ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ವರ್ಷಾಂತ್ಯದ ಪರಾಮರ್ಶೆ 2025: ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಮತ್ತು ಹವಾಮಾನ ಬದಲಾವಣೆಯನ್ನು ಪರಿಹರಿಸುವಲ್ಲಿ ಜಾಗತಿಕ ನಾಯಕತ್ವಕ್ಕೆ ಮೀಸಲಾದ ವರ್ಷ


2024 ಜೂನ್ 5ರಿಂದ ಏಕ್ ಪೆಡ್ ಮಾ ಕೆ ನಾಮ್ ಅಭಿಯಾನದ ಅಡಿಯಲ್ಲಿ 262.4 ಕೋಟಿ ಸಸಿಗಳನ್ನು ನೆಡಲಾಗಿದೆ

ಭಾರತ ಹೊಂದಿರುವ ಒಟ್ಟು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ (ಎಫ್ಎಒ–ಜಿಎಫ್‌ಆರ್‌ಎ 2025) ಜಾಗತಿಕವಾಗಿ 9ನೇ ಸ್ಥಾನದಲ್ಲಿದೆ; ವಾರ್ಷಿಕ ಅರಣ್ಯ ಗಳಿಕೆ ವಿಷಯದಲ್ಲಿ ವಿಶ್ವದಲ್ಲೇ 3ನೇ ಸ್ಥಾನ ಉಳಿಸಿಕೊಂಡಿದೆ. 2013ರಿಂದ ಅರಣ್ಯ ಮತ್ತು ಮರಗಳ ವ್ಯಾಪ್ತಿಯಲ್ಲಿ 4.83%ರಷ್ಟು ಸಂಚಿತ ಗಳಿಕೆ ಮಾಡಿದೆ

ಚಿರತೆ ಯೋಜನೆಯು ಗಾಂಧಿಸಾಗರ್ ವನ್ಯಜೀವಿ ಅಭಯಾರಣ್ಯಕ್ಕೆ ವಿಸ್ತರಿಸಲ್ಪಟ್ಟಿದೆ; ಚಿರತೆಗಳ ಸಂಖ್ಯೆ 30ಕ್ಕೆ ಏರಿಕೆ ಕಂಡಿದೆ, ಇದರಲ್ಲಿ 19 ಚಿರತೆಗಳು ಭಾರತದಲ್ಲಿ ಜನಿಸಿವೆ

ರಾಷ್ಟ್ರೀಯ ಮಟ್ಟದ ಪಂಚ ಪ್ರಭೇದ ಸಂರಕ್ಷಣಾ ಯೋಜನೆಗಳನ್ನು ಪ್ರಾರಂಭಿಸಲಾಗಿದೆ.

2017-18ಕ್ಕೆ ಹೋಲಿಸಿದರೆ 2024-25ರಲ್ಲಿ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ (ಎನ್‌ಸಿಎಪಿ) ಅಡಿ 103 ನಗರಗಳು ಪಿಎಂ10 ಮಟ್ಟದಲ್ಲಿ ಇಳಿಕೆ ದಾಖಲಿಸಿವೆ.

2025ರಲ್ಲಿ ನಗರ ವನ ಯೋಜನೆ(ಎನ್ ವಿವೈ) ಅಡಿ 75 ಯೋಜನೆಗಳನ್ನು ಮಂಜೂರು ಮಾಡಲಾಗಿದೆ.

2014ರಲ್ಲಿ ಇದ್ದ 26ಕ್ಕೆ ಹೋಲಿಸಿದರೆ 2025ರಲ್ಲಿ 96 ರಾಮ್‌ಸರ್ ತಾಣಗಳು ~1.36 ದಶಲಕ್ಷ ಹೆಕ್ಟೇರ್ ವ್ಯಾಪ್ತಿ ಹೊಂದಿವೆ. 2025ರಲ್ಲಿ 11 ರಾಮ್‌ಸರ್ ತಾಣಗಳನ್ನು ಘೋಷಿಸಿ, ಪಟ್ಟಿಗೆ ಸೇರಿಸಲಾಗಿದೆ.

ಇಂದೋರ್ ಮತ್ತು ಉದಯಪುರ ಭಾರತದ ಮೊದಲ ರಾಮ್‌ಸರ್ ತೇವ(ಆರ್ದ್ರ)ಭೂಮಿ ನಗರಗಳಾಗಿವೆ(ಜನವರಿ 2025).

"ತೇವಭೂಮಿಗಳ ಬುದ್ಧಿವಂತ ಬಳಕೆಗಾಗಿ ಸುಸ್ಥಿರ ಜೀವನಶೈಲಿ ಉತ್ತೇಜಿಸುವುದು" ಕುರಿತು ಭಾರತ ನೇತೃತ್ವದ ನಿರ್ಣಯವನ್ನು ರಾಮ್‌ಸರ್ ಸಿಒಪಿ-15 (ಜುಲೈ 2025)ರಲ್ಲಿ ಅಂಗೀಕರಿಸಲಾಗಿದೆ.

ಡಿಸೆಂಬರ್ 2025ರಲ್ಲಿ ನೈರೋಬಿಯಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಸಭೆಯ 7ನೇ ಅಧಿವೇಶನದಲ್ಲಿ "ಕಾಡು ಬೆಂಕಿಯ ಜಾಗತಿಕ ನಿರ್ವಹಣೆ ಬಲಪಡಿಸುವುದು" ಕುರಿತು ಭಾರತದ ನಿರ್ಣಯ ಅಂಗೀಕರಿಸಲಾಯಿತು.

ಪರಿಸರ ಲೆಕ್ಕಪರಿಶೋಧನಾ ನಿಯಮಗಳು, 2025 ಅನ್ನು ಸೂಚಿಸಲಾಗಿದೆ, ಪ್ರಮಾಣೀಕೃತ 3ನೇ ವ್ಯಕ್ತಿಯ ಪರಿಸರ ಲೆಕ್ಕಪರಿಶೋಧಕರನ್ನು ಪರಿಚಯಿಸಲಾಗಿದೆ.

24.07.2025ರಂದು ಸೂಚಿಸಲಾದ ಪರಿಸರ ಸಂರಕ್ಷಣೆ(ಕಲುಷಿತ ತಾಣಗಳ ನಿರ್ವಹಣೆ) ನಿಯಮಗಳು-2025 ದೇಶದಲ್ಲಿ ಕಲುಷಿತ ತಾಣಗಳ ಗುರುತಿಸುವಿಕೆ, ಮೌಲ್ಯಮಾಪನ ಮತ್ತು ಪರಿಹಾರಕ್ಕಾಗಿ ಮಾರ್ಗಸೂಚಿ ಒದಗಿಸುತ್ತದೆ.

ದೇಶದ ಎಲ್ಲಾ ಎಸ್‌ಪಿಸಿಬಿಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ಕಾರ್ಯ ನಿರ್ವಹಿಸಲು ಒಪ್ಪಿಗೆ ನೀಡುವ ಏಕರೂಪ ಮಾರ್ಗಸೂಚಿಗಳನ್ನು ನೀಡಲಾಗಿದೆ.

प्रविष्टि तिथि: 31 DEC 2025 2:56PM by PIB Bengaluru

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ(ಎಂಒಇಎಫ್‌ಸಿಸಿ)ದ

ಪ್ರಮುಖ ಉಪಕ್ರಮಗಳು, ಸುಧಾರಣೆಗಳು ಮತ್ತು ಸಾಧನೆಗಳು

1. ಅರಣ್ಯ ಸಂರಕ್ಷಣೆ, ಅರಣ್ಯೀಕರಣ ಮತ್ತು ಹಸಿರು ಹೊದಿಕೆ ವರ್ಧನೆ

1.1 ಏಕ್ ಪೆಡ್ ಮಾ ಕೆ ನಾಮ್ ಅಭಿಯಾನ

ಪ್ರಧಾನಮಂತ್ರಿಗಳು ಪ್ರಾರಂಭಿಸಿದ ಏಕ್ ಪೆಡ್ ಮಾ ಕೆ ನಾಮ್ ಅಭಿಯಾನವು ವಿಶ್ವದ ಅತಿದೊಡ್ಡ ಜನಕೇಂದ್ರಿತ ಪರಿಸರ ಆಂದೋಲನಗಳಲ್ಲಿ ಒಂದಾಗಿದೆ. ಸಂಪೂರ್ಣ ಸರ್ಕಾರ ಮತ್ತು ಸಂಪೂರ್ಣ ಸಮಾಜದ ಕಾರ್ಯವಿಧಾನದ ಮೂಲಕ ಕಾರ್ಯಗತಗೊಳಿಸಲಾಗಿದೆ:

  • ಡಿಸೆಂಬರ್ 24, 2025ರ ವರೆಗೆ 262.4 ಕೋಟಿ ಸಸಿಗಳನ್ನು ನೆಡಲಾಗಿದೆ
  • ಈ ಅಭಿಯಾನವು ಭಾವನಾತ್ಮಕ, ಸಾಂಸ್ಕೃತಿಕ ಮತ್ತು ಪರಿಸರ ಮೌಲ್ಯಗಳನ್ನು ಸಂಯೋಜಿಸಿದೆ
  • ಮೇರಿ ಲೈಫ್ ಪೋರ್ಟಲ್ ಮೂಲಕ ತೋಟಗಾರಿಕೆ ಚಟುವಟಿಕೆಗಳನ್ನು ಡಿಜಿಟಲ್ ರೀತಿಯಲ್ಲಿ ಟ್ರ್ಯಾಕ್ ಮಾಡಲಾಗಿದೆ.

1.2 ಅರಣ್ಯ ಮತ್ತು ಮರಗಳ ವ್ಯಾಪ್ತಿಯ ಸ್ಥಿತಿಗತಿ

ಭಾರತ ಅರಣ್ಯ ರಾಜ್ಯ ವರದಿ(ಐಎಸ್‌ಎಫ್‌ಆರ್) 2023ರ ಪ್ರಕಾರ:

  • ದೇಶದ ಅರಣ್ಯ ಮತ್ತು ಮರಗಳ ವ್ಯಾಪ್ತಿಯು ದೇಶದ ಭೌಗೋಳಿಕ ಪ್ರದೇಶದ 25.17%(21.76% ಅರಣ್ಯ ವ್ಯಾಪ್ತಿ ಮತ್ತು 3.41% ಮರಗಳ ವ್ಯಾಪ್ತಿ) ಆಗಿದೆ.
  • 2013ರಿಂದ ಅರಣ್ಯ ಮತ್ತು ಮರಗಳ ವ್ಯಾಪ್ತಿಯಲ್ಲಿ 4.83%ರಷ್ಟು ಸಂಚಿತ ಲಾಭ ಅಥವಾ ಗಳಿಕೆ ಕಂಡುಬಂದಿದೆ.

ಎಫ್ಎಒ ಜಾಗತಿಕ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನ 2025ರ ಪ್ರಕಾರ:

 

§ ಭಾರತವು ಅರಣ್ಯ ಪ್ರದೇಶದಲ್ಲಿ ಜಾಗತಿಕವಾಗಿ 9ನೇ ಸ್ಥಾನದಲ್ಲಿದೆ(10ನೇ ಸ್ಥಾನದಿಂದ).

§ ವಾರ್ಷಿಕ ನಿವ್ವಳ ಅರಣ್ಯ ಲಾಭದಲ್ಲಿ ವಿಶ್ವಾದ್ಯಂತ 3ನೇ ಸ್ಥಾನ ಉಳಿಸಿಕೊಂಡಿದೆ.

ಈ ಸಾಧನೆಗಳು ಅರಣ್ಯ ಗುಣಮಟ್ಟವನ್ನು ಸುಧಾರಿಸುವಾಗ ಹಸಿರು ಹೊದಿಕೆಯನ್ನು ವಿಸ್ತರಿಸುವ ಭಾರತದ ದೀರ್ಘಕಾಲೀನ ಬದ್ಧತೆಯನ್ನು ಒತ್ತಿಹೇಳುತ್ತವೆ.

1.3 ರಾಷ್ಟ್ರೀಯ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ರಾಷ್ಟ್ರೀಯ ಸಿಎಎಂಪಿಎ)

  • ರಾಷ್ಟ್ರೀಯ ಸಿಎಎಂಪಿಎ-CAMPA(ಕ್ಯಾಂಪಾ) ಪ್ರಾಧಿಕಾರವು ತನ್ನ ನೀತಿಗಳು ಮತ್ತು ನವೀನ ಡಿಜಿಟಲ್ ಸುಧಾರಣೆಗಳ ಮೂಲಕ ಭಾರತದಲ್ಲಿ ಪರಿಹಾರ ಅರಣ್ಯೀಕರಣ ಮತ್ತು ಪರಿಸರ ವ್ಯವಸ್ಥೆಯ ಸೇವೆಗಳ ಪುನಃಸ್ಥಾಪನೆ ಚಟುವಟಿಕೆಗಳ ಯೋಜನೆ ಮತ್ತು ನಿರ್ವಹಣೆಯನ್ನು ಪರಿವರ್ತಿಸಿದೆ.
  • ಬಲವಾದ ಆರ್ಥಿಕ ಕಾರ್ಯವಿಧಾನಗಳು, ದೊಡ್ಡ ಪ್ರಮಾಣದ ಪರಿಸರ ಪುನಃಸ್ಥಾಪನೆ ಮತ್ತು ಹೊಸ ಡಿಜಿಟಲ್ ವ್ಯವಸ್ಥೆಗಳನ್ನು ಸಂಯೋಜಿಸುವ ಮೂಲಕ ಉದಾಹರಣೆಗೆ: (1) ಪ್ಯಾನ್ ಇಂಡಿಯಾ ಡಿಜಿಟಲ್ ಎಪಿಒO ಪೋರ್ಟಲ್ ಹೊರತರುವುದು, (2) ಬಿಸಾಗ್-ಎನ್(BISAG-N) ಜೊತೆಗೆ ಜಂಟಿಯಾಗಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಾಧನದ ಅಭಿವೃದ್ಧಿ, ಮತ್ತು ರಾಷ್ಟ್ರೀಯ ಕ್ಯಾಂಪಾ ಡ್ಯಾಶ್‌ಬೋರ್ಡ್ - ರಾಷ್ಟ್ರೀಯ ಕ್ಯಾಂಪಾ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವೈಜ್ಞಾನಿಕ ಮೇಲ್ವಿಚಾರಣೆಯನ್ನು ಖಚಿತಪಡಿಸುತ್ತಿದೆ.
  • ರಾಷ್ಟ್ರೀಯ ಪ್ರಾಧಿಕಾರ ಕ್ಯಾಂಪಾ 2025-26ರ ಹಣಕಾಸು ವರ್ಷದಲ್ಲಿ 8561.34 ಕೋಟಿ ರೂ. ಮೌಲ್ಯದ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಾರ್ಷಿಕ ಕಾರ್ಯಾಚರಣೆಯ ಯೋಜನೆಯನ್ನು ಅನುಮೋದಿಸಿದೆ.

 

1.4 ಅರಾವಳಿ ಭೂದೃಶ್ಯ ಪುನಃಸ್ಥಾಪನೆ(ಹಸಿರು ಗೋಡೆ ಉಪಕ್ರಮ)

  • ಅರಾವಳಿ ಹಸಿರು ಗೋಡೆ ಉಪಕ್ರಮವು ರಾಜಸ್ಥಾನ, ಗುಜರಾತ್, ಹರಿಯಾಣ ಮತ್ತು ದೆಹಲಿಯಲ್ಲಿ ಆದ್ಯತೆಯ ಮಧ್ಯಸ್ಥಿಕೆ ಪ್ರದೇಶಗಳೊಂದಿಗೆ 6.31 ದಶಲಕ್ಷ ಹೆಕ್ಟೇರ್ ಪುನಃಸ್ಥಾಪನೆಯನ್ನು ಪ್ರಸ್ತಾಪಿಸುತ್ತದೆ.
  • ಹಂತವಾರು ಪುನಃಸ್ಥಾಪನೆ ಯೋಜನೆ(2025–2034) ಕ್ಯಾಂಪಾ, ಎಂಜಿಎನ್‌ಆರ್‌ಇಜಿಎಸ್, ಗ್ರೀನ್ ಇಂಡಿಯಾ ಮಿಷನ್ ಮತ್ತು ಇತರೆ ಕಾರ್ಯಕ್ರಮಗಳೊಂದಿಗೆ ಒಮ್ಮುಖವಾಗುವ ಮೂಲಕ ಅರಣ್ಯ ಪುನಃಸ್ಥಾಪನೆ, ಹುಲ್ಲುಗಾವಲು ಪುನರುಜ್ಜೀವನ ಮತ್ತು ಗಣಿ ಸುಧಾರಣೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ.
  • 2025ರಲ್ಲಿ ಸುಮಾರು 36,025 ಹೆಕ್ಟೇರ್ ಪ್ರದೇಶವನ್ನು ಪುನಃಸ್ಥಾಪಿಸಲಾಗಿದೆ.
  • 4 ರಾಜ್ಯಗಳಲ್ಲಿ ಅರಾವಳಿ ಭೂದೃಶ್ಯಗಳ ಅಡಿ ಬರುವ 435 ನರ್ಸರಿಗಳನ್ನು ಸ್ಥಾಪಿಸಲಾಗಿದೆ, ಇವುಗಳ ಒಟ್ಟು ಅಂದಾಜು ಉತ್ಪಾದನಾ ಸಾಮರ್ಥ್ಯ 393.24 ಲಕ್ಷ ಸಸಿಗಳನ್ನು ಸ್ಥಾಪಿಸಲಾಗಿದೆ.
  • ಅರಾವಳಿ ಬೆಟ್ಟ ಶ್ರೇಣಿಯನ್ನು ಪುನಃಸ್ಥಾಪಿಸುವ ಪ್ರಮುಖ ಉಪಕ್ರಮವಾದ ಅರಾವಳಿ ಭೂದೃಶ್ಯ ಪುನಃಸ್ಥಾಪನೆಗಾಗಿ ವಿವರವಾದ ಕ್ರಿಯಾಯೋಜನೆಯನ್ನು 21 ಮೇ 2025ರಂದು ಅನಾವರಣಗೊಳಿಸಲಾಯಿತು. ಕ್ರಿಯಾಯೋಜನೆಯು ಅರಾವಳಿಗಳ ಪರಿಸರ ಸಮಗ್ರತೆಯನ್ನು ಪುನಃಸ್ಥಾಪಿಸಲು ವಿಜ್ಞಾನ ಆಧಾರಿತ, ಸಮುದಾಯ-ನೇತೃತ್ವದ ಮತ್ತು ನೀತಿ-ಬೆಂಬಲಿತ ಮಾರ್ಗಸೂಚಿಯನ್ನು ವಿವರಿಸುತ್ತದೆ.

2. ವನ್ಯಜೀವಿ ಸಂರಕ್ಷಣೆ ಮತ್ತು ಪ್ರಭೇದಗಳ ಚೇತರಿಕೆ

2.1 ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್

ಭಾರತವು ತನ್ನ ಪ್ರಮುಖ ಸಂರಕ್ಷಣಾ ಕಾರ್ಯಕ್ರಮಗಳನ್ನು ಬಲಪಡಿಸುವುದನ್ನು ಮುಂದುವರೆಸಿದೆ:

  • 2014ರಲ್ಲಿ 46ರಷ್ಟಿದ್ದ 58 ಹುಲಿ ಮೀಸಲು ಪ್ರದೇಶಗಳು ಈಗ ಸುಮಾರು 85,000 ಚದರ ಕಿ.ಮೀ. ವ್ಯಾಪ್ತಿ ಹೊಂದಿವೆ.
  • ಹೊಸ ಮೀಸಲು ಪ್ರದೇಶ: ಮಾಧವ್ ಹುಲಿ ಮೀಸಲು ಪ್ರದೇಶ, ಮಧ್ಯಪ್ರದೇಶ.
  • ಅಖಿಲ ಭಾರತ ಹುಲಿ ಅಂದಾಜಿನ 6ನೇ ಚಕ್ರವನ್ನು ಪ್ರಾರಂಭಿಸಲಾಯಿತು (ಜಾಗತಿಕವಾಗಿ ಮೊದಲು).
  • ಆವಾಸಸ್ಥಾನ ಸುಧಾರಣೆ ಮತ್ತು ಕಾರಿಡಾರ್ ರಕ್ಷಣೆಗೆ ಆದ್ಯತೆ ನೀಡಲಾಯಿತು.
  • 2014ರಲ್ಲಿ ಇದ್ದ 26ಕ್ಕೆ ಹೋಲಿಸಿದರೆ 2025ರಲ್ಲಿ ಆನೆ ಮೀಸಲು ಪ್ರದೇಶಗಳು 33ಕ್ಕೆ ಏರಿದೆ; ಸುಮಾರು 8,610 ಚದರ ಕಿ.ಮೀ ಹೆಚ್ಚುವರಿ ಪ್ರದೇಶವನ್ನು ರಕ್ಷಣೆಗೆ ಒಳಪಡಿಸಲಾಗಿದೆ.
  • ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ಪ್ರಮುಖ ಮಧ್ಯಸ್ಥಿಕೆಗಳು ಈ ಕೆಳಗಿನಂತಿವೆ:
  • ಭಾರತ-ಬಾಂಗ್ಲಾದೇಶ ಟ್ರಾನ್ಸ್‌ಬೌಂಡರಿ ಆನೆ ಸಂರಕ್ಷಣಾ ಪ್ರೋಟೋಕಾಲ್
  • 15 ರಾಜ್ಯಗಳಲ್ಲಿ ಗುರುತಿಸಲಾದ 150 ಆನೆ ಕಾರಿಡಾರ್‌ಗಳು
  • ಮಾನವ ಸಾವುನೋವುಗಳಿಗೆ ಪರಿಹಾರ ಹೆಚ್ಚಿಸಲಾಗಿದೆ: 5 ಲಕ್ಷ → 10 ಲಕ್ಷ ರೂ.
  • ರೈಲು-ಹಳಿ ತಗ್ಗಿಸುವ ಪೋರ್ಟಲ್; 110 ನಿರ್ಣಾಯಕ ತಾಣಗಳನ್ನು ಗುರುತಿಸಲಾಗಿದೆ
  • ಗಜ್ ಸೂಚ್ನಾ ಅಪ್ಲಿಕೇಶನ್ ಮೂಲಕ ಸೆರೆಯಲ್ಲಿರುವ ಆನೆಗಳ ಡಿಎನ್‌ಎ ದಾಖಲೀಕರಣ(ಪ್ರೊಫೈಲಿಂಗ್)

 

2.2 ಸಂರಕ್ಷಿತ ಪ್ರದೇಶಗಳು ಮತ್ತು ಸಮುದಾಯ ಮೀಸಲು ಪ್ರದೇಶಗಳು

  • 2014ರಲ್ಲಿ 745ರಷ್ಟಿದ್ದ ಸಂರಕ್ಷಿತ ಪ್ರದೇಶಗಳು 2025ರಲ್ಲಿ 1134ಕ್ಕೆ ಏರಿವೆ.
  • ಸಂರಕ್ಷಿತ ಪ್ರದೇಶ ಜಾಲದ ಅಡಿ ಸಮುದಾಯ ಮೀಸಲು ಪ್ರದೇಶಗಳು 2014ರಲ್ಲಿ ಇದ್ದ 48 ಸಂರಕ್ಷಿತ ಪ್ರದೇಶಗಳಿಗೆ ಹೋಲಿಸಿದರೆ 2025ರಲ್ಲಿ 309ಕ್ಕೆ ಏರಿವೆ.

2.3 ಚೀತಾ ಯೋಜನೆ

2025ರಲ್ಲಿ ಚಿರತೆ ಯೋಜನೆ ವಿಸ್ತರಣಾ ಹಂತವನ್ನು ಪ್ರವೇಶಿಸಿತು:

  • ಗಾಂಧಿಸಾಗರ್ ವನ್ಯಜೀವಿ ಅಭಯಾರಣ್ಯದಲ್ಲಿ ಚಿರತೆಗಳನ್ನು ಪರಿಚಯಿಸಲಾಯಿತು; ನೊರಾದೇಹಿ ಮತ್ತು ಬನ್ನಿ ಹುಲ್ಲುಗಾವಲುಗಳಿಗೆ ಯೋಜಿತ ವಿಸ್ತರಣೆ
  • ಭಾರತದಲ್ಲಿ ಜನಿಸಿದ 19 ಮರಿಗಳು ಸೇರಿದಂತೆ ಒಟ್ಟು ಚಿರತೆಗಳ ಸಂಖ್ಯೆ 30ಕ್ಕೆ ಏರಿಕೆ ಕಂಡಿದೆ
  • ಯಶಸ್ವಿ ಸಂತಾನೋತ್ಪತ್ತಿ ಒಂದು ಪ್ರಮುಖ ಸಂರಕ್ಷಣಾ ಮೈಲಿಗಲ್ಲು ಎಂದು ಗುರುತಿಸಲಾಗಿದೆ
  • ಬೋಟ್ಸ್ವಾನಾದಿಂದ 8 ಚಿರತೆಗಳ ಹೊಸ ತಂಡವನ್ನು ಸ್ವೀಕರಿಸಲಾಗಿದೆ(2025)

2.4 ಅಂತಾರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ(ಐಬಿಸಿಎ)

ಭಾರತವು ಅಂತಾರಾಷ್ಟ್ರೀಯ ದೊಡ್ಡ ಬೆಕ್ಕು(ಸಿಂಹ, ಹುಲಿ, ಚಿರತೆಯಂತಹ ದೊಡ್ಡ ಕಾಡು ಬೆಕ್ಕುಗಳ ಪ್ರಭೇದ) ಒಕ್ಕೂಟವನ್ನು(ಜಾಗತಿಕವಾಗಿ 7 ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸಲು ಏಪ್ರಿಲ್ 2023ರಲ್ಲಿ ಪ್ರಾರಂಭಿಸಲಾದ ಐಬಿಸಿಎ ಮುನ್ನಡೆಸುವುದನ್ನು ಮುಂದುವರೆಸಿದೆ

• 23 ಜನವರಿ 2025ರಂದು ಮಾರ್ಗಸೂಚಿ ಒಪ್ಪಂದ ಜಾರಿಗೆ ಬಂದಿದೆ.

• ಸದಸ್ಯತ್ವವು 18 ದೇಶಗಳಿಗೆ ವಿಸ್ತರಿಸಿದೆ

• ಸಂರಕ್ಷಣೆ, ಸಾಮರ್ಥ್ಯ ವೃದ್ಧಿ ಮತ್ತು ಸಂಶೋಧನೆ ಕುರಿತ ಸಹಕಾರ ಬಲಪಡಿಸಲಾಗಿದೆ

• ಐಬಿಸಿಎ ಜೀವವೈವಿಧ್ಯ ಸಂರಕ್ಷಣೆಯನ್ನು ಹವಾಮಾನ ಹೊಂದಾಣಿಕೆ, ಪರಿಸರ ವ್ಯವಸ್ಥೆಯ ಸೇವೆಗಳು, ನೀರಿನ ಸುರಕ್ಷತೆ ಮತ್ತು ಸಮುದಾಯ ಜೀವನೋಪಾಯಗಳೊಂದಿಗೆ ಸಂಪರ್ಕಿಸುತ್ತದೆ, ಇದು ಭಾರತದ ಜಾಗತಿಕ ನಾಯಕತ್ವವನ್ನು ಬಲಪಡಿಸುತ್ತದೆ.

2.5 05 ರಾಷ್ಟ್ರೀಯ ಮಟ್ಟದ ಯೋಜನೆಗಳು ಮತ್ತು 04 ರಾಷ್ಟ್ರೀಯ ಮಟ್ಟದ ಕ್ರಿಯಾ ಯೋಜನೆಗಳ ಪ್ರಾರಂಭ.

ಪ್ರಾಜೆಕ್ಟ್ ಡಾಲ್ಫಿನ್ ಹಂತ 11, ಪ್ರಾಜೆಕ್ಟ್ ಸ್ಲಾತ್ ಬೇರ್, ಪ್ರಾಜೆಕ್ಟ್ ಘರಿಯಲ್, ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಗಾಗಿ ಶ್ರೇಷ್ಠತಾ ಕೇಂದ್ರ, ಮತ್ತು "ಟೈಗರ್ ರಿಸರ್ವ್ ಹೊರಗೆ ಹುಲಿಗಳು" ಕುರಿತಾದ ಯೋಜನೆ ಸೇರಿದಂತೆ ಪ್ರಭೇದಗಳ ಸಂರಕ್ಷಣೆ ಮತ್ತು ಸಂಘರ್ಷ ನಿರ್ವಹಣೆಗಾಗಿ 5 ರಾಷ್ಟ್ರೀಯ ಮಟ್ಟದ ಯೋಜನೆಗಳು ಹಾಗೂ ನದಿ ಡಾಲ್ಫಿನ್‌ಗಳು, ಹುಲಿಗಳು, ಹಿಮ ಚಿರತೆ ಮತ್ತು ಬಸ್ಟರ್ಡ್‌ಗಳನ್ನು ಒಳಗೊಂಡ ಪ್ರಭೇದಗಳ ಜನಸಂಖ್ಯಾ ಮೌಲ್ಯಮಾಪನ ಮತ್ತು ಮೇಲ್ವಿಚಾರಣಾ ಕಾರ್ಯಕ್ರಮಗಳಿಗಾಗಿ 4 ರಾಷ್ಟ್ರೀಯ ಮಟ್ಟದ ಕ್ರಿಯಾಯೋಜನೆಗಳು ಮತ್ತು ಕ್ಷೇತ್ರ ಮಾರ್ಗದರ್ಶಿಗಳನ್ನು 2025ರ ವನ್ಯಜೀವಿ ವಾರದಲ್ಲಿ(ಅಕ್ಟೋಬರ್ 2-8) ಪ್ರಾರಂಭಿಸಲಾಯಿತು.

 

2.6 ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್ ಬಿಡಬ್ಲ್ಯುಎಲ್):

ಸನ್ಮಾನ್ಯ ಪ್ರಧಾನ ಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 3 2025ರಂದು ಗಿರ್‌ನ ಸಂಸಾನ್‌ನಲ್ಲಿ ನಡೆದ 7ನೇ ಎನ್ ಬಿಡಬ್ಲ್ಯುಎಲ್ ಸಭೆಯು, ಭಾರತದಲ್ಲಿ ಜೀವವೈವಿಧ್ಯ ಸಂರಕ್ಷಣೆಯನ್ನು ಹೆಚ್ಚಿಸಲು ಸಹಭಾಗಿತ್ವ ಮತ್ತು ಕ್ರಿಯಾಶೀಲ ಅಂಶಗಳನ್ನು ಒತ್ತಿಹೇಳಲು ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳನ್ನು ಚರ್ಚಿಸಲು ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸಿತು.

3. ಜೀವವೈವಿಧ್ಯ ಸಂರಕ್ಷಣೆ ಮತ್ತು ಸಮುದಾಯ ಭಾಗವಹಿಸುವಿಕೆ

3.1 ಜೈವಿಕ ವೈವಿಧ್ಯತೆ ಸುಧಾರಣೆಗಳು

ಜೈವಿಕ ವೈವಿಧ್ಯತೆ(ತಿದ್ದುಪಡಿ) ನಿಯಮಗಳು-2025ರಲ್ಲಿ ಈ ಕೆಳಗಿನ ಅಂಶಗಳಿಗೆ ಒತ್ತು ನೀಡಲಾಗಿದೆ.:

• ಅನುಸರಣೆಯನ್ನು ಸರಳಗೊಳಿಸಿ

• ಸಂಶೋಧನೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸಿ

• ಪ್ರಯೋಜನ ಹಂಚಿಕೆ ಕಾರ್ಯವಿಧಾನಗಳನ್ನು ಬಲಪಡಿಸಿ

3.2 ಪ್ರವೇಶ ಮತ್ತು ಪ್ರಯೋಜನ ಹಂಚಿಕೆ(ಎಬಿಎಸ್)

  • ಜೀವವೈವಿಧ್ಯ ಪಾಲಕರಾಗಿ ಸ್ಥಳೀಯ ಸಮುದಾಯಗಳ ಪಾತ್ರವನ್ನು ಬಲಪಡಿಸಲಾಗಿದೆ.
  • ವ್ಯವಹಾರ ಮತ್ತು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಪ್ರಮಾಣಪತ್ರ ಕಾರ್ಯಕ್ರಮ ಪ್ರಾರಂಭ.
  • ಎಬಿಎಸ್ ಅಡಿ ಸ್ಥಳೀಯ ಸಮುದಾಯಗಳಿಗೆ 61 ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ.

3.3 ಜಾಗತಿಕ ತೊಡಗಿಸಿಕೊಳ್ಳುವಿಕೆ

ಭಾರತವು ಸಿಬಿಡಿ ಸಿಒಪಿ-16(ರೋಮ್ 2025)ರಲ್ಲಿ ಸಕ್ರಿಯವಾಗಿ ಭಾಗವಹಿಸಿ, ಜೀವವೈವಿಧ್ಯ ಸಂರಕ್ಷಣೆಗಾಗಿ ಸಮಾನತೆ, ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆ ವಿಷಯವನ್ನು ಪ್ರತಿಪಾದಿಸಿತು.

4. ಹವಾಮಾನ ಬದಲಾವಣೆಗೆ ಕ್ರಮ ಮತ್ತು ಜಾಗತಿಕ ನಾಯಕತ್ವ

4.1 ಭಾರತದ ರಾಷ್ಟ್ರೀಯವಾಗಿ ನಿರ್ಧರಿಸಲ್ಪಟ್ಟ ಕೊಡುಗೆಯ(ಎನ್‌ಡಿಸಿ) ಸಾಧನೆಗಳು

  •  2020ರಲ್ಲಿ ಸಾಧಿಸಲಾದ 2005ರ ಮಟ್ಟದಿಂದ ಜಿಡಿಪಿಯ ಹೊರಸೂಸುವಿಕೆ ತೀವ್ರತೆಯಲ್ಲಿ 36%ರಷ್ಟು ಕಡಿತ - 2030ರ ವೇಳೆಗೆ 45% ಗುರಿಗೆ ಪ್ರತಿಯಾಗಿ
  •  ಉರವಲುಯೇತರ ಇಂಧನ ಮೂಲಗಳಿಂದ ವಿದ್ಯುತ್ ಶಕ್ತಿಯ ಸ್ಥಾಪಿತ ಸಾಮರ್ಥ್ಯವು ಜೂನ್ 2025ರಲ್ಲಿ 50%ಗಿಂತ ಹೆಚ್ಚಾಗಿದೆ - ನಿಗದಿತ ಸಮಯಕ್ಕಿಂತ 5 ವರ್ಷಗಳು ಮುಂಚಿತವಾಗಿ
  • 2030ರ ವೇಳೆಗೆ 2.5 - 3.0 ಶತಕೋಟಿ ಟನ್ ಇಂಗಾಲ ಹೀರಿಕೆಯ ಸೃಷ್ಟಿಯ ಗುರಿಗೆ ಪ್ರತಿಯಾಗಿ 2005 ಮತ್ತು 2021ರ ನಡುವೆ 2.29 ಶತಕೋಟಿ ಟನ್ ಹೆಚ್ಚುವರಿ ಇಂಗಾಲ ಹೀರಿಕೆ(ಕಾರ್ಬನ್ ಸಿಂಕ್) ಸೃಷ್ಟಿಸಲಾಗಿದೆ.

4.2 ಭಾರತೀಯ ಇಂಗಾಲ ಮಾರುಕಟ್ಟೆ

ಕಾರ್ಬನ್ ಕ್ರೆಡಿಟ್ ವ್ಯಾಪಾರ ಯೋಜನೆ(ಸಿಸಿಟಿಎಸ್) ಕಾರ್ಯಾಚರಣೆಯು ಭಾರತದ ಹವಾಮಾನ ಕಾರ್ಯತಂತ್ರದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ:

  • ಅನುಸರಣೆ ಮತ್ತು ಇಂಗಾಲ ಹೊರಸೂಸುವಿಕೆ ನಿಯಂತ್ರಣ ಕಾರ್ಯವಿಧಾನಗಳನ್ನು ಸ್ಥಾಪಿಸಲಾಗಿದೆ
  • ಅಂತಾರಾಷ್ಟ್ರೀಯ ಇಂಗಾಲದ ಮಾರ್ಗಸೂಚಿಗಳೊಂದಿಗೆ ಜೋಡಿಸಲಾದ ದೇಶೀಯ ಮಾರುಕಟ್ಟೆ

ಪ್ಯಾರಿಸ್ ಒಪ್ಪಂದದ ವಿಧಿ 6.2ರ ಅಡಿ ಭಾರತವು ಆಗಸ್ಟ್ 2025ರಲ್ಲಿ ಜಪಾನ್‌ನೊಂದಿಗೆ ದ್ವಿಪಕ್ಷೀಯ ಕಾರ್ಯವಿಧಾನಕ್ಕೆ ಸಹಿ ಹಾಕಿದೆ.

5. ವಾಯು ಗುಣಮಟ್ಟ ಸುಧಾರಣೆ ಮತ್ತು ನಗರ ಪರಿಸರ

5.1 ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ(ಎನ್‌ಸಿಎಪಿ)

ಎನ್‌ಸಿಎಪಿ ಅಳೆಯಬಹುದಾದ ಅಥವಾ ಮಾಪನ ಮಾಡುವ ಫಲಿತಾಂಶಗಳನ್ನು ನೀಡುವುದನ್ನು ಮುಂದುವರೆಸಿದೆ:

  • 130 ನಗರಗಳನ್ನು ಒಳಗೊಂಡಿದೆ.
  • ಇಲ್ಲಿಯವರೆಗೆ 13,415 ಕೋಟಿ ರೂ.ಗಳನ್ನು ಕಾರ್ಯಕ್ಷಮತೆ-ಸಂಬಂಧಿತ ನಿಧಿಯಾಗಿ ನೀಡಲಾಗಿದೆ.
  • ಸಿಪಿ ಯೋಜನೆಯಡಿ 2025-26ರ ಹಣಕಾಸು ವರ್ಷದಲ್ಲಿ 82 ನಗರಗಳಿಗೆ 792.72 ಕೋಟಿ ರೂ. ಬಿಡುಗಡೆ ಮಾಡಲಾಗಿದೆ
  • 15ನೇ ಹಣಕಾಸು ಆಯೋಗದ ವಾಯು ಗುಣಮಟ್ಟದ ಅನುದಾನದ ಅಡಿ 48 ದಶಲಕ್ಷಕ್ಕಿಂತಲೂ ಹೆಚ್ಚಿನ ನಗರಗಳಿಗೆ 2194.25 ಕೋಟಿ ರೂ. ಬಿಡುಗಡೆ ಮಾಡಲು ವಾಯು ಗುಣಮಟ್ಟದ ಕಾರ್ಯಕ್ಷಮತೆಯ ಆಧಾರದ ಮೇಲೆ ಇಂಧನ ಇಲಾಖೆಗೆ ಗೆ ಶಿಫಾರಸುಗಳನ್ನು ಕಳುಹಿಸಲಾಗಿದೆ
  •  2017-18ಕ್ಕೆ ಹೋಲಿಸಿದರೆ 103 ನಗರಗಳು 2024-25ರಲ್ಲಿ ಪಿಎಂ10 ಮಟ್ಟದಲ್ಲಿ ಇಳಿಕೆಯನ್ನು ದಾಖಲಿಸಿವೆ, ಅವುಗಳಲ್ಲಿ:
  • 64 ನಗರಗಳು 20%ಗಿಂತ ಹೆಚ್ಚಿನ ಇಳಿಕೆ ತೋರಿಸಿವೆ
  • ಈ ಪೈಕಿ 25 ನಗರಗಳು 40% ಕ್ಕಿಂತ ಹೆಚ್ಚು ಇಳಿಕೆಯನ್ನು ಸಾಧಿಸಿವೆ.
  • 22 ನಗರಗಳು ಪಿಎಂ10 ಮಟ್ಟಗಳಿಗಾಗಿ ರಾಷ್ಟ್ರೀಯ ಸುತ್ತುವರಿದ ವಾಯು ಗುಣಮಟ್ಟದ ಮಾನದಂಡಗಳನ್ನು ಪೂರೈಸಿವೆ.

130 ನಗರಗಳಲ್ಲಿ ವಾರ್ಡ್ ಮಟ್ಟದ ಸ್ವಚ್ಛ ವಾಯು ಸರ್ವೇಕ್ಷಣೆ ನಡೆಸಲು ಮಾರ್ಗಸೂಚಿಗಳನ್ನು ನೀಡಲಾಗಿದೆ.

5.2 ನಗರ ವನ ಯೋಜನೆ(ಎನ್ ವಿವೈ)

ನಗರ ಅರಣ್ಯೀಕರಣವು ವೇಗ ಪಡೆದುಕೊಂಡಿದೆ:

• ನಗರಗಳು ಮತ್ತು ಪಟ್ಟಣಗಳಲ್ಲಿ ಹಸಿರು ಸ್ಥಳಗಳನ್ನು ಹೆಚ್ಚಿಸಲಾಗಿದೆ.

• 2025ರಲ್ಲಿ 75 ಯೋಜನೆಗಳನ್ನು ಮಂಜೂರು ಮಾಡಲಾಗಿದೆ.

• ಒಟ್ಟು 620 ನಗರ ವನ ಯೋಜನೆಗಳನ್ನು ಮಂಜೂರು ಮಾಡಲಾಗಿದೆ.

• ಒಟ್ಟು 654 ಕೋಟಿ ರೂ.ವೆಚ್ಚ.

6. ತ್ಯಾಜ್ಯ ನಿರ್ವಹಣೆ ಮತ್ತು ವೃತ್ತಾಕಾರದ ಆರ್ಥಿಕತೆ

6.1 ವಿಸ್ತೃತ ಉತ್ಪಾದಕರ ಜವಾಬ್ದಾರಿ(ಇಪಿಆರ್) ಮತ್ತು ವೃತ್ತಾಕಾರದ ಆರ್ಥಿಕತೆ

ಇಪಿಆರ್ ಮಾರ್ಗಸೂಚಿಗಳನ್ನು 8 ತ್ಯಾಜ್ಯ ಹರಿವುಗಳಲ್ಲಿ ಅಳವಡಿಸಲಾಗಿದೆ:

• ವೃತ್ತಾಕಾರದ ಆರ್ಥಿಕತೆಗೆ ಬಲವಾದ ಅಡಿಪಾಯ ಹಾಕಲಾಗಿದೆ

• 03.12.2025ರಂತೆ, ವಿವಿಧ ತ್ಯಾಜ್ಯ ಹರಿವುಗಳ ಅಡಿ 71,401 ಉತ್ಪಾದಕರು ಮತ್ತು 4,447 ಮರುಬಳಕೆದಾರರನ್ನು ಪೋರ್ಟಲ್‌ಗಳಲ್ಲಿ ನೋಂದಾಯಿಸಲಾಗಿದೆ.

• ಸರಿಸುಮಾರು 375.11 ಲಕ್ಷ ಟನ್ ತ್ಯಾಜ್ಯವನ್ನು(ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ, ಬ್ಯಾಟರಿ ತ್ಯಾಜ್ಯ, ಇ-ತ್ಯಾಜ್ಯ, ತ್ಯಾಜ್ಯ ಟೈರ್‌ಗಳು) 339.51 ಲಕ್ಷ ಟನ್‌ಗಳ ಅನುಗುಣವಾದ ಇಪಿಆರ್ ಪ್ರಮಾಣಪತ್ರಗಳೊಂದಿಗೆ ಮರುಬಳಕೆ ಮಾಡಲಾಗಿದೆ, ಅದರಲ್ಲಿ 237.85 ಟನ್‌ಗಳನ್ನು ಉತ್ಪಾದಕರಿಗೆ ವರ್ಗಾಯಿಸಲಾಗಿದೆ.

7. ಕರಾವಳಿ, ಜೌಗು ಪ್ರದೇಶಗಳು, ಮ್ಯಾಂಗ್ರೋವ್(ಉಪ್ಪು ಜವುಗುಗಳು) ಸಂರಕ್ಷಣೆ ಮತ್ತು ಪರಿಸರ-ಸೂಕ್ಷ್ಮ ವಲಯಗಳು

7.1 ಮಿಶ್ತಿ ಕಾರ್ಯಕ್ರಮ

ಮ್ಯಾಂಗ್ರೋವ್ ಪುನಃಸ್ಥಾಪನೆ ವೇಗ ಪಡೆದುಕೊಂಡಿದೆ:

• 2025ರಲ್ಲಿ 4,536 ಹೆಕ್ಟೇರ್ ಪ್ರದೇಶವನ್ನು ಪುನಃಸ್ಥಾಪನೆಗೆ ಒಳಪಡಿಸಲಾಯಿತು.

• 2025ರಲ್ಲಿ 46.48 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

• ಒಟ್ಟು 22,560 ಹೆಕ್ಟೇರ್ ಕ್ಷೀಣಿಸಿದ ಮ್ಯಾಂಗ್ರೋವ್‌ಗಳನ್ನು ಪುನಃಸ್ಥಾಪಿಸಲಾಗಿದೆ.

7.2 ಜೌಗು ಪ್ರದೇಶ ಸಂರಕ್ಷಣೆ

• 2025ರಲ್ಲಿ, 11 ರಾಮ್‌ಸರ್ ತಾಣಗಳನ್ನು ಘೋಷಿಸಿ, ಪಟ್ಟಿಗೆ ಸೇರಿಸಲಾಯಿತು.

• ಭಾರತದಲ್ಲಿ ಈಗ 96 ರಾಮ್‌ಸರ್ ತಾಣಗಳಿವೆ, ಇದು ಏಷ್ಯಾದಲ್ಲೇ ಅತಿ ಹೆಚ್ಚು

• ಉದಯಪುರ ಮತ್ತು ಇಂದೋರ್ ಭಾರತದ ಮೊದಲ ರಾಮ್‌ಸರ್-ಮಾನ್ಯತೆ ಪಡೆದ ಜೌಗು ಪ್ರದೇಶ ನಗರಗಳಾಗಿವೆ

• ಭಾರತವು ಈಗ ಏಷ್ಯಾದಲ್ಲಿ ಅತಿದೊಡ್ಡ ರಾಮ್‌ಸರ್ ಜಾಲ ಹೊಂದಿದೆ ಮತ್ತು ತಾಣಗಳ ಸಂಖ್ಯೆಯಲ್ಲಿ ಜಾಗತಿಕವಾಗಿ 3ನೇ ದೊಡ್ಡದಾಗಿದೆ.

7.3 ರಾಷ್ಟ್ರೀಯ ಕರಾವಳಿ ಮಿಷನ್

• ಕರಾವಳಿ ಪರಿಸರ ವ್ಯವಸ್ಥೆಗಳ ಹವಾಮಾನ ಹೊಂದಾಣಿಕೆ ಬಲಪಡಿಸುವ ಮೂಲಕ 767 ಕೋಟಿ ರೂ. ಹಂಚಿಕೆಯೊಂದಿಗೆ 2025–31ಕ್ಕೆ ವಿಸ್ತರಿಸಲಾಗಿದೆ.

• 2025-26 ಹಂಗಾಮಿನ ಹೊತ್ತಿಗೆ, ಭಾರತದ 7 ಕರಾವಳಿ ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ 18 ಕಡಲತೀರಗಳಿಗೆ ಬ್ಲೂ ಫ್ಲ್ಯಾಗ್ ಪ್ರಮಾಣೀಕರಣ ನೀಡಲಾಗಿದೆ.

7.4 ಪರಿಸರ-ಸೂಕ್ಷ್ಮ ವಲಯಗಳು (ಇಎಸ್‌ಝಡ್ ಗಳು)

• ಭಾರತದಲ್ಲಿ ಸಂರಕ್ಷಣಾ ಯೋಜನೆಯು ಪ್ರಾತಿನಿಧಿಕ ಆವಾಸಸ್ಥಾನಗಳನ್ನು ರಕ್ಷಿಸಲು ಪರಿಸರ ವ್ಯವಸ್ಥೆ ಆಧಾರಿತ ಕಾರ್ಯವಿಧಾನವನ್ನು ಅನುಸರಿಸುತ್ತದೆ.

• ಪರಿಸರ-ಸೂಕ್ಷ್ಮ ವಲಯಗಳು(ಇಎಸ್‌ಝಡ್ ಗಳು) ಸ್ಥಳೀಯ ಸಮುದಾಯಗಳ ಸುಸ್ಥಿರ ಜೀವನೋಪಾಯ ಬೆಂಬಲಿಸುವಾಗ ಸಂರಕ್ಷಿತ ಪ್ರದೇಶಗಳ ಸುತ್ತಲಿನ ಅಭಿವೃದ್ಧಿಯನ್ನು ನಿಯಂತ್ರಿಸುತ್ತವೆ.

• 496 ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡ 353 ಅಂತಿಮ ಇಎಸ್‌ಝಡ್ ಅಧಿಸೂಚನೆಗಳನ್ನು ನೀಡಲಾಗಿದೆ, 2014ರ ವರೆಗೆ 25 ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡ ಕೇವಲ 23 ಇಎಸ್‌ಝಡ್ ಗಳು ಮಾತ್ರ ಇದ್ದವು.

8. ಪರಿಸರ ಜಾಗೃತಿ, ಶಿಕ್ಷಣ ಮತ್ತು ಸಾಮರ್ಥ್ಯ ವೃದ್ಧಿ

• ದೇಶಾದ್ಯಂತ 1.12 ಲಕ್ಷ ಪರಿಸರ ಕ್ಲಬ್‌ಗಳು ಕಾರ್ಯ ನಿರ್ವಹಿಸುತ್ತಿವೆ

• ಮಿಷನ್ ಲೈಫ್ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಸುಸ್ಥಿರ ಜೀವನಶೈಲಿಯತ್ತ ಸಜ್ಜುಗೊಳಿಸಿತು. ಮೇರಿ ಲೈಫ್ ಪೋರ್ಟಲ್‌ನಲ್ಲಿ ವರದಿಯಾಗಿರುವಂತೆ, ಇಲ್ಲಿಯವರೆಗೆ 6 ಕೋಟಿಗೂ ಹೆಚ್ಚು ಜನರು 34 ಲಕ್ಷಕ್ಕೂ ಹೆಚ್ಚು ಲೈಫ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. 4.96 ಕೋಟಿ ಮಿಷನ್ ಲೈಫ್ ಪ್ರತಿಜ್ಞೆ ವಿಧಿ ಸ್ವೀಕರಿಸಲಾಗಿದೆ.

• ಇಐಎಸಿಪಿ ಡಿಜಿಟಲ್ ಸಂಪರ್ಕ ಮತ್ತು ಜ್ಞಾನ ಪ್ರಸರಣವನ್ನು ಬಲಪಡಿಸಿದೆ.

9. ಪ್ರಮುಖ ಸಂಸ್ಥೆಗಳ ಅಡಿ ಚಟುವಟಿಕೆಗಳು:

ರಾಷ್ಟ್ರೀಯ ಹಿಮಾಲಯನ್ ಅಧ್ಯಯನಗಳ ಮಿಷನ್(ಎನ್‌ಎಂಎಚ್‌ಎಸ್): ಪ್ರಸ್ತುತ ಹಣಕಾಸು ವರ್ಷದಲ್ಲಿ(2025-26), ಭಾರತೀಯ ಹಿಮಾಲಯ ಪ್ರದೇಶದ ವಿವಿಧ ಪ್ರದೇಶಗಳಲ್ಲಿ(ಐಎಚ್‌ಆರ್) ಕ್ರಿಯಾಶೀಲ-ಆಧಾರಿತ ಸಂಶೋಧನೆ ಉತ್ತೇಜಿಸಲು 17 ಹೊಸ ಬೇಡಿಕೆ-ಚಾಲಿತ ಯೋಜನೆಗಳನ್ನು ಅನುಮೋದಿಸಲಾಗಿದೆ.

ಗೋವಿಂದ್ ವಲ್ಲಭ್ ಪಂತ್ 'ರಾಷ್ಟ್ರೀಯ ಹಿಮಾಲಯನ್ ಪರಿಸರ ಸಂಸ್ಥೆ'(ಎನ್ ಐಹೆಚ್ಇ): ಅರುಣಾಚಲ ಪ್ರದೇಶದ ಕೇಯಿ ಪನಿಯರ್ ಜಿಲ್ಲೆಯ ಯಚುಲಿ ಮತ್ತು ಯಜಲಿಯಲ್ಲಿ 77 ಬುಗ್ಗೆಗಳನ್ನು ಜಿಯೋಟ್ಯಾಗ್ ಮಾಡಲಾಗಿದೆ. ಭಾರತೀಯ ಹಿಮಾಲಯನ್ ಪ್ರದೇಶದಲ್ಲಿ 1,025 ಪ್ಟೆರಿಡೋಫೈಟ್ ಟ್ಯಾಕ್ಸಾದ ಪ್ರಾದೇಶಿಕ ಡೇಟಾಬೇಸ್ ಅಭಿವೃದ್ಧಿಪಡಿಸಲಾಗಿದೆ, ಜಾತಿ(ಪ್ರಭೇದ)ಗಳ ಸಮೃದ್ಧಿಯಲ್ಲಿ 6.3% ಹೆಚ್ಚಳ, ಸಸ್ಯವರ್ಗದ ಹೊದಿಕೆಯ ಹೆಚ್ಚಳ 13% ಮತ್ತು ಮಾರ್ಫಿಲೈಸೇಶನ್. ವಿಜ್ಞಾನಕ್ಕೆ ಹೊಸದಾದ 2 ಆರ್ಕಿಡ್ ಪ್ರಭೇದಗಳನ್ನು ವರದಿ ಮಾಡಲಾಗಿದೆ; (i) ಫಲೇನೊಪ್ಸಿಸ್ ಕ್ವಾಡ್ರಿಡೆಂಟಾಟಾ ಮತ್ತು (ii) ಗ್ಯಾಸ್ಟ್ರೋಡಿಯಾ ಇಂಡಿಕಾ..

• ಭಾರತದ ಸಸ್ಯಶಾಸ್ತ್ರೀಯ ಸಮೀಕ್ಷೆ(ಬಿಎಸ್ಐ): 'ಸಸ್ಯ ಆವಿಷ್ಕಾರಗಳು 2024' ಪ್ರಕಟವಾಗಿದೆ, ದೇಶದ ವೈವಿಧ್ಯಮಯ ಸಸ್ಯ ಭೌಗೋಳಿಕ ಪ್ರದೇಶಗಳಲ್ಲಿ 88 ಹೂವಿನ ಸಮೀಕ್ಷೆಗಳು ಮತ್ತು ಸ್ಥಳೀಯ ಪ್ರವಾಸಗಳನ್ನು ಕೈಗೊಳ್ಳಲಾಗಿದೆ. ಸುಮಾರು 673 ಸಸ್ಯ ಪ್ರಭೇದಗಳನ್ನು ಸಕ್ರಿಯವಾಗಿ ಸಂಗ್ರಹಿಸಿ, ಗುಣಿಸಿ, ಅದರ ಸಸ್ಯೋದ್ಯಾನಗಳ ಜಾಲಕ್ಕೆ ಪರಿಚಯಿಸಲಾಗಿದೆ. ಭಾರತದ ಸಸ್ಯವರ್ಗದ 11 ಸಂಪುಟಗಳನ್ನು ಪ್ರಕಟಿಸಲಾಗಿದೆ, 40,503 ಹರ್ಬೇರಿಯಮ್ ಹಾಳೆಗಳನ್ನು ಡಿಜಿಟಲೀಕರಿಸಲಾಗಿದೆ ಮತ್ತು 88,056 ಸಂಬಂಧಿತ ಮೆಟಾಡೇಟಾ ದಾಖಲೆಗಳನ್ನು ಆನ್‌ಲೈನ್ ಆರ್ಕೈವ್‌ಗಳಲ್ಲಿ ಸಿದ್ಧಪಡಿಸಲಾಗಿದೆ ಮತ್ತು ಸಂಯೋಜಿಸಲಾಗಿದೆ.

• ಭಾರತದ ಪ್ರಾಣಿಶಾಸ್ತ್ರ ಸಮೀಕ್ಷೆ(ಝಡ್‌ಎಸ್‌ಐ): ರಾಷ್ಟ್ರೀಯ ಪ್ರಾಣಿಶಾಸ್ತ್ರ ಸಂಗ್ರಹಕ್ಕೆ 6,938 ಪ್ರಭೇದಗಳನ್ನು ಸೇರಿಸಲಾಗಿದೆ; ವೈವಿಧ್ಯಮಯ ಪ್ರಾಣಿ ಗುಂಪುಗಳಲ್ಲಿ 117 ಹೊಸ ಪ್ರಭೇದಗಳನ್ನು ಕಂಡುಹಿಡಿಯಲಾಗಿದೆ; ಸೊಳ್ಳೆಗಳು, ಕೊಲಿಯೊಪ್ಟೆರಾನ್‌ಗಳು ಮತ್ತು ಪ್ರೊಟೊಜೋವನ್‌ಗಳನ್ನು ಗುರಿಯಾಗಿಸಿಕೊಂಡು ಸ್ವಯಂಚಾಲಿತ ಕಣ್ಗಾವಲು ವ್ಯವಸ್ಥೆಗಳಿಗೆ 3 ಪೇಟೆಂಟ್‌ಗಳನ್ನು ನೀಡಲಾಗಿದೆ; BOLD ಮತ್ತು GenBank ಗೆ ಸಲ್ಲಿಸಲಾದ 567 ಪ್ರಭೇದಗಳ 1,352 ಡಿಎನ್ಎ ಬಾರ್‌ಕೋಡ್‌ಗಳೊಂದಿಗೆ ಡಿಜಿಟಲ್ ಅನುಕ್ರಮ ಮಾಹಿತಿಯನ್ನು ಬಲಪಡಿಸಲಾಗಿದೆ, ಆಣ್ವಿಕ ಉಲ್ಲೇಖ ಸಂಪನ್ಮೂಲಗಳನ್ನು ಹೆಚ್ಚಿಸುತ್ತದೆ; ಭಾರತೀಯ ಪ್ರಾಣಿಗಳಿಗೆ 128 ಹೊಸ ದಾಖಲೆಗಳನ್ನು ಸೇರಿಸಲಾಗಿದೆ.

• ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ(ಐಸಿಎಫ್‌ಆರ್‌ಇ): ಹಸಿರು ಕ್ರೆಡಿಟ್ ಕಾರ್ಯಕ್ರಮದ ಅಡಿ ವಿವಿಧ ರಾಜ್ಯಗಳಲ್ಲಿ 4,391 ಹೆಕ್ಟೇರ್ ಪುನಃಸ್ಥಾಪನೆಯಲ್ಲಿದೆ; ಮೆಲಿಯಾ ಡುಬಿಯಾ ಜಿಕೆ 10 ರೈತರ ಪ್ರಭೇದವನ್ನು ನೋಂದಾಯಿಸಲಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ, ಹಿಮಾಚಲಪ್ರದೇಶ ಮತ್ತು ಯುನೈಟೆಡ್ ಕಿಂಗ್ ಡಂನ ವೈವಿಧ್ಯಮಯ ಕೃಷಿ ಹವಾಮಾನ ವಲಯಗಳಿಂದ ಬಂದ 150 ಡಾಲ್ಬರ್ಜಿಯಾ ಸಿಸ್ಸೂ ವ್ಯಕ್ತಿಗಳ ಜರ್ಮ್‌ಪ್ಲಾಸ್ಮ್ ಭಂಡಾರವನ್ನು ಐಸಿಎಫ್‌ಆರ್‌ಇ-ಎಫ್‌ಆರ್‌ಐ ಡೆಹ್ರಾಡೂನ್‌ನಲ್ಲಿ ಸ್ಥಾಪಿಸಲಾಗಿದೆ; ಕೊಯಮತ್ತೂರಿನ ಐಸಿಎಫ್‌ಆರ್‌ಇ-ಐಎಫ್‌ಜಿಟಿಬಿಯಿಂದ ಪ್ರಾರಂಭಿಸಲಾದ ಭಾರತದ ಅರಣ್ಯ ಜೆನೆಟಿಕ್ ಸಂಪನ್ಮೂಲಗಳಿಗಾಗಿ ವ್ಯಾನ್ ವಿಸ್ಟಾರಾ - ಡೇಟಾಬೇಸ್ ನಿರ್ವಹಣಾ ವ್ಯವಸ್ಥೆ, ಹಾರ್ಜಿಯಾನಮ್ ಕ್ಲೇಡ್‌ನೊಳಗೆ ಹೊಸ ಟ್ಯಾಕ್ಸನ್ ಟ್ರೈಕೊಡರ್ಮಾ ಫ್ರಿಯನಮ್ ಎಸ್‌ಪಿ ಪತ್ತೆಯಾಗಿದೆ; ಐಎಸ್: 848-2006 ಪ್ರಕಾರ, ಎಂಆರ್ ದರ್ಜೆಯನ್ನು ಹಾದುಹೋಗುವ ಪ್ಲೈವುಡ್ ಮತ್ತು ಶೂನ್ಯ ಫಾರ್ಮಾಲ್ಡಿಹೈಡ್ ಹೊರಸೂಸುವಿಕೆಯೊಂದಿಗೆ ಗ್ರೇಡ್ -2ಗಾಗಿ ಐಎಸ್ 3087 ಪ್ರಕಾರ ಕಣ ಫಲಕ ಅಭಿವೃದ್ಧಿಪಡಿಸಲಾಗಿದೆ.

• ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆ(ಐಐಎಫ್ಎಂ): ತನ್ನ ಶೈಕ್ಷಣಿಕ ಕೊಡುಗೆಗಳನ್ನು ವೈವಿಧ್ಯಗೊಳಿಸುತ್ತಾ, ಸಂಸ್ಥೆಯು 2025ರಲ್ಲಿ ನಿರ್ವಹಣೆಯಲ್ಲಿ ಡಾಕ್ಟರಲ್ ಕಾರ್ಯಕ್ರಮ ಮತ್ತು ಸುಸ್ಥಿರ ಅಭಿವೃದ್ಧಿ, ಅಭಿವೃದ್ಧಿ ಮತ್ತು ಸುಸ್ಥಿರ ಹಣಕಾಸು ವಿಷಯದಲ್ಲಿ 2 ಹೊಸ ಎಂಬಿಎ ಶಿಕ್ಷಣ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ವಿವಿಧ ಸ್ನಾತಕೋತ್ತರ ಕಾರ್ಯಕ್ರಮಗಳ ಅಡಿ ವಿದ್ಯಾರ್ಥಿಗಳ ಪ್ರವೇಶ 275ಕ್ಕೆ ಏರಿದೆ, 2025ರಲ್ಲಿ ಕ್ಯಾಂಪಸ್ ಬಲವು 500 ದಾಟಿ ಬೆಳೆದಿದೆ. ಸಂಸ್ಥೆಯು ಭೌಗೋಳಿಕವಾಗಿ ವಿಸ್ತರಿಸಿದೆ, 2024ರಿಂದ ಪಶ್ಚಿಮ ಬಂಗಾಳದ ತನ್ನ ಕುರ್ಸಿಯಾಂಗ್ ಕ್ಯಾಂಪಸ್ ಮೂಲಕ ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.

• ಇಂದಿರಾ ಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿ(ಐಜಿಎನ್‌ಎಫ್‌ಎ): ಒಟ್ಟು 207 ಐಎಫ್ಎಸ್ ಅಧಿಕಾರಿಗಳು ಎಂಸಿಟಿ ಮಧ್ಯ-ವೃತ್ತಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಐಜಿಎನ್‌ಎಫ್‌ಎ ಹಲವಾರು ಪ್ರಭಾವಶಾಲಿ ಮಧ್ಯ-ವೃತ್ತಿ ತರಬೇತಿ ಕಾರ್ಯಕ್ರಮಗಳು ಮತ್ತು 2 ವಿಷಯಾಧಾರಿತ ತರಬೇತಿಗಳನ್ನು ಯಶಸ್ವಿಯಾಗಿ ಆಯೋಜಿಸಿತು, ಇವುಗಳನ್ನು ಮಿಷನ್ ಕರ್ಮಯೋಗಿಯ ಐಜಿಒಟಿ ವೇದಿಕೆಯ ಮೂಲಕ ಮಿಶ್ರ ಸ್ವರೂಪದಲ್ಲಿ ಮೊದಲ ಬಾರಿಗೆ ನಡೆಸಲಾಯಿತು. ಇದು ದೇಶಾದ್ಯಂತ 426 ಪ್ರತಿನಿಧಿಗಳನ್ನು ಒಳಗೊಂಡಿತ್ತು. ಆನ್‌ಲೈನ್ ಮತ್ತು ಮಿಶ್ರ ಕಲಿಕಾ ಕಾರ್ಯಕ್ರಮಗಳ ವಿತರಣೆಗಾಗಿ ಅಕಾಡೆಮಿ ಟಿಎಆರ್ ಯು ಪೋರ್ಟಲ್ (ಮೂಡಿ ಕಲಿಕಾ ನಿರ್ವಹಣಾ ವ್ಯವಸ್ಥೆ) ಅನ್ನು ಜಾರಿಗೆ ತಂದಿತು.

10. ಅಂತಾರಾಷ್ಟ್ರೀಯ ಸಹಕಾರ ಮತ್ತು ಬಹುಪಕ್ಷೀಯ ತೊಡಗಿಸಿಕೊಳ್ಳುವಿಕೆ(ನಿಶ್ಚಿತಾರ್ಥ)

ಸಿಒಪಿ-30(ಬ್ರೆಜಿಲ್), ರಾಮ್ಸರ್ ಸಿಒಪಿ-15, ಯುಎನ್ಇಎ-7, ಬ್ರಿಕ್ಸ್ ಹವಾಮಾನ ವೇದಿಕೆ ಮತ್ತು ಮಿನಾಮತಾ ಸಿಒಪಿ-6ನಲ್ಲಿ ಭಾರತವು ನಾಯಕತ್ವದ ಪಾತ್ರ ವಹಿಸಿತು, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಈಕ್ವಿಟಿ, ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು ಬಲಪಡಿಸಿತು.

• ಮೇ 27-28, 2025ರಂದು ಬ್ರೆಜಿಲ್‌ನ ಬ್ರೆಸಿಲಿಯಾದಲ್ಲಿ ನಡೆದ ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಸಂಪರ್ಕ ಗುಂಪು(ಸಿಜಿಸಿಸಿಎಸ್‌ಡಿ) ಮುಕ್ತ-ತೆರೆದ ಸಮಗ್ರತೆ ಮತ್ತು ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತಾದ 3ನೇ ಉನ್ನತ ಮಟ್ಟದ ಬ್ರಿಕ್ಸ್ ಸಭೆಯಲ್ಲಿ ಭಾರತೀಯ ನಿಯೋಗ ಭಾಗವಹಿಸಿತ್ತು. ಪ್ಯಾರಿಸ್ ಒಪ್ಪಂದ ಮತ್ತು ಯುಎನ್‌ಎಫ್‌ಸಿಸಿಸಿ ಗುರಿಗಳಿಗೆ ಅನುಗುಣವಾಗಿ ಸಾಮೂಹಿಕ ಹವಾಮಾನ ಕ್ರಮಕ್ಕೆ ಬ್ರಿಕ್ಸ್ ಬದ್ಧತೆಯನ್ನು ಪುನರುಚ್ಚರಿಸುವ ಮೂಲಕ 'ಬ್ರಿಕ್ಸ್ ಹವಾಮಾನ ನಾಯಕತ್ವ ಕಾರ್ಯಸೂಚಿ'ಯನ್ನು ಅಂತಿಮಗೊಳಿಸುವ ಮತ್ತು ಅಳವಡಿಸಿಕೊಳ್ಳುವಲ್ಲಿ ನಿಯೋಗವು ಪ್ರಮುಖ ಪಾತ್ರ ವಹಿಸಿತು. 2026ರಲ್ಲಿ ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ಸಮಯದಲ್ಲಿ ಭಾರತದ ಪೂರ್ವಭಾವಿ ನಿಶ್ಚಿತಾರ್ಥವು ಅದರ ನಾಯಕತ್ವಕ್ಕೆ ವೇದಿಕೆಯನ್ನು ಸಿದ್ಧಪಡಿಸುತ್ತದೆ.

• ಜುಲೈ 23-31, 2025ರಂದು ಜಿಂಬಾಬ್ವೆಯ ವಿಕ್ಟೋರಿಯಾ ಜಲಪಾತದಲ್ಲಿ ನಡೆದ ರಾಮ್ಸರ್ 15ನೇ ಪಕ್ಷಗಳ ಸಮ್ಮೇಳನ(ಸಿಒಪಿ)ದಲ್ಲಿ ಭಾರತವು ಮೊದಲ ಬಾರಿಗೆ (1982 ರಿಂದ) "ಜೌಗು ಪ್ರದೇಶಗಳ ಬುದ್ಧಿವಂತ ಬಳಕೆಗಾಗಿ ಸುಸ್ಥಿರ ಜೀವನಶೈಲಿ ಉತ್ತೇಜಿಸುವುದು" ಎಂಬ ನಿರ್ಣಯ ಮಂಡಿಸಿತು. ಈ ನಿರ್ಣಯವು 172 ರಾಮ್ಸರ್ ಗುತ್ತಿಗೆ ದೇಶಗಳು, 6 ಅಂತರರಾಷ್ಟ್ರೀಯ ಸಂಸ್ಥೆಯ ಪಾಲುದಾರರು ಮತ್ತು ಇತರೆ ವೀಕ್ಷಕರಿಂದ ಅಗಾಧ ಬೆಂಬಲ ಪಡೆಯಿತು. ಜುಲೈ 30 2025ರಂದು ನಡೆದ ಸಮಗ್ರ ಅಧಿವೇಶನದಲ್ಲಿ ಔಪಚಾರಿಕವಾಗಿ ಅಂಗೀಕರಿಸಲ್ಪಟ್ಟಿತು. ಈ ನಿರ್ಣಯವು ಮಿಷನ್ ಲೈಫ್‌ನ ತತ್ವಗಳೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ.

• ಆಗಸ್ಟ್ 29-30 2025 ರಂದು ನಡೆದ 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗಾಗಿ ಗೌರವಾನ್ವಿತ ಪ್ರಧಾನ ಮಂತ್ರಿಗಳು ಜಪಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಸರ ಸಹಕಾರ ಕ್ಷೇತ್ರದಲ್ಲಿ ಪ್ಯಾರಿಸ್ ಒಪ್ಪಂದದ ಆರ್ಟಿಕಲ್ 6.2ರ ಅನುಷ್ಠಾನಕ್ಕೆ ಸಂಬಂಧಿಸಿದ ಸಹಕಾರ ಜ್ಞಾಪಕ ಪತ್ರ(ಎಂಒಸಿ)ಕ್ಕೆ ಭಾರತದ ಪರಿಸರ ಸಚಿವಾಲಯ ಮತ್ತು ಜಪಾನ್ ಪರಿಸರ ಸಚಿವಾಲಯ ಸಹಿ ಹಾಕಿದವು. ಸಹಿ ಮಾಡಿದ ಜ್ಞಾಪಕ ಪತ್ರವು ಮಾಲಿನ್ಯ ನಿಯಂತ್ರಣ, ಹವಾಮಾನ ಬದಲಾವಣೆ, ತ್ಯಾಜ್ಯ ನಿರ್ವಹಣೆ, ಜೀವವೈವಿಧ್ಯದ ಸುಸ್ಥಿರ ಬಳಕೆ ಮತ್ತು ಪರಿಸರ ತಂತ್ರಜ್ಞಾನಗಳಂತಹ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಸಹಯೋಗಕ್ಕಾಗಿ ಸಕ್ರಿಯಗೊಳಿಸುವ ಮಾರ್ಗಸೂಚಿಯಾಗಿ ಕಾರ್ಯ ನಿರ್ವಹಿಸುತ್ತದೆ.

• ಗೌರವಾನ್ವಿತ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರ ನೇತೃತ್ವದ ನಿಯೋಗವು ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಡೆದ ಜಿ-20 ಪರಿಸರ ಸಚಿವರ ಸಭೆಯಲ್ಲಿ ಸೆಪ್ಟೆಂಬರ್ 10-12, 2025ರಿಂದ ಸಹಾಯ ಮಾಡಿತು. ಭಾರತವು ಹವಾಮಾನ ಮತ್ತು ಅಭಿವೃದ್ಧಿಯನ್ನು ಸಂಯೋಜಿಸುವುದನ್ನು ಬೆಂಬಲಿಸಿತು, ಆದರೆ ಸಮಾನತೆ ಮತ್ತು ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳನ್ನು ಎತ್ತಿಹಿಡಿಯಿತು.

• 2025 ನವೆಂಬರ್ 3ರಿಂದ 7ರ ವರೆಗೆ ಜಿನೀವಾದಲ್ಲಿ ನಡೆದ ಮಿನಮಾಟಾ ಸಮಾವೇಶದ ಪಕ್ಷಗಳ ಸಮ್ಮೇಳನದಲ್ಲಿ(ಸಿಒಪಿ-6) ನಿಯೋಗವೊಂದು ಭಾಗವಹಿಸಿತ್ತು. ಪಾದರಸ-ಸೇರಿಸಿದ ಉತ್ಪನ್ನಗಳನ್ನು ಹಂತ ಹಂತವಾಗಿ ತೆಗೆದುಹಾಕಲು ಭಾರತವು 5 ವರ್ಷಗಳ (2025ರಿಂದ 2030ರ ವರೆಗೆ) ಅಂತಿಮ ವಿನಾಯಿತಿ ಯಶಸ್ವಿಯಾಗಿ ಪಡೆದುಕೊಂಡಿತು.

• ಗೌರವಾನ್ವಿತ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರ ನೇತೃತ್ವದ ಅಂತರ-ಸಚಿವಾಲಯದ ನಿಯೋಗವು 2025 ನವೆಂಬರ್ 10ರಿಂದ 21ರ ವರೆಗೆ ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಮಾರ್ಗಸೂಚಿ ಸಮಾವೇಶದ(ಸಿಒಪಿ-30) ಪಕ್ಷಗಳ ಸಮ್ಮೇಳನದ(ಸಿಒಪಿ) 30ನೇ ಅಧಿವೇಶನದಲ್ಲಿ ಭಾಗವಹಿಸಿತ್ತು. ಅಭಿವೃದ್ಧಿಶೀಲ ರಾಷ್ಟ್ರಗಳ ಪರವಾಗಿ ಭಾರತವು ರಚನಾತ್ಮಕ ಮತ್ತು ಸಂಪರ್ಕ ಸೇತು ನಿರ್ಮಾಣದ ಪಾತ್ರ ವಹಿಸಿತು. ಭಾಗವಹಿಸುವಿಕೆಯು ಹೊಂದಾಣಿಕೆ ಸೂಚಕಗಳು ಮತ್ತು ಹಣಕಾಸು, ಆರ್ಟಿಕಲ್ 9ರ ಅಡಿ ಹವಾಮಾನ ಹಣಕಾಸು, ಸರಳ ಪರಿವರ್ತನೆಯ ಕಾರ್ಯವಿಧಾನ, ತಂತ್ರಜ್ಞಾನ ಅನುಷ್ಠಾನ ಕಾರ್ಯಕ್ರಮ ಮತ್ತು ಇಂಗಾಲ ಹೊರಸೂಸುವಿಕೆ ತಗ್ಗಿಸುವಿಕೆ ಕಾರ್ಯಕ್ರಮದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿತು.

• 2025 ಡಿಸೆಂಬರ್ 8ರಿಂದ 12ರ ವರೆಗೆ ಕೀನ್ಯಾದ ನೈರೋಬಿಯಲ್ಲಿ ನಡೆದ ಯುಎನ್ಇಎ -7 ಸಮ್ಮೇಳನದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವರ ನೇತೃತ್ವದ ನಿಯೋಗ ಭಾಗವಹಿಸಿತ್ತು. "ಕಾಡು ಬೆಂಕಿಯ ಜಾಗತಿಕ ನಿರ್ವಹಣೆಯನ್ನು ಬಲಪಡಿಸುವುದು" ಎಂಬ ಭಾರತದ ನಿರ್ಣಯವನ್ನು ಅಂಗೀಕರಿಸಲಾಯಿತು. ಭಾರತ ಮಂಡಿಸಿದ ನಿರ್ಣಯವು ಸದಸ್ಯ ರಾಷ್ಟ್ರಗಳಿಂದ ವ್ಯಾಪಕ ಬೆಂಬಲ ಪಡೆಯಿತು, ವಿಶ್ವಾದ್ಯಂತ ಹೆಚ್ಚುತ್ತಿರುವ ಕಾಡ್ಗಿಚ್ಚಿನ ಬೆದರಿಕೆಯನ್ನು ಪರಿಹರಿಸುವ ತುರ್ತು ಅಗತ್ಯವನ್ನು ಜಾಗತಿಕವಾಗಿ ಗುರುತಿಸುತ್ತದೆ ಎಂದು ಪುನರುಚ್ಚರಿಸಿತು.

• ಭಾರತದ ಅರಣ್ಯ ಮಹಾನಿರ್ದೇಶಕರು ಮತ್ತು ವಿಶೇಷ ಕಾರ್ಯದರ್ಶಿ ಮತ್ತು ಸಿಐ ಟಿಇಎಸ್ ನಿರ್ವಹಣಾ ಪ್ರಾಧಿಕಾರದ ನೇತೃತ್ವದ ಭಾರತೀಯ ನಿಯೋಗವು 2025 ನವೆಂಬರ್ 24ರಿಂದ ಡಿಸೆಂಬರ್ 5ರ ವರೆಗೆ ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆದ ಅಳಿವಿನಂಚಿನಲ್ಲಿರುವ ಪ್ರಭೇದಗಳ ಕಾಡು ಪ್ರಾಣಿ ಮತ್ತು ಸಸ್ಯವರ್ಗದ(ಸಿಐಟಿಇಎಸ್) ಅಂತಾರಾಷ್ಟ್ರೀಯ ವ್ಯಾಪಾರ ಸಮಾವೇಶದ 20ನೇ ಪಕ್ಷಗಳ ಸಮ್ಮೇಳನ(ಸಿಒಪಿ) ಸಭೆಯಲ್ಲಿ ಭಾಗವಹಿಸಿತು. ಸಿಒಪಿ ಸಮಯದಲ್ಲಿ, ವ್ಯಾಪಾರದಲ್ಲಿರುವ ಕಾಡು ಪ್ರಭೇದಗಳ ಸಂರಕ್ಷಣೆಗೆ ಸಂಬಂಧಿಸಿದ ಹಲವಾರು ಕಾರ್ಯಸೂಚಿ ವಿಷಯಗಳನ್ನು ಚರ್ಚಿಸಿ, ನಿರ್ಧಾರಗಳು ಮತ್ತು ನಿರ್ಣಯಗಳನ್ನು ಅಂಗೀಕರಿಸಲಾಯಿತು.

 

11. ಆಚರಿಸಲಾದ ದಿನಗಳು/ಕಾರ್ಯಕ್ರಮಗಳು:

• ಫೆಬ್ರವರಿ 2025ರಲ್ಲಿ ಪಾರ್ವತಿ ಅರ್ಗಾ ರಾಮ್ಸರ್ ಸೈಟ್‌ನಲ್ಲಿ 2025ರ ವಿಶ್ವ ತೇವಭೂಮಿ ದಿನ ಆಚರಿಸಲಾಯಿತು. ಈ ಕಾರ್ಯಕ್ರಮವು ಪರಿಸರ ಸಂರಕ್ಷಣೆ, ಜೀವವೈವಿಧ್ಯ ಮತ್ತು ಸುಸ್ಥಿರ ಜೀವನೋಪಾಯದಲ್ಲಿ ತೇವಭೂಮಿಗಳ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿತು, ಈ ವರ್ಷದ 'ನಮ್ಮ ಸಾಮಾನ್ಯ ಭವಿಷ್ಯಕ್ಕಾಗಿ ತೇವಭೂಮಿಗಳನ್ನು ರಕ್ಷಿಸುವುದು' ಎಂಬ ವಿಷಯಕ್ಕೆ ಅನುಗುಣವಾಗಿ ಈ ಕಾರ್ಯಕ್ರಮ ಜರುಗಿತು.

• ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ 2 ಸಂಸ್ಥೆಗಳ ಸಹಯೋಗದೊಂದಿಗೆ ಸಚಿವಾಲಯವು, ಮಾರ್ಚ್ 19ರಿಂದ 22ರ ವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ 'ಭಾರತ 2047: ಹವಾಮಾನ-ಹೊಂದಾಣಿಕೆಯ ಭವಿಷ್ಯ ನಿರ್ಮಿಸುವುದು' ಕುರಿತು ಸಮ್ಮೇಳನ ಆಯೋಜಿಸಿತ್ತು. ಹವಾಮಾನ ವಿಜ್ಞಾನ, ಸಾರ್ವಜನಿಕ ಆರೋಗ್ಯ, ಕಾರ್ಮಿಕ ಮತ್ತು ನಗರ ಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರಿಗೆ ಹವಾಮಾನ ಬದಲಾವಣೆಯಿಂದ ಉಂಟಾಗುವ ತುರ್ತು ಸವಾಲುಗಳು ಮತ್ತು ಹೊಂದಾಣಿಕೆಯ ಭವಿಷ್ಯದ ಮಾರ್ಗಗಳ ಕುರಿತು ಚರ್ಚಿಸಲು ಈ ವಿಚಾರ ಸಂಕಿರಣವು ಕ್ರಿಯಾತ್ಮಕ ಜ್ಞಾನ ಹಂಚಿಕೆ ವೇದಿಕೆಯಾಗಿ ಕಾರ್ಯ ನಿರ್ವಹಿಸಿತು. ಚರ್ಚೆಗಳು 4 ಪ್ರಮುಖ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿದವು: ಕೃಷಿ, ಆರೋಗ್ಯ, ಕೆಲಸ ಮತ್ತು ನಿರ್ಮಿತ ಪರಿಸರದ ಮೇಲೆ ಅದರ ಪರಿಣಾಮಗಳೊಂದಿಗೆ ಶಾಖ ಮತ್ತು ನೀರಿನ ಹವಾಮಾನ ವಿಜ್ಞಾನ.

• ಜೈವಿಕ ವೈವಿಧ್ಯತೆ ಮತ್ತು ಜೈವಿಕ ಸಂಪನ್ಮೂಲಗಳ ಪ್ರದರ್ಶನದೊಂದಿಗೆ ಅಂತಾರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನ(ಐಡಿಬಿ) 2025 ಅನ್ನು ಮೇ 22 2025ರಂದು ಉದಯಪುರದಲ್ಲಿ(ರಾಜಸ್ಥಾನ) ಆಚರಿಸಲಾಯಿತು. ಐಡಿಬಿ 2025ರ ವಸ್ತು ವಿಷಯವು 'ಪ್ರಕೃತಿ ಮತ್ತು ಸುಸ್ಥಿರ ಅಭಿವೃದ್ಧಿಯೊಂದಿಗೆ ಸಾಮರಸ್ಯ' ಆಗಿತ್ತು.

• ಜೂನ್ 5 2025ರಂದು ವಿಶ್ವ ಪರಿಸರ ದಿನ(ಡಬ್ಲ್ಯುಇಡಿ) ಆಯೋಜಿಸಲಾಗಿತ್ತು. ಭಾರತ್ ಮಂಟಪದಲ್ಲಿ ನಡೆದ ಡಬ್ಲ್ಯುಇಡಿ ಕಾರ್ಯಕ್ರಮವನ್ನು 'ಒಂದು ರಾಷ್ಟ್ರ, ಒಂದು ಮಿಷನ್: ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸಿ' ಎಂಬ ವಸ್ತು ವಿಷಯದ ಅಡಿ ಆಚರಿಸಲಾಯಿತು, ಇದರಲ್ಲಿ 2 ಪ್ರಮುಖ ಪ್ರಕಟಣೆಗಳು ಬಿಡುಗಡೆಯಾದವು - ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸುವ ಕುರಿತು ಸರ್ಕಾರಿ ಉಪಕ್ರಮಗಳು ಮತ್ತು ನಿಷೇಧಿತ ಎಸ್ ಯುಪಿಗಳಿಗೆ ಪರಿಸರ-ಪರ್ಯಾಯಗಳ ಕುರಿತು ಒಂದು ಸಂಕಲನ ಮತ್ತು ರಾಷ್ಟ್ರೀಯ ಪ್ಲಾಸ್ಟಿಕ್ ತ್ಯಾಜ್ಯ ವರದಿ ಮಾಡುವ ಪೋರ್ಟಲ್ ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮವು ಹುಲಿ ಮೀಸಲು ಪ್ರದೇಶಗಳು, ಸರ್ಕಾರಿ ಕಚೇರಿಗಳು, ಸ್ವಚ್ಛತಾ ಹೈ ಸೇವಾ ಚಟುವಟಿಕೆಗಳು ಮತ್ತು ಏಕ-ಬಳಕೆಯ ಪ್ಲಾಸ್ಟಿಕ್‌ಗಳಿಗೆ ಪರಿಸರ-ಪರ್ಯಾಯಗಳ ಕುರಿತು ಹ್ಯಾಕಥಾನ್ ಒಳಗೊಂಡ ರಾಷ್ಟ್ರೀಯ ಪ್ಲಾಸ್ಟಿಕ್ ಮಾಲಿನ್ಯ ಕಡಿತ ಅಭಿಯಾನ ಪ್ರಾರಂಭಿಸಿತು. 150 ಸ್ಟಾರ್ಟಪ್‌ಗಳು ಮತ್ತು ಮರುಬಳಕೆದಾರರಿಂದ ನಾವೀನ್ಯತೆಗಳನ್ನು ಪ್ರದರ್ಶಿಸುವ ರಾಷ್ಟ್ರೀಯ ಎಕ್ಸ್‌ಪೋವನ್ನು ಸಹ ಆಯೋಜಿಸಲಾಗಿತ್ತು.

• ಜೂನ್ 21 2025 ರಂದು 11ನೇ ಅಂತಾರಾಷ್ಟ್ರೀಯ ಯೋಗ ದಿನ(ಐಡಿವೈ) ಆಚರಿಸುವ ಸಂದರ್ಭದಲ್ಲಿ, ಸಚಿವಾಲಯವು ಆಯುಷ್ ಸಚಿವಾಲಯದ ಸಹಯೋಗದೊಂದಿಗೆ 'ಹರಿತ್ ಯೋಗ' ಆಚರಿಸಿತು, ಇದರಲ್ಲಿ 'ಏಕ್ ಪೆಡ್ ಮಾ ಕೆ ನಾಮ್' ಅಭಿಯಾನದಡಿ ಯೋಗ ಕಲಾಪ ಅನುಸರಿಸಿ ಸಸಿಗಳನ್ನು ನೆಡಲಾಯಿತು. 130 ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ(ಎನ್‌ಸಿಎಪಿ) ನಗರಗಳಲ್ಲಿ 800ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು, ಇದರಲ್ಲಿ 3 ಲಕ್ಷಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದ್ದರು.

• ಜುಲೈ 29 2025ರಂದು ಜಾಗತಿಕ ಹುಲಿ ದಿನ 2025 ಆಚರಿಸಲಾಯಿತು. ರಾಷ್ಟ್ರವ್ಯಾಪಿ ಸಸಿ ನೆಡುವ ಅಭಿಯಾನ ಪ್ರಾರಂಭಿಸಲಾಯಿತು. ಗೌರವಾನ್ವಿತ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು 4 ಪ್ರಮುಖ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು, ಇದು ಭಾರತದ ಪ್ರತಿಯೊಂದು ವನ್ಯಜೀವಿ ಸಂರಕ್ಷಣೆಯ ವಿಶಿಷ್ಟ ಅಂಶವನ್ನು ಎತ್ತಿ ತೋರಿಸುತ್ತದೆ.

• ಆಗಸ್ಟ್ 10 2025ರಂದು ಗುಜರಾತ್‌ನ ಬರ್ಡಾ ವನ್ಯಜೀವಿ ಅಭಯಾರಣ್ಯದಲ್ಲಿ ವಿಶ್ವ ಸಿಂಹ ದಿನ - 2025 ಆಚರಿಸಲಾಯಿತು. ಏಷ್ಯಾ ವಲಯದ ಸಿಂಹಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಗುಜರಾತ್‌ನ ಸೌರಾಷ್ಟ್ರದ 11 ಜಿಲ್ಲೆಗಳಲ್ಲಿ 'ವಿಶ್ವ ಸಿಂಹ ದಿನ'ದ ಭವ್ಯ ಆಚರಣೆಯನ್ನು ಆಯೋಜಿಸಲಾಗಿತ್ತು.

• ಆಗಸ್ಟ್ 12 2025ರಂದು ವಿಶ್ವ ಆನೆ ದಿನ 2025 ಆಚರಿಸಲಾಯಿತು. ಆನೆ ಸಂರಕ್ಷಣೆ, ಜನರು ಮತ್ತು ವನ್ಯಜೀವಿಗಳ ನಡುವಿನ ಸಾಮರಸ್ಯದ ಸಹಬಾಳ್ವೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸುಮಾರು 5,000 ಶಾಲೆಗಳಿಂದ ಸುಮಾರು 12 ಲಕ್ಷ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ ಪ್ರಾರಂಭಿಸಲಾಯಿತು.

• ಸ್ವಚ್ಛ ವಾಯು ಸರ್ವೇಕ್ಷಣ ಪ್ರಶಸ್ತಿಗಳು ಮತ್ತು ತೇವಭೂಮಿ ನಗರಗಳ ಗುರುತಿಸುವಿಕೆ ಸಮಾರಂಭ 2025 ಅನ್ನು ಸೆಪ್ಟೆಂಬರ್ 9 2025 ರಂದು ಆಯೋಜಿಸಲಾಯಿತು. ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮ(ಎನ್‌ಸಿಎಪಿ) ಅಡಿ 130 ನಗರಗಳಲ್ಲಿ ನಡೆಸಲಾದ ಸ್ವಚ್ಛ ವಾಯು ಸರ್ವೇಕ್ಷಣ 2025ರ ಅಡಿ ಅತ್ಯುತ್ತಮ ಪ್ರದರ್ಶನ ನೀಡಿದ ನಗರಗಳಿಗೆ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ 'ವಾರ್ಡ್-ಲೆವೆಲ್ ಸ್ವಚ್ಛ ವಾಯು ಸರ್ವೇಕ್ಷಣ ಮಾರ್ಗಸೂಚಿಗಳನ್ನು' ಬಿಡುಗಡೆ ಮಾಡಲಾಯಿತು. 'ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದ ಅಡಿ ಅತ್ಯುತ್ತಮ ಅಭ್ಯಾಸಗಳ ಸಂಕಲನ'ವನ್ನು ಸಹ ಬಿಡುಗಡೆ ಮಾಡಲಾಯಿತು. ಇಂದೋರ್ ಮತ್ತು ಉದಯಪುರ 2 ನಗರಗಳಿಗೆ ರಾಮ್ಸರ್ ಸಮಾವೇಶದ ಅಡಿ ತೇವಭೂಮಿ ನಗರಗಳಾಗಿ ಗುರುತಿಸಲ್ಪಟ್ಟಿದ್ದಕ್ಕಾಗಿ ಪ್ರಮಾಣಪತ್ರಗಳನ್ನು ನೀಡಲಾಯಿತು.

• ಸೆಪ್ಟೆಂಬರ್ 16 2025ರಂದು 31ನೇ ವಿಶ್ವ ಓಝೋನ್ ದಿನವನ್ನು 'ವಿಜ್ಞಾನದಿಂದ ಜಾಗತಿಕ ಕ್ರಿಯೆಗೆ' ಎಂಬ ಥೀಮ್‌ನೊಂದಿಗೆ ಆಚರಿಸಲಾಯಿತು, ಇದು ಮಾಂಟ್ರಿಯಲ್ ಶಿಷ್ಟಾಚಾರದ ಯಶಸ್ಸನ್ನು ಎತ್ತಿ ತೋರಿಸುತ್ತದೆ. ಕಡಿಮೆ- ಜಿಡಬ್ಲ್ಯುಪಿ ತಂತ್ರಜ್ಞಾನಗಳು, ಜಿಲ್ಲಾ ತಂಪಾಗಿಸುವ ವ್ಯವಸ್ಥೆಗಳು ಮತ್ತು ಶೀತ ಸರಪಳಿ ಅತ್ಯುತ್ತಮ ಅಭ್ಯಾಸಗಳ ಕುರಿತಾದ ಅಧ್ಯಯನಗಳು ಸೇರಿದಂತೆ ಪ್ರಮುಖ ಪ್ರಕಟಣೆಗಳು ಮತ್ತು ಜಾಗೃತಿ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು.

• ಸೆಪ್ಟೆಂಬರ್ 22 2025ರಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ(ಸಿಪಿಸಿಬಿ) 51ನೇ ಸಂಸ್ಥಾಪನಾ ದಿನ. ಈ ಸಂದರ್ಭದಲ್ಲಿ ಪ್ರಮುಖ ಉಪಕ್ರಮಗಳಲ್ಲಿ ಸಿಪಿಸಿಬಿಯ ಹೊಸ ಪ್ರಧಾನ ಕಚೇರಿಗೆ ಅಡಿಪಾಯ ಹಾಕುವುದು, ಪುಣೆ ಮತ್ತು ಶಿಲ್ಲಾಂಗ್‌ನಲ್ಲಿ ಪ್ರಾದೇಶಿಕ ಪ್ರಯೋಗಾಲಯಗಳನ್ನು ಉದ್ಘಾಟಿಸುವುದು, ಸಮೀರ್ ಅಪ್ಲಿಕೇಶನ್ 2.0 ಪ್ರಾರಂಭಿಸುವುದು ಸೇರಿದ್ದವು. ಬಿಡುಗಡೆಯಾದ ತಾಂತ್ರಿಕ ಪ್ರಕಟಣೆಗಳಲ್ಲಿ "ಕಲುಷಿತ ನದಿ ಪ್ರದೇಶಗಳ ವರ್ಗೀಕರಣ, 2025" ಮತ್ತು ಸಿಹಿನೀರಿನ ಬೆಂಥಿಕ್ ಮ್ಯಾಕ್ರೋಇನ್ವರ್ಟೆಬ್ರಟೇಟ್‌ಗಳನ್ನು ಬಳಸಿಕೊಂಡು ಕಲುಷಿತ ಜಲಮೂಲಗಳನ್ನು ಗುರುತಿಸುವ ಕೈಪಿಡಿ ಸೇರಿವೆ.

• ವನ್ಯಜೀವಿ ಸಪ್ತಾಹ 2025 ಆಚರಣೆಗಳನ್ನು ಡೆಹ್ರಾಡೂನ್‌ನ ಎಫ್ಆರ್ ಐ ಕ್ಯಾಂಪಸ್‌ನಲ್ಲಿ ಅಕ್ಟೋಬರ್ 6 2025ರಂದು ಆಯೋಜಿಸಲಾಗಿತ್ತು. ಪ್ರಭೇದಗಳ ಸಂರಕ್ಷಣೆ ಮತ್ತು ಸಂಘರ್ಷ ನಿರ್ವಹಣೆಗಾಗಿ 5 ರಾಷ್ಟ್ರೀಯ ಮಟ್ಟದ ಯೋಜನೆಗಳು, ಹಾಗೆಯೇ, ಪ್ರಭೇದಗಳ ಜನಸಂಖ್ಯಾ ಮೌಲ್ಯಮಾಪನ ಮತ್ತು ಮೇಲ್ವಿಚಾರಣಾ ಕಾರ್ಯಕ್ರಮಗಳಿಗಾಗಿ 4 ರಾಷ್ಟ್ರೀಯ ಮಟ್ಟದ ಕ್ರಿಯಾಯೋಜನೆಗಳು ಮತ್ತು ಕ್ಷೇತ್ರ ಮಾರ್ಗದರ್ಶಿಗಳನ್ನು ಈ ಸಂದರ್ಭದಲ್ಲಿ ಪ್ರಾರಂಭಿಸಲಾಯಿತು.

• '#23for23' ಎಂಬ ವಿಶಿಷ್ಟ ಉಪಕ್ರಮದೊಂದಿಗೆ ಅಕ್ಟೋಬರ್ 23 2025ರಂದು ಅಂತಾರಾಷ್ಟ್ರೀಯ ಹಿಮ ಚಿರತೆ ದಿನ ಆಚರಿಸಲಾಯಿತು, ಇದು ಹಿಮ ಚಿರತೆಗಳು ಮತ್ತು ಅವುಗಳ ದುರ್ಬಲ ಆವಾಸಸ್ಥಾನಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ದೇಶಾದ್ಯಂತ ಜನರು 23 ನಿಮಿಷಗಳ ಕಾಲ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸಿತು.

12. 2025ರಲ್ಲಿ ಸಚಿವಾಲಯದ ಪ್ರಮುಖ ಸುಧಾರಣೆಗಳು

12.1 ಹಸಿರು ಸಾಲ ಕಾರ್ಯಕ್ರಮ(ಜಿಸಿಪಿ) - ಪರಿಷ್ಕೃತ ಮಾರ್ಗಸೂಚಿ

  • ಕ್ಷೀಣಿಸಿದ ಅರಣ್ಯ ಭೂಮಿಯನ್ನು ಪುನಃಸ್ಥಾಪಿಸಲು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ವಿಸ್ತೃತ ಭಾಗವಹಿಸುವಿಕೆ.
  • ಬಳಕೆದಾರ ಏಜೆನ್ಸಿಗಳಿಂದ ನೇರವಾಗಿ ಪುನಃಸ್ಥಾಪನೆ ಕೈಗೊಳ್ಳಬೇಕು.
  •  ≥40% ಮೇಲಾವರಣ ಸಾಂದ್ರತೆಯನ್ನು(5 ವರ್ಷಗಳಿಗಿಂತ ಹಳೆಯದಾದ ಪ್ರತಿ ಮರಕ್ಕೆ 1 ಕ್ರೆಡಿಟ್) ಸಾಧಿಸಿದ ನಂತರ ಪುನಃಸ್ಥಾಪನೆಯ 5 ವರ್ಷಗಳ ನಂತರ ನೀಡಲಾದ ಹಸಿರು ಕ್ರೆಡಿಟ್‌ಗಳು.
  • ಕ್ರೆಡಿಟ್‌ಗಳನ್ನು ಈ ಕೆಳಗಿನ ಅಂಶಗಳಿಗೆ ಒಮ್ಮೆ ಬಳಸಬಹುದು:
    • ಪರಿಹಾರ ಅರಣ್ಯೀಕರಣ(ಸಿಎ),
    • ಸಿಎಸ್ಆರ್ ಬಾಧ್ಯತೆಗಳು, ಅಥವಾ
    • ಶಾಸನಬದ್ಧ ಪ್ಲಾಂಟೇಷನ್ ಅವಶ್ಯಕತೆಗಳು.

12.2 ವನ (ಸಂರಕ್ಷಣ ಏವಂ ಸಂವರ್ಧನ) ತಿದ್ದುಪಡಿ ನಿಯಮಗಳು, 2025

• ಕ್ಷೀಣಿಸಿದ/ಸರ್ಕಾರಿ/ದಾಖಲಿತ ಅರಣ್ಯ ಭೂಮಿಯಲ್ಲಿ ವಿಸ್ತೃತ ಭೂ ದಂಡೆ ಸೃಷ್ಟಿ (≤0.4 ಮೇಲಾವರಣ).

• ಸರ್ಕಾರಿ ಯೋಜನೆಗಳ ಅಡಿ ರೂಪಿಸಲಾದ ಅರಣ್ಯೀಕರಣವನ್ನು ಸಿಎಗಾಗಿ ಬಳಸಬಹುದು.

• ವರ್ಧಿತ ಸಿಎ ಮಾನದಂಡಗಳೊಂದಿಗೆ ನಿರ್ಣಾಯಕ, ಕಾರ್ಯತಂತ್ರ, ಆಳವಾಗಿ ಬೇರೂರಿರುವ ಮತ್ತು ಪರಮಾಣು ಖನಿಜ ಗಣಿಗಾರಿಕೆಗೆ ಸುವ್ಯವಸ್ಥಿತ ಅನುಮೋದನೆಗಳು.

• 5 ವರ್ಷಗಳನ್ನು ಮೀರಿ ತಾತ್ವಿಕ ಅನುಮೋದನೆ ಸಿಂಧುತ್ವ ವಿಸ್ತರಿಸಲು ಅವಕಾಶ.

• ಮೇಲ್ಮೈ ಹಕ್ಕುಗಳಿಲ್ಲದೆ ಭೂಗತ ಗಣಿಗಾರಿಕೆಗೆ ಸಿಎ ಇಲ್ಲ.

• ರಕ್ಷಣಾ/ಕಾರ್ಯತಂತ್ರ/ತುರ್ತು ಯೋಜನೆಗಳಿಗೆ ಆಫ್‌ಲೈನ್ ಪ್ರಸ್ತಾವನೆ ಸಲ್ಲಿಕೆಗೆ ಅವಕಾಶ.

 

12.3 ನಿಯಮಗಳಿಗೆ 2ನೇ ತಿದ್ದುಪಡಿ 2023 (ನವೆಂಬರ್ 2025)

ವನ(ಸಂರಕ್ಷಣ್ ಏವಂ ಸಂವರ್ಧನ್) ನಿಯಮಗಳು-2023ಕ್ಕೆ ತಿದ್ದುಪಡಿ ಮಾಡಲಾಗಿದ್ದು, ರಾಜ್ಯದ ನೋಡಲ್ ಅಧಿಕಾರಿಯು ಪರಿಹಾರ ಅರಣ್ಯೀಕರಣಕ್ಕಾಗಿ ಅವನತಿ ಹೊಂದಿದ ಅರಣ್ಯ ಭೂಮಿಯನ್ನು ಗುರುತಿಸುವಲ್ಲಿ ಬಳಕೆದಾರ ಸಂಸ್ಥೆಗೆ ಕಡ್ಡಾಯವಾಗಿ ಸಹಾಯ ಮಾಡಲು ಮತ್ತು ಸುಗಮಗೊಳಿಸಲು ಅನುವು ಮಾಡಿಕೊಡುತ್ತದೆ.

12.4. ಭೂಸ್ವಾಧೀನ ಪ್ರಕರಣಗಳಲ್ಲಿ ಸ್ಥಳೀಯ ಅರಣ್ಯ ಅಧಿಕಾರಿಗಳ ಭಾಗವಹಿಸುವಿಕೆ

ಯಾವುದೇ ಮೂಲಸೌಕರ್ಯ ಯೋಜನೆಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಮಯದಲ್ಲಿ ಅರಣ್ಯ ಭೂಮಿಯನ್ನು ಸ್ಪಷ್ಟವಾಗಿ ಗುರುತಿಸಲು ಭೂಸ್ವಾಧೀನ ಅಧಿಸೂಚನೆ ಪ್ರತಿಯನ್ನು ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಯೊಂದಿಗೆ ಹಂಚಿಕೊಳ್ಳಲು ಯೋಜನೆಯ ಪ್ರತಿಪಾದಕರಿಗೆ ಆದೇಶ ನೀಡಿ 13.11.2025ರಂದು ನಿರ್ದೇಶನಗಳನ್ನು ನೀಡಲಾಗಿದೆ.

12.5 ವಾಯು ಕಾಯಿದೆಗಳು ಮತ್ತು ಜಲ ಕಾಯಿದೆಗಳ ಅಡಿ ಸುಧಾರಣೆಗಳು

12.5.1 ಏಕರೂಪದ ಒಪ್ಪಿಗೆ ಸುಧಾರಣೆಗಳು

• ಎಸ್‌ಪಿಸಿಬಿಗಳು/ಪಿಸಿಸಿಗಳಲ್ಲಿ ಸ್ಥಾಪಿಸಲು/ಕಾರ್ಯ ನಿರ್ವಹಿಸಲು ಒಪ್ಪಿಗೆಗಾಗಿ ರಾಷ್ಟ್ರವ್ಯಾಪಿ ಏಕರೂಪ ಮಾರ್ಗಸೂಚಿಗಳು.

• ಪೂರ್ವ ಪರಿಸರ ಅನುಮತಿ ಹೊಂದಿರುವ ಕೈಗಾರಿಕೆಗಳನ್ನು ಸಿಟಿಇನಿಂದ ವಿನಾಯಿತಿ ನೀಡಲಾಗಿದೆ.

12.5.2 ಕೈಗಾರಿಕಾ ವರ್ಗೀಕರಣ ಮತ್ತು ಅನುಸರಣೆ

• ಉತ್ತಮ ಅನುಸರಣೆ ಉತ್ತೇಜಿಸಲು ಪರಿಷ್ಕೃತ ಕೈಗಾರಿಕಾ ವರ್ಗೀಕರಣ (ಕೆಂಪು/ಕಿತ್ತಳೆ/ಹಸಿರು/ನೀಲಿ/ಬಿಳಿ).

• ಬಿಳಿ ವರ್ಗದ ಅಡಿ ಹೊಸ ವಲಯಗಳನ್ನು ವರ್ಗೀಕರಿಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ.

• ಬಿಳಿ ವರ್ಗ ಎಂದು ಅಧಿಸೂಚಿಸಲಾದ 86 ವಲಯಗಳು - ಸಿಟಿಇ/ಸಿಟಿಒನಿಂದ ವಿನಾಯಿತಿ ನೀಡಲಾಗಿದೆ.

 

12.6 ಇಪಿಆರ್ ಮತ್ತು ವೃತ್ತಾಕಾರ ಆರ್ಥಿಕತೆಯ ಸುಧಾರಣೆಗಳು:

  • ವೃತ್ತಾಕಾರ(ಸುಸ್ಥಿರ ಪರಿಸರ ಕಾಪಾಡುವ)ದ ಆರ್ಥಿಕ ಕ್ರಿಯಾಯೋಜನೆಗಳ ಭಾಗವಾಗಿ, ಪ್ಲಾಸ್ಟಿಕ್ ಪ್ಯಾಕೇಜಿಂಗ್, ಇ-ತ್ಯಾಜ್ಯ, ಬ್ಯಾಟರಿ ತ್ಯಾಜ್ಯ, ಬಳಸಿದ ಎಣ್ಣೆ, ತ್ಯಾಜ್ಯ ಟೈರ್‌ಗಳು, ಜೀವಿತಾವಧಿಯ ವಾಹನಗಳು, ನಿರ್ಮಾಣ ಮತ್ತು ಉರುಳಿಸುವಿಕೆಯ ತ್ಯಾಜ್ಯ ಮತ್ತು ನಾನ್-ಫೆರಸ್ ಲೋಹಗಳ ಸ್ಕ್ರ್ಯಾಪ್ ಎಂಬ 8 ತ್ಯಾಜ್ಯ ವರ್ಗಗಳಿಗೆ ಇಪಿಆರ್ ನಿಯಮಗಳನ್ನು ಸೂಚಿಸಲಾಗಿದೆ.
  • ಅಸ್ತಿತ್ವದಲ್ಲಿರುವ ಇಪಿಆರ್ ನಿಯಮಗಳಲ್ಲಿ ಈ ಕೆಳಗಿನ ಇಪಿಆರ್ ನಿಯಮಗಳು/ ತಿದ್ದುಪಡಿಗಳನ್ನು 2025ರಲ್ಲಿ ಸೂಚಿಸಲಾಗಿದೆ:
  • ಜೀವಿತಾವಧಿಯ ವಾಹನಗಳ ಪರಿಸರಸ್ನೇಹಿ ನಿರ್ವಹಣೆಗಾಗಿ ಪರಿಸರ ಸಂರಕ್ಷಣೆ (ಜೀವಿತಾವಧಿಯ ವಾಹನಗಳು) ನಿಯಮಗಳು-2025 ಅನ್ನು 06.01.2025ರಂದು ಸೂಚಿಸಲಾಗಿದೆ.
  • ಪರಿಸರ(ನಿರ್ಮಾಣ ಮತ್ತು ಉರುಳಿಸುವಿಕೆ) ತ್ಯಾಜ್ಯ ನಿರ್ವಹಣಾ ನಿಯಮಗಳು- 2025 ಅನ್ನು 04.04.2025ರಂದು ಸೂಚಿಸಲಾಗಿದೆ.
  • "ನಾನ್-ಫೆರಸ್ ಲೋಹಗಳ ಸ್ಕ್ರ್ಯಾಪ್‌ಗೆ ಉತ್ಪಾದಕರ ಜವಾಬ್ದಾರಿಯನ್ನು ವಿಸ್ತರಿಸಲಾಗಿದೆ" ಎಂದು 01.07.2025ರಂದು ಅಪಾಯಕಾರಿ ಮತ್ತು ಇತರೆ ತ್ಯಾಜ್ಯಗಳ(ನಿರ್ವಹಣೆ ಮತ್ತು ಗಡಿಯಾಚೆಗಿನ ಚಲನೆ) ನಿಯಮಗಳು-2016ರ ತಿದ್ದುಪಡಿಯ ಮೂಲಕ ತಿಳಿಸಲಾಗಿದೆ.
  • ಬ್ಯಾಟರಿ ತ್ಯಾಜ್ಯ ನಿರ್ವಹಣಾ ತಿದ್ದುಪಡಿ ನಿಯಮಗಳು-2025 ಅನ್ನು ಬ್ಯಾಟರಿಗಳ ಮೇಲೆ ಇಪಿಆರ್ ನೋಂದಣಿ ಸಂಖ್ಯೆಯ ಲೇಬಲ್‌ಗೆ ಸಂಬಂಧಿಸಿದಂತೆ 24.02.2025ರಂದು ಸೂಚಿಸಲಾಗಿದೆ.
  • ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ(ತಿದ್ದುಪಡಿ) ನಿಯಮಗಳು-2025 ಅನ್ನು ಇಪಿಆರ್ ನೋಂದಣಿ ಸಂಖ್ಯೆಯ ಲೇಬಲ್‌ಗೆ ಸಂಬಂಧಿಸಿದಂತೆ 23.01.2025ರಂದು ಸೂಚಿಸಲಾಗಿದೆ.

12.7 ಪರಿಸರ ಸಂರಕ್ಷಣೆ (ಕಲುಷಿತ ತಾಣಗಳ ನಿರ್ವಹಣೆ) ನಿಯಮಗಳು-2025:

24.07.2025ರಂದು ಅಧಿಸೂಚನೆಗೊಂಡ ಪರಿಸರ ಸಂರಕ್ಷಣೆ(ಕಲುಷಿತ ತಾಣಗಳ ನಿರ್ವಹಣೆ) ನಿಯಮಗಳು-2025, ದೇಶದಲ್ಲಿ ಕಲುಷಿತ ತಾಣಗಳ ಗುರುತಿಸುವಿಕೆ, ಮೌಲ್ಯಮಾಪನ ಮತ್ತು ಪರಿಹಾರಕ್ಕಾಗಿ ಒಂದು ಮಾರ್ಗಸೂಚಿ ಒದಗಿಸುತ್ತದೆ.

12. ವ್ಯವಹಾರ ಸುಲಭಗೊಳಿಸಲು ಪರಿಸರ ಅನುಮತಿ ಪ್ರಕ್ರಿಯೆ ಕುರಿತ 8 ಪ್ರಮುಖ ಸುಧಾರಣೆಗಳು

• 5 ಹೆಕ್ಟೇರ್‌ವರೆಗಿನ ಗುತ್ತಿಗೆ ಪ್ರದೇಶ ಹೊಂದಿರುವ ಗಣಿ ಸಚಿವಾಲಯವು 'ಮೈನರ್'ನಿಂದ 'ಮೇಜರ್' ಗೆ ಮರುವರ್ಗೀಕರಿಸಿದ ಖನಿಜಗಳ ಗಣಿಗಾರಿಕೆ ಯೋಜನೆಗಳನ್ನು 2006ರ ಇಐಎ ಅಧಿಸೂಚನೆಯ ಅಡಿ 'ಬಿ2' ವರ್ಗಕ್ಕೆ ಸೇರಿಸಲಾಗಿದೆ.

• ಪರಿಸರ ಅನುಮತಿ(ಇಸಿ) ತಿದ್ದುಪಡಿಗಳ ಅಗತ್ಯವಿಲ್ಲದೆ ವಿನ್ಯಾಸ ಮತ್ತು ಯೋಜನೆಯಲ್ಲಿ ಬದಲಾವಣೆಗಳನ್ನು ಅನುಮತಿಸುವ ಮೂಲಕ ಕಟ್ಟಡ ನಿರ್ಮಾಣ ಯೋಜನೆಗಳಿಗೆ ಇಸಿ ಮಾರ್ಗಸೂಚಿ ತರ್ಕಬದ್ಧಗೊಳಿಸಲಾಗಿದೆ.

• ಮಾನ್ಯ ಇಸಿಗಳು ಮತ್ತು ಯಾವುದೇ ಹೆಚ್ಚುವರಿ ಭೂಮಿಯ ಅವಶ್ಯಕತೆಯಿಲ್ಲದ ವಿಮಾನ ನಿಲ್ದಾಣ ವಿಸ್ತರಣೆ ಮತ್ತು ಆಧುನೀಕರಣ ಯೋಜನೆಗಳನ್ನು ಈಗ ವರ್ಗ ಬಿ2 ಯೋಜನೆಗಳಾಗಿ ಮೌಲ್ಯಮಾಪನ ಮಾಡಲಾಗಿದೆ, ಇವು ಇಐಎ ಮತ್ತು ಸಾರ್ವಜನಿಕ ವಿಚಾರಣೆಗಳಿಂದ ವಿನಾಯಿತಿ ಪಡೆದಿವೆ.

• ಮಾಲಿನ್ಯದ ಸಾಮರ್ಥ್ಯ ಆಧರಿಸಿ ಕೈಗಾರಿಕಾ ಎಸ್ಟೇಟ್‌ಗಳು/ಉದ್ಯಾನವನಗಳು ಮತ್ತು ವೈಯಕ್ತಿಕ ಕೈಗಾರಿಕೆಗಳಿಗೆ ಹಸಿರು ಬೆಲ್ಟ್ ಮತ್ತು ಹಸಿರು ಹೊದಿಕೆ ಅವಶ್ಯಕತೆಗಳನ್ನು ತರ್ಕಬದ್ಧಗೊಳಿಸಲಾಗಿದೆ.

• ನ್ಯಾಯಾಲಯ ಅಥವಾ ಎನ್‌ಸಿಎಲ್‌ಟಿ ಪ್ರಕ್ರಿಯೆಗಳಿಂದ ಉಂಟಾಗುವ ವಿಳಂಬಗಳನ್ನು ಇಸಿ ಮಾನ್ಯತೆಯ ಅವಧಿಯಿಂದ ಹೊರಗಿಡಲಾಗಿದೆ.

• ಪರಿಸರ ಲೆಕ್ಕಪರಿಶೋಧನಾ ನಿಯಮಗಳು-2025, ಪ್ರಮುಖ ಪರಿಸರ ಕಾನೂನುಗಳ ಅಡಿ ಆನ್-ಸೈಟ್ ಪರಿಶೀಲನೆ ಮತ್ತು ಅನುಸರಣೆ ಲೆಕ್ಕ ಪರಿಶೋಧನೆಗಳನ್ನು ನಡೆಸಲು ಪ್ರಮಾಣೀಕೃತ ತೃತೀಯ ಪಕ್ಷದ ಪಾರ್ಟಿ ಪರಿಸರ ಲೆಕ್ಕಪರಿಶೋಧಕರ ವರ್ಗ ಪರಿಚಯಿಸಲಾಗಿದೆ, ಇದು ಸರ್ಕಾರದ ನಂಬಿಕೆ ಆಧಾರಿತ ಅನುಸರಣೆ - ವ್ಯವಹಾರ ಮಾಡುವ ಸುಲಭತೆಯನ್ನು ಬಲಪಡಿಸಿದೆ.

• ಪರಿವೇಶ್: ಪರಿವೇಶ್ 2.0 ಕ್ಲಿಯರೆನ್ಸ್ ನಿರ್ವಹಣೆಯಲ್ಲಿ ಸಂಪೂರ್ಣ ಯಾಂತ್ರೀಕರಣ ಸಾಧಿಸಲಾಗಿದೆ. ಪರಿಸರ, ಅರಣ್ಯ, ವನ್ಯಜೀವಿ, ಸಿಆರ್ ಝಡ್ ಅನುಮತಿಗಳಿಗಾಗಿ ಸಂಯೋಜಿತ ಡಿಜಿಟಲ್ ವೇದಿಕೆ ಒದಗಿಸಿದೆ. ಇದು ನೈಜ-ಸಮಯದ ನಿರ್ಧಾರ ಬೆಂಬಲಕ್ಕಾಗಿ ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು(ಜಿಐಎಸ್) ಸಂಯೋಜಿಸುತ್ತದೆ, ಆನ್‌ಲೈನ್ ಟ್ರ್ಯಾಕಿಂಗ್ ಮೂಲಕ ಪಾರದರ್ಶಕತೆ ಸುಧಾರಿಸುತ್ತದೆ, ಹೊಣೆಗಾರಿಕೆ ಮತ್ತು ಪರಿಸರ ಸುರಕ್ಷತೆಗಳನ್ನು ಖಚಿತಪಡಿಸಿಕೊಳ್ಳುವಾಗ ವ್ಯವಹಾರ ಮಾಡುವ ಸುಲಭತೆಯನ್ನು ಸುಗಮಗೊಳಿಸುತ್ತದೆ. ಯೋಜನಾ ಪ್ರತಿಪಾದಕರು, ಮೌಲ್ಯಮಾಪನ ಸಮಿತಿಗಳು ಮತ್ತು ನಿಯಂತ್ರಕ ಅಧಿಕಾರಿಗಳಿಗೆ ಏಕಗವಾಕ್ಷಿ ಇಂಟರ್ಫೇಸ್ ನೀಡುವ ಮೂಲಕ, ಪರಿವೇಶ್ 2.0 "ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ"ದ ಸರ್ಕಾರದ ಬದ್ಧತೆಯನ್ನು ಬಲಪಡಿಸುತ್ತದೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

• ಪಿಎಂ ಗತಿಶಕ್ತಿ ಎನ್ಎಂಪಿ, ಎನ್ಎಸ್‌ಡಬ್ಲ್ಯುಎಸ್(ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆ), ಕ್ಯಾಂಪಾ ಡಿಜಿಟಲ್ ಪಾವತಿ ಗೇಟ್‌ವೇ ಮತ್ತು ಕ್ಯುಸಿಐ-ಎನ್ಎಬಿಇಟಿ ಮಾನ್ಯತೆ ಪೋರ್ಟಲ್‌ನೊಂದಿಗೆ ಸಂಯೋಜಿಸಲ್ಪಟ್ಟ ಪರಿವೇಶ್, ಗೌರವಾನ್ವಿತ ಪ್ರಧಾನ ಮಂತ್ರಿಗಳು ಕಲ್ಪಿಸಿದ ಸಂಪೂರ್ಣ ಸರ್ಕಾರದ ಕಾರ್ಯವಿಧಾನವನ್ನು ಸಾಕಾರಗೊಳಿಸುತ್ತದೆ. ಈ ಉಪಕ್ರಮವು ಕೈಗಾರಿಕೆಗಳಿಗೆ ವ್ಯವಹಾರ ಸುಲಭತೆಯನ್ನು ಸುಧಾರಿಸುವುದಲ್ಲದೆ, ಸುಸ್ಥಿರತೆ, ನಿಖರತೆ ಮತ್ತು ನಾಗರಿಕ ಕೇಂದ್ರಿತ ವಿನ್ಯಾಸದ ಮೂಲಕ ಭಾರತದ ಪರಿಸರ ಆಡಳಿತವನ್ನು ಮುನ್ನಡೆಸುತ್ತದೆ.

 

*****


(रिलीज़ आईडी: 2212351) आगंतुक पटल : 8
इस विज्ञप्ति को इन भाषाओं में पढ़ें: Urdu , English , हिन्दी , Assamese , Punjabi