ಸಹಕಾರ ಸಚಿವಾಲಯ
azadi ka amrit mahotsav

ಸಹಕಾರದ ಮೂಲಕ ಪೌಷ್ಟಿಕಾಂಶ ಭದ್ರತೆಯತ್ತ ಒಂದು ಪ್ರಮುಖ ಹೆಜ್ಜೆ: ಎನ್‌.ಡಿ.ಡಿ.ಬಿ. ಪೌಷ್ಟಿಕಾಂಶ ಪ್ರತಿಷ್ಠಾನದ ಸಿಎಸ್‌ಆರ್‌ ಸಮಾವೇಶವನ್ನು ಉದ್ಘಾಟಿಸಲಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಸಹಕಾರ್‌ ಸೇ ಸಮೃದ್ಧಿ’ಯ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎನ್‌ಡಿಡಿಬಿಯ ಹೊಸ ಉಪಕ್ರಮ

ಅಪೌಷ್ಟಿಕತೆ ನಿರ್ಮೂಲನೆಯಲ್ಲಿ ಕಾರ್ಪೊರೇಟ್‌ - ಸಹಕಾರಿ ಸಹಭಾಗಿತ್ವದ ಬಗ್ಗೆ ಚರ್ಚೆಗಳು: ಪೌಷ್ಟಿಕಾಂಶಕ್ಕಾಗಿ ಎನ್‌ಡಿಡಿಬಿ ಪ್ರತಿಷ್ಠಾನದ ರಾಷ್ಟ್ರೀಯ ಸಿಎಸ್‌ಆರ್‌ ಸಮಾವೇಶ

ಗಿಫ್ಟ್‌ ಮಿಲ್ಕ್‌ ಮತ್ತು ಶಿಶು ಸಂಜೀವಿನಿ ಕಾರ್ಯಕ್ರಮಗಳ ಆರಂಭ: ಸುಮಾರು 7,000 ಮಕ್ಕಳು ಪೌಷ್ಠಿಕಾಂಶದ ಪ್ರಯೋಜನಗಳನ್ನು ಪಡೆಯಲಿದ್ದಾರೆ

‘ಪೌಷ್ಠಿಕಾಂಶ ಮತ್ತು ಆರೋಗ್ಯ: ಸಾರ್ವಜನಿಕ ಮಧ್ಯಸ್ಥಿಕೆಗಳ ಮೂಲಕ ಅಪೌಷ್ಟಿಕತೆ ನಿರ್ಮೂಲನೆ’ ಮತ್ತು ‘ಪೌಷ್ಟಿಕಾಂಶ ಭದ್ರತೆಗಾಗಿ ಕಾರ್ಪೊರೇಟ್‌-ಸಹಕಾರಿ ಸಹಯೋಗ’ ಕುರಿತು ತಾಂತ್ರಿಕ ಅಧಿವೇಶನಗಳು ನಡೆಯಲಿವೆ

प्रविष्टि तिथि: 05 JAN 2026 6:13PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಸಹಕಾರ್‌ ಸೇ ಸಮೃದ್ಧಿ’ಯ ದೂರದೃಷ್ಟಿಯ ಪರಿಕಲ್ಪನೆಯಿಂದ ಮಾರ್ಗದರ್ಶಿಸಲ್ಪಟ್ಟ ಮತ್ತು ಗೌರವಾನ್ವಿತ ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರ ಬಲವಾದ ನಾಯಕತ್ವದಲ್ಲಿ, ಸಹಕಾರಿ ಚಳವಳಿಯನ್ನು ಸಾರ್ವಜನಿಕ ಕಲ್ಯಾಣ ಮತ್ತು ಸಾಮಾಜಿಕ ಅಭಿವೃದ್ಧಿಯೊಂದಿಗೆ ಸಂಪರ್ಕಿಸಲು ಮತ್ತೊಂದು ಮಹತ್ವದ ಉಪಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು 2026 ರ ಜನವರಿ 6ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಎನ್‌ಡಿಡಿಬಿ ಫೌಂಡೇಶನ್‌ ಫಾರ್‌ ನ್ಯೂಟ್ರಿಷನ್‌ ಆಯೋಜಿಸಿರುವ ಪೌಷ್ಟಿಕಾಂಶ ಭದ್ರತೆ ಮತ್ತು ಅಪೌಷ್ಟಿಕತೆ ತಗ್ಗಿಸುವಿಕೆಯಲ್ಲಿಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿಯ ಪಾತ್ರ ಎಂಬ ಸಿಎಸ್‌ಆರ್‌ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಈ ಸಂದರ್ಭದಲ್ಲಿ, ಮಾನ್ಯ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್‌ ರಾಜ್‌ ಸಚಿವರಾದ ಶ್ರೀ ರಾಜೀವ್‌ ರಂಜನ್‌ ಸಿಂಗ್‌ ಅಲಿಯಾಸ್‌ ಲಾಲನ್‌ ಸಿಂಗ್‌ (ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್‌ ರಾಜ್‌), ಗೌರವಾನ್ವಿತ ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ), ಗೌರವಾನ್ವಿತ ಸಹಾಯಕ ಸಚಿವರಾದ ಶ್ರೀ ಕೃಷ್ಣ ಪಾಲ್‌ ಗುರ್ಜರ್‌ (ಸಹಕಾರ), ಗೌರವಾನ್ವಿತ ರಾಜ್ಯ ಸಚಿವರಾದ ಶ್ರೀ ಮುರಳೀಧರ್‌ ಮೊಹೋಲ್‌ (ಸಹಕಾರ ಮತ್ತು ನಾಗರಿಕ ವಿಮಾನಯಾನ), ಗೌರವಾನ್ವಿತ ರಾಜ್ಯ ಸಚಿವರಾದ ಪ್ರೊ.ಎಸ್‌.ಪಿ. ಸಿಂಗ್‌ ಬಘೇಲ್‌ (ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್‌ ರಾಜ್‌), ಗೌರವಾನ್ವಿತ ರಾಜ್ಯ ಸಚಿವರಾದ ಶ್ರೀ ಜಾರ್ಜ್‌ ಕುರಿಯನ್‌ (ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳು), ಡಾ ಆಶಿಶ್‌ ಕುಮಾರ್‌ ಭೂತಾನಿ, ಸಹಕಾರ ಸಚಿವಾಲಯದ ಕಾರ್ಯದರ್ಶಿ, ಭಾರತ ಸರ್ಕಾರ, ಶ್ರೀ ನರೇಶ್‌ ಪಾಲ್‌ ಗಂಗ್ವಾರ್‌, ಕಾರ್ಯದರ್ಶಿ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ, ಭಾರತ ಸರ್ಕಾರ, ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಅನಿಲ್‌ ಮಲಿಕ್‌, ಎನ್‌ ಡಿಡಿಬಿ ಅಧ್ಯಕ್ಷ  ಡಾ. ಮೀನೇಶ್‌ ಶಾ ಮತ್ತು ಇತರ ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಸಮಾವೇಶದ ಸಮಯದಲ್ಲಿ, ಗೌರವಾನ್ವಿತ ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವರು ಛತ್ತೀಸ್‌ಗಢದ ಎಸ್‌ಎಐಎಲ್‌-ಭಿಲಾಯ್‌ ಉಕ್ಕು ಸ್ಥಾವರದ ಸಿಎಸ್‌ಆರ್‌ ಉಪಕ್ರಮದ ಅಡಿಯಲ್ಲಿ ಗಿಫ್ಟ್‌ ಮಿಲ್ಕ್‌ ಕಾರ್ಯಕ್ರಮದ ಮೂರನೇ ಹಂತಕ್ಕೆ ಚಾಲನೆ ನೀಡಲಿದ್ದಾರೆ. ಈ ಉಪಕ್ರಮದ ಅಡಿಯಲ್ಲಿ, ಭಿಲಾಯ್‌ ಉಕ್ಕು ಸ್ಥಾವರದ ಗಣಿಗಾರಿಕೆ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿಅಧ್ಯಯನ ಮಾಡುತ್ತಿರುವ ಸುಮಾರು 4,000 ಮಕ್ಕಳು ಪ್ರಯೋಜನ ಪಡೆಯುತ್ತಾರೆ. ಕಾರ್ಯಕ್ರಮದಡಿಯಲ್ಲಿ, ವಿಟಮಿನ್‌ ಎ ಮತ್ತು ಡಿ ಹೊಂದಿರುವ ಸುವಾಸನೆಯುಕ್ತ ಹಾಲನ್ನು ಎನ್‌ಡಿಡಿಬಿ ನಿರ್ವಹಿಸುವ ಛತ್ತೀಸ್‌ಗಢ ಹಾಲು ಒಕ್ಕೂಟದ ಮೂಲಕ ಸರಬರಾಜು ಮಾಡಲಾಗುತ್ತದೆ.

ಇದಲ್ಲದೆ, ಶ್ರೀ ಅಮಿತ್‌ ಶಾ ಅವರು ಐಡಿಬಿಐ ಬ್ಯಾಂಕಿನ ಸಿಎಸ್‌ಆರ್‌ ಉಪಕ್ರಮದ ಅಡಿಯಲ್ಲಿ ಶಿಶು ಸಂಜೀವಿನಿ ಕಾರ್ಯಕ್ರಮಕ್ಕೂ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮವು ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳಲ್ಲಿಅಧ್ಯಯನ ಮಾಡುತ್ತಿರುವ ಸುಮಾರು 3,000 ಮಕ್ಕಳಿಗೆ ಪೌಷ್ಠಿಕಾಂಶದ ಬೆಂಬಲವನ್ನು ಒದಗಿಸುತ್ತದೆ. ಶಿಶು ಸಂಜೀವಿನಿ ಎನ್‌ಡಿಡಿಬಿ ಅಭಿವೃದ್ಧಿಪಡಿಸಿದ ಶಕ್ತಿ-ದಟ್ಟವಾದ, ಅರೆ-ಘನ, ತಿನ್ನಲು ಸಿದ್ಧವಾದ ಬಲವರ್ಧಿತ ಪೌಷ್ಠಿಕಾಂಶದ ಪೂರಕವಾಗಿದ್ದು, ಇದನ್ನು ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯಲ್ಲಿರುವ ಭಂಡಾರ ಹಾಲು ಒಕ್ಕೂಟವು ತಯಾರಿಸುತ್ತದೆ.

ಈ ರಾಷ್ಟ್ರೀಯ ಸಮಾವೇಶವು ಭಾರತ ಸರ್ಕಾರದ ವಿವಿಧ ಸಚಿವಾಲಯಗಳ ಪ್ರತಿನಿಧಿಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು / ಸಾರ್ವಜನಿಕ ವಲಯದ ಉದ್ಯಮಗಳು, ಡೈರಿ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು ಮತ್ತು ಸಿಇಒಗಳು, ಹೆಸರಾಂತ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಮತ್ತು ಫಲಾನುಭವಿ ಸಂಸ್ಥೆಗಳ (ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳು) ಪ್ರತಿನಿಧಿಗಳಿಗೆ ಸಾಮಾನ್ಯ ವೇದಿಕೆಯನ್ನು ಒದಗಿಸುತ್ತದೆ. ಮಕ್ಕಳಲ್ಲಿಅಪೌಷ್ಟಿಕತೆಯನ್ನು ಎದುರಿಸಲು ಸಹಯೋಗಿ, ನವೀನ ಮತ್ತು ಸುಸ್ಥಿರ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುವುದು ಸಮಾವೇಶದ ಉದ್ದೇಶವಾಗಿದೆ.

ಉದ್ಘಾಟನಾ ಅಧಿವೇಶನದ ನಂತರ, ‘ಪೌಷ್ಠಿಕಾಂಶ ಮತ್ತು ಆರೋಗ್ಯ: ಸಾರ್ವಜನಿಕ ಮಧ್ಯಸ್ಥಿಕೆಗಳ ಮೂಲಕ ಅಪೌಷ್ಟಿಕತೆ ನಿರ್ಮೂಲನೆ’ ಮತ್ತು ‘ಪೌಷ್ಟಿಕಾಂಶ ಭದ್ರತೆಗಾಗಿ ಕಾರ್ಪೊರೇಟ್‌-ಸಹಕಾರಿ ಸಹಯೋಗ’ ಎಂಬ ಎರಡು ವಿಷಯಗಳ ಮೇಲೆ ತಾಂತ್ರಿಕ ಅಧಿವೇಶನಗಳನ್ನು ಆಯೋಜಿಸಲಾಗುವುದು. ದೇಶಾದ್ಯಂತದ ಸುಮಾರು 1,200 ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

 

*****


(रिलीज़ आईडी: 2211653) आगंतुक पटल : 12
इस विज्ञप्ति को इन भाषाओं में पढ़ें: English , Urdu , हिन्दी , Assamese , Bengali , Gujarati , Tamil