ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ 2024-25ನೇ ಸಾಲಿನ ವಾರ್ಷಿಕ ವರದಿ
प्रविष्टि तिथि:
06 JAN 2026 4:02PM by PIB Bengaluru
ಪ್ರಾಧಿಕಾರದ ಚಟುವಟಿಕೆಗಳು, ಪ್ರಮಾಣೀಕೃತ ಲೆಕ್ಕಪತ್ರಗಳು ಮತ್ತು ಆಡಿಟ್ ವರದಿಯನ್ನು ವಿವರಿಸುವ 2024-25ನೇ ಸಾಲಿನ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ವಾರ್ಷಿಕ ವರದಿಯನ್ನು ಡಿಸೆಂಬರ್ 17, 2025 ರಂದು ಲೋಕಸಭೆಯಲ್ಲಿ ಮತ್ತು ಡಿಸೆಂಬರ್ 18, 2025 ರಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.
ಟ್ರಾಯ್ ವಾರ್ಷಿಕ ವರದಿಯು ನೀತಿಗಳು ಮತ್ತು ಕಾರ್ಯಕ್ರಮಗಳು, ದೂರಸಂಪರ್ಕ ವಲಯ ಮತ್ತು ಪ್ರಸಾರ ವಲಯದ ಸಾಮಾನ್ಯ ಪರಿಸರದ ವಿಮರ್ಶೆ, ಪರಿಸರದ ಅವಲೋಕನ, ಟ್ರಾಯ್‌ನ ಕಾರ್ಯನಿರ್ವಹಣೆ ಮತ್ತು ಕಾರ್ಯಾಚರಣೆಯ ವಿಮರ್ಶೆ, 'ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕಾಯ್ದೆ 1997'ರ ಸೆಕ್ಷನ್ 11ರಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳಿಗೆ ಸಂಬಂಧಿಸಿದ ಟ್ರಾಯ್‌ನ ಕಾರ್ಯಗಳು ಮತ್ತು ಹಣಕಾಸಿನ ಸಾಧನೆ ಸೇರಿದಂತೆ ಸಾಂಸ್ಥಿಕ ವಿಷಯಗಳನ್ನು ವಿವರಿಸುತ್ತದೆ.
ಸಾಮಾನ್ಯ ಸಾರ್ವಜನಿಕರ ಮಾಹಿತಿಗಾಗಿ ಟ್ರಾಯ್‌ನ 2024-25ನೇ ಸಾಲಿನ ವಾರ್ಷಿಕ ವರದಿಯ ಪ್ರತಿಯನ್ನು ಟ್ರಾಯ್ ವೆಬ್‌ಸೈಟ್‌ನಲ್ಲಿ (www.trai.gov.in) ಪ್ರಕಟಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶ್ರೀ ಯತಿಂದರ್ ಅಗ್ರೋಹಿ, ಸಲಹೆಗಾರರು (ಆಡಳಿತ ಮತ್ತು ಐಆರ್), ಟ್ರಾಯ್ - ಇವರನ್ನು 011-26769636 ದೂರವಾಣಿ ಸಂಖ್ಯೆ ಅಥವಾ advadmn@trai.gov.in ಇಮೇಲ್ ಐಡಿ ಮೂಲಕ ಸಂಪರ್ಕಿಸಬಹುದು.
*****
(रिलीज़ आईडी: 2211771)
आगंतुक पटल : 17