ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವದ ನಿಮಿತ್ತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಶುಭ ಹಾರೈಕೆ

प्रविष्टि तिथि: 31 DEC 2025 1:51PM by PIB Bengaluru

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರ ಮತ್ತು ಪ್ರಪಂಚದಾದ್ಯಂತದ ಭಕ್ತರಿಗೆ ಹೃತ್ಪೂರ್ವಕ ಶುಭಾಶಯ ಕೋರಿದ್ದಾರೆ.

ಭಾರತದ ನಂಬಿಕೆ ಮತ್ತು ಸಾಂಸ್ಕೃತಿಕ ಪರಂಪರೆಯ ದೈವಿಕ ಆಚರಣೆ ಎಂದು ಈ ವಾರ್ಷಿಕೋತ್ಸವವನ್ನು ಶ್ರೀ ಮೋದಿ ಅವರು ಬಣ್ಣಿಸಿದ್ದಾರೆ. ದೇಶ - ವಿದೇಶಗಳಲ್ಲಿರುವ ಅಸಂಖ್ಯಾತ ಭಕ್ತರ ಪರವಾಗಿ ಅವರು ಭಗವಾನ್ ಶ್ರೀರಾಮನ ಚರಣಕಮಲಗಳಿಗೆ ನಮಸ್ಕರಿಸುತ್ತಾ ಎಲ್ಲಾ ದೇಶವಾಸಿಗಳಿಗೂ ಹೃತ್ಪೂರ್ವಕ ಶುಭಾಶಯ ಕೋರಿದ್ದಾರೆ.

ಶತಮಾನಗಳಷ್ಟು ಹಳೆಯದಾದ ಸಂಕಲ್ಪವು ಐತಿಹಾಸಿಕವಾಗಿ ಸಾಕಾರಗೊಂಡಿರುವುದನ್ನು ಸ್ಮರಿಸಿರುವ ಪ್ರಧಾನಮಂತ್ರಿಗಳು, ಭಗವಾನ್ ಶ್ರೀ ರಾಮನ ಕೃಪೆ ಮತ್ತು ಆಶೀರ್ವಾದದಿಂದ ಐದು ಶತಮಾನಗಳ ಲಕ್ಷಾಂತರ ಭಕ್ತರ ಪವಿತ್ರ ಆಕಾಂಕ್ಷೆಗಳು ನನಸಾಗಿವೆ ಎಂದು ಹೇಳಿದ್ದಾರೆ.

ರಾಮಲಲ್ಲಾ ಈಗ ಮತ್ತೊಮ್ಮೆ ತನ್ನ ಭವ್ಯ ಸ್ಥಳದಲ್ಲಿ ನೆಲೆಸಿದ್ದು ಈ ವರ್ಷ ಅಯೋಧ್ಯೆಯು ಧರ್ಮ ಧ್ವಜ ಮತ್ತು ಪ್ರತಿಷ್ಢಿತ ರಾಮಲಲ್ಲಾ ಪ್ರತಿಷ್ಠಾ ದ್ವಾದಶಿಗೆ ಸಾಕ್ಷಿಯಾಗಿದೆ. ಕಳೆದ ತಿಂಗಳು ಈ ಧರ್ಮ ಧ್ವಜಾರೋಹಣವನ್ನು ನೆರವೇರಿಸಿದುದು ತಮ್ಮ ಸೌಭಾಗ್ಯ ಎಂದು ಪ್ರಧಾನಮಂತ್ರಿ ತಮ್ಮ ಅದೃಷ್ಟದ ಬಗ್ಗೆ ಉದ್ಗರಿಸಿದ್ದಾರೆ.

ಶ್ರೀ ಮೋದಿ ಅವರ ಎಕ್ಸ್ ಥ್ರೆಡ್ ಪೋಸ್ಟ್ ಗಳು ಹೀಗಿವೆ:

"अयोध्या जी की पावन धरा पर आज रामलला की प्राण-प्रतिष्ठा की द्वितीय वर्षगांठ मनाई जा रही है। ये वर्षगांठ हमारी आस्था और संस्कारों का एक दिव्य उत्सव है। इस पावन-पुनीत अवसर पर देश-विदेश के सभी रामभक्तों की ओर से प्रभु श्री राम के चरणों में मेरा कोटि-कोटि नमन और वंदन! समस्त देशवासियों को मेरी अनंत शुभकामनाएं।  

"भगवान श्री राम की असीम कृपा और आशीर्वाद से असंख्य रामभक्तों का पांच सदियों का संकल्प साकार हुआ है। आज रामलला अपने भव्य धाम में पुन: विराजित हैं और इस वर्ष अयोध्या की धर्म ध्वजा, रामलला की प्रतिष्ठा द्वादशी की साक्षी बन रही है। ये मेरा सौभाग्य है कि पिछले महीने मुझे इस ध्वजा की पुण्य स्थापना का सुअवसर मिला।"      

"मेरी कामना है कि मर्यादा पुरुषोत्तम की प्रेरणा हर देशवासी के हृदय में सेवा, समर्पण और करुणा की भावना को और प्रगाढ़ करे, जो समृद्ध और आत्मनिर्भर भारत के निर्माण का सशक्त आधार भी बने।
जय सियाराम!"

 

*****


(रिलीज़ आईडी: 2210339) आगंतुक पटल : 9
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Bengali-TR , Manipuri , Punjabi , Gujarati , Tamil , Telugu , Malayalam