ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ
azadi ka amrit mahotsav

ಬೆಂಗಳೂರಿನಲ್ಲಿ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರ (IEPFA) ವತಿಯಿಂದ “ನಿವೇಶಕ್ ಶಿಬಿರ” ಆಯೋಜನೆ

प्रविष्टि तिथि: 06 JAN 2026 12:48PM by PIB Bengaluru

ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿನ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರವು (IEPFA), ಭಾರತೀಯ ಷೇರು ವಿನಿಮಯ ಮಂಡಳಿ (SEBI) ಮತ್ತು ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆ (MIIs) ಸಹಯೋಗದೊಂದಿಗೆ, ಕಳೆದ ವಾರ 2026ರ ಜನವರಿ 3 ರಂದು ಬೆಂಗಳೂರಿನಲ್ಲಿ "ನಿವೇಶಕ್ ಶಿಬಿರ" (ಹೂಡಿಕೆದಾರರಿಗೆ ಶಿಬಿರ) ವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಈ ಕಾರ್ಯಕ್ರಮವು ಶ್ರೀ ವೈ ಮುನಿಸ್ವಾಮಪ್ಪ ಕಲ್ಯಾಣ ಮಂಟಪ, ಸಂ.17, ತುಮಕೂರು ರಸ್ತೆ, ಗೋಪಾಲ್ ಚಿತ್ರಮಂದಿರದ ಸಮೀಪ, ಡಾ. ಅಂಬೇಡ್ಕರ್ ನಗರ, ಯಶವಂತಪುರ, ಬೆಂಗಳೂರು -560022, ಕರ್ನಾಟಕ,  ಇಲ್ಲಿ ನಡೆಯಿತು ಮತ್ತು ಹೂಡಿಕೆದಾರರಿಗೆ ಕ್ಲೇಮು ಮಾಡದ ಲಾಭಾಂಶಗಳು, ಷೇರುಗಳು ಮತ್ತು ಬಾಕಿ ಇರುವ ಐಇಪಿಎಫ್ಎ ಕ್ಲೇಮುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಮಗ್ರ ಸೌಲಭ್ಯ ವೇದಿಕೆಯಾಗಿ ಕಾರ್ಯನಿರ್ವಹಿಸಿತು.

ಈ ಒಂದು ದಿನದ ಶಿಬಿರದಲ್ಲಿ ಕರ್ನಾಟಕದಾದ್ಯಂತ ಹೂಡಿಕೆದಾರರು ಉತ್ಸಾಹದಿಂದ ಪಾಲ್ಗೊಂಡಿದ್ದು, ಇದು ಕುಂದುಕೊರತೆ ಪರಿಹಾರ, ಕ್ಲೇಮು ಸೌಲಭ್ಯ ಮತ್ತು ಹೂಡಿಕೆದಾರರ ಸೇವಾ ನೆರವಿಗಾಗಿ ಏಕ-ಗವಾಕ್ಷಿ ಪರಿಹಾರ ಒದಗಿಸಿತು. ಈ ಕಾರ್ಯಕ್ರಮದಲ್ಲಿ IEPFA, SEBI, MII ನ ಹಿರಿಯ ಅಧಿಕಾರಿಗಳು ಹಾಗೂ ರಿಜಿಸ್ಟ್ರಾರ್‌ಗಳು ಮತ್ತು ವರ್ಗಾವಣೆ ಏಜೆಂಟ್‌ಗಳ (RTA ಗಳು) ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ IEPFA ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿಯಾದ ಶ್ರೀಮತಿ ಅನಿತಾ ಶಾ ಅಕೆಲ್ಲಾ; ಪ್ರಧಾನ ಪ್ರಬಂಧಕರಾದ ಶ್ರೀ ಕೃಷ್ಣಾನಂದ್ ರಾಘವನ್, SEBI ಪ್ರಧಾನ ವ್ಯವಸ್ಥಾಪಕರಾದ ಶ್ರೀ ಬಿನೋದ್ ಶರ್ಮಾ; IEPFA ಪ್ರಧಾನ ವ್ಯವಸ್ಥಾಪಕರಾದ ಲೆಫ್ಟಿನೆಂಟ್ ಕರ್ನಲ್ ಆದಿತ್ಯ ಸಿನ್ಹಾ; CDSL ಸಹಾಯಕ ಉಪಾಧ್ಯಕ್ಷರಾದ ಶ್ರೀ ಸಿ.ಎಸ್. ಹರೀಶ; ಬಾಂಬೆ ಷೇರು ವಿನಿಮಯ ಕೇಂದ್ರದ ಶ್ರೀ ವಿನಯ್ ಕುಮಾರ್ ಹಾಗೂ SEBI, IEPFA, MII ಮತ್ತು RTA ಗಳ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಲ್ಲದೇ, ಹೂಡಿಕೆದಾರರ ಜಾಗೃತಿಯನ್ನು ಹೆಚ್ಚಿಸುವ ಮತ್ತು ಕ್ಲೇಮು ಪರಿಹಾರವನ್ನು ಸುಗಮಗೊಳಿಸುವ ಗುರಿಯೊಂದಿಗೆ "IEPFA ಕ್ಲೇಮುಗಳು ಮತ್ತು ಹೂಡಿಕೆದಾರರ ಸೇವೆಗಳಿಗೆ ಸಂಪೂರ್ಣ ಮಾರ್ಗದರ್ಶಿ" ಎಂಬ ಶೀರ್ಷಿಕೆಯ ಒಳನೋಟವುಳ್ಳ ವಿವರಣಾತ್ಮಕ ಕಿರುಪುಸ್ತಕವನ್ನು ಸಹ IEPFA ಬಿಡುಗಡೆ ಮಾಡಿದೆ.

ಹೂಡಿಕೆದಾರರ ಸೇವೆಗಳನ್ನು ನಾಗರಿಕರಿಗೆ ಹತ್ತಿರ ತರುವ ಗುರಿಯನ್ನು ಹೊಂದಿದ್ದ ಈ ನೇರ ಸೌಲಭ್ಯ ಮತ್ತು ಸ್ಥಳದಲ್ಲೇ ನೆರವು ನೀಡುವ ಶಿಬಿರದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳ 900ಕ್ಕೂ ಹೆಚ್ಚು ಹೂಡಿಕೆದಾರರು ಮತ್ತು ಕ್ಲೇಮುದಾರರು  ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಪುಣೆ, ಹೈದರಾಬಾದ್, ಜೈಪುರ ಮತ್ತು ಅಮೃತಸರದಲ್ಲಿ ಯಶಸ್ವಿ ಆವೃತ್ತಿಗಳ ನಂತರ, ಈ ಹೂಡಿಕೆದಾರ ಕೇಂದ್ರಿತ ಉಪಕ್ರಮವನ್ನು ಬೆಂಗಳೂರು ನಗರದಲ್ಲಿ ಆಯೋಜಿಸಲಾಗಿದ್ದು, ಇದು ಭಾರತದಾದ್ಯಂತ ಹೂಡಿಕೆದಾರ-ಕೇಂದ್ರಿತ, ಪಾರದರ್ಶಕ ಮತ್ತು ಪ್ರವೇಶ ಸಾಧ್ಯ ಹಣಕಾಸು ಪರಿಸರ ವ್ಯವಸ್ಥೆಯನ್ನು ರೂಪಿಸುವ IEPFA ಯ ಬದ್ಧತೆಯನ್ನು ಪುನರ್ ದೃಢೀಕರಿಸಿದೆ.

ನಿವೇಶಕ್ ಶಿಬಿರವು 6-7 ವರ್ಷಗಳಿಗೂ ಹೆಚ್ಚು ಕಾಲದಿಂದ ಬಾಕಿ ಇರುವ ಕ್ಲೇಮು ಮಾಡದ ಲಾಭಾಂಶ ಮತ್ತು ಷೇರುಗಳನ್ನು ಪಡೆಯಲು ನೇರವಾಗಿ ಅವಕಾಶ ಮಾಡಿಕೊಟ್ಟಿತು, ಸ್ಥಳದಲ್ಲೇ KYC ಮತ್ತು ನಾಮನಿರ್ದೇಶನ ಪರಿಷ್ಕರಣೆಗೆ ಅನುವು ಮಾಡಿಕೊಟ್ಟು ಬಾಕಿ ಇರುವ IEPFA ಕ್ಲೇಮು ಸಮಸ್ಯೆಗಳನ್ನು ಪರಿಹರಿಸಿತು. 

ಪಾಲುದಾರ ಕಂಪನಿಗಳು ಮತ್ತು RTA ಗಳು ಪ್ರತ್ಯೇಕ ಕಿಯೋಸ್ಕ್‌ ಗಳನ್ನು ಸ್ಥಾಪಿಸಿದ್ದು ಅಧಿಕಾರಿಗಳೊಂದಿಗೆ ಹೂಡಿಕೆದಾರರು ನೇರವಾಗಿ ಸಂವಹನ ನಡೆಸಲು ಮತ್ತು ಮಧ್ಯವರ್ತಿಗಳಿಲ್ಲದೇ ಪ್ರಕ್ರಿಯೆ ಸಾಧ್ಯವಾಗಿಸುವಿಕೆಗೆ ಅನುವು ಮಾಡಿಕೊಟ್ಟವೆ.

ಕಂಪನಿ ಪ್ರತಿನಿಧಿಗಳು, RTA ಗಳು ಹಾಗೂ IEPFA ಮತ್ತು SEBI ಅಧಿಕಾರಿಗಳೊಂದಿಗೆ ನೇರ ಸಂಪರ್ಕ ಸಾಧ್ಯವಾಗಿದ್ದು ನೂರಾರು ಶಿಬಿರಾರ್ಥಿಗಳಿಗೆ ಅನುಕೂಲವಾಯಿತು. ಸಾಮಾನ್ಯವಾಗಿ ಅನೇಕ ತಿಂಗಳುಗಳಾಗುವ ಕುಂದುಕೊರತೆಗಳ ಪರಿಹಾರ ಪ್ರಕ್ರಿಯೆಯನ್ನು ಶೀಘ್ರ ಪರಿಹರಿಸುವ ಈ ಉಪಕ್ರಮದ ದಕ್ಷತೆ, ಪಾರದರ್ಶಕತೆ ಮತ್ತು ಸಾಮರ್ಥ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ಯವಾಯಿತು.

ಬೆಂಗಳೂರು ನಿವೇಶಕ್ ಶಿಬಿರವು IEPFA ದ ರಾಷ್ಟ್ರವ್ಯಾಪಿ ಸಂಪರ್ಕ ಸರಣಿಯ ಭಾಗವಾಗಿದ್ದು, ಕ್ಲೇಮು ಮಾಡದ ಹೂಡಿಕೆಗಳ ಪ್ರಮಾಣ ಹೆಚ್ಚಿರುವ ನಗರಗಳನ್ನು ಕೇಂದ್ರೀಕರಿಸಿದೆ. ಈ ಹೂಡಿಕೆದಾರರ ಸೌಲಭ್ಯ ಶಿಬಿರಗಳು ಭಾರತದ ಹಣಕಾಸು ಪರಿಸರ ವ್ಯವಸ್ಥೆಯಲ್ಲಿ ನಂಬಿಕೆಯಿರಿಸಲು ಪಾರದರ್ಶಕತೆ ಹೆಚ್ಚಿಸುತ್ತಾ ಹೂಡಿಕೆದಾರರ ಜಾಗೃತಿಯನ್ನು ವರ್ಧಿಸುವ, ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ IEPFA ಯ ಅಚಲ ಬದ್ಧತೆಯನ್ನು ಒತ್ತಿಹೇಳುತ್ತವೆ.

ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿನ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರವು (IEPFA), ನಿರಂತರ ಸಂಪರ್ಕ, ಶಿಕ್ಷಣ ಮತ್ತು ಕಾರ್ಯತಂತ್ರದ ಸಹಯೋಗಗಳ ಮೂಲಕ ಹೂಡಿಕೆದಾರರ ಜಾಗೃತಿ ಮತ್ತು ರಕ್ಷಣೆ ಉತ್ತೇಜನಕ್ಕೆ ಬದ್ಧವಾಗಿದೆ.

 

*****


(रिलीज़ आईडी: 2211924) आगंतुक पटल : 18
इस विज्ञप्ति को इन भाषाओं में पढ़ें: English , Urdu , हिन्दी , Assamese , Punjabi , Tamil , Telugu