ರೈಲ್ವೇ ಸಚಿವಾಲಯ
ಸಾಮಾನ್ಯ ಪ್ರಯಾಣಿಕರಿಗಾಗಿ ಆಧುನಿಕ ಸಾಮಾನ್ಯ ಮತ್ತು ಎಸಿ-ರಹಿತ ಬೋಗಿಗಳ ದಾಖಲೆ ತಯಾರಿಕೆಯೊಂದಿಗೆ ಭಾರತೀಯ ರೈಲ್ವೆಯಿಂದ ಕೈಗೆಟುಕುವ ಪ್ರಯಾಣಕ್ಕೆ ಬಲ
ಉತ್ತಮ ನಿಲ್ದಾಣಗಳು, ನ್ಯಾಯೋಚಿತ ಟಿಕೆಟಿಂಗ್ ಮತ್ತು 30 ಅಮೃತ ಭಾರತ ರೈಲು ಸೇವೆಗಳೊಂದಿಗೆ ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆ ಹೆಚ್ಚಳ
प्रविष्टि तिथि:
06 JAN 2026 6:32PM by PIB Bengaluru
ಭಾರತೀಯ ರೈಲ್ವೆಯು ಸಾಮಾನ್ಯ ಪ್ರಯಾಣಿಕರ ಅಗತ್ಯತೆಗಳ ಮೇಲೆ ಬಲವಾದ ಗಮನವನ್ನು ಕೇಂದ್ರೀಕರಿಸಿ ತನ್ನ ಮೂಲಸೌಕರ್ಯ ಮತ್ತು ಸೇವೆಗಳನ್ನು ಆಧುನೀಕರಿಸುತ್ತಿದೆ, ರೈಲು ಪ್ರಯಾಣವನ್ನು ಹೆಚ್ಚು ಅನುಕೂಲಕರ, ಆರಾಮದಾಯಕ, ಸುರಕ್ಷಿತ ಮತ್ತು ಕೈಗೆಟುಕುವಂತೆ ಮಾಡುವ ಗುರಿಯನ್ನು ಹೊಂದಿದೆ. ನಿರಂತರ ಹೂಡಿಕೆ, ಕಾರ್ಯಾಚರಣೆಯ ಸುಧಾರಣೆಗಳು ಮತ್ತು ತಂತ್ರಜ್ಞಾನದ ಅಳವಡಿಕೆಯ ಮೂಲಕ, ಭಾರತೀಯ ರೈಲ್ವೆಯು ದಿನನಿತ್ಯದ ಪ್ರಯಾಣಿಕರಿಗೆ ಆದ್ಯತೆ ನೀಡುವ 'ಪ್ರಯಾಣಿಕರೇ ಮೊದಲು' ಎನ್ನುವ ವಿಧಾನವನ್ನು ಬಲಪಡಿಸುತ್ತಿದೆ.
ಕೈಗೆಟುಕುವ ಪ್ರಯಾಣಿಕ ಸಾಮರ್ಥ್ಯವನ್ನು ಹೆಚ್ಚಿಸಲು ಆಧುನಿಕ ಸಾಮಾನ್ಯ ಬೋಗಿಗಳ ದಾಖಲೆ ಉತ್ಪಾದನೆ
ಕೈಗೆಟುಕುವ ದರದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಆಧುನಿಕ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಹೊಂದಿರುವ ಸಾಮಾನ್ಯ ಮತ್ತು ಎಸಿ-ರಹಿತ ಬೋಗಿಗಳ ದಾಖಲೆ ಮಟ್ಟದ ಉತ್ಪಾದನೆಯನ್ನು ಭಾರತೀಯ ರೈಲ್ವೆಯು ಸಾಧಿಸಿದೆ. ಈ ಬೋಗಿಗಳು ಪ್ರಯಾಣದ ಆರಾಮದಾಯಕತೆಯನ್ನು ಹೆಚ್ಚಿಸುವುದರ ಜೊತೆಗೆ ಪ್ರಯಾಣಿಕರ ಸಾಗಿಸುವ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತವೆ, ಇದು ಒಳಗೊಳ್ಳುವ ಮತ್ತು ಸುಲಭವಾಗಿ ಲಭ್ಯವಿರುವ ರೈಲು ಪ್ರಯಾಣಕ್ಕೆ ಭಾರತೀಯ ರೈಲ್ವೆಯ ಬದ್ಧತೆಯನ್ನು ಬಲಪಡಿಸುತ್ತದೆ.
ಇದರ ಆಧಾರದ ಮೇಲೆ, ಭಾರತೀಯ ರೈಲ್ವೆಯು ತನ್ನ ಪ್ರಯಾಣಿಕರ ಫ್ಲೀಟ್ ಅನ್ನು ಮತ್ತಷ್ಟು ಬಲಪಡಿಸಲು ಮತ್ತು ಆಧುನೀಕರಿಸಲು ಪ್ರಸಕ್ತ ಮತ್ತು ಮುಂದಿನ ಹಣಕಾಸು ವರ್ಷಕ್ಕೆ ನಿರಂತರ ಬೋಗಿ ತಯಾರಿಕಾ ಕಾರ್ಯಕ್ರಮವನ್ನು ಹೊಂದಿದೆ. ಈಗಾಗಲೇ ತನ್ನ ಅಂತಿಮ ತ್ರೈಮಾಸಿಕದಲ್ಲಿರುವ ಪ್ರಸಕ್ತ ಹಣಕಾಸು ವರ್ಷ 2025-26 ಕ್ಕೆ, ಉತ್ಪಾದನಾ ಯೋಜನೆಯು 4,838 ಹೊಸ ಎಲ್ ಎಚ್ ಬಿ ಜಿಎಸ್ ಮತ್ತು ಎಸಿ-ರಹಿತ ಬೋಗಿಗಳನ್ನು (ಎಲ್ ಎಸ್ ಬೋಗಿಗಳು - 2817, ಎಲ್ ಎಸ್ ಸಿ ಎನ್ ಬೋಗಿಗಳು- 2021) ಒದಗಿಸುತ್ತದೆ. 2026-27 ಕ್ಕೆ, ಉತ್ಪಾದನೆಯ ಗುರಿಯು 4,802 ಎಲ್ ಎಚ್ ಬಿ ಬೋಗಿಗಳಾಗಿದೆ (ಎಲ್ ಎಸ್ ಬೋಗಿಗಳು - 2638, ಎಲ್ ಎಸ್ ಸಿ ಎನ್ ಬೋಗಿಗಳು - 2164). ಈ ಯೋಜಿತ ಉತ್ಪಾದನೆಯು ಸುರಕ್ಷತೆ, ಆರಾಮ ಮತ್ತು ರೈಲು ಸೇವೆಗಳ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ.
ಹಬ್ಬದ ಮತ್ತು ವಿಶೇಷ ಋತುಗಳ ದಟ್ಟಣೆಯನ್ನು ನಿರ್ವಹಿಸಲು ಅಭೂತಪೂರ್ವ ಪ್ರಮಾಣದ ವಿಶೇಷ ರೈಲು ಕಾರ್ಯಾಚರಣೆಗಳು
ವಿಶೇಷ ಋತುಗಳು ಮತ್ತು ಹಬ್ಬದ ದಟ್ಟಣೆಯನ್ನು ನಿರ್ವಹಿಸಲು, ಭಾರತೀಯ ರೈಲ್ವೆಯು 2025 ರಲ್ಲಿ ವಿಶೇಷ ರೈಲು ಕಾರ್ಯಾಚರಣೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ದಾಖಲೆ ಮಟ್ಟದ 43,000ಕ್ಕೂ ಹೆಚ್ಚು ವಿಶೇಷ ರೈಲು ಸಂಚಾರಗಳನ್ನು ಕಾರ್ಯಾಚರಣೆ ಮಾಡಲಾಗಿದ್ದು, ಇದರಲ್ಲಿ ಮಹಾಕುಂಭಕ್ಕಾಗಿ 17,340, ಹೋಳಿಗಾಗಿ 1,144, ಬೇಸಿಗೆಯ ವಿಶೇಷವಾಗಿ 12,417 ಮತ್ತು ಛತ್ ಪೂಜೆಗಾಗಿ 12,383 ಸಂಚಾರಗಳು ಸೇರಿವೆ. ಇದು ಅತ್ಯಧಿಕ ಬೇಡಿಕೆಯ ಅವಧಿಯಲ್ಲಿ ಸುಗಮ ಪ್ರಯಾಣಿಕರ ಸಂಚಾರ ಮತ್ತು ಸುಧಾರಿತ ಪ್ರಯಾಣದ ಅನುಕೂಲತೆಯನ್ನು ಖಚಿತಪಡಿಸಿದೆ. ಈ ಬೃಹತ್ ಪ್ರಮಾಣದ ಕಾರ್ಯಾಚರಣೆಗಳು ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದ್ದು, ಪ್ರಯಾಣಿಕರ ಸುಗಮ ಸಂಚಾರವನ್ನು ಖಚಿತಪಡಿಸಿವೆ ಮತ್ತು ಅಸಾಧಾರಣವಾಗಿ ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ಸಕಾಲಿಕ ಸಂಪರ್ಕವನ್ನು ಒದಗಿಸಿವೆ.
ಜನದಟ್ಟಣೆ ನಿರ್ವಹಣೆ ಮತ್ತು ಬೋರ್ಡಿಂಗ್ ಗಿಂತ ಮೊದಲಿನ ಆರಾಮದಾಯಕತೆಯನ್ನು ಸುಧಾರಿಸಲು ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರ ತಂಗುವ ಪ್ರದೇಶಗಳ ಅಭಿವೃದ್ಧಿ
ನವದೆಹಲಿ ರೈಲು ನಿಲ್ದಾಣದಲ್ಲಿ 'ಯಾತ್ರಿ ಸುವಿಧಾ ಕೇಂದ್ರ'ವನ್ನು ಯಶಸ್ವಿಯಾಗಿ ಜಾರಿಗೆ ತಂದ ನಂತರ, ಭಾರತೀಯ ರೈಲ್ವೆಯು ದೇಶಾದ್ಯಂತ 76 ನಿಲ್ದಾಣಗಳನ್ನು ಪ್ರಯಾಣಿಕರ ತಂಗುವ ಪ್ರದೇಶಗಳ ಅಭಿವೃದ್ಧಿಗಾಗಿ ಗುರುತಿಸಿದೆ. ನಾಲ್ಕು ತಿಂಗಳಲ್ಲಿ ಪೂರ್ಣಗೊಂಡ ನವದೆಹಲಿಯ ತಂಗುವ ಪ್ರದೇಶವು ಸುಮಾರು 7,000 ಪ್ರಯಾಣಿಕರಿಗೆ ಸ್ಥಳಾವಕಾಶ ನೀಡಬಲ್ಲದು ಮತ್ತು ಶೌಚಾಲಯಗಳು, ಟಿಕೆಟಿಂಗ್ ಸೌಲಭ್ಯಗಳು, ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳು ಹಾಗೂ ಉಚಿತ ಆರ್ ಒ ಕುಡಿಯುವ ನೀರಿನ ಸೌಲಭ್ಯಗಳನ್ನು ಹೊಂದಿದೆ. ಈ ಹೊಸ ತಂಗುವ ಪ್ರದೇಶಗಳು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಮಾಡ್ಯುಲರ್ ವಿನ್ಯಾಸಗಳನ್ನು ಅನುಸರಿಸಲಿವೆ ಮತ್ತು 2026ರ ಹಬ್ಬದ ಋತು ಆರಂಭವಾಗುವ ಮೊದಲು ಇವುಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಆಧಾರ್ ದೃಢೀಕರಣ ಮತ್ತು ಕಾನೂನುಬಾಹಿರ ಬುಕಿಂಗ್ ವಿರುದ್ಧದ ಕ್ರಮದ ಮೂಲಕ ಟಿಕೆಟಿಂಗ್ ವಿಶ್ವಾಸಾರ್ಹತೆಯನ್ನು ಬಲಪಡಿಸುವುದು
ನೈಜ ಪ್ರಯಾಣಿಕರು ಖಚಿತಪಡಿಸಿದ ಟಿಕೆಟ್ ಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ರೈಲ್ವೆಯು ಆಧಾರ್ ದೃಢೀಕರಣ ಮತ್ತು ಸುಧಾರಿತ ತಾಂತ್ರಿಕ ಮೇಲ್ವಿಚಾರಣೆಯ ಮೂಲಕ ಟಿಕೆಟಿಂಗ್ ವ್ಯವಸ್ಥೆಯನ್ನು ಬಲಪಡಿಸಿದೆ. ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಲು ಬಳಕೆದಾರರ ಆಧಾರ್ ದೃಢೀಕರಣವು ಒಂದು ಪ್ರಮುಖ ಹೆಜ್ಜೆಯಾಗಿದೆ. ಆಧಾರ್ ದೃಢೀಕೃತ ಬಳಕೆದಾರರಿಗೆ ಮಾತ್ರ ತತ್ಕಾಲ್ ಟಿಕೆಟ್ ಕಾಯ್ದಿರಿಸಲು ಅನುಮತಿಸಲಾಗಿದೆ. ಇ-ಟಿಕೆಟಿಂಗ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುವ ಬಳಕೆದಾರರನ್ನು ಗುರುತಿಸಲು ಮತ್ತು ತಡೆಯಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದರ ಪರಿಣಾಮವಾಗಿ, 5.73 ಕೋಟಿ ಶಂಕಾಸ್ಪದ ಮತ್ತು ನಿಷ್ಕ್ರಿಯ ಐ ಆರ್ ಸಿ ಟಿ ಸಿ ಬಳಕೆದಾರರ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಅಥವಾ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಮತ್ತು ಮುಂದಿನ ಕ್ರಮಗಳು ಮುಂದುವರಿಯುತ್ತಿವೆ.
ಬೃಹತ್ ಹೂಡಿಕೆ ಮತ್ತು ತಂತ್ರಜ್ಞಾನ ನಿಯೋಜನೆಯೊಂದಿಗೆ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯ ಮೇಲೆ ಹೆಚ್ಚಿನ ಗಮನ
ಪ್ರಯಾಣಿಕರ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ, 2025-26ರ ಒಟ್ಟು ಬಜೆಟ್ ಬೆಂಬಲದ ಅಡಿಯಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕೆಲಸಗಳಿಗಾಗಿ ಮೀಸಲಿಟ್ಟ ಶೇಕಡಾ 84 ರಷ್ಟು ಹಣವನ್ನು ಈಗಾಗಲೇ ಬಳಸಿಕೊಳ್ಳಲಾಗಿದೆ. ಪರಿಣಾಮಕಾರಿ ರೈಲು ಅಪಘಾತಗಳು 2014-15ರಲ್ಲಿ 135 ಇದ್ದದ್ದು, 2024-25ರಲ್ಲಿ 31ಕ್ಕೆ ಮತ್ತು 2025-26ರಲ್ಲಿ (ನವೆಂಬರ್ 2025ರವರೆಗೆ) 11ಕ್ಕೆ ತೀವ್ರವಾಗಿ ಕಡಿಮೆಯಾಗಿವೆ. 2004-14ರ ಅವಧಿಯಲ್ಲಿ ವರ್ಷಕ್ಕೆ ಸರಾಸರಿ 171 ಅಪಘಾತಗಳು ಸಂಭವಿಸುತ್ತಿದ್ದವು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುರಕ್ಷತಾ ಬಜೆಟ್ ಸುಮಾರು ಮೂರು ಪಟ್ಟು ಹೆಚ್ಚಳವಾಗಿ ₹1,16,470 ಕೋಟಿಗೆ ತಲುಪಿದೆ. ಮಂಜು ಮುಸುಕಿದ ಸಂದರ್ಭದಲ್ಲಿ ಸುರಕ್ಷತೆ ನೀಡುವ 'ಫಾಗ್ ಸೇಫ್ಟಿ ಡಿವೈಸ್'ಗಳ ಸಂಖ್ಯೆಯು 2014ರಲ್ಲಿ 90 ಇದ್ದದ್ದು 2025ರಲ್ಲಿ 25,939ಕ್ಕೆ ಏರಿಕೆಯಾಗಿದೆ.
ಎಸಿ-ರಹಿತ ಮತ್ತು ಪ್ರಾದೇಶಿಕ ರೈಲು ಸಂಪರ್ಕವನ್ನು ಸುಧಾರಿಸಲು ಅಮೃತ ಭಾರತ್ ಮತ್ತು ನಮೋ ಭಾರತ್ ರೈಲುಗಳ ಪರಿಚಯ
ಸಂಪೂರ್ಣ ಎಸಿ-ರಹಿತ ಸೇವೆಯನ್ನು ಹೊಂದಿರುವ, ಸ್ಲೀಪರ್ ಮತ್ತು ಸಾಮಾನು ಬೋಗಿಗಳನ್ನು ಒಳಗೊಂಡ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಪ್ರಯಾಣವನ್ನು ಒದಗಿಸುತ್ತಿವೆ. 2025 ರ ಅವಧಿಯಲ್ಲಿ, 13 ಅಮೃತ ಭಾರತ್ ರೈಲುಗಳನ್ನು ಪರಿಚಯಿಸಲಾಗಿದ್ದು, ಇದರಿಂದ ಒಟ್ಟು ಕಾರ್ಯಾಚರಣೆಯಲ್ಲಿರುವ ಸೇವೆಗಳ ಸಂಖ್ಯೆ 30 ಕ್ಕೆ ಏರಿದೆ. ಇದರ ಜೊತೆಗೆ, ಭುಜ್–ಅಹಮದಾಬಾದ್ ಮತ್ತು ಜಯನಗರ–ಪಟ್ನಾ ನಡುವೆ ಎರಡು 'ನಮೋ ಭಾರತ್ ರ್ಯಾಪಿಡ್ ರೈಲು' ಸೇವೆಗಳು ಕಾರ್ಯನಿರ್ವಹಿಸುತ್ತಿದ್ದು, ಇದು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುತ್ತಿದೆ.
ಪ್ರಸ್ತುತ, ಭಾರತೀಯ ರೈಲ್ವೆ ಜಾಲದಲ್ಲಿ ಕೆಳಗೆ ಪಟ್ಟಿ ಮಾಡಲಾದ 30 ಅಮೃತ ಭಾರತ್ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿವೆ:
|
ಕ್ರ.ಸಂ.
|
ರೈಲಿನ ಸಂಖ್ಯೆ ಮತ್ತು ಹೆಸರು
|
-
|
15133/15134 ಛಪ್ರಾ - ಆನಂದ್ ವಿಹಾರ್ (ಟಿ) ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
15293/15294 ಮುಜಾಫರ್‌ಪುರ - ಚರ್ಲಪಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
19021/19022 ಉಧ್ನಾ - ಬ್ರಹ್ಮಪುರ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
19623/19624 ಮದಾರ್ ಜಂಕ್ಷನ್ (ಅಜ್ಮೀರ್) - ದರ್ಭಾಂಗ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
14628/14627 ಛೆಹರ್ಟಾ (ಅಮೃತಸರ) - ಸಹರ್ಸಾ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
16601/16602 ಈರೋಡ್ ಜಂಕ್ಷನ್ - ಜೋಗ್ಬಾನಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
13697/13698 ಗಯಾ - ದೆಹಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
14048/14047 ದೆಹಲಿ - ಸೀತಾಮರ್ಹಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
22361/22362 ರಾಜೇಂದ್ರ ನಗರ (ಟಿ) - ನವದೆಹಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
15567/15568 ಬಾಪುಧಾಮ್ ಮೋತಿಹಾರಿ - ಆನಂದ್ ವಿಹಾರ್ (ಟಿ) ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
15561/15562 ದರ್ಭಾಂಗ - ಗೋಮತಿ ನಗರ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
13435/13436 ಮಾಲ್ಡಾ ಟೌನ್ - ಗೋಮತಿ ನಗರ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
11015/11016 ಲೋಕಮಾನ್ಯ ತಿಲಕ್ (ಟಿ) - ಸಹರ್ಸಾ ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
13434/13433 ಮಾಲ್ಡಾ ಟೌನ್ – ಎಸ್ ಎಂ ವಿ ಟಿ ಬೆಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್
|
-
|
15557/15558 ದರ್ಭಾಂಗ ಜಂಕ್ಷನ್ - ಆನಂದ್ ವಿಹಾರ್ (ಟಿ) ಅಮೃತ್ ಭಾರತ್ ಎಕ್ಸ್‌ಪ್ರೆಸ್
|
ಭಾರತೀಯ ರೈಲ್ವೆಯು ಕೈಗೆಟುಕುವ ದರದ ಎಸಿ-ರಹಿತ ಬೋಗಿಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ, ದಟ್ಟಣೆಯನ್ನು ನಿರ್ವಹಿಸಲು ವಿಶೇಷ ರೈಲುಗಳನ್ನು ಓಡಿಸುವ ಮೂಲಕ ಮತ್ತು ನಿಲ್ದಾಣದ ಸೌಲಭ್ಯಗಳನ್ನು ಸುಧಾರಿಸುವ ಮೂಲಕ ಸಾಮಾನ್ಯ ಪ್ರಯಾಣಿಕರ ಮೇಲಿನ ತನ್ನ ಗಮನವನ್ನು ಬಲಪಡಿಸುತ್ತಿದೆ. ಕಾನೂನುಬಾಹಿರ ಟಿಕೆಟಿಂಗ್ ವಿರುದ್ಧ ಕಠಿಣ ಕ್ರಮ, ಸುರಕ್ಷತೆಯ ಮೇಲೆ ಭಾರಿ ಹೂಡಿಕೆ ಮತ್ತು ಎಸಿ-ರಹಿತ ಅಮೃತ ಭಾರತ್ ರೈಲುಗಳ ಪರಿಚಯ ಹಾಗೂ ಸುಧಾರಿತ ಪ್ರಾದೇಶಿಕ ಸಂಪರ್ಕದೊಂದಿಗೆ, ಭಾರತೀಯ ರೈಲ್ವೆಯು ದೈನಂದಿನ ಪ್ರಯಾಣಿಕರನ್ನು ಕೇಂದ್ರವಾಗಿರಿಸಿಕೊಂಡು ಸ್ಥಿರವಾಗಿ ಆಧುನಿಕ, ಅಂತರ್ಗತ ಮತ್ತು ʼಪ್ರಯಾಣಿಕ ಮೊದಲುʼ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ.
*****
(रिलीज़ आईडी: 2211917)
आगंतुक पटल : 13