ರೈಲ್ವೇ ಸಚಿವಾಲಯ
52 ವಾರಗಳಲ್ಲಿ 52 ಸುಧಾರಣೆಗಳು: ದಕ್ಷತೆ, ಆಡಳಿತ ಮತ್ತು ಸೇವಾ ವಿತರಣೆಯಲ್ಲಿ ವ್ಯವಸ್ಥಿತ ಸುಧಾರಣೆಗಳ ಗುರಿಯೊಂದಿಗೆ ಭಾರತೀಯ ರೈಲ್ವೆಯಲ್ಲಿ ಪ್ರಮುಖ ಬದಲಾವಣೆಗಳು
ರೈಲ್ವೆಯಲ್ಲಿ ಮಹತ್ತರ ಸುಧಾರಣೆಗಳನ್ನು ತರಲು ಸುರಕ್ಷತೆ, ಎಐ (AI) ಮತ್ತು ತಂತ್ರಜ್ಞಾನಕ್ಕೆ ಉತ್ತೇಜನ, ಪ್ರತಿಭೆ ಹಾಗೂ ತರಬೇತಿ ವ್ಯವಸ್ಥೆಯ ನವೀಕರಣ ಮತ್ತು ಆಹಾರ ಹಾಗೂ ಕ್ಯಾಟರಿಂಗ್ ಸೇವೆಯನ್ನು ಮೇಲ್ದರ್ಜೆಗೇರಿಸುವತ್ತ ವಿಶೇಷ ಗಮನ
प्रविष्टि तिथि:
08 JAN 2026 8:11PM by PIB Bengaluru
ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ನವದೆಹಲಿಯ ರೈಲು ಭವನದಲ್ಲಿ ಕೇಂದ್ರ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಮತ್ತು ಶ್ರೀ ರವನೀತ್ ಸಿಂಗ್, ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ ಶ್ರೀ ಸತೀಶ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ಸಭೆಯಲ್ಲಿ ರೈಲ್ವೆ ಇಲಾಖೆಯಲ್ಲಿ ಪ್ರಮುಖ ಸುಧಾರಣೆಗಳನ್ನು ತರಲು ನಿರ್ಧರಿಸಲಾಗಿದ್ದು, ಈ ವರ್ಷ 52 ಸುಧಾರಣೆಗಳನ್ನು ಜಾರಿಗೆ ತರುವ ಗುರಿಯನ್ನು ಹೊಂದಲಾಗಿದೆ. ಈ ಸಭೆಯು "ಹೊಸ ವರ್ಷ, ಹೊಸ ಸಂಕಲ್ಪ" ಎಂಬ ಆಶಯದೊಂದಿಗೆ ರೈಲ್ವೆಯಲ್ಲಿ ಮಹತ್ತರವಾದ ಸುಧಾರಣೆಗಳನ್ನು ತರುವುದಕ್ಕೆ ವಿಶೇಷ ಒತ್ತು ನೀಡಿತು.
52 ವಾರಗಳಲ್ಲಿ 52 ಸುಧಾರಣೆಗಳು – ದಕ್ಷತೆ, ಆಡಳಿತ ಮತ್ತು ಸೇವಾ ವಿತರಣೆಯಲ್ಲಿ ವ್ಯವಸ್ಥಿತ ಸುಧಾರಣೆಗಳು.
ಸುರಕ್ಷತೆಯ ಮೇಲೆ ಗಮನ – ಗಂಭೀರ ರೈಲು ಅಪಘಾತಗಳ ಸಂಖ್ಯೆಯಲ್ಲಿ ಸರಿಸುಮಾರು 90% ಇಳಿಕೆ (2014-15ರಲ್ಲಿ 135 ರಿಂದ 2025-26ರಲ್ಲಿ 11ಕ್ಕೆ); ಇದನ್ನು ಒಂದೇ ಅಂಕೆಗೆ (single digit) ಇಳಿಸುವ ಗುರಿ.
ಎಐ (AI) ಮತ್ತು ತಂತ್ರಜ್ಞಾನಕ್ಕೆ ಉತ್ತೇಜನ – ಸುರಕ್ಷತೆ, ನಿರ್ವಹಣೆ ಮತ್ತು ಕಾರ್ಯಾಚರಣೆಗಳಿಗಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಸುಧಾರಿತ ತಂತ್ರಜ್ಞಾನದ ಬಳಕೆಗೆ ವೇಗ.
ಪ್ರತಿಭೆ ಮತ್ತು ತರಬೇತಿಯಲ್ಲಿ ಸುಧಾರಣೆ – ಉದ್ಯೋಗಿಗಳ ಪ್ರತಿಭೆ ನಿರ್ವಹಣೆ ಮತ್ತು ಕೌಶಲ್ಯಾಭಿವೃದ್ಧಿಗೆ ನವೀನ ವಿಧಾನಗಳ ಅನ್ವೇಷಣೆ.
ಆಹಾರ ಮತ್ತು ಕ್ಯಾಟರಿಂಗ್ ಮೇಲ್ದರ್ಜೆಗೇರಿಸುವಿಕೆ – ಉತ್ತಮ ಗುಣಮಟ್ಟದ ಆಹಾರ, ಕ್ಯಾಟರಿಂಗ್ ಮತ್ತು ರೈಲಿನಲ್ಲಿನ ಸೇವೆಗಳಿಗಾಗಿ ಪ್ರಮುಖ ಸುಧಾರಣೆಗಳು.
ಕೇಂದ್ರ ರಾಜ್ಯ ಸಚಿವರು, ಅಧ್ಯಕ್ಷರು ಮತ್ತು ಸಿಇಒ ಹಾಗೂ ಹಿರಿಯ ಅಧಿಕಾರಿಗಳು ತಮ್ಮ ಕ್ಷೇತ್ರಮಟ್ಟದ ಅನುಭವಗಳನ್ನು ಹಂಚಿಕೊಂಡರು. ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ನಿರ್ವಹಣೆ ಮತ್ತು ಸಾಮರ್ಥ್ಯ ಹೆಚ್ಚಳದ ಉಪಕ್ರಮಗಳನ್ನು ಪರಿಶೀಲಿಸಲಾಯಿತು. ರೈಲ್ವೆ ಸಚಿವಾಲಯವು ಸುಧಾರಣೆಗಳು, ಸುರಕ್ಷತೆ, ತಾಂತ್ರಿಕ ಪ್ರಗತಿ ಮತ್ತು ಪ್ರಯಾಣಿಕ ಕೇಂದ್ರಿತ ಬೆಳವಣಿಗೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.
*****
(रिलीज़ आईडी: 2212743)
आगंतुक पटल : 7