ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಜಾಗತಿಕ ತರಂಗಾಂತರ ಮಾನದಂಡಗಳಿಗೆ ಅನುಗುಣವಾಗಿ ಭಾರತವನ್ನು ಸರಿಹೊಂದಿಸಲು ದೂರಸಂಪರ್ಕ ಇಲಾಖೆಯಿಂದ 2025ರ ಡಿಸೆಂಬರ್ 30 ರಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ತರಂಗಗಳ ಹಂಚಿಕೆ ಯೋಜನೆ 2025 (ಎನ್.ಎಫ್.ಎ.ಪಿ - 2025) ಬಿಡುಗಡೆ
5ಜಿ, ಸುಧಾರಿತ 5ಜಿ, ಭವಿಷ್ಯದ 6ಜಿ, ಉಪಗ್ರಹ ಬ್ರಾಡ್ ಬ್ಯಾಂಡ್ ಮತ್ತು ವಿ2ಎಕ್ಸ್(V2X) ತಂತ್ರಜ್ಞಾನಗಳ ಬೆಂಬಲಕ್ಕೆ ಹಂಚಿಕೆಗಳ ವಿಸ್ತರಣೆ
ಭವಿಷ್ಯದ ಪೀಳಿಗೆಯ ಉಪಗ್ರಹ ಸೇವೆಗಾಗಿ ಐ.ಎಂ.ಟಿ(IMT) ಮತ್ತು ಕೆಎ/ಕ್ಯು/ವಿ (Ka/Q/V) ಬ್ಯಾಂಡ್ ಗಳಿಗೆ 6425-7125 MHz ನ ಹೊಸ ಗುರುತು
ವಿಮಾನ ಮತ್ತು ಸಾಗರ ಸಂಪರ್ಕಕ್ಕಾಗಿ ಐ.ಎಫ್.ಎಂ.ಸಿ(IFMC) ವರ್ಧಿತ ತರಂಗಾಂತರ ನಿಬಂಧನೆಗಳು
प्रविष्टि तिथि:
30 DEC 2025 12:57PM by PIB Bengaluru
ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆಯು (ಡಿ.ಒ.ಟಿ) ಭಾರತದಲ್ಲಿ ರೇಡಿಯೋ-ಆವರ್ತನ ತರಂಗಾಂತರಗಳ ನಿರ್ವಹಣೆ ಮತ್ತು ಹಂಚಿಕೆಯನ್ನು ನಿಯಂತ್ರಿಸುವ ಪ್ರಮುಖ ನೀತಿ ದಾಖಲೆಯಾದ ರಾಷ್ಟ್ರೀಯ ತರಂಗಗಳ ಹಂಚಿಕೆ ಯೋಜನೆ 2025 (ಎನ್.ಎಫ್.ಎ.ಪಿ - 2025) ಅನ್ನು ಬಿಡುಗಡೆ ಮಾಡಿದ್ದು, 2025ರ ಡಿಸೆಂಬರ್ 30 ರಿಂದ ಎನ್.ಎಫ್.ಎ.ಪಿ – 2025 ಜಾರಿಗೆ ಬಂದಿದೆ.
8.3 kHz ನಿಂದ 3000 GHz ವರೆಗಿನ ತರಂಗಗಳ ಶ್ರೇಣಿಯಲ್ಲಿ ವಿವಿಧ ರೇಡಿಯೋ-ಸಂವಹನ ಸೇವೆಗಳಿಗೆ ರೇಡಿಯೋ-ತರಂಗಾಂತರ ಹಂಚಿಕೆಯನ್ನು ಎನ್.ಎಫ್.ಎ.ಪಿ - 2025 ಒದಗಿಸಲಿದೆ. ಇದು ಸ್ಪೆಕ್ಟ್ರಮ್ ವ್ಯವಸ್ಥಾಪಕರು, ವೈರ್ಲೆಸ್ ಆಪರೇಟರ್ ಗಳು ಮತ್ತು ದೂರಸಂಪರ್ಕ ಉಪಕರಣ ತಯಾರಕರಿಗೆ ಅತ್ಯಗತ್ಯ ಉಲ್ಲೇಖವಾಗಿದೆ.
ಎನ್.ಎಫ್.ಎ.ಪಿ - 2025ರ ಪ್ರಮುಖ ವರ್ಧಿತ ಸುಧಾರಣೆಗಳು
ಭವಿಷ್ಯದ ಪೀಳಿಗೆಯ ತಂತ್ರಜ್ಞಾನಗಳಿಗೆ ಹೆಚ್ಚುತ್ತಿರುವ ತರಂಗಾಂತರ ಬೇಡಿಕೆಯನ್ನು ಪೂರೈಸಲು ಎನ್.ಎಫ್.ಎ.ಪಿ – 2025 ಹಲವು ಕಾರ್ಯತಂತ್ರದ ಮತ್ತು ಭವಿಷ್ಯ ಸಿದ್ಧ ಪರಿಷ್ಕರಣೆಗಳನ್ನು ಪರಿಚಯಿಸಿದೆ:
- ಅಂತಾರಾಷ್ಟ್ರೀಯ ಮೊಬೈಲ್ ದೂರಸಂಪರ್ಕ ಐ.ಎಂ.ಟಿ(IMT) ಗಾಗಿ 6425–7125 MHz ಬ್ಯಾಂಡ್ ಗುರುತಿಸುವಿಕೆಯಿಂದ 5G, ಸುಧಾರಿತ 5G ಮತ್ತು ಭವಿಷ್ಯದ 6G ಜಾಲಗಳಿಗೆ ಮಧ್ಯಂತರ - ಬ್ಯಾಂಡ್ ತರಂಗಾಂತರ ಲಭ್ಯತೆಯ ಗಮನಾರ್ಹ ಹೆಚ್ಚಳ
- ಉಪಗ್ರಹ ಆಧಾರಿತ ಸೇವೆಗಳಿಗಾಗಿ Ka, Q, ಮತ್ತು V ಬ್ಯಾಂಡ್ ಗಳ ಹಂಚಿಕೆಯು ಅಲ್ಪಾವಧಿ ಕಾಲಮಿತಿಯಲ್ಲಿ ಕ್ಷಿಪ್ರವಾಗಿ ಮತ್ತು ಸಮರ್ಥವಾಗಿ ಬೃಹತ್ ಪ್ರಮಾಣದ ಕಾರ್ಯ ನಿರ್ವಹಿಸಬಲ್ಲ ಭೂ ಸ್ಥಿರ ಕಕ್ಷೆ ಜಿ.ಎಸ್.ಒ(GSO) ಉಪಗ್ರಹಗಳು ಮತ್ತು ಜಿ.ಎಸ್.ಒ ಯೇತರ ಬೃಹತ್ ಉಪಗ್ರಹ ನಕ್ಷತ್ರಪುಂಜಗಳಿಗೆ ನಿರ್ಣಾಯಕ
- ವಾಯು ಮಾರ್ಗ ಮತ್ತು ಕಡಲ ಮಾರ್ಗದಲ್ಲಿ ತಡೆರಹಿತ ಬ್ರಾಡ್ ಬ್ಯಾಂಡ್ ಲಭ್ಯತೆ ಖಚಿತಪಡಿಸಿಕೊಳ್ಳಲು ವಿಮಾನ ಮತ್ತು ಸಾಗರ ಸಂಪರ್ಕ (ಐ.ಎಫ್.ಎಂ.ಸಿ) ಗಾಗಿ ಹೆಚ್ಚುವರಿ ತರಂಗಾಂತರ
- ನಿಸ್ತಂತು ಸಂವಹನ ವ್ಯವಸ್ಥೆಯಾದ ವೆಹಿಕಲ್ ಟು ಎವ್ರಿಥಿಂಗ್ (V2X) ಸಂವಹನ, LEO/MEO (ಭೂ ಕೆಳ ಕಕ್ಷೆ / ಭೂ ಮಧ್ಯ ಕಕ್ಷೆ) ಉಪಗ್ರಹ ಸೇವೆಗಳು ಮತ್ತು ವಿಸ್ತೃತ ಬ್ರಾಡ್ ಬ್ಯಾಂಡ್ ಸಂಪರ್ಕದಂತಹ ಪರಿಹಾರಗಳೊಂದಿಗೆ ಉದಯೋನ್ಮುಖ ತಂತ್ರಜ್ಞಾನಗಳಿಗೆ ಬೆಂಬಲ
ಭಾರತದ ತರಂಗಾಂತರ ನಿರ್ವಹಣೆಯು ಪ್ರತಿಕ್ರಿಯಾತ್ಮಕವಾಗಿ ಇರುವ ಜೊತೆಗೆ ಹೆಚ್ಚಿನ ಸಾಮರ್ಥ್ಯ ಸಹಿತವಾಗಿ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ಈ ವರ್ಧನೆಗಳು ಖಾತರಿಪಡಿಸುತ್ತಾ ಪ್ರಸ್ತುತ ಮತ್ತು ಭವಿಷ್ಯದ ಡಿಜಿಟಲ್ ನಾವಿನ್ಯತೆಗಳನ್ನು ಬೆಂಬಲಿಸುತ್ತದೆ, ಇದು ಭಾರತದಲ್ಲಿ ಪರಿಸರ ವ್ಯವಸ್ಥೆಯ ಅಭಿವೃದ್ಧಿ ಹೆಚ್ಚಳಕ್ಕೆ ಪೂರಕವಾಗಿರಲಿದೆ.
Follow DoT Handles for more: -
X - https://x.com/DoT_India
Insta- https://www.instagram.com/department_of_telecom?igsh=MXUxbHFjd3llZTU0YQ==
Fb - https://www.facebook.com/DoTIndia
Youtube: https://youtube.com/@departmentoftelecom?si=DALnhYkt89U5jAaa
*****
(रिलीज़ आईडी: 2209842)
आगंतुक पटल : 12