ಜಲ ಶಕ್ತಿ ಸಚಿವಾಲಯ
ಜಲ ಸಂಚಯ್ ಜನ್ ಭಾಗೀದಾರಿ (ಜೆ.ಎಸ್.ಜೆ.ಬಿ) ಪ್ರಶಸ್ತಿಗಳ ಮೌಲ್ಯಮಾಪನ ಪ್ರಕ್ರಿಯೆ ಮತ್ತು ತಪ್ಪು ಮಾಹಿತಿಯನ್ನು ನಿರಾಕರಿಸುವ ಬಗ್ಗೆ ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟನೆ
प्रविष्टि तिथि:
30 DEC 2025 11:28PM by PIB Bengaluru
ಕೇಂದ್ರ ಜಲಶಕ್ತಿ ಸಚಿವಾಲಯವು ಸೆಪ್ಟೆಂಬರ್ 6, 2024 ರಂದು ಪ್ರಾರಂಭಿಸಿದ ಜಲ ಸಂಚಯ್ ಜನ್ ಭಾಗೀದಾರಿ (ಜೆ.ಎಸ್.ಜೆ.ಬಿ) ಉಪಕ್ರಮವು ನೀರಿನ ಸಂರಕ್ಷಣೆಯನ್ನು ಸಾಮೂಹಿಕ ಚಳವಳಿಯನ್ನಾಗಿ ಪರಿವರ್ತಿಸಲು ವಿನ್ಯಾಸಗೊಳಿಸಲಾದ ಅಭಿಯಾನವಾಗಿದೆ. ಜಲ ಸಂಚಯ್ ಜನ್ ಭಾಗೀದಾರಿ (ಜೆ.ಎಸ್.ಜೆ.ಬಿ) ಉಪಕ್ರಮವು ಭಾರತದಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವೈಜ್ಞಾನಿಕ ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ವಿಧಾನಗಳ ಸಂಯೋಜನೆ ಬಳಸಿಕೊಂಡು, ಮೇಲ್ಛಾವಣಿಯ ಮಳೆನೀರು ಕೊಯ್ಲು ವ್ಯವಸ್ಥೆಗಳು, ಜಲ ಮರುಪೂರ್ಣ/ನೀರು ತುಂಬಿಸುವ ಹೊಂಡಗಳು ಮತ್ತು ನಿಷ್ಕ್ರಿಯ ಕೊಳವೆ ಬಾವಿಗಳ ಪುನಶ್ಚೇತನ ಹಾಗೂ ಪುನರುಜ್ಜೀವನ ಮುಂತಾದ ವ್ಯವಸ್ಥೆಗಳ ಮೂಲಕ, ಕಡಿಮೆ ವೆಚ್ಚದ ಕೃತಕ ನೀರಿನ ಮರುಪೂರ್ಣ ರಚನೆಗಳನ್ನು ನಿರ್ಮಿಸಲು ಸಮುದಾಯ ಮತ್ತು ಖಾಸಗಿ ಪಾಲುದಾರರನ್ನು ಸಜ್ಜುಗೊಳಿಸುವ ಇಡೀ ಸಮಾಜದ ವಿಧಾನವನ್ನು ಅನುಸರಿಸುತ್ತದೆ. ಇದು ಲೋಕೋಪಕಾರಿ ಕೊಡುಗೆ, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕೊಡುಗೆ, ಸಮುದಾಯ ಭಾಗವಹಿಸುವಿಕೆ ಮೂಲಕ ಮತ್ತು ಸ್ವಯಂಪ್ರೇರಿತ ಕಾರ್ಮಿಕರನ್ನು ಪ್ರೋತ್ಸಾಹಿಸುತ್ತದೆ. ಮನ್ರೇಗಾ, ಜಿಲ್ಲಾ ಖನಿಜ ನಿಧಿ, ಕಾಂಪಾ ನಿಧಿಗಳು, ಸಮುದಾಯ ಭಾಗವಹಿಸುವಿಕೆ, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಮತ್ತು ಲೋಕೋಪಕಾರದಂತಹ ಅಸ್ತಿತ್ವದಲ್ಲಿರುವ ಯೋಜನೆಗಳ ಒಮ್ಮುಖದ ಏಕೀಕೃತ ಸಹಭಾಗಿತ್ವದ ಮೂಲಕ ರಚನೆಗಳನ್ನು ನಿರ್ಮಿಸಲಾಗಿದೆ. ಹೀಗಾಗಿ, ಈ ಯೋಜನೆಯು ಸ್ಥಳೀಯ ಆಡಳಿತಗಳು ಕಾರ್ಯಚಟುವಟಿಕೆಗಳ ಮೂಲಕ ಸ್ಥಳೀಯವಾಗಿ ಕ್ಷೇತ್ರ ಕೇಂದ್ರಿತವಾಗಿ ವರ್ತಿಸುತ್ತದೆ.
ಜಿ.ಐ.ಎಸ್. ನಿರ್ದೇಶಾಂಕಗಳು, ಜಿಯೋ-ಟ್ಯಾಗ್ ಮಾಡಲಾದ ಛಾಯಾಚಿತ್ರಗಳು ಮತ್ತು ಹಣಕಾಸಿನ ವಿವರಗಳನ್ನು ಬಳಸಿಕೊಂಡು ಪ್ರತಿಯೊಂದು ಮರುಪೂರ್ಣ ರಚನೆಯನ್ನು ಅನುವರ್ತಿ ಮಾಡುವ ಆನ್ಲೈನ್ ವೇದಿಕೆಯಾದ “ಜೆ.ಎಸ್.ಜೆ.ಬಿ ಡ್ಯಾಶ್ಬೋರ್ಡ್” ಮೂಲಕ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಜಿಲ್ಲೆಗಳು ಸಲ್ಲಿಸಿದ ನಮೂದುಗಳನ್ನು ಜಿಲ್ಲಾಧಿಕಾರಿಗಳು ಮತ್ತು ಸಚಿವಾಲಯವು ಬಹು ಹಂತದ ಪರಿಶೀಲನೆಗೆ ಒಳಪಡಿಸುತ್ತದೆ ಮತ್ತು ಗುಣಮಟ್ಟ ಮತ್ತು ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ ಒಂದು ಪ್ರತಿಶತ ನಮೂದು/ಅರ್ಜಿ/ಮಾಹಿತಿ/ಕೃತಿಗಳನ್ನು ಸ್ವತಂತ್ರವಾಗಿ ಕ್ಷೇತ್ರ ಪರಿಶೀಲನೆ ಮಾಡಲಾಗುತ್ತದೆ ಮತ್ತು ಉಳಿದ 99% ಪ್ರತಿಶತವನ್ನು ಕುಶಲತೆಯನ್ನು ಪರಿಶೀಲಿಸಲು ಮೀಸಲಾಗಿರುವ ವಿಶೇಷ ಕೇಂದ್ರಗಳಲ್ಲಿ ಪರಿಶೀಲಿಸಲಾಗುತ್ತದೆ. ಈ ಪರಿಶೀಲಿಸಿದ ನಮೂದುಗಳ ಆಧಾರದ ಮೇಲೆ, ಜಲಶಕ್ತಿ ಸಚಿವಾಲಯವು ನವೆಂಬರ್ 18, 2025 ರಂದು ವಿಜ್ಞಾನ ಭವನದಲ್ಲಿ ಮೊದಲ ಜೆಎಸ್‍ಜೆಬಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದೆ. ಜಿಲ್ಲೆಗಳು, ಸರ್ಕಾರೇತರ ಸಂಸ್ಥೆಗಳು, ವೈಯಕ್ತಿಕ ಲೋಕೋಪಕಾರಿಗಳು ಮತ್ತು ಕೈಗಾರಿಕಾ ಸಂಘಗಳನ್ನು ಅನುಕರಣೀಯ ಜಲ ಸಂರಕ್ಷಣಾ ಪ್ರಯತ್ನಗಳಿಗಾಗಿ, ಈ ಜೆಎಸ್‍ಜೆಬಿ ಪ್ರಶಸ್ತಿಗಾಗಿ ಗುರುತಿಸಲಾಗುತ್ತದೆ. ಈ ಪ್ರಶಸ್ತಿಗಾಗಿ ನೀಡಲಾಗುವ ಪ್ರೋತ್ಸಾಹಕ ಮೊತ್ತವನ್ನು ನೀರಿನ ಸಂರಕ್ಷಣಾ ಚಟುವಟಿಕೆಗಳಲ್ಲಿ ಮರುಹೂಡಿಕೆ ಮಾಡಬೇಕು, ಇದರಿಂದಾಗಿ ಮಿಷನ್ ನ ಉದ್ದೇಶಗಳನ್ನು ಬಲಪಡಿಸುತ್ತದೆ.
ಇತ್ತೀಚೆಗೆ, ಕೆಲವು ಸಾಮಾಜಿಕ ಮಾಧ್ಯಮ ಸಂದೇಶಗಳು, ವರದಿಗಳು, ಸಾಮಾಜಿಕ ಪೋಸ್ಟ್ ಗಳು ಕೃತಕ ಬುದ್ಧಿಮತ್ತೆ ರಚಿಸಿದ ಅಥವಾ ನಕಲಿ ಚಿತ್ರಗಳು, ಆಮಂತ್ರಣ ಪತ್ರಗಳನ್ನು ಅಪ್ಲೋಡ್ ಮಾಡುವ ಮೂಲಕ ಅಥವಾ ಸಣ್ಣ ಹೊಂಡಗಳನ್ನು ದೊಡ್ಡ ಜಲಮೂಲಗಳಾಗಿ ಚಿತ್ರಿಸುವ ಮೂಲಕ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿದೆ. ಕೆಲವು ಪೋಸ್ಟಗಳು ಕ್ಯಾಚ್ ದಿ ರೇನ್ (ಸಿಟಿಆರ್) ಪೋರ್ಟಲ್ ನಿಂದ ಸ್ಕ್ರೀನ್ ಶಾಟ್ ಗಳು ಮತ್ತು ಹಳೆಯ ಸಂಬಂಧವಿಲ್ಲದ ಚಿತ್ರಗಳನ್ನು ಸಹ ಪ್ರಸಾರ ಮಾಡಿ ಪ್ರಶಸ್ತಿಗಳು ಈ ಚಿತ್ರಗಳನ್ನು ಆಧರಿಸಿವೆ ಎಂದು ಸೂಚಿಸಿವೆ. ಈ ಆರೋಪಗಳು ವಾಸ್ತವಿಕವಾಗಿ ತಪ್ಪಾಗಿದ್ದು ಸಾರ್ವಜನಿಕರನ್ನು ದಾರಿತಪ್ಪಿಸುತ್ತಿವೆ. ಸುಳ್ಳು ಸುದ್ದಿ, ತಪ್ಪು ಮಾಹಿತಿಯಾಗಿದೆ. ಜೆಎಸ್‍ಜೆಬಿ ಪ್ರಶಸ್ತಿಗಳ ಮೌಲ್ಯಮಾಪನವನ್ನು ಜೆಎಸ್‍ಜೆಬಿ ಡ್ಯಾಶ್ಬೋರ್ಡ್ ನಲ್ಲಿ ಲಭ್ಯವಿರುವ ನಮೂದುಗಳ ಆಧಾರದ ಮೇಲೆ ಮಾತ್ರ ನಡೆಸಲಾಗುತ್ತದೆ.
ಸಿಟಿಆರ್ ಪೋರ್ಟಲ್ ಸಂಪೂರ್ಣವಾಗಿ ಪ್ರತ್ಯೇಕ ವೇದಿಕೆಯಾಗಿದ್ದು, ಅಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳನ್ನು ಪ್ರಶಸ್ತಿಗಳಿಗೆ ಪರಿಗಣಿಸಲಾಗುವುದಿಲ್ಲ. ಸಿಟಿಆರ್ ಪೋರ್ಟಲ್ ನಲ್ಲಿ ಕಡಿಮೆ ಸಂಖ್ಯೆಯ ಕೃತಕ ಬುದ್ಧಿಮತ್ತೆ(ಎಐ) ರಚಿತ ಅಥವಾ ನಕಲಿ ಚಿತ್ರಗಳು ಕೂಡಾ ಪತ್ತೆಯಾಗಿದ್ದರೂ, ಅವುಗಳು ಜೆಎಸ್‍ಜೆಬಿ ಪ್ರಶಸ್ತಿ ಪ್ರಕ್ರಿಯೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಸಂಬಂಧಪಟ್ಟ ಜಿಲ್ಲೆಗಳಿಂದ ಅವುಗಳನ್ನು ನಿರ್ವಹಿಸಲಾಗಿದೆ. ಪ್ರಶ್ನಿಸಲಾದ ಛಾಯಾಚಿತ್ರಗಳು ಸಿಟಿಆರ್ ಪೋರ್ಟಲ್ ನಿಂದ ಬಂದಿದ್ದು ಮತ್ತು ಅವು ಎಂದಿಗೂ ಪ್ರಶಸ್ತಿ ಸಲ್ಲಿಕೆಯ ಭಾಗವಾಗಿರಲಿಲ್ಲ ಎಂದು ಜಿಲ್ಲಾಡಳಿತಗಳು ಸ್ಪಷ್ಟಪಡಿಸಿವೆ. ರಾಷ್ಟ್ರೀಯ ಜಲ ಮಿಷನ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ಚಿತ್ರಗಳನ್ನು ಸಹ ಪರಿಶೀಲಿಸಿದೆ ಮತ್ತು ಅವು ಜೆಎಸ್‍ಜೆಬಿ ಮಾಹಿತಿ/ಕೃತಿಗಳಿಗೆ ಸಂಬಂಧಿಸಿಲ್ಲ ಎಂದು ದೃಢಪಡಿಸಿದೆ.
ಆದ್ದರಿಂದ, ಜೆಎಸ್‍ಜೆಬಿ ಪ್ರಶಸ್ತಿಗಳಲ್ಲಿ ಚಿತ್ರಗಳ ಕುಶಲತೆ ಅಥವಾ ದುರುಪಯೋಗದ ಹಕ್ಕುಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯವು ಸ್ಪಷ್ಟವಾಗಿ ತಿರಸ್ಕರಿಸುತ್ತದೆ. ಇಂತಹ ತಪ್ಪು ಮಾಹಿತಿಯು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತದೆ, ಕ್ಷೇತ್ರ ಅಧಿಕಾರಿಗಳು ಮತ್ತು ಸಮುದಾಯ ಸ್ವಯಂಸೇವಕರ ಮನೋಬಲವನ್ನು ಕುಗ್ಗಿಸುತ್ತದೆ ಮತ್ತು ಭಾರತದ ನೀರಿನ ಭದ್ರತೆಯನ್ನು ಹೆಚ್ಚಿಸುವ ಪ್ರಮುಖ ರಾಷ್ಟ್ರೀಯ ಪ್ರಯತ್ನವನ್ನು ದುರ್ಬಲಗೊಳಿಸುತ್ತದೆ. ಕೇಂದ್ರ ಜಲಶಕ್ತಿ ಸಚಿವಾಲಯವು ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಬದ್ಧವಾಗಿದೆ, ಕಾಮಗಾರಿಗಳ ಕಠಿಣ ಪರಿಶೀಲನೆ, ನೈಜತೆ, ವಾಸ್ತವಿಕತೆ ಗುರುತಿಸುತ್ತದೆ ಮತ್ತು ಅಕ್ರಮಗಳು ಪತ್ತೆಯಾದಲ್ಲೆಲ್ಲಾ ಸರಿಪಡಿಸುವ ಕ್ರಮಕ್ಕೆ ಬದ್ಧವಾಗಿದೆ.
*****
(रिलीज़ आईडी: 2210003)
आगंतुक पटल : 33