ ಬ್ಯಾಟರಿಗಳವರೆಗೆ: 2025ರಲ್ಲಿ ಬೃಹತ್(ಮೆಗಾ) ಉತ್ಪಾದನೆಗೆ ಒತ್ತು ನೀಡಿರುವ ಬೃಹತ್ ಕೈಗಾರಿಕಾ ಸಚಿವಾಲಯ(ಎಂಎಚ್ಐ)ವು, 'ಮೇಕ್ ಇನ್ ಇಂಡಿಯಾ'ಗೆ ಶಕ್ತಿ ತುಂಬುತ್ತಿದೆ”

“ಪಿಎಲ್ಐ, ಪಿಎಂ ಇ-ಡ್ರೈವ್ ಮತ್ತು ಇ-ಬಸ್ ಸೇವೆ: ಭಾರತದ ಸ್ವಚ್ಛ ಚಲನಶೀಲತೆ ಪರಿವರ್ತನೆಗೆ ಒಂದು ಹೆಗ್ಗುರುತು ವರ್ಷವಾಗಿ 2025 ಹೊರಹೊಮ್ಮಿದೆ”

प्रविष्टि तिथि: 13 JAN 2026 11:04AM by PIB Bengaluru

ಈ ವರ್ಷ ಬೃಹತ್ ಕೈಗಾರಿಕಾ ಸಚಿವಾಲಯ(ಎಂಎಚ್ಐ)ದಿಂದ ಆಗಿರುವ ಪ್ರಮುಖ ಉಪಕ್ರಮಗಳು/ಸಾಧನೆಗಳು/ಘಟನೆಗಳು ಈ ಕೆಳಗಿನಂತಿವೆ:

ಆಟೋಮೊಬೈಲ್ ಮತ್ತು ಆಟೋ ಘಟಕಗಳ ಉದ್ಯಮಕ್ಕಾಗಿ ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್ಐ) ಯೋಜನೆ.,  ಭಾರತದ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ 25,938 ಕೋಟಿ ರೂ. ಬಜೆಟ್ ವೆಚ್ಚದೊಂದಿಗೆ, ಸುಧಾರಿತ ಆಟೋಮೋಟಿವ್ ತಂತ್ರಜ್ಞಾನ(ಎಎಟಿ) ಉತ್ಪನ್ನಗಳಿಗೆ, ವೆಚ್ಚ ಅಸಾಮರ್ಥ್ಯಗಳ ನಿವಾರಣೆಗೆ ಮತ್ತು ಸದೃಢವಾದ ಪೂರೈಕೆ ಸರಪಳಿ ನಿರ್ಮಿಸುವ ಗುರಿ ಹೊಂದಿದೆ. 15.09.2021ರಂದು ಅನುಮೋದಿಸಲಾದ ಈ ಪಿಎಲ್ಐ ಯೋಜನೆಯು 2023-24ರಿಂದ 2027-28ರ ಹಣಕಾಸು ವರ್ಷದ ಅವಧಿಯನ್ನು ಒಳಗೊಂಡಿದೆ. 2024-25ರಿಂದ 2028-29ರ ಹಣಕಾಸು ವರ್ಷದವರೆಗೆ ಉತ್ತೇಜನಾ ಅಥವಾ ಪ್ರೋತ್ಸಾಹಕ ವಿತರಣೆಗಳನ್ನು ನೀಡಲಾಗುತ್ತದೆ. ಈ ಯೋಜನೆಯು ವಿದ್ಯುಚ್ಛಾಲಿತ ವಾಹನಗಳು ಮತ್ತು ಹೈಡ್ರೋಜನ್ ಇಂಧನ ಕೋಶ ಘಟಕಗಳಿಗೆ 13%-18% ಮತ್ತು ಇತರೆ ಎಎಟಿ ಘಟಕಗಳಿಗೆ 8%-13% ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ. 82 ಅನುಮೋದಿತ ಅರ್ಜಿದಾರರಿದ್ದು, ಅವರಿಗೆ ಅಂದಾಜು 42,500 ಕೋಟಿ ರೂ. ಹೂಡಿಕೆಯೊಂದಿಗೆ 2,31,500 ಕೋಟಿ ರೂ. ಮೌಲ್ಯದ ಉತ್ಪನ್ನಗಳ ಹೆಚ್ಚುವರಿ ಮಾರಾಟ ಮಾಡುವ ಜತೆಗೆ, 5 ವರ್ಷಗಳಲ್ಲಿ

1.48 ಲಕ್ಷ ಉದ್ಯೋಗಗಳನ್ನು ಸೃಜಿಸಲಾಗಿದೆ.

ಪಿಎಲ್ಐ–ಆಟೋಮೊಬೈಲ್ ಯೋಜನೆಯಡಿ, 30.09.2025ರ ವರೆಗೆ 35,657 ಕೋಟಿ ರೂ. ಸಂಚಿತ ಹೂಡಿಕೆಯೊಂದಿಗೆ 32,879 ಕೋಟಿ ರೂ. ಮೌಲ್ಯದ ಉತ್ಪನ್ನಗಳ ಸಂಚಿತ(ಒಟ್ಟು) ನಿಶ್ಚಿತ ಮಾರಾಟ ಸಾಧಿಸಲಾಗಿದೆ. ಇದಲ್ಲದೆ, 48,974 ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ.

ಪಿಎಲ್ಐ–ಆಟೋ ಯೋಜನೆಯಡಿ, ಹಣಕಾಸು ವರ್ಷ 2023–24 ಮೊದಲ ಕಾರ್ಯಕ್ಷಮತೆಯ ವರ್ಷವಾಗಿದ್ದು, ಹಣಕಾಸು ವರ್ಷ 2024–25ರಲ್ಲಿ 322 ಕೋಟಿ ರೂ. ಮೌಲ್ಯದ ಕ್ಲೇಮ್‌ಗಳನ್ನು ವಿತರಿಸಲಾಗಿದೆ, ಕಾರ್ಯಕ್ಷಮತೆ ವರ್ಷ 2024–25ರಲ್ಲಿ 1,999.94 ಕೋಟಿ ರೂ. ಮೌಲ್ಯದ ಕ್ಲೇಮ್‌ಗಳನ್ನು ವಿತರಿಸಲಾಗಿದೆ.

ಈ ಯೋಜನೆಯಡಿ, 31.12.2025ರ ವರೆಗೆ, ಒಟ್ಟು 13,61,488 ವಾಹನ(ಯೂನಿಟ್‌)ಗಳಿಗೆ (ಅಂದರೆ 10,42,172 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು(ಇ-2ಡಬ್ಲ್ಯು), 2,38,385 ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು(ಇ-3ಡಬ್ಲ್ಯು), 79,540 ಎಲೆಕ್ಟ್ರಿಕ್ 4 ಚಕ್ರ ವಾಹನಗಳು(ಇ-4ಡಬ್ಲ್ಯು), ಮತ್ತು 1,391 ಎಲೆಕ್ಟ್ರಿಕ್ ಬಸ್‌(ಇ-ಬಸ್‌ಗಳು)ಗಳಿಗೆ ಉತ್ತೇಜನಾ(ಪ್ರೋತ್ಸಾಹ) ಧನ ನೀಡಲಾಗಿದೆ. ಪಿಎಲ್ಐ–ಆಟೋ ಯೋಜನೆಯು ಕನಿಷ್ಠ 50% ದೇಶೀಯ ಮೌಲ್ಯವರ್ಧನೆ (ಡಿವಿಎ) ಸಾಧಿಸುವ ಉತ್ಪನ್ನಗಳಿಗೆ ಮಾತ್ರ ಪ್ರೋತ್ಸಾಹ ಧನ ನೀಡಲಾಗುತ್ತದೆ. 31.12.2025ರ ಹೊತ್ತಿಗೆ, ಚಾಂಪಿಯನ್ ಒಇಎಂ ವರ್ಗದ ಅಡಿ, ಎಂಟು(8) ಅರ್ಜಿದಾರರು 94 ರೂಪಾಂತರಗಳಿಗೆ ದೇಶೀಯ ಮೌಲ್ಯವರ್ಧನೆ(ಡಿವಿಎ) ಪ್ರಮಾಣೀಕರಣ ಪಡೆದಿದ್ದಾರೆ, ಆದರೆ ಬಿಡಿಭಾಗಗಳು(ಕಾಂಪೊನೆಂಟ್) ಚಾಂಪಿಯನ್ ವರ್ಗದ ಅಡಿ, ಹತ್ತು(10) ಅರ್ಜಿದಾರರು 37 ರೂಪಾಂತರ(ವೇರಿಯಂಟ್)ಗಳಿಗೆ ಡಿವಿಎ ಪ್ರಮಾಣೀಕರಣ ಪಡೆದಿದ್ದಾರೆ.

ಪಿಎಂ ಇ-ಡ್ರೈವ್ ಯೋಜನೆ: ಪಿಎಂ ಇ-ಡ್ರೈವ್ ಯೋಜನೆಯನ್ನು 29.09.2024ರಂದು ಆರಂಭಿಸಲಾಗಿದ್ದು, ಇದರ ವೆಚ್ಚ 10,900 ಕೋಟಿ ರೂ. ಆಗಿದೆ. ಇಎಂಪಿಎಸ್-2024 ಅನ್ನು ಪಿಎಂ ಇ-ಡ್ರೈವ್ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ. ಪಿಎಂ ಇ-ಡ್ರೈವ್  ಯೋಜನೆಯಡಿ ಅನುಷ್ಠಾನ ಅವಧಿಯು ಆರಂಭದಲ್ಲಿ 2 ವರ್ಷಗಳ ಅವಧಿಗೆ ಅಂದರೆ 01.04.2024ರಿಂದ 31.03.2026ರ ವರೆಗೆ ಇತ್ತು. ತರುವಾಯ, ಸಚಿವಾಲಯವು ಪಿಎಂ ಇ-ಡ್ರೈವ್ ಯೋಜನೆಯನ್ನು 31.03.2028ರ ವರೆಗೆ ವಿಸ್ತರಿಸುವುದಾಗಿ ಸೂಚಿಸಿತು. ಆದಾಗ್ಯೂ, ಇ-2ಡಬ್ಲ್ಯು ಮತ್ತು ಇ-3ಡಬ್ಲ್ಯುಗಾಗಿ ನೀತಿಯ ಅಂತಿಮ(ಟರ್ಮಿನಲ್) ದಿನಾಂಕವನ್ನು 31.03.2026ರ ವರೆಗೆ ಉಳಿಸಿಕೊಳ್ಳಲಾಗಿದೆ.

ದೇಶದಲ್ಲಿ ವಿದ್ಯುಚ್ಛಾಲಿತ ವಾಹನ(ಇವಿ)ಗಳ ತ್ವರಿತ ಅಳವಡಿಕೆಯನ್ನು ಉತ್ತೇಜಿಸುವುದು, ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸುವುದು ಮತ್ತು ವಿದ್ಯುಚ್ಛಾಲಿತ ವಾಹನಗಳ ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಯೇ ಪಿಎಂ ಇ-ಡ್ರೈವ್ ಯೋಜನೆಯ ಉದ್ದೇಶವಾಗಿದೆ.

24.79 ಲಕ್ಷ ಇ-2ಡಬ್ಲ್ಯುಗಳು, 3.28 ಲಕ್ಷ ಇ-3ಡಬ್ಲ್ಯುಗಳು[2.89 ಲಕ್ಷ ಇ-3ಡಬ್ಲ್ಯಿಗಳು ಎಲ್ 5 ಮತ್ತು 39,034 ಇ-ರಿಕ್ಷಾಗಳು ಮತ್ತು ಇ-ಕಾರ್ಟ್‌ಗಳು], ಇ-ಆಂಬ್ಯುಲೆನ್ಸ್‌ಗಳು ಮತ್ತು 5,643 ಇ-ಟ್ರಕ್‌ಗಳು ಸೇರಿದಂತೆ 28 ಲಕ್ಷಕ್ಕೂ ಹೆಚ್ಚು ವಿದ್ಯುಚ್ಛಾಲಿತ ವಾಹನಗಳನ್ನು ಪ್ರೋತ್ಸಾಹಿಸಲು ಸಬ್ಸಿಡಿಗಾಗಿ 3,679 ಕೋಟಿ ರೂ. ಹಂಚಿಕೆಯಲ್ಲಿ ಸೇರಿವೆ. ಸಾರ್ವಜನಿಕ ಸಾರಿಗೆ ಸಂಸ್ಥೆಗಳಿಂದ 14,028 ಇ-ಬಸ್‌ಗಳ ನಿಯೋಜನೆಗೆ 4,391 ಕೋಟಿ ರೂ., ಸಾಕಷ್ಟು ಸಂಖ್ಯೆಯ ವಿದ್ಯುಚ್ಛಾಲಿತ ವಾಹನಗಳ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು 2,000 ಕೋಟಿ ರೂ., ಪರೀಕ್ಷಾ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು 780 ಕೋಟಿ ರೂ. ಮತ್ತು ಆಡಳಿತಾತ್ಮಕ ವೆಚ್ಚಗಳಿಗಾಗಿ 50 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ಪಿಎಂ ಇ-ಡ್ರೈವ್ ಯೋಜನೆಯಡಿ ಮಾಡಲಾದ ಸಾಧನೆಗಳು ಈ ಕೆಳಗಿನಂತಿವೆ:

i. 31.12.2025ರ ಹೊತ್ತಿಗೆ 1,703.32 ಕೋಟಿ ರೂ. ಮೊತ್ತದ ಕ್ಲೇಮ್‌ಗಳನ್ನು ವಿತರಿಸಲಾಗಿದೆ, ಈ ಯೋಜನೆಯಡಿ ಒಟ್ಟು 21,36,305 ವಿದ್ಯುಚ್ಛಾಲಿತ ವಾಹನಗಳನ್ನು ಮಾರಾಟ ಮಾಡಲಾಗಿದೆ.

ii. ಯೋಜನೆಯ ಅಂತಿಮ(ಟರ್ಮಿನಲ್) ದಿನಾಂಕಕ್ಕಿಂತ ಬಹಳ ಮುಂಚಿತವಾಗಿ, 2025 ಡಿಸೆಂಬರ್ ನಲ್ಲಿ ಇ-3ಡಬ್ಲ್ಯು(ಎಲ್5)(2,88,809 ಸಂಖ್ಯೆಗಳು) ಗುರಿ ಸಾಧಿಸಲಾಗಿದೆ.

iii. ಸಿಇಎಸ್ಎಲ್ ಹಂತ 1ರಲ್ಲಿ 5 ಮಹಾನಗರಗಳನ್ನು(ದೆಹಲಿ, ಅಹಮದಾಬಾದ್, ಸೂರತ್, ಹೈದರಾಬಾದ್ ಮತ್ತು ಬೆಂಗಳೂರು) ಒಳಗೊಂಡು ಇದುವರೆಗಿನ ಅತಿದೊಡ್ಡ 10,900 ಇ-ಬಸ್ ಟೆಂಡರ್ ಮುಕ್ತಾಯಗೊಳಿಸಲಾಗಿದೆ. ಪತ್ತೆಯಾದ ದರಗಳನ್ನು ಎಲ್ಒಎ ನಿಯೋಜನೆ ಮತ್ತು ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಲು ಈ ಮೇಲಿನ ನಗರಗಳಿಗೆ ತಲುಪಿಸಲಾಗುತ್ತದೆ.

iv. ಇ-ಟ್ರಕ್‌ಗಳು, ಇವಿಪಿಸಿಎಸ್ ಮತ್ತು ಪರೀಕ್ಷಾ ಏಜೆನ್ಸಿಗಳ ಮೇಲ್ದರ್ಜೀಕರಣಕ್ಕಾಗಿ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರುಗಳ ತಯಾರಿಕೆ ಉತ್ತೇಜಿಸುವ ಯೋಜನೆ(ಎಸ್‌ಎಂಇಸಿ) ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುವ, ಭಾರತವನ್ನು ವಿದ್ಯುಚ್ಛಾಲಿತ ವಾಹನ(ಇವಿ)ಗಳ ಉತ್ಪಾದನಾ ಕೇಂದ್ರ(ಇ-4ಡಬ್ಲ್ಯುಗಳು)ವಾಗಿ ಉತ್ತೇಜಿಸುವ ಮತ್ತು ದೇಶೀಯ ಮೌಲ್ಯವರ್ಧನೆ(ಡಿವಿಎ) ಹೆಚ್ಚಿಸುವ ಗುರಿ ಹೊಂದಿರುವ ಎಸ್‌ಎಂಇಸಿ ಯೋಜನೆಯನ್ನು ಸಚಿವಾಲಯವು, 2024 ಮಾರ್ಚ್ 15ರಂದು ಪ್ರಕಟಿಸಿದೆ. ಅನುಮೋದಿತ ಅರ್ಜಿದಾರರು 3 ವರ್ಷಗಳಲ್ಲಿ ಕನಿಷ್ಠ 4,150 ಕೋಟಿ(500 ದಶಲಕ್ಷ ಡಾಲರ್) ರೂ. ಹೂಡಿಕೆ ಮಾಡಬೇಕಾಗುತ್ತದೆ, ಈ ಅವಧಿಯಲ್ಲಿ 25% ಡಿವಿಎ ಮತ್ತು 5 ವರ್ಷಗಳಲ್ಲಿ 50% ಡಿವಿಎ ಸಾಧಿಸಬೇಕು. ಈ ಯೋಜನೆಯು ಕಡಿಮೆ ಸೀಮಾ(ಕಸ್ಟಮ್ಸ್)ಸುಂಕದಲ್ಲಿ ಇ-4ಡಬ್ಲ್ಯುಗಳ ಸೀಮಿತ ಆಮದುಗಳಿಗೆ ಅನುಮತಿ ನೀಡುತ್ತದೆ, ಅದು ವರ್ಷಕ್ಕೆ 8,000 ವಾಹನಗಳಿಗೆ ಸೀಮಿತವಾಗಿದೆ. ಪ್ರತಿ ಅರ್ಜಿದಾರರಿಗೆ ಒಟ್ಟು ಸುಂಕ ಮೌಲ್ಯವನ್ನು 6,484 ಕೋಟಿ ರೂ. ಅಥವಾ ಬದ್ಧ ಹೂಡಿಕೆಗೆ ಸೀಮಿತಗೊಳಿಸಲಾಗಿದೆ. ಈ ಉಪಕ್ರಮವು "ಮೇಕ್ ಇನ್ ಇಂಡಿಯಾ"ದೊಂದಿಗೆ ಹೊಂದಿಕೆಯಾಗುತ್ತದೆ, ಪಿಎಲ್ಐ-ಆಟೋ ಯೋಜನೆಯೊಂದಿಗೆ ಸಂಯೋಜಿಸುವ ಜತೆಗೆ, ಸ್ಥಳೀಯ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ.

*****

ಟಿಪಿಜೆ

ಪಿಎಂ ಇ-ಬಸ್ ಸೇವಾ - ಪಾವತಿ ಭದ್ರತಾ ಕಾರ್ಯವಿಧಾನ(ಪಿಎಸ್‌ಎಂ) ಯೋಜನೆ:

ಬೃಹತ್ ಕೈಗಾರಿಕಾ ಸಚಿವಾಲಯವು 2024 ಅಕ್ಟೋಬರ್ 28ರಂದು ಒಟ್ಟು 3,435.33 ಕೋಟಿ ರೂ. ಆರ್ಥಿಕ ವೆಚ್ಚದೊಂದಿಗೆ ಈ ಯೋಜನೆ ಪ್ರಕಟಿಸಿದೆ, ಸಾರ್ವಜನಿಕ ಸಾರಿಗೆ ಪ್ರಾಧಿಕಾರಗಳು(ಪಿಟಿಎ) ಇ-ಬಸ್ ಖರೀದಿ ಮತ್ತು ಒಟ್ಟು ವೆಚ್ಚ ಒಪ್ಪಂದ(ಜಿಸಿಸಿ) ಅಥವಾ ಅಂತಹುದೇ ಮಾದರಿಗಳ ಅಡಿ ಕಾರ್ಯಾಚರಣೆಗಳಿಗಾಗಿ ಡೀಫಾಲ್ಟ್ ಆಗಿದ್ದರೆ ಒಇಎಂಗಳು/ನಿರ್ವಾಹಕರಿಗೆ ಪಾವತಿ ಭದ್ರತೆ ಖಚಿತಪಡಿಸುವ ಗುರಿ ಹೊಂದಿದೆ. 12 ವರ್ಷಗಳವರೆಗೆ 38,000 ಅಥವಾ ಹೆಚ್ಚಿನ ಇ-ಬಸ್‌ಗಳನ್ನು ಒಳಗೊಳ್ಳುವ ಈ ಯೋಜನೆಯು, ಪಾವತಿ ಮಾಡದಿದ್ದಲ್ಲಿ ಹಣವನ್ನು ಮರುಪಡೆಯಲು ಆರ್‌ಬಿಐನೊಂದಿಗೆ ಎಸ್ಕ್ರೊ ಖಾತೆಗಳು(3ನೇ ಪಾರ್ಟಿಯ ತಾತ್ಕಾಲಿಕ ಅಥವಾ ತಟಸ್ಥ ಖಾತೆಗಳು) ಮತ್ತು ನೇರ ಡೆಬಿಟ್ ಆದೇಶ(ಡಿಡಿಎಂ)ಗಳಂತಹ ಕಾರ್ಯವಿಧಾನಗಳನ್ನು ಒಳಗೊಂಡಿದೆ. ಪಿಟಿಎಗಳು 90 ದಿನಗಳಲ್ಲಿ ವಿತರಿಸಿದ ಹಣವನ್ನು ಮರುಪಾವತಿಸಬೇಕಾಗುತ್ತದೆ. ಸಚಿವಾಲಯವು ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್(ಸಿಇಎಸ್‌ಎಲ್) ಅನ್ನು ಅನುಷ್ಠಾನ ಸಂಸ್ಥೆಯಾಗಿ ಗೊತ್ತುಪಡಿಸಿದೆ, ಇದರ ಮೇಲ್ವಿಚಾರಣೆಗಾಗಿ ಕ್ರಿಯಾ(ಸ್ಟೀರಿಂಗ್) ಸಮಿತಿಯನ್ನು ಸಹ ರಚಿಸಿದೆ. ಈ ಯೋಜನೆಯು ಖಾಸಗಿ ಹೂಡಿಕೆಯನ್ನು ಬೆಳೆಸುವ ಮೂಲಕ ಮತ್ತು ಇ-ಬಸ್ ಅಳವಡಿಕೆಯಲ್ಲಿ ಅಪಾಯ ನಿರ್ವಹಣೆಯನ್ನು ಉತ್ತೇಜಿಸುವ ಮೂಲಕ ಸುಸ್ಥಿರ ನಗರ ಚಲನಶೀಲತೆಯನ್ನು ಬೆಂಬಲಿಸುತ್ತದೆ. ಇದಕ್ಕೆ ಸಂಬಂಧಿಸಿದ ವಿವರವಾದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ(ಎಸ್‌ಒಪಿಗಳು)ಗಳನ್ನು ಹೊರಡಿಸಲಾಗಿದೆ.

2025 ಡಿಸೆಂಬರ್ 22ರ ಹೊತ್ತಿಗೆ, ಯೋಜನೆಯಡಿ ಅತ್ಯಗತ್ಯವಾದ ಡೈರೆಕ್ಟ್ ಡೆಬಿಟ್ ಮ್ಯಾಂಡೇಟ್(ಡಿಡಿಎಂ) ಅನ್ನು 15 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು(ಗುಜರಾತ್, ಕರ್ನಾಟಕ, ರಾಜಸ್ಥಾನ, ಪಂಜಾಬ್, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಮೇಘಾಲಯ, ಮಹಾರಾಷ್ಟ್ರ, ಉತ್ತರಾಖಂಡ, ಒಡಿಶಾ, ಜಮ್ಮು-ಕಾಶ್ಮೀರ, ಪುದುಚೇರಿ, ಅಸ್ಸಾಂ ಮತ್ತು ಮಣಿಪುರ) ಭಾರತೀಯ ರಿಸರ್ವ್ ಬ್ಯಾಂಕ್‌(ಆರ್‌ಬಿಐ)ಗೆ ಸಲ್ಲಿಸುತ್ತವೆ, ಅವು ಬೃಹತ್ ಕೈಗಾರಿಕಾ ಸಚಿವಾಲಯದ ಪಿಎಂ ಇ-ಡ್ರೈವ್ ಯೋಜನೆ ಅಥವಾ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪಿಎಂ ಇ-ಬಸ್ ಸೇವಾ ಯೋಜನೆಯಲ್ಲಿ ಭಾಗವಹಿಸಿದ್ದಾರೆ.

ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ (ACC) ಬ್ಯಾಟರಿ ಸ್ಟೋರೇಜ್‌ಗಾಗಿ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ: ಭಾರೀ ಕೈಗಾರಿಕೆಗಳ ಸಚಿವಾಲಯವು "ನ್ಯಾಷನಲ್ ಪ್ರೋಗ್ರಾಂ ಆನ್ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ (ACC) ಬ್ಯಾಟರಿ ಸ್ಟೋರೇಜ್" ಎಂಬ ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯನ್ನು ನಿರ್ವಹಿಸುತ್ತಿದೆ, ಇದನ್ನು ಮೇ 2021 ರಲ್ಲಿ ಅನುಮೋದಿಸಲಾಗಿದೆ, ದೇಶೀಯ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ ಉತ್ಪಾದನಾ ಸಾಮರ್ಥ್ಯವನ್ನು 50 GWh ಸ್ಥಾಪಿಸಲು ಒಟ್ಟು ರೂ. 18,100 ಕೋಟಿ ವೆಚ್ಚ ಮಾಡಲಾಗುತ್ತದೆ. ಒಟ್ಟು ಯೋಜನೆಯ ಅವಧಿ 7 ವರ್ಷಗಳು, ಮೊದಲ 2 ವರ್ಷಗಳು ಗರ್ಭಾವಸ್ಥೆಯ ಅವಧಿ ಮತ್ತು ಮುಂದಿನ 5 ವರ್ಷಗಳು ಕಾರ್ಯಕ್ಷಮತೆಯ ಅವಧಿಯಾಗಿದೆ.

ಸುಧಾರಿತ ರಾಸಾಯನಿಕ ಕೋಶ(ಎಸಿಸಿ) ಬ್ಯಾಟರಿ ಸ್ಟೋರೇಜ್‌ಗಾಗಿ ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್ಐ) ಯೋಜನೆ: ಬೃಹತ್ ಕೈಗಾರಿಕಾ ಸಚಿವಾಲಯವು "ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ ಬ್ಯಾಟರಿ ಸ್ಟೋರೇಜ್ ಅಥವಾ ಎಸಿಸಿ-ಮುಂದಿನ ಪೀಳಿಗೆಯ ಇಂಧನ ಸಂಗ್ರಹದ ರಾಸಾಯನಿಕ ಕೋಶ)ಗಳ ರಾಷ್ಟ್ರೀಯ ಕಾರ್ಯಕ್ರಮ" ಎಂಬ ಉತ್ಪಾದನಾ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್ಐ)ಯನ್ನು ನಿರ್ವಹಿಸುತ್ತಿದೆ, ಇದನ್ನು 2021 ಮೇ ತಿಂಗಳಲ್ಲಿ ಅನುಮೋದಿಸಲಾಗಿದೆ. ದೇಶೀಯ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ ಉತ್ಪಾದನಾ ಸಾಮರ್ಥ್ಯವನ್ನು 50 ಗಿಗಾವ್ಯಾಟ್-ಹವರ್ ಸ್ಥಾಪಿಸಲು ಒಟ್ಟು 18,100 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಒಟ್ಟು ಯೋಜನೆಯ ಅವಧಿ 7 ವರ್ಷಗಳು, ಮೊದಲ 2 ವರ್ಷಗಳು ಬೆಳವಣಿಗೆಯ ಅವಧಿ ಮತ್ತು ಮುಂದಿನ 5 ವರ್ಷಗಳು ಕಾರ್ಯಕ್ಷಮತೆಯ ಅವಧಿಯಾಗಿ ವಿಂಗಡಿಸಲಾಗಿದೆ.

ಒಟ್ಟು ಉದ್ದೇಶಿತ ಅಥವಾ ಗುರಿಪಡಿಸಲಾದ 50 ಗಿಗಾವ್ಯಾಟ್-ಹವರ್ ಎಸಿಸಿ ಸಾಮರ್ಥ್ಯದಲ್ಲಿ, 30 ಗಿಗಾವ್ಯಾಟ್-ಹವರ್ ಸಾಮರ್ಥ್ಯವನ್ನು ಬಿಡ್ಡಿಂಗ್‌ನ ಮೊದಲ ಸುತ್ತಿನಲ್ಲಿ 3 ಫಲಾನುಭವಿ ಸಂಸ್ಥೆಗಳಿಗೆ ನೀಡಲಾಗಿದೆ, ಅಂದರೆ ಎಸಿಸಿ ಎನರ್ಜಿ ಸ್ಟೋರೇಜ್ ಪ್ರೈವೇಟ್ ಲಿಮಿಟೆಡ್(5 ಗಿಗಾವ್ಯಾಟ್-ಹವರ್, ಓಲಾ ಸೆಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (20 ಗಿಗಾವ್ಯಾಟ್-ಹವರ್) ಮತ್ತು ರಿಲಯನ್ಸ್ ನ್ಯೂ ಎನರ್ಜಿ ಬ್ಯಾಟರಿ ಸ್ಟೋರೇಜ್ ಲಿಮಿಟೆಡ್ (5 ಗಿಗಾವ್ಯಾಟ್-ಹವರ್) ಮತ್ತು 10 ಗಿಗಾವ್ಯಾಟ್-ಹವರ್ ಸಾಮರ್ಥ್ಯವನ್ನು ಬಿಡ್ಡಿಂಗ್‌ನ 2ನೇ ಸುತ್ತಿನಲ್ಲಿ 1 ಫಲಾನುಭವಿ ಸಂಸ್ಥೆ ಅಂದರೆ ರಿಲಯನ್ಸ್ ನ್ಯೂ ಎನರ್ಜಿ ಬ್ಯಾಟರಿ ಲಿಮಿಟೆಡ್‌ಗೆ ನೀಡಲಾಗಿದೆ. ಉಳಿದ 10 ಗಿಗಾವ್ಯಾಟ್-ಹವರ್ ಸಾಮರ್ಥ್ಯವನ್ನು ಗ್ರಿಡ್ ಸ್ಕೇಲ್ ಸ್ಟೇಷನರಿ ಸ್ಟೋರೇಜ್ ಅಪ್ಲಿಕೇಶನ್‌ಗಳಿಗಾಗಿ ಮೀಸಲಿಡಲಾಗಿದೆ.

ಓಲಾ ಸೆಲ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ 1 ಗಿಗಾವ್ಯಾಟ್-ಹವರ್ ಸ್ಥಾಪಿತ ಸಾಮರ್ಥ್ಯದೊಂದಿಗೆ ಗಿಗಾ-ಸ್ಕೇಲ್ ಎಸಿಸಿ ಉತ್ಪಾದನಾ ಘಟಕ ಸ್ಥಾಪಿಸಿದೆ. 2024 ಮಾರ್ಚ್ ನಿಂದ ಸಂಸ್ಥೆಯು ಪ್ರಾಯೋಗಿಕವಾಗಿ ಉತ್ಪಾದನೆ ಪ್ರಾರಂಭಿಸಿದೆ, ಪ್ರಸ್ತುತ ಪೂರ್ಣ ಪ್ರಮಾಣದ ವಾಣಿಜ್ಯ ಉತ್ಪಾದನೆಗಾಗಿ ಕಾರ್ಯಾಚರಣೆಗಳನ್ನು ಸ್ಥಿರಗೊಳಿಸುವತ್ತ ಕೆಲಸ ಮಾಡುತ್ತಿದೆ.

ಈ ಯೋಜನೆಯು 30.10.2025ರ ವರೆಗೆ 2,878 ಕೋಟಿ ರೂ. ಹೂಡಿಕೆ ಮಾಡಿ, 1,118 ಉದ್ಯೋಗಗಳನ್ನು ಸೃಜಿಸಿದೆ.

ಭಾರತೀಯ ಬಂಡವಾಳ ಸರಕುಗಳ ವಲಯದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸುವ ಯೋಜನೆ- ಹಂತ-II

ಬೃಹತ್ ಕೈಗಾರಿಕಾ ಸಚಿವಾಲಯ(ಎಂಎಚ್ಐ)ವು 2022 ಜನವರಿ 25ರಂದು ಸಾಮಾನ್ಯ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸೇವೆಗಳ ಮೂಲಸೌಕರ್ಯಕ್ಕೆ ನೆರವು ನೀಡುವ ಸಲುವಾಗಿ ಭಾರತೀಯ ಬಂಡವಾಳ ಸರಕು ವಲಯದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸುವ ಯೋಜನೆ- ಹಂತ-II ಪ್ರಕಟಿಸಿದೆ. ಈ ಯೋಜನೆಯು 1207 ಕೋಟಿ ರೂ. ಆರ್ಥಿಕ ವೆಚ್ಚ ಹೊಂದಿದ್ದು, 975 ಕೋಟಿ ರೂ. ಬಜೆಟ್ ಬೆಂಬಲ ಮತ್ತು 232 ಕೋಟಿ ರೂ. ಕೈಗಾರಿಕಾ ಕೊಡುಗೆಯನ್ನು ಹೊಂದಿದೆ. ಬಂಡವಾಳ ಸರಕು ವಲಯದ ಹಂತ IIರ ಸುಧಾರಣೆ ಯೋಜನೆಯ ಅಡಿ 6 ಘಟಕಗಳಿವೆ, ಅವುಗಳೆಂದರೆ:

ಎ. ತಂತ್ರಜ್ಞಾನ ನಾವೀನ್ಯತೆ ಪೋರ್ಟಲ್‌ಗಳ ಮೂಲಕ ತಂತ್ರಜ್ಞಾನಗಳ ಗುರುತಿಸುವಿಕೆ;

ಬಿ. 4 ಹೊಸ ಸುಧಾರಿತ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ ಮತ್ತು ಅಸ್ತಿತ್ವದಲ್ಲಿರುವ ಶ್ರೇಷ್ಠತಾ ಕೇಂದ್ರಗಳ ವೃದ್ಧಿ;

ಸಿ. ಬಂಡವಾಳ ಸರಕು ವಲಯದಲ್ಲಿ ಕೌಶಲ್ಯ ಉತ್ತೇಜನ - 6 ಮತ್ತು ಅದಕ್ಕಿಂತ ಹೆಚ್ಚಿನ ಕೌಶಲ್ಯ ಮಟ್ಟಗಳಿಗೆ ಅರ್ಹತಾ ಪ್ಯಾಕೇಜ್‌ಗಳ ರಚನೆ;

ಡಿ. 4 ಸಾಮಾನ್ಯ ಎಂಜಿನಿಯರಿಂಗ್ ಸೌಲಭ್ಯ ಕೇಂದ್ರಗಳ(ಸಿಇಎಫ್‌ಸಿ) ಸ್ಥಾಪನೆ ಮತ್ತು ಅಸ್ತಿತ್ವದಲ್ಲಿರುವ ಸಿಇಎಫ್‌ಸಿಗಳ ಬೆಳವಣಿಗೆ;

ಇ. ಅಸ್ತಿತ್ವದಲ್ಲಿರುವ ಪರೀಕ್ಷಾ ಮತ್ತು ಪ್ರಮಾಣೀಕರಣ ಕೇಂದ್ರಗಳ ಬೆಳವಣಿಗೆ;

ಎಫ್. ತಂತ್ರಜ್ಞಾನ ಅಭಿವೃದ್ಧಿಗಾಗಿ 10 ಕೈಗಾರಿಕಾ ವೇಗವರ್ಧಕ ಸಂಸ್ಥೆಗಳ ಸ್ಥಾಪನೆ.

ಯೋಜನೆಯ 2ನೇ ಹಂತದ ಅಡಿ, 891.37 ಕೋಟಿ ರೂ. ಯೋಜನಾ ವೆಚ್ಚ ಮತ್ತು 714.64 ಕೋಟಿ ರೂ. ಸರ್ಕಾರದ ಕೊಡುಗೆಯೊಂದಿಗೆ ಒಟ್ಟು 29 ಯೋಜನೆಗಳನ್ನು ಇಲ್ಲಿಯವರೆಗೆ ಮಂಜೂರು ಮಾಡಲಾಗಿದೆ. ಈ 29 ಯೋಜನೆಗಳಲ್ಲಿ 7 ಶ್ರೇಷ್ಠತಾ ಕೇಂದ್ರಗಳು, 4 ಸಾಮಾನ್ಯ ಎಂಜಿನಿಯರಿಂಗ್ ಸೌಲಭ್ಯ ಕೇಂದ್ರಗಳು(ಸಿಇಎಫ್‌ಸಿಗಳು), 6 ಪರೀಕ್ಷಾ ಮತ್ತು ಪ್ರಮಾಣೀಕರಣ ಕೇಂದ್ರಗಳು, ತಂತ್ರಜ್ಞಾನ ಅಭಿವೃದ್ಧಿಗಾಗಿ 9 ಉದ್ಯಮ ವೇಗವರ್ಧಕ ಸಂಸ್ಥೆಗಳು ಮತ್ತು ಕೌಶಲ್ಯ ಮಟ್ಟ 6 ಮತ್ತು ಅದಕ್ಕಿಂತ ಹೆಚ್ಚಿನವರಿಗೆ ಅರ್ಹತಾ ಪ್ಯಾಕ್‌ಗಳ ರಚನೆಗಾಗಿ 3 ಯೋಜನೆಗಳು ಸೇರಿವೆ.

ಬಂಡವಾಳ ಸರಕು ಯೋಜನೆಯ ಸಾಧನೆಗಳು:

  1. ಪುಣೆಯ ಸಿ4ಐ4 ಕಂಪನಿಯು ಭಾರತೀಯ ಉತ್ಪಾದನಾ ಕಂಪನಿಗಳಿಗೆ ಅನುಗುಣವಾಗಿ ಇಂಡಸ್ಟ್ರಿ 4.0 ಮೆಚ್ಯೂರಿಟಿ ಮಾದರಿ(I4ಎಂಎಂ)ಯನ್ನು ಅಭಿವೃದ್ಧಿಪಡಿಸಿದೆ. ಈ ಉಪಕ್ರಮದಡಿ, 50ಕ್ಕಿಂತ ಹೆಚ್ಚಿನ ಇಂಡಸ್ಟ್ರಿ 4.0 ಬಳಕೆಯ ಪ್ರಕರಣಗಳನ್ನು ಸಂಗ್ರಹಿಸಿದೆ, ಪ್ರಾಥಮಿಕವಾಗಿ ಆಟೋಮೋಟಿವ್ ವಲಯದಲ್ಲಿ 100ಕ್ಕೂ ಹೆಚ್ಚು ಡಿಜಿಟಲ್ ಮೆಚ್ಯೂರಿಟಿ ಮೌಲ್ಯಮಾಪನಗಳನ್ನು ನಡೆಸಿದೆ, 500ಕ್ಕೂ ಹೆಚ್ಚು ಸುಧಾರಣಾ ಉಪಕ್ರಮಗಳನ್ನು ಗುರುತಿಸಿದೆ, 500ಕ್ಕೂ ಹೆಚ್ಚು ಡಿಜಿಟಲ್ ಚಾಂಪಿಯನ್‌ಗಳಿಗೆ ತರಬೇತಿ ನೀಡಿದೆ. ಎಂಎಸ್ಎಂಇಗಳ ಇಂಡಸ್ಟ್ರಿ 4.0 ಅಳವಡಿಕೆಯನ್ನು ವೇಗಗೊಳಿಸಲು ಉಚಿತ ಆನ್‌ಲೈನ್ ಸ್ವಯಂ-ಮೌಲ್ಯಮಾಪನ ಸಾಧನವನ್ನು ಪ್ರಾರಂಭಿಸಿದೆ.
  2. ವೆಲ್ಡಿಂಗ್ ಸಂಶೋಧನಾ ಸಂಸ್ಥೆಯಲ್ಲಿ ಸಾಮಾನ್ಯ ಎಂಜಿನಿಯರಿಂಗ್ ಸೌಲಭ್ಯ ಕೇಂದ್ರ(ಇಎಫ್‌ಸಿ) ಸ್ಥಾಪಿಸಲಾಗಿದೆ. ಇದರ ಅಡಿ 9,000ಕ್ಕೂ ಹೆಚ್ಚಿನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇದಲ್ಲದೆ, ವಿವಿಧ ವಲಯಗಳಲ್ಲಿರುವ ಕೌಶಲ್ಯ ಅಂತರ ಪರಿಹರಿಸಲು, ಉನ್ನತ ಮಟ್ಟದ ತಂತ್ರಜ್ಞಾನಗಳಿಗಾಗಿ 58 ಅರ್ಹತಾ ಪ್ಯಾಕ್‌ಗಳನ್ನು ಕ್ಯುಪಿಗಳು) ಮಂಜೂರು ಮಾಡಲಾಗಿದ್ದು, ಅವುಗಳಲ್ಲಿ 48 ಪೂರ್ಣಗೊಂಡಿವೆ. ಇದಲ್ಲದೆ, 92,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಶೈಕ್ಷಣಿಕ ಸದಸ್ಯರು ಮತ್ತು ಉದ್ಯಮ ವೃತ್ತಿಪರರನ್ನು ತಂತ್ರಜ್ಞಾನ ನಾವೀನ್ಯತೆ ವೇದಿಕೆಗಳ(ಟಿಐಪಿಗಳು) ಮೂಲಕ ಸಂಪರ್ಕಿಸಲಾಗಿದೆ.
  3. ಯೋಜನೆಯಡಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳು ಫ್ರಾನ್ಸ್, ಬೆಲ್ಜಿಯಂ, ಕತಾರ್ ಮತ್ತು ಇತರೆ ದೇಶಗಳು ಸೇರಿದಂತೆ ರಫ್ತು ಮಾರುಕಟ್ಟೆಗಳನ್ನು ಪ್ರವೇಶಿಸಿವೆ. ಆರ್ಟ್‌ಪಾರ್ಕ್, ಐಐಎಸ್‌ಸಿ ಬೆಂಗಳೂರು ಆನ್‌ಲೈನ್ ಇ-ಕಾಮರ್ಸ್ ವೇದಿಕೆಗಳ ಮೂಲಕ 3 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ, ವಾಣಿಜ್ಯೀಕರಿಸಿದೆ. ಸಿಜಿ ಯೋಜನೆಯ ಹಂತಗಳು I ಮತ್ತು II ಒಟ್ಟಾಗಿ 309.17 ಕೋಟಿ ರೂ. ಆದಾಯ ಗಳಿಸಿವೆ. ಈ ಯೋಜನೆಯು ಬಲವಾದ ಬೌದ್ಧಿಕ ಆಸ್ತಿ ಫಲಿತಾಂಶಗಳನ್ನು ಸಹ ನೀಡಿದೆ, ಅಂತಾರಾಷ್ಟ್ರೀಯ ಪೇಟೆಂಟ್‌ಗಳು ಮತ್ತು 18 ಐಪಿಆರ್ ಒಳಗೊಂಡಂತೆ 80 ಪೇಟೆಂಟ್‌ಗಳನ್ನು ಸಲ್ಲಿಸಲಾಗಿದೆ.
  4. ಸಿಎಮ್‌ಟಿಐ ಡಿಜಿಟಲ್ ಟ್ವಿನ್, ಆಟೊಮೇಷನ್, ಐಒಟಿ ಮತ್ತು ಇಂಡಸ್ಟ್ರಿ 4.0 ತಂತ್ರಜ್ಞಾನ(ಡೊಮೇನ್‌)ಗಳಲ್ಲಿ 15 ಎಂಎಸ್ಎಂಇ-ಆಧಾರಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ಆದರೆ, ಐಐಟಿ ದೆಹಲಿಯು ಆಟೊಮೇಷನ್, ಐಐಒಟಿ, ಸ್ಮಾರ್ಟ್ ಸೆನ್ಸಿಂಗ್, ಒಪಿಸಿ ಯುಎ ಅನುಷ್ಠಾನ, ಮೆಷಿನ್-ಟು-ಮೆಷಿನ್ ಸಂವಹನ, ವರ್ಧಿತ ರಿಯಾಲಿಟಿ, ಪಾರ್ಟ್ ಟ್ರ್ಯಾಕಿಂಗ್ ಮತ್ತು ಬಾರ್‌ಕೋಡ್ ಸ್ಕ್ಯಾನಿಂಗ್ ಒಳಗೊಂಡ 10 ತಂತ್ರಜ್ಞಾನ ಪರಿಹಾರಗಳನ್ನು ಅಭಿವೃದ್ಧಿಪಡಿಸಿದೆ.
  5. ಯೋಜನೆಯಡಿ ಅಭಿವೃದ್ಧಿಪಡಿಸಲಾದ 5 ಉತ್ಪನ್ನಗಳನ್ನು ಐಎಂಟಿಇಎಕ್ಸ್-2025ರಲ್ಲಿ ಪ್ರದರ್ಶಿಸಲಾಯಿತು, ಯೋಜನೆಯಡಿ ಅಭಿವೃದ್ಧಿಪಡಿಸಲಾದ 4 ಉತ್ಪನ್ನಗಳನ್ನು ದೆಹಲಿ ಮೆಷಿನ್ ಟೂಲ್ಸ್ ಎಕ್ಸ್‌ಪೋ-2025ರಲ್ಲಿ ಬಿಡುಗಡೆ ಮಾಡಲಾಯಿತು.

ಇತರೆ ಉಪಕ್ರಮಗಳು

1. ಬೃಹತ್ ಕೈಗಾರಿಕಾ ಸಚಿವಾಲಯವು 25.11.2025ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ "ಬಹು-ವಲಯ ದೀರ್ಘಾವಧಿಯ ಬ್ಯಾಟರಿ ಸಂಗ್ರಹ ಸಾಮರ್ಥ್ಯದ ಬೇಡಿಕೆ ಒಟ್ಟುಗೂಡಿಸುವಿಕೆ ಮತ್ತು ಬೇಡಿಕೆ ಪೂರೈಸಲು ದೀರ್ಘಾವಧಿಯ ಕ್ರಿಯಾಯೋಜನೆಯ ಸಿದ್ಧತೆ" ಕುರಿತು ದುಂಡು ಮೇಜಿನ ಸಮ್ಮೇಳನ  ಆಯೋಜಿಸಿತ್ತು.

2. ಬೃಹತ್ ಕೈಗಾರಿಕಾ ಸಚಿವಾಲಯವು ನವದೆಹಲಿಯ ವಿಜ್ಞಾನ ಭವನದಲ್ಲಿ "ಇ-ಮೋಟಾರ್‌ಗಳಲ್ಲಿ ಪರ್ಯಾಯ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು" ಕುರಿತು ಚಿಂತನ ಶಿಬಿರ ಆಯೋಜಿಸಿತ್ತು. ಈ ಕಾರ್ಯಕ್ರಮವು ಉದ್ಯಮ ನಾಯಕರು, ತಜ್ಞರು ಮತ್ತು ಪಾಲುದಾರರನ್ನು ಒಟ್ಟುಗೂಡಿಸಿ ಇ-ಮೋಟಾರ್‌ಗಳಿಗೆ ಹಸಿರು ತಂತ್ರಜ್ಞಾನಗಳನ್ನು ಮುಂದುವರಿಸುವುದು ಮತ್ತು ಭಾರತದ ಸ್ವಚ್ಛ ಚಲನಶೀಲ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಕುರಿತು ಚರ್ಚಿಸಲು ಮತ್ತು ಸಮಾಲೋಚಿಸಲು ಕರೆ ನೀಡಿತು.

3. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನ ಮಂತ್ರಿ ಇ-ಡ್ರೈವ್ ಅಡಿ ಇ-ಟ್ರಕ್‌ಗಳನ್ನು ಪ್ರೋತ್ಸಾಹಿಸುವ ಯೋಜನೆ ಪ್ರಾರಂಭಿಸಿದರು. ದೇಶವು ಸ್ವಚ್ಛ ಮತ್ತು ಸುಸ್ಥಿರ ಸರಕು ಸಾಗಣೆಗೆ ಪರಿವರ್ತನೆಗೊಳ್ಳಲು ಸಹಾಯ ಮಾಡಲು ಭಾರತ ಸರ್ಕಾರ, ವಿದ್ಯುಚ್ಛಾಲಿತ ಟ್ರಕ್‌ಗಳಿಗೆ ಬೆಂಬಲ ಪ್ರಾರಂಭಿಸಿದ್ದು ಇದೇ ಮೊದಲು.

4. ಸೌದಿ ಅರೇಬಿಯಾ ಸಾಮ್ರಾಜ್ಯದ ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲಗಳ ಉಪ ಸಚಿವ ಗೌರವಾನ್ವಿತ ಖಲೀಲ್ ಬಿನ್ ಇಬ್ರಾಹಿಂ ಬಿನ್ ಸಲಾಮಾ ಅವರ ನೇತೃತ್ವದ ನಿಯೋಗವು 13.10.2025ರಂದು ಬೃಹತ್ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಹೂಡಿಕೆ ಅವಕಾಶಗಳು, ಜಂಟಿ ಉದ್ಯಮಗಳು ಮತ್ತು ತಂತ್ರಜ್ಞಾನ ವಿನಿಮಯದ ಮೇಲೆ ಚರ್ಚೆ ನಡೆಸಿದರು. ಅಲ್ಲದೆ, ಆಟೋಮೊಬೈಲ್ ಮತ್ತು ಬಂಡವಾಳ ಸರಕುಗಳ ವಲಯಗಳಲ್ಲಿ ಭಾರತ-ಸೌದಿ ಸಹಭಾಗಿತ್ವ ಹೆಚ್ಚಿಸುವ ಮಾರ್ಗೋಪಾಯಗಳನ್ನು ಅನ್ವೇಷಿಸಲು ಈ ಸಭೆ ನಡೆಯಿತು.

5. ಬೃಹತ್ ಕೈಗಾರಿಕಾ ಸಚಿವಾಲಯವು 2025 ಅಕ್ಟೋಬರ್ 2ರಿಂದ 31ರ ವರೆಗೆ ವಿಶೇಷ ಅಭಿಯಾನ 5.0 ಜಾರಿಗೆ ತಂದಿತು, ಸ್ವಚ್ಛತೆ ಮತ್ತು ಬಾಕಿ ಇರುವ ಸ್ವಚ್ಛತಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವ ಕುರಿತು ವಿಶೇಷ ಗಮನ ಹರಿಸಲಾಯಿತು. ಈ ಅಭಿಯಾನದಲ್ಲಿ ಸಚಿವಾಲಯವು ಗಮನಾರ್ಹ ಯಶಸ್ಸು ಸಾಧಿಸಿದೆ. 1,373 ಸ್ಥಳಗಳನ್ನು ಸ್ವಚ್ಛಗೊಳಿಸಲಾಗಿದೆ, 44.40 ಲಕ್ಷ ಚದರ ಅಡಿ ಜಾಗವನ್ನು ಸ್ವಚ್ಛಗೊಳಿಸಲಾಗಿದೆ, ರದ್ದಿ(ಸ್ಕ್ರ್ಯಾಪ್)ಗಳ ವಿಲೇವಾರಿಯಿಂದ 9.87 ಕೋಟಿ ರೂ. ಆದಾಯ ಗಳಿಸಲಾಗಿದೆ. 41,539 ಭೌತಿಕ ಫೈಲ್‌ಗಳನ್ನು ಪರಿಶೀಲಿಸಿ, 34,426 ಫೈಲ್‌ಗಳನ್ನು ತೆಗೆದುಹಾಕಲಾಗಿದೆ.  10.61 ಲಕ್ಷ ಇ-ಫೈಲ್‌ಗಳನ್ನು ಪರಿಶೀಲಿಸಿ, 9.51 ಲಕ್ಷ ಇ-ಫೈಲ್‌ಗಳನ್ನು ಮುಚ್ಚಲಾಗಿದೆ.

6. ಬೃಹತ್ ಕೈಗಾರಿಕೆಗಳ ಖಾತೆ ರಾಜ್ಯ ಸಚಿವರಾದ ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ ಅವರು ಬೃಹತ್ ಕೈಗಾರಿಕಾ ಸಚಿವಾಲಯದ ಹಿಂದಿ ನಿಯತಕಾಲಿಕೆ "ಉದ್ಯೋಗ ಭಾರತಿ"ಯ 2ನೇ ಆವೃತ್ತಿ ಬಿಡುಗಡೆ ಮಾಡಿದರು.

 

*****


(रिलीज़ आईडी: 2214159) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Bengali , Gujarati , Tamil