ಪ್ರಧಾನ ಮಂತ್ರಿಯವರ ಕಛೇರಿ
ಮನ್ನತು ಪದ್ಮನಾಭನ್ ಅವರ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಮಂತ್ರಿ ಗೌರವ ನಮನ
प्रविष्टि तिथि:
02 JAN 2026 9:40AM by PIB Bengaluru
ಮನ್ನತು ಪದ್ಮನಾಭನ್ ಅವರ ಜನ್ಮ ವಾರ್ಷಿಕೋತ್ಸವದ ದಿನವಾದ ಇಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಪದ್ಮನಾಭನ್ ಅವರು ಸಮಾಜಕ್ಕೆ ಸೇವೆ ಸಲ್ಲಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಉನ್ನತ ವ್ಯಕ್ತಿಯಾಗಿದ್ದರೆಂದು ಗೌರವದಿಂದ ಸ್ಮರಿಸಿದ್ದಾರೆ.
ಮನ್ನತು ಪದ್ಮನಾಭನ್ ಅವರು ಘನತೆ, ಸಮಾನತೆ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ನಿಜವಾದ ಪ್ರಗತಿ ಬೇರೂರಿದೆ ಎಂದು ನಂಬಿದ್ದ ದಾರ್ಶನಿಕ ಎಂದು ಪ್ರಧಾನಮಂತ್ರಿ ಬಣ್ಣಿಸಿದರು. ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ಸಬಲೀಕರಣದಂತಹ ಕ್ಷೇತ್ರಗಳಲ್ಲಿ ಪದ್ಮನಾಭನ್ ಅವರ ಮುಂಚೂಣಿ ಪ್ರಯತ್ನಗಳನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿ, ಅವು ರಾಷ್ಟ್ರಕ್ಕೆ ದೊಡ್ಡ ಪ್ರೇರಣೆಯ ಮೂಲವಾಗಿ ಉಳಿದಿವೆ ಎಂದು ಹೇಳಿದರು.
ಮನ್ನತು ಪದ್ಮನಾಭನ್ ಅವರ ಆದರ್ಶಗಳು ನ್ಯಾಯದಿಂದ ಕೂಡಿದ, ಕರುಣಾಮಯಿ ಮತ್ತು ಸಾಮರಸ್ಯದ ಸಮಾಜವನ್ನು ನಿರ್ಮಿಸುವತ್ತ ನಮಗೆ ಮಾರ್ಗದರ್ಶನ ನೀಡುತ್ತಲೇ ಇವೆ ಎಂದು ಶ್ರೀ ಮೋದಿ ಹೇಳಿದರು.
ಶ್ರೀ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಮನ್ನತು ಪದ್ಮನಾಭನ್ ಅವರ ಜನ್ಮ ವಾರ್ಷಿಕೋತ್ಸವಾದ ಇಂದು ಸಮಾಜಕ್ಕೆ ಸೇವೆ ಸಲ್ಲಿಸಲು ಜೀವನವನ್ನು ಮುಡಿಪಾಗಿಟ್ಟಿದ್ದ ಒಬ್ಬ ಉನ್ನತ ವ್ಯಕ್ತಿತ್ವಯನ್ನು ನಾವು ಗೌರವದಿಂದ ಸ್ಮರಿಸುತ್ತೇವೆ. ನಿಜವಾದ ಪ್ರಗತಿಯು ಘನತೆ, ಸಮಾನತೆ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಬೇರೂರಿದೆ ಎಂದು ನಂಬಿದ್ದ ಅವರು ದಾರ್ಶನಿಕರಾಗಿದ್ದರು. ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣದಂತಹ ಕ್ಷೇತ್ರಗಳಲ್ಲಿ ಅವರ ಪ್ರಯತ್ನಗಳು ಬಹಳ ಪ್ರೇರಣಾದಾಯಕವಾಗಿವೆ. ಅವರ ಆದರ್ಶಗಳು ನ್ಯಾಯಯುತ, ಕರುಣಾಮಯಿ ಮತ್ತು ಸಾಮರಸ್ಯದ ಸಮಾಜದತ್ತ ನಮಗೆ ಸದಾ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ.’’
“മന്നത്ത് പത്മനാഭന്റെ ജന്മവാർഷിക ദിനത്തിൽ, സാമൂഹ്യ സേവനത്തിനായി ജീവിതം സമർപ്പിച്ച ഒരു മഹദ് വ്യക്തിത്വത്തെ അങ്ങേയറ്റം ആദരവോടെ നാം സ്മരിക്കുകയാണ്. ആത്മാഭിമാനം, സമത്വം, സാമൂഹിക പരിഷ്കരണം എന്നിവയിൽ വേരൂന്നിയതാണ് യഥാർത്ഥ പുരോഗതി എന്ന് വിശ്വസിച്ച ക്രാന്തദർശിയായിരുന്നു അദ്ദേഹം. ആരോഗ്യം, വിദ്യാഭ്യാസം, സ്ത്രീ ശാക്തീകരണം തുടങ്ങിയ മേഖലകളിലെ അദ്ദേഹത്തിന്റെ അതുല്യമായ സംഭാവനകൾ പ്രചോദനാത്മകമാണ്. നീതിയും അനുകമ്പയും ഐക്യവും നിറഞ്ഞ ഒരു സമൂഹത്തിന്റെ സൃഷ്ടിക്കായുള്ള പ്രയാണത്തിൽ അദ്ദേഹത്തിന്റെ ദർശനങ്ങൾ നമ്മെ എക്കാലവും നയിക്കുന്നു.”
*****
(रिलीज़ आईडी: 2210717)
आगंतुक पटल : 6
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Gujarati
,
Tamil
,
Telugu
,
Malayalam