ಪ್ರಧಾನ ಮಂತ್ರಿಯವರ ಕಛೇರಿ
ಸೃಜನಶೀಲತೆ, ಸುಸ್ಥಿರತೆ ಮತ್ತು ಸಮುದಾಯ ಮನೋಭಾವಗಳ ಆಚರಣೆಯಾಗಿದೆ ಎಂದು ಅಹಮದಾಬಾದ್ ಪುಷ್ಪ ಪ್ರದರ್ಶನವನ್ನು ಶ್ಲಾಘಿಸಿದ ಪ್ರಧಾನಮಂತ್ರಿ
प्रविष्टि तिथि:
02 JAN 2026 3:45PM by PIB Bengaluru
ಸೃಜನಶೀಲತೆ, ಸುಸ್ಥಿರತೆ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಒಟ್ಟುಗೂಡಿಸುವಲ್ಲಿ ಅಹಮದಾಬಾದ್ ಪುಷ್ಪ ಪ್ರದರ್ಶನದ ಗಮನಾರ್ಹ ಪಾತ್ರಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಈ ಕಾರ್ಯಕ್ರಮವು ನಗರದ ವೈವಿದ್ಯಮಯ ಚೈತನ್ಯ ಮತ್ತು ಪ್ರಕೃತಿಯ ಮೇಲಿನ ನಿರಂತರ ಪ್ರೀತಿಯನ್ನು ಸುಂದರವಾಗಿ ಪ್ರದರ್ಶಿಸುತ್ತದೆ ಎಂದು ಹೇಳಿದ್ದಾರೆ.
ಪ್ರದರ್ಶನದ ಮಹತ್ವವನ್ನು ಉಲ್ಲೇಖಿಸುತ್ತಾ, ಪ್ರಧಾನಮಂತ್ರಿಯವರು ಕಳೆದ ಹಲವು ವರ್ಷಗಳಲ್ಲಿ ಅದು ಹೇಗೆ ಗಾತ್ರ, ಪ್ರಮಾಣದಲ್ಲಿ ಮತ್ತು ಪರಿಕಲ್ಪನೆಯಲ್ಲಿ ಬೆಳೆದಿದೆ, ಅಹಮದಾಬಾದ್ ನ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಪರಿಸರ ಪ್ರಜ್ಞೆಯ ಸಂಕೇತವಾಗಿದೆ ಎಂಬುದರ ಕುರಿತು ವಿವರಿಸಿದರು.
ಗುಜರಾತ್ ಮುಖ್ಯಮಂತ್ರಿಯವರ ಎಕ್ಸ್ ಖಾತೆಯ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:
"ಅಹಮದಾಬಾದ್ ಪುಷ್ಪ ಪ್ರದರ್ಶನವು ಸೃಜನಶೀಲತೆ, ಸುಸ್ಥಿರತೆ ಮತ್ತು ಸಮುದಾಯ ಭಾಗವಹಿಸುವಿಕೆಯನ್ನು ಒಟ್ಟುಗೂಡಿಸುತ್ತದೆ, ಅದೇ ಸಮಯದಲ್ಲಿ ನಗರದ ವೈವಿದ್ಯಮಯ ಚೈತನ್ಯ ಮತ್ತು ಪ್ರಕೃತಿಯ ಮೇಲಿನ ಪ್ರೀತಿಯನ್ನು ಸುಂದರವಾಗಿ ಪ್ರದರ್ಶಿಸುತ್ತದೆ. ಕಳೆದ ಹಲವು ವರ್ಷಗಳಲ್ಲಿ ಈ ಪುಷ್ಪ ಪ್ರದರ್ಶನವು ಹೇಗೆ ಗಾತ್ರ, ಪ್ರಮಾಣದಲ್ಲಿ ಮತ್ತು ಪರಿಕಲ್ಪನೆಯಲ್ಲಿ ಬೆಳೆದಿದೆ ಎಂಬುದು ಶ್ಲಾಘನೀಯ ಸಂಗತಿಯಾಗಿದೆ."
“अहमदाबाद का फ्लावर शो हर किसी का मन मोह लेने वाला है! यह क्रिएटिविटी के साथ-साथ जन भागीदारी का अद्भुत उदाहरण है। इससे शहर की जीवंत भावना के साथ ही प्रकृति से उसका लगाव भी खूबसूरती से प्रदर्शित हो रहा है। यहां यह देखना भी उत्साह से भर देता है कि कैसे इस फ्लावर शो की भव्यता और कल्पनाशीलता हर साल निरंतर बढ़ती जा रही है। इस फ्लावर शो की कुछ आकर्षक तस्वीरें…”
*****
(रिलीज़ आईडी: 2210828)
आगंतुक पटल : 16
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Bengali-TR
,
Manipuri
,
Punjabi
,
Gujarati
,
Tamil
,
Telugu
,
Malayalam